ಪಂಜಾಬ್‌ನ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಚಿಕನ್‌ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಇಲಿ ಮಾಂಸವನ್ನು ಹಾಕಿ ಗ್ರಾಹಕನಿಗೆ ನೀಡಲಾಗಿದೆ. ಈ ಕುರಿತಾದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ. 

ನವದೆಹಲಿ (ಜು.3): ಪಂಜಾಬ್‌ನ ಪ್ರಸಿದ್ಧ ರೆಸ್ಟೋರೆಂಟ್‌ ಒಂದರಲ್ಲಿ ಚಿಕನ್‌ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಸತ್ತ ಇಲಿಯನ್ನು ಬೇಯಿಸಿ ಗ್ರಾಹಕನಿಗೆ ನೀಡಲಾಗಿದೆ. ಗ್ರಾಹಕ ಇದರ ವಿಡಿಯೋವನ್ನು ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಕ್ಷಣಮಾತ್ರದಲ್ಲಿ ವೈರಲ್‌ ಆಗಿದೆ. ಲೂಧಿಯಾನಾದ ಪ್ರಕಾಶ್‌ ಡಾಬಾದಲ್ಲಿ ಕುಟುಂಬವೊಂದು ಚಿಕನ್‌ ಸಾಂಬಾರ್‌ ಆರ್ಡರ್‌ ಮಾಡಿತ್ತು. ಆದರೆ, ಗ್ರಾಹಕನಿಗೆ ತಂದುಕೊಟ್ಟ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಸತ್ತ ಇಲಿಯಯನ್ನು ಪೂರ್ಣವಾಗಿ ಬೇಯಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ, ಪ್ರಕಾಶ್‌ ಡಾಬಾದ ಮಾಲೀಕರು ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ನಮ್ಮ ರೆಸ್ಟೋರೆಂಟ್‌ನ ಮೌಲ್ಯವನ್ನು ಹಾಳು ಮಾಡಲು ಗ್ರಾಹಕರು ಇಂಥ ವಿಡಿಯೋಗಳನ್ನು ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಟ್ವಿಟರ್‌ನಲ್ಲಿ ಎನ್‌ಸಿ ಎನ್ನುವ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದೆ. ಊಟದ ಮೇಜಿನ ಮೇಲೆ ಇಡಲಾಗಿರುವ ವಿವಿಧ ಆಹಾರಗಳನ್ನು ವಿಡಿಯೋದಲ್ಲಿ ಆತ ತೋರಿಸುತ್ತಿದ್ದಾನೆ. ಇದೇ ಹಂತದಲ್ಲಿ ಚಿಕನ್‌ ಸಾಂಬಾರ್‌ ಎನ್ನಲಾಗುವ ಆಹಾರದ ಮೇಲೆ ಕ್ಯಾಮೆರಾ ಫೋಕಸ್‌ ಆಗುತ್ತದೆ. ಈ ವೇಳೆ ಚಮಚದಿಂದ ಅದರಲ್ಲಿದ್ದ ಮಾಂಸವನ್ನ ತೆಗೆಯುವ ಸಂದರ್ಭದಲ್ಲಿ ಸತ್ತ ಇಲಿಯನ್ನು ಚಮಚದಿಂದ ಎತ್ತಿರುವುದು ಕಾಣುತ್ತದೆ. ಕೇವಲ 31 ಸೆಕೆಂಡ್‌ನ ವಿಡಿಯೋ ಇದಾಗಿತ್ತು. ಇಲಿಯ ಬಾಲ ಕೂಡ ಚಿಕನ್‌ ಸಾಂಬಾರ್‌ನಲ್ಲಿ ಕಂಡಿದೆ.

'ಲೂಧಿಯಾನಾ ನಗರದ ಪ್ರಕಾಶ್‌ ಡಾಬಾ. ಚಿಕನ್‌ ಸಾಂಬಾರ್‌ನಲ್ಲಿ ಸತ್ತ ಇಲಿಯಲ್ಲಿ ಇಲ್ಲಿ ಬಡಿಸಲಾಗಿದೆ. ರೆಸ್ಟೋರೆಂಟ್‌ ಮಾಲೀನ ಫುಡ್‌ ಇನ್ಸ್‌ಪೆಕ್ಟರ್‌ಗೆ ಲಂಚ ನೀಡಿ ಇದರಿಂದ ನಿರಾಳನಾಗುತ್ತಾನೆ?? ಭಾರತದ ಹಲವು ರೆಸ್ಟೋರೆಂಟ್‌ಗಳನ್ನು ಬಹಳ ಕೆಟ್ಟ ಕಿಚನ್‌ಗಳಿವೆ. ಎಚ್ಚರಿಕೆಯಿಂದಿರಿ' ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಈ ಮಧ್ಯೆ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತೊಂದು ವೀಡಿಯೊವು ಗ್ರಾಹಕ ಮತ್ತು ರೆಸ್ಟೋರೆಂಟ್ ಸಿಬ್ಬಂದಿಯ ನಡುವಿನ ವಾಗ್ವಾದ ನಡೆಯುತ್ತಿರುವುದನ್ನು ಪೋಸ್ಟ್‌ ಮಾಡಲಾಗಿದೆ. ಈ ವೇಳೆ ಸತ್ತ ಪ್ರಾಣಿಯನ್ನು ತನಗೆ ತಿನ್ನಲು ನೀಡಲಾಗಿದೆ ಎಂದು ಗ್ರಾಹಕ ರೆಸ್ಟೋರೆಂಟ್‌ ಮಾಲೀಕನೊಂದಿಗೆ ವಾಗ್ವಾದ ನಡೆಸಿದ್ದಾರೆ.

ಅಂತರ್ಜಾಲದಲ್ಲಿ ಅನೇಕ ಜನರು ಈ ದೃಶ್ಯಗಳಿಂದ ಅಚ್ಚರಿ ವ್ಯಕ್ತಪಡಿಸಿತ್ತು. ಅವರ ನಿರ್ಲಕ್ಷ್ಯಕ್ಕಾಗಿ ರೆಸ್ಟೋರೆಂಟ್ ಅನ್ನು ಟೀಕಿಸಿದರು. "ಆರೋಗ್ಯ ಅಧಿಕಾರಿಗಳು ವಿಷಯವನ್ನು ಕಠಿಣವಾಗಿ ತೆಗೆದುಕೊಳ್ಳಬೇಕು" ಎಂದು ಬಳಕೆದಾರರೊಬ್ಬರು ಹೇಳಿದರು. ಈ ಡಾಬಾದಿಂದ ಚಿಕನ್‌ ಸಾಂಬಾರ್‌ ತಿಂದ ಎಲ್ಲರ ಬಗ್ಗೆಯೂ ಬೇಸರವಾಗುತ್ತಿದೆ. ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಾಗಬೇಕು. ಈ ರೆಸ್ಟೋರೆಂಟ್‌ಗೆ ದೊಡ್ಡ ಮೊತ್ತದ ದಂಡ ಬೀಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಈ ರೆಸ್ಟೋರೆಂಟ್‌ನ ಪರವಾನಿಗಿಯನ್ನು ರದ್ದು ಮಾಡಬೇಕು ಎಂದು ಇನ್ನೊಬ್ಬರು ಬರೆದಿದ್ದು, ಈ ರೆಸ್ಟೋರೆಂಟ್‌ನ ಹೆಸರನ್ನು ಎಲ್‌ಎಫ್‌ಸಿ ಎಂದು ಇಡಬೇಕು. ಅದರರ್ಥ, ಲೂಧಿಯಾನಾ ಫ್ರೈಡ್‌ ಚೂಹಾ ಎನ್ನುವುದಾಗಿದೆ ಎಂದು ಬರೆದಿದ್ದಾರೆ.

Scroll to load tweet…

ಯಾವಾಗ್ಲೂ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ಯಾ? ಈ ರೀತಿ ಮಾಡಿ ತಿನ್ನಿ

ಇದು ಲೂಧಿಯಾನಾದಲ್ಲಿ ಹೊಸ ವಿಚಾರವೇನಲ್ಲ. ಇದರ ಮಾಲೀಕ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದಾರೆ. ಉಪಾಹಾರ ಗೃಹವು ಅಶುಚಿಯಾದ ಅಡುಗೆ ಮನೆ ಹೊಂದಿರುತ್ತದೆ. ಹೆಚ್ಚಿನ ಸಂಖ್ಯೆಯ ಇಲಿಗಳು ಇರುತ್ತವೆ. ಲೂಧಿಯಾನಾದ ಪ್ರಮುಖ ರೆಸ್ಟೋರೆಂಟ್‌ಗಳಲ್ಲಿ ಇಲಿಗಳು ಕಾಣಿಸಿಕೊಳ್ಳುತ್ತದೆ' ಎಂದು ಬರೆದಿದ್ದಾರೆ.

30 ರೂ.ಗೆ ಸಿಗೋ ಪಾಪ್‌ಕಾರ್ನ್, ಸಿನಿಮಾಸ್‌ನಲ್ಲಿ 460 ರೂ. ಬಿಲ್ ಶೇರ್ ಮಾಡಿದ ಗ್ರಾಹಕ!