ವಾರೆವ್ಹಾ..ಝೊಮೆಟೋದ 15ನೇ ವರ್ಷದ ಬರ್ತ್‌ಡೇಗೆ ಕೇಕ್ ಕಳುಹಿಸಿ ಶುಭಕೋರಿದ ಸ್ವಿಗ್ಗಿ
ಸ್ವಿಗ್ಗಿ, ಝೊಮೆಟೋ, ಇವೆರಡೂ ಫುಡ್ ಡೆಲಿವರಿ ಆಪ್‌ಗಳಾಗಿದ್ದು ನಿರ್ಧಿಷ್ಟ ಗ್ರಾಹಕರನ್ನು ಹೊಂದಿವೆ. ಸಾಮಾನ್ಯವಾಗಿ ಎರಡೂ ಆಪ್‌ಗಳು ಒಂದೇ ಕ್ಷೇತ್ರಕ್ಕೆ ಸಂಬಂಧಿಸಿರುವ ಕಾರಣ ಎಲ್ಲರೂ ಇವೆರೆಡರ ಮಧ್ಯೆ ಸಿಕ್ಕಾಪಟ್ಟೆ ಕಾಂಪಿಟೀಶನ್ ಇದೆ ಮತ್ತು ದ್ವೇಷವಿದೆ ಎಂದೇ ಅಂದುಕೊಂಡಿದ್ದಾರೆ. ಆದರೆ ಅಸಲೀಯತ್ತು ಹಾಗಿಲ್ಲ.
ಹಸಿವಾದಾಗ ತಕ್ಷಣಕ್ಕೆ ಆಹಾರ ಸಿಗಲು ಬಹುತೇಕರು ಅವಲಂಬಿಸಿರೋದು ಆಹಾರ ವಿತರಣಾ ಆಪ್‌ಗಳು. ಅದರಲ್ಲೂ ಸ್ವಿಗ್ಗಿ, ಝೊಮೆಟೋ. ಇವೆರಡೂ ಫುಡ್ ಡೆಲಿವರಿ ಆಪ್‌ಗಳಾಗಿದ್ದು ನಿರ್ಧಿಷ್ಟ ಗ್ರಾಹಕರನ್ನು ಹೊಂದಿವೆ. ಕೆಲವರು ಸ್ವಿಗ್ಗೀಯಲ್ಲಿ ಆಹಾರ ಆರ್ಡರ್ ಮಾಡಲು ಇಷ್ಟಪಟ್ಟರೆ, ಇನ್ನು ಕೆಲವರು ಝೊಮೆಟೋದಲ್ಲಿ ಆಹಾರ ಆರ್ಡರ್ ಮಾಡಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಎರಡೂ ಆಪ್‌ಗಳು ಒಂದೇ ಕ್ಷೇತ್ರಕ್ಕೆ ಸಂಬಂಧಿಸಿರುವ ಕಾರಣ ಎಲ್ಲರೂ ಇವೆರೆಡರ ಮಧ್ಯೆ ಸಿಕ್ಕಾಪಟ್ಟೆ ಕಾಂಪಿಟೀಶನ್ ಇದೆ ಮತ್ತು ದ್ವೇಷವಿದೆ ಎಂದೇ ಅಂದುಕೊಂಡಿದ್ದಾರೆ. ಆದರೆ ಅಸಲೀಯತ್ತು ಹಾಗಿಲ್ಲ.
ಝೊಮೆಟೋಗೆ ಕಚೇರಿಗೆ ಕೇಕ್ ಕಳುಹಿಸಿಕೊಟ್ಟ ಸ್ವಿಗ್ಗೀ
ಝೊಮೆಟೋದ 15ನೇ ವರ್ಷದ ಬರ್ತ್‌ಡೇಗೆ ಸ್ವಿಗ್ಗೀ ಕೇಕ್ ಕಳುಹಿಸಿ ಶುಭ ಕೋರಿದೆ. ಸ್ವಿಗ್ಗಿ ಜೊಮಾಟೊ ಕಾರ್ಪೊರೇಟ್ ಕಛೇರಿಗೆ 'ಹುಟ್ಟುಹಬ್ಬದ ಶುಭಾಶಯಗಳು' (Happy Birthday) ಎಂದು ಬರೆದಿರುವ ಕೇಕ್ ಒಂದನ್ನು ಕಳುಹಿಸಿದೆ. ಇಂಟರ್‌ನೆಟ್‌ನಲ್ಲಿ ಸ್ವಿಗ್ಗಿಯ ಈ ವಿಶ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆಹಾರ ವಿತರಣಾ ಅಪ್ಲಿಕೇಶನ್ (Food delivery app), Zomato, ಕೇವಲ 15 ವರ್ಷಕ್ಕೆ ಕಾಲಿಟ್ಟಿದೆ. ದಿನವನ್ನು ಗುರುತಿಸಲು ಝೊಮೆಟೋ ದಿನವನ್ನು ಆಚರಿಸಲು Twitter ಗೆ ಕರೆದೊಯ್ದಿತ್ತು, ಎರಡು ಕೇಕ್‌ಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರೋ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಪರ್ಫೆಕ್ಟ್ ಫ್ಯಾಮಿಲಿಗೆ ಉತ್ತಮ ನಿದರ್ಶನ ಎಂಬಂತಿದೆ ಈ Viral Video
ಟ್ವಿಟರ್‌ನಲ್ಲಿ ಸ್ವಿಗ್ಗಿ ಕಳುಹಿಸಿರುವ ಕೇಕ್ ಶೇರ್ ಮಾಡಿಕೊಂಡಿರುವ ಝೊಮೆಟೋ ಫೋಟೋದ ಜೊತೆಗೆ, '15 ವರ್ಷಗಳಿಂದ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದೇವೆ. ಕೆಲವು ಬಾರಿ ವಿಫಲವಾಗಿದ್ದೇವೆ, ಆದರೆ ಅದೇ ಉತ್ಸಾಹದಿಂದ ಯಾವಾಗಲೂ ಕಲಿಯುತ್ತಿದ್ದೇನೆ ಮತ್ತು ನಿಮ್ಮ ಪ್ರೀತಿಯನ್ನು ಗಳಿಸಿದ್ದೇವೆ. ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿದ್ದಾರೆ.
ಒಬ್ಬ ಬಳಕೆದಾರರು, 'ಸ್ವಿಗ್ಗೀ ಹಾಗೂ ಝೊಮೆಟೋದ ಈ ಬಾಂಡಿಂಗ್ ನೋಡಲು ತುಂಬಾ ಖುಷಿಯಾಗುತ್ತಿದೆ' ಎಂದಿದ್ದಾರೆ. ಇನ್ನೊಬ್ಬರು, 'ಇವೆರಡೋ ಸಂಸ್ಥೆಯ ಪ್ರೀತಿಗೆ ಯಾರ ದೃಷ್ಟಿಯೂ ಬೀಳದಿರಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ,, 'ಇಂಥಾ ಒಳ್ಳೆಯ ಕಾಂಪಿಟೀಟರ್ ಎಲ್ಲಾ ಸಂಸ್ಥೆಗೂ ಬೇಕಾಗಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಈ ಕಾಲದಲ್ಲಿ ಈ ರೀತಿ ಆಶಿಸುವವರು ತುಂಬಾ ಕಡಿಮೆ' ಎಂದು ಕಮೆಂಟಿಸಿದ್ದಾರೆ.
Karnataka Budget 2023: ಸ್ವಿಗ್ಗಿ, ಜೊಮೊಟೊ ಡೆಲಿವರಿ ಬಾಯ್‌ಗಳಿಗೆ ಭರ್ಜರಿ ಕೊಡುಗೆ: 4 ಲಕ್ಷ ರೂ. ವಿಮೆ ಸೌಲಭ್ಯ
ಪುಟ್ಟ ಮಗು ಎದೆಗೆ ಕಟ್ಟಿಕೊಂಡು ಝೊಮೆಟೋದಲ್ಲಿ ಫುಡ್ ಡೆಲಿವರಿ ಮಾಡೋ ಮಹಿಳೆ
ಝೊಮಾಟೊ ಡೆಲಿವರಿ ಏಜೆಂಟ್ ಆಗಿರುವ ಮಹಿಳೆ (Woman) ಅಂಬೆಗಾಲಿಡುವ ಮಗುವನ್ನು ತನ್ನ ದೇಹಕ್ಕೆ ಬೆಲ್ಟ್‌ನಲ್ಲಿ ಸಿಕ್ಕಿಸಿಕೊಂಡು ಗ್ರಾಹಕರಿಗೆ ಆಹಾರವನ್ನು ತಲುಪಿಸುವ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ತನ್ನ ಮಗು (Baby)ವನ್ನು ನೋಡಿಕೊಳ್ಳಲು ಹಗಲಿರುಳು ಶ್ರಮಿಸುವ ಮಹಿಳೆಯ ಕ್ರಮವನ್ನು ಇಂಟರ್‌ನೆಟ್ ಶ್ಲಾಘಿಸಿದೆ. ಹಲವರು ಹಣ ಸಂಪಾದಿಸಲು ಇತರ ಕೆಟ್ಟ ಮಾರ್ಗಗಳನ್ನು ಆಶ್ರಯಿಸುವ ಬದಲು ಮಹಿಳೆಯ ಕೆಲಸ ಮಾಡುವ ಉತ್ಸಾಹ ಮತ್ತು ದೃಢತೆಯನ್ನು ಶ್ಲಾಘಿಸಿದ್ದಾರೆ. ಅನೇಕರು ಮಹಿಳೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋಗೆ ಮನಮುಟ್ಟುವ ಶೀರ್ಷಿಕೆಯನ್ನು (Heading) ಸಹ ನೀಡಲಾಗಿದೆ. 'ಇದನ್ನು ನೋಡಿ ನನಗೆ ತುಂಬಾ ಸ್ಫೂರ್ತಿಯಾಯಿತು. ಝೊಮೆಟೋ ಡೆಲಿವರಿ ಮಾಡುವ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇಡೀ ದಿನ ಬಿಸಿಲಿನಲ್ಲಿ ಕಳೆಯುತ್ತಾಳೆ. ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಏನು ಬೇಕಾದರೂ ಮಾಡಬಹುದು ಎಂಬುದನ್ನು ನಾವು ಕಲಿಯಬೇಕು' ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಶೇರ್ ಮಾಡಲಾಗಿದೆ.