30 ರೂ.ಗೆ ಸಿಗೋ ಪಾಪ್‌ಕಾರ್ನ್, ಸಿನಿಮಾಸ್‌ನಲ್ಲಿ 460 ರೂ. ಬಿಲ್ ಶೇರ್ ಮಾಡಿದ ಗ್ರಾಹಕ!
ಜನರು ಸಿನಿಮಾ ಥಿಯೇಟರ್ ಗೆ ಬರಲ್ಲ ಎನ್ನುವ ಆರೋಪ ಈಗಿನ ದಿನಗಳಲ್ಲಿ ಕೇಳಿಬರ್ತಿದೆ. ಇದಕ್ಕೆ ಪಿವಿಆರ್ ಗಳ ಬೆಲೆ ಏರಿಕೆ ಕಾರಣ ಅಂತಾ ಕೆಲವರು ಹೇಳ್ತಿದ್ದಾರೆ. ಟ್ವಿಟರ್ ನಲ್ಲಿ ಪೋಸ್ಟ್ ಆದ ಒಂದು ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ.
ಪಾಪ್ ಕಾರ್ನ್ ಅಣ್ಣ ಮನೆ ಮುಂದೆ ಗಾಡಿ ತಳ್ತಾ ಬರ್ತಿದ್ದಂತೆ ಮೂಗು ಆ ಕಡೆ ಸೆಳೆಯುತ್ತೆ. ಬೀದಿ ಬದಿಯಲ್ಲಿ, ಮಾಲ್ ಮುಂದೆ ಅಥವಾ ಮಾರುಕಟ್ಟೆ ಅಕ್ಕಪಕ್ಕ ಪಾಪ್ ಕಾರ್ನ್ ಮಾರೋರು ಅನೇಕರಿದ್ದಾರೆ. ಅವರು ಒಂದು ಪ್ಯಾಕೆಟ್ ಗೆ 30 ರೂಪಾಯಿ ಅಂದ್ರೆ ನಮ್ಮ ಕಣ್ಣು ಕೆಂಪಾಗುತ್ತೆ. ಛೀ ಛೀ ಬೇಡ ಅಂತಾ ಮಕ್ಕಳನ್ನು ಎಳ್ಕೊಂಡು ಬರೋರೇ ಹೆಚ್ಚು. ಇನ್ನು ಕೆಲವರು 10 ರೂಪಾಯಿಗೆ ಕೊಡಿ, 20 ರೂಪಾಯಿಗೆ ಕೊಡಿ ಅಂತಾ ಚೌಕಾಸಿ ಮಾಡಿ ತೆಗೆದುಕೊಂಡು ಬರ್ತಾರೆ.
ಬೀದಿ ಬದಿಯ ಬಡ ವ್ಯಾಪಾರಿಗಳ ಜೊತೆ ಹತ್ತಿಪ್ಪತ್ತು ರೂಪಾಯಿಗೆ ಚೌಕಾಸಿ ಮಾಡುವ ಜನರಿಗೆ ಮಾಲ್ (Mall) ಗಳಲ್ಲಿ, ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಆನ್ಲೈನ್ ಶಾಪಿಂಗ್ ವೇಳೆ ಚೌಕಾಸಿ ಹೆಸರೇ ಮರೆತಿರುತ್ತದೆ. ಬ್ರ್ಯಾಂಡ್ ಅಂತಾ ಹಣೆಪಟ್ಟಿ ಕಟ್ಟಿ, ಹೇಳಿದಷ್ಟು ಕೊಟ್ಟು ಬರ್ತಾರೆ. ಈ ದುಬಾರಿ ಲೈಫ್ ನಲ್ಲಿ ಸಿನಿಮಾ ಥಿಯೇಟರ್ (Theater) ಕೂಡ ಸೇರುತ್ತೆ. ದೊಡ್ಡ ಪರದೆ ಮೇಲೆ ನೆಚ್ಚಿನ ನಟ – ನಟಿಯರನ್ನು ನೋಡೋದು ಏನೋ ಖುಷಿ. ಮನೆಯಲ್ಲಿ ಗಂಟೆಗಟ್ಟಲೆ ಸಿನಿಮಾ, ಧಾರಾವಾಹಿ ನೋಡಿದ್ರೂ ಬಾಯಾಡಿಸೋಕೆ ನಮಗೆ ಏನೂ ಬೇಕಾಗೋದಿಲ್ಲ. ಅದೇ ಥಿಯೇಟರ್ ಗೆ ಕಾಲಿಡ್ತಿದ್ದಂತೆ ಬಾಯಿ ತುರಿಸೋಕೆ ಶುರುವಾಗುತ್ತೆ. ಏನಾದ್ರೂ ತಿನ್ನುತ್ತಾ ಸಿನಿಮಾ ನೋಡೋ ಮಜವೇ ಬೇರೆ ಅನ್ನಿಸುತ್ತೆ.
ಹರಟೆ ಹೊಡೆಯುವಾಗ ಬಂದ ಐಡಿಯಾ.. 80 ರೂ.ನಲ್ಲಿ ಶುರುವಾದ ಬ್ಯುಸಿನೆಸ್ ಈಗ ವಿಶ್ವವ್ಯಾಪಿ
ಮಕ್ಕಳು ಹೋಗ್ಲಿ ದೊಡ್ಡವರಿಗೆ ಕೂಡ ಸಿನಿಮಾ ಥಿಯೇಟರ್ ಗೆ ಹೋದ ತಕ್ಷಣ ಪಾಪ್ ಕಾರ್ನ್ (Popcorn) ತಿನ್ನುವ ಹಸಿವಾಗುತ್ತದೆ. ಬ್ರೇಕ್ ಬರೋವರೆಗೆ ಹೇಗೋ ತಡೆದುಕೊಳ್ಳುವ ಮಂದಿ, ಇಂಟರ್ವಲ್ ಲೈಟ್ ಬರ್ತಿದ್ದಂತೆ ಪಾಪ್ ಕಾರ್ನ್ ಶಾಪ್ ಮುಂದೆ ಕ್ಯೂ ನಿಲ್ತಾರೆ. ಬೀದಿ ಬದಿ ಪಾಪ್ ಕಾರ್ನ್ ವಲ್ಲೆ ಎಂದವರು ಅಲ್ಲಿ ದುಬಾರಿ ಬೆಲೆ ನೀಡಿ ಪಾಪ್ ಕಾರ್ನ್ ಖರೀದಿ ಮಾಡ್ತಾರೆ. ಇದನ್ನು ನಾವು ಹೇಳ್ತಿಲ್ಲ. ಟ್ವಿಟರ್ ಬಳಕೆದಾರರೊಬ್ಬರು ಪಾಪ್ ಕಾರ್ನ್ ಬಿಲ್ ಸಮೇತ, ಸಿನಿಮಾ ಥಿಯೇಟರ್ ನಲ್ಲಿ ಪಾಪ್ ಕಾರ್ನ್ ಎಷ್ಟು ದುಬಾರಿ ಅನ್ನೋದನ್ನು ತೋರಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಟ್ರಿಡಿಪ್ ಕೆ ಮಂಡಲ್ ಅವರು ಜುಲೈ 2 ರಂದು ಟ್ವೀಟ್ ನಲ್ಲಿ ಪಾಪ್ ಕಾರ್ನ್ ಬಿಲ್ ಫೋಟೋ ಹಂಚಿಕೊಂಡಿದ್ದಾರೆ. ಎರಡೇ ದಿನದಲ್ಲಿ ಈ ಟ್ವೀಟನ್ನು 1.2 ಮಿಲಿಯನ್ ಗಿಂತಲೂ ಹೆಚ್ಚುಬಾರಿ ವೀಕ್ಷಿಸಲಾಗಿದೆ. 17.8 ಕೆ ಲೈಕ್ ಬಂದಿದೆ.
ಒಂದೇ ಬಿಲ್ ನಲ್ಲಿ ಎರಡು ಐಟಂಗಳ ಬೆಲೆಯನ್ನು ನಾವು ಒಂದು ಸಾಮಾನ್ಯ ಚೀಸ್ ಪಾಪ್‌ಕಾರ್ನ್ ಮತ್ತೊಂದು ಪೆಪ್ಸ. ರೆಗ್ಯೂಲರ್ ಪಾಪ್ ಕಾರ್ನ್ ಚೀಸ್ ಬೆಲೆ 460 ರೂಪಾಯಿಯಾಗಿದೆ. ಇನ್ನು ಪೆಪ್ಸಿ ಬೆಲೆ 360 ರೂಪಾಯಿ. ಒಟ್ಟೂ 820 ರೂಪಾಯಿ ಬಿಲ್ ಪಾವತಿಸಿ ಬಂದಿದ್ದಾರೆ ಟ್ವಿಟರ್ ಬಳಕೆದಾರ. ನೋಯ್ಡಾ ಪಿವಿಆರ್ ಸಿ ಸಿನಿಮಾದಲ್ಲಿ ಖರೀದಿ ಮಾಡಿದ ಆಹಾರದ ಬೆಲೆ ಇದು ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ಬೆಲೆಗೆ ನೀವು ಪ್ರೈಮ್ ವಿಡಿಯೋದ ವಾರ್ಷಿಕ ಚಂದಾದಾರಿಕೆ ಪಡೆಯಬಹುದು.ಜನರು ಇನ್ನು ಮುಂದೆ ಚಿತ್ರಮಂದಿರಗಳಿಗೆ ಹೋಗದಿದ್ದರೂ ಆಶ್ಚರ್ಯವಿಲ್ಲ. ಕುಟುಂಬ ಸಮೇತ ಸಿನಿಮಾ ನೋಡುವುದು ಈಗ ಕೈಗೆಟುಕದಂತಾಗಿದೆ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ.
208 ಕೆಜಿ ಚಿನ್ನಕ್ಕಿಂತ ರಸಗುಲ್ಲಾಗೆ ಸೋತುಬಿಟ್ಟಳಾ ಲಕ್ಷ್ಮೀ ದೇವಿ? ದೇವ ದಂಪತಿಯ ರಸ ಸಮಯ
ಟ್ವಿಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ : ಈಗಿನ ದಿನಗಳಲ್ಲಿ ಜನರು ಒಟಿಟಿ ಮೊರೆ ಹೋಗಲು ಇದೇ ಮುಖ್ಯ ಕಾರಣವಾಗಿದೆ. ಮಾಲ್ ಗಳಲ್ಲಿ ಸಿನಿಮಾ ವೀಕ್ಷಣೆಗೆ ಹೋದ್ರೆ ಜೇಬು ಖಾಲಿಯಾದಂತೆ ಎಂದು ಕೆಲವರು ಟ್ವೀಟ್ ಮಾಡಿದ್ರೆ ಮತ್ತೆ ಕೆಲವರು, ಥಿಯೇಟರ್ ಗೆ ಸಿನಿಮಾ ನೋಡೋಕೆ ಮಾತ್ರ ಹೋಗಿ. ಮನೆಗೆ ಬಂದು ಊಟ ಮಾಡಿ ಎಂದು ಸಲಹೆ ನೀಡಿದ್ದಾರೆ. ಸಿನಿಮಾ ಎಂಜಾಯ್ ಮಾಡಿ ಅದನ್ನು ಬಿಟ್ಟು ಅಲ್ಲಿರುವ ಆಹಾರದ ಬೆಲೆ ಬಗ್ಗೆ ದೂರೋದಲ್ಲವೆಂದು ಮತ್ತೆ ಕೆಲವರು ಹೇಳಿದ್ದಾರೆ.