ಝೊಮೇಟೊ 2023ರಲ್ಲಿ ತನ್ನ ಫುಡ್ ಆರ್ಡರ್ ಟ್ರೆಂಡ್​ಗಳನ್ನು ಬಹಿರಂಗಪಡಿಸಿದ್ದು, ಈ ಬಾರಿಯೂ ಬಿರಿಯಾನಿಯೇ ಅತಿ ಜನಪ್ರಿಯ ಆಹಾರವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಆರ್ಡರ್​ ಪಡೆದ ಆಹಾರಗಳ ಪೈಕಿ ಪಿಜ್ಜಾ 2ನೇ ಸ್ಥಾನದಲ್ಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

2023ರಲ್ಲಿ ಭಾರತೀಯರು ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳ ಪಟ್ಟಿಯಲ್ಲಿ ಬಿರಿಯಾನಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದೆ. zomato ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ನಿಮಿಷಕ್ಕೆ 186 ಬಿರಿಯಾನಿ ಆರ್ಡರ್‌ಗಳನ್ನು ತಲುಪಿಸಲಾಗಿದೆ. ಕಳೆದ ವರ್ಷ ಸೆಕೆಂಡಿಗೆ ಎರಡು ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಎಂದು ಹೇಳಿರುವ ಝೊಮೆಟೋ, ಸದ್ಯಕ್ಕೆ ವಿವರಗಳನ್ನು ಬಹಿರಂಗಪಡಿಸಿಲ್ಲ. 2023ರಲ್ಲಿ ಜನರು ಅತಿ ಹೆಚ್ಚು ಆರ್ಡರ್ ಮಾಡಿರುವ ಆಹಾರದ ಬಗೆಗೆ ಝೊಮೆಟೋ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ..

2023ರಲ್ಲಿ ಜೊಮಾಟೊ ಪ್ಲಾಟ್​ಫಾರ್ಮ್​ನಲ್ಲಿ ಬಿರಿಯಾನಿಗಾಗಿ 10.09 ಕೋಟಿ ಆರ್ಡರ್ ಬಂದಿದ್ದರೆ, ಪಿಜ್ಜಾ 7.45 ಕೋಟಿ ಆರ್ಡರ್​ಗಳನ್ನು ಪಡೆದುಕೊಂಡಿದೆ. 2023ರಲ್ಲಿ ತಾನು ಡೆಲಿವರಿ ಮಾಡಿದ ಬಿರಿಯಾನಿಗಳನ್ನು ಒಟ್ಟಾಗಿ ಸುರಿದರೆ ದೆಹಲಿಯ ಕುತುಬ್ ಮಿನಾರ್​ಅನ್ನು ಎಂಟು ಬಾರಿ ತುಂಬಬಹುದು ಮತ್ತು ಪಿಜ್ಜಾಗಳು ಕೋಲ್ಕತ್ತಾದ ಐದಕ್ಕೂ ಹೆಚ್ಚು ಈಡನ್ ಗಾರ್ಡನ್ ಕ್ರಿಕೆಟ್ ಕ್ರೀಡಾಂಗಣಗಳ ಪ್ರದೇಶವನ್ನು ಆವರಿಸಬಹುದು ಎಂದು ಝೊಮೆಟೋ ಹೇಳಿದೆ. 

YearEnder 2023: ಈ ವರ್ಷ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಐದು ಸುಂದರ ಚಿತ್ರಗಳಿವು!

ಪಿಜ್ಜಾ, ಝೊಮೇಟೋದಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ
ಝೊಮೇಟೋ ಪ್ರಕಾರ ಪ್ರತಿ ನಿಮಿಷಕ್ಕೆ 139 ಆರ್ಡರ್‌ಗಳೊಂದಿಗೆ ಪಿಜ್ಜಾ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರವಾಗಿದೆ. ಖರಗ್‌ಪುರದ ಟೀನಾ ಒಂದೇ ಆರ್ಡರ್‌ನಲ್ಲಿ 25,455 ರೂಪಾಯಿ ಮೌಲ್ಯದ ಅತ್ಯಧಿಕ ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ. ನೂಡಲ್ಸ್ ಬೌಲ್ಸ್ 4.55 ಕೋಟಿ ಆರ್ಡರ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಜೊತೆಗೆ ತಂದೂರಿ ಚಿಕನ್ , ಬಟರ್ ನಾನ್, ವೆಜ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಚಿಕನ್ ಫ್ರೈಡ್ ರೈಸ್ ಮತ್ತು ವೆಜ್ ಬಿರಿಯಾನಿ ಹೆಚ್ಚು ಆರ್ಡರ್ ಮಾಡಿದ ತಿನಿಸುಗಳಲ್ಲಿ ಸೇರಿವೆ. 

ಸ್ವಿಗ್ಗಿಯಿಂದ ಕೇಕ್ ರಾಜಧಾನಿ ಬಿರುದು ಪಡೆದ ಬೆಂಗಳೂರು 2023ರಲ್ಲಿ ಜೊಮಾಟೊದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬೆಳಗಿನ ತಿಂಡಿಗಳನ್ನು ಆರ್ಡರ್ ಮಾಡಿದೆ. ಏತನ್ಮಧ್ಯೆ, ದೆಹಲಿ ಬಳಕೆದಾರರು ಹೆಚ್ಚಾಗಿ ರಾತ್ರಿಯ ಊಟಗಳನ್ನು ಆರ್ಡರ್ ಮಾಡಿದ್ದಾರೆ. ಝೊಮೇಟೋದ ವರ್ಷದ ಅತಿದೊಡ್ಡ ಆರ್ಡರ್ ಬೆಂಗಳೂರಿನಿಂದ ಬಂದಿದ್ದು, ಇಲ್ಲಿನ ಬಳಕೆದಾರರೊಬ್ಬರು 46,273 ರೂ.ಗಳ ಒಂದೇ ಆರ್ಡರ್ ಮಾಡಿದ್ದಾರೆ. ಮತ್ತೋರ್ವ ಬೆಂಗಳೂರು ಬಳಕೆದಾರ ಜೊಮಾಟೊ ಮೂಲಕ 6.6 ಲಕ್ಷ ರೂ.ಗಳ ಮೌಲ್ಯದ 1,389 ಗಿಫ್ಟ್ ಆರ್ಡರ್ ಗಳನ್ನು ಕಳುಹಿಸಿದ್ದಾರೆ.

ವಾರೆವ್ಹಾ..ಝೊಮೆಟೋದ 15ನೇ ವರ್ಷದ ಬರ್ತ್‌ಡೇಗೆ ಕೇಕ್‌ ಕಳುಹಿಸಿ ಶುಭಕೋರಿದ ಸ್ವಿಗ್ಗಿ

ಮುಂಬೈನ ವ್ಯಕ್ತಿಯೊಬ್ಬರು ಝೊಮೆಟೋ ಆ್ಯಪ್‌ನಲ್ಲಿ ಬಲ್ಕ್ ಆರ್ಡರ್
ಮುಂಬೈ ನಿವಾಸಿಗಳು ಅತ್ಯಧಿಕ ಆಹಾರ ಪ್ರಿಯರು ಎಂದು ಝೊಮೇಟೊ ಹೇಳಿದೆ. ಮುಂಬೈನ ವ್ಯಕ್ತಿಯೊಬ್ಬರು zomato ಆ್ಯಪ್‌ನಲ್ಲಿ ರೂ.ಗೆ ಬಲ್ಕ್ ಆರ್ಡರ್ ಮಾಡಿದ್ದಾರೆ. ಇದರಿಂದ 2,43,490 ಉಳಿತಾಯವಾಗಿದೆ ಎಂದು ವರದಿಯಾಗಿದೆ. ದೆಹಲಿ ಮೂಲದ ಅಂಕುರ್, ಈ ವರ್ಷವೊಂದರಲ್ಲೇ 3,330 ಬಾರಿ ಝೊಮೆಟೋ ಆಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಅಂದರೆ ಸರಾಸರಿ ಅವರು ದಿನಕ್ಕೆ 9 ಬಾರಿ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಸ್ವಿಗ್ಗಿ ಪ್ರಕಟಿಸಿದ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಭಾರತವು ಪ್ರತಿ ನಿಮಿಷಕ್ಕೆ 137 ಬಿರಿಯಾನಿ ಆರ್ಡರ್‌ಗಳನ್ನು ಪಡೆಯುತ್ತದೆ ಎಂಬುದನ್ನು ತಿಳಿಸಿತ್ತು. ಭಾರತದ ಎರಡು ಪ್ರಮುಖ ಆಹಾರ ವಿತರಣಾ ಅಪ್ಲಿಕೇಶನ್ ಕಂಪನಿಗಳ ವರದಿಯ ಪ್ರಕಾರ, ಈ ವರ್ಷವೂ ಭಾರತೀಯರಲ್ಲಿ ಹೆಚ್ಚು ಸೇವಿಸುವ ಆಹಾರದ ಪಟ್ಟಿಯಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ .

2023ರಲ್ಲಿ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಫುಡ್‌, ಸತತ ಎಂಟನೇ ವರ್ಷ ನಂ.1 ಸ್ಥಾನದಲ್ಲಿ ಬಿರಿಯಾನಿ