ಮಸಾಲಾ ದೋಸೆ ರೆಸಿಪಿ ಸರಳ ಮತ್ತು ರುಚಿಕರವಾಗಿ. ಸಾಂಪ್ರದಾಯಿಕ ದೋಸೆಯನ್ನು ಆಲೂಗೆಡ್ಡೆ ಪಲ್ಯದೊಂದಿಗೆ ತುಂಬಿಸಿ ಮತ್ತು ನಿಮ್ಮ ಮೆಚ್ಚಿನ ಚಟ್ನಿಗಳೊಂದಿಗೆ ಸವಿಯಿರಿ.
Image credits: Pixabay
ಪಾಲಕ್ ದೋಸೆ
ದೋಸೆ ಹಿಟ್ಟಿಗೆ ಪಾಲಕ್ ಎಲೆಗಳನ್ನು ರುಬ್ಬಿ ಆ ಮಿಕ್ಸ್ ಸೇರಿಸಿಕೊಳ್ಳಬೇಕು. ರುಚಿಕರವಾಗಿರುವ ಈ ದೋಸೆ ಆರೋಗ್ಯಕ್ಕೆ ಸಹ ಒಳ್ಳೆಯದು. ಪಾಲಕ್ ದೋಸೆಯನ್ನು ಮೊಸರು ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.
Image credits: Pixabay
ಪುಡಿ ದೋಸೆ
ಪುಡಿ ಚಟ್ನಿ ಮತ್ತು ತುಪ್ಪದೊಂದಿಗೆ ಬೇಯಿಸಿದ ಪುಡಿ ದೋಸೆ ಹಲವರ ಫೇವರಿಟ್. ಹುರಿದ ಚನಾ ದಾಲ್, ಒಣಗಿದ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಮತ್ತು ಉಪ್ಪನ್ನು ಸೇರಿಸಿದ ಪುಡಿ ಬಳಸುತ್ತಾರೆ
Image credits: Pixabay
ಮೊಟ್ಟೆ ದೋಸೆ
ಮೊಟ್ಟೆ ದೋಸೆ, ದಕ್ಷಿಣ ಭಾರತದ ಪ್ರಸಿದ್ಧ ಭಕ್ಷ್ಯವಾಗಿದೆ, ವಿಶೇಷವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಇದನ್ನು ತಯಾರಿಸುತ್ತಾರೆ. ಮೊಟ್ಟೆಯನ್ನು ಒಡೆದು ಅದನ್ನು ದೋಸೆಯ ಉದ್ದಕ್ಕೂ ಸಮವಾಗಿ ಹರಡಿ, ಬೇಯಿಸುತ್ತಾರೆ.
Image credits: Pixabay
ರವಾ ದೋಸೆ
ರವಾ ದೋಸೆ ಹಿಟ್ಟು ನೀರಿನಂತೆ ತೆಳ್ಳಗಿರುತ್ತದೆ. ರವೆಗೆ ನೀರು ಸೇರಿಸಿ, ಈರುಳ್ಳಿ, ಕ್ಯಾರೆಟ್ ಸೇರಿಸಿ ಇದನ್ನು ತಯಾರಿಸುತ್ತಾರೆ. ಕ್ರಿಸ್ಪೀಯಾಗಿರುವ ಈ ದೋಸೆ ತಿನ್ನಲು ರುಚಿಕರವಾಗಿರುತ್ತದೆ.