World chocolate day : ಚಾಕಲೇಟ್ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಇವತ್ತು ವಿಶ್ವ ಚಾಕಲೇಟ್ ದಿನದ ಅಂಗವಾಗಿ ನಾವು ನಿಮಗೆ ಪ್ರಪಂಚದ ಅತ್ಯಂತ ದುಬಾರಿ ಚಾಕಲೇಟ್ ಕುರಿತು ಒಂದಷ್ಟು ಮಾಹಿತಿ ನೀಡುತ್ತೇವೆ. ಈ ಚಾಕಲೇಟ್ ಬೆಲೆಗೆ ನಾವು ಮನೆಯನ್ನೇ ಕೊಂಡುಕೊಳ್ಳಬಹುದು.
ವಿಶ್ವ ಚಾಕೊಲೇಟ್ ದಿನ
ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರು ಮತ್ತು ಹಿರಿಯರು ಎಲ್ಲರಿಗೂ ಚಾಕಲೇಟ್ ಅಂದ್ರೆ ಕ್ರೇಜ್. ನಾವು ಬಾಲ್ಯದಲ್ಲಿ ಸಣ್ಣ ಪುಟ್ಟ ಸಾಕಷ್ಟು ಚಾಕೊಲೇಟ್ ಸೇವಿಸಿದ್ದೇವೆ. ವಯಸ್ಕರಾದ ನಾವು ಅದನ್ನು ಪರಸ್ಪರ ಉಡುಗೊರೆಯಾಗಿ ನೀಡುತ್ತೇವೆ. ಅಂದಹಾಗೆ ಇವತ್ತು ಜುಲೈ 7 ರಂದು ಜಾಗತಿಕವಾಗಿ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜಗತ್ತಿನಲ್ಲಿ ಸಿಗುವಂತಹ ದುಬಾರಿ ಚಾಕಲೇಟ್ ಗಳ ಪರಿಚಯವನ್ನು ನಿಮಗೆ ಮಾಡೋಣ.
La Madeleine au Truffe
‘La Madeleine au Truffe’ ಇದು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್‌ಗಳಲ್ಲಿ ಒಂದು. ಇದು 70% ಡಾರ್ಕ್ ಚಾಕೊಲೇಟ್ ಮತ್ತು ಫ್ರಾನ್ಸ್‌ನ ಅತ್ಯಂತ ಬೆಲೆಬಾಳುವ ಪೆರಿಗಾರ್ಡ್ ಟ್ರಫಲ್ ಎನ್ನುವ ಅಪರೂಪದ ಅಣಬೆಯಿಂದ ತಯಾರಿಸಲಾಗಿದೆ. ಇದು ರಿಚ್ ಸ್ಮೆಲ್ ಹೊಂದಿದೆ. ಚಾಕೊಲೇಟ್ ಸುಂದರವಾದ ಬೆಳ್ಳಿ ಪೆಟ್ಟಿಗೆಯಲ್ಲಿ ಬರುತ್ತದೆ, ಒಂದು ಸಣ್ಣ ತುಂಡು ಚಾಕಲೇಟ್ ಬೆಲೆ ಸುಮಾರು $250 - ಅಥವಾ ₹21,000ವರೆಗೂ ಇರುತ್ತದೆ. ಇದು ದೊಡ್ಡ ಬಾರ್ ರೂಪದಲ್ಲಿ ಬಂದರೆ ಕೋಟಿ ರೂಪಾಯಿ ಕೊಡಬೇಕಾಗಬಹುದು.
To’ak Chocolate
ಟೋ'ಅಕ್ ಚಾಕೊಲೇಟ್ ಕೂಡ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್‌ಗಳಲ್ಲಿ ಒಂದು. ಇದರ ಮೂಲ ಈಕ್ವೆಡಾರ್‌ನಲ್ಲಿದ್ದು, ನ್ಯಾಶನಲ್ ಕೋಕೋ ಬೀನ್ಸ್ ನಿಂದ ತಯಾರಿಸಲಾಗುತ್ತದೆ., ಇದನ್ನು ವೈನ್ ವಿಸ್ಕಿಗಳಂತೆ ಮರದ ಬ್ಯಾರೆಲ್‌ಗಳಲ್ಲಿ ವರ್ಷಗಳ ಕಾಲ ಪಕ್ವಗೊಳಿಸಲಾಗುತ್ತದೆ. ಒಂದು ಸಣ್ಣ ಬಾರ್‌ಗೆ ಸುಮಾರು $300 ರಿಂದ $490 (ಸುಮಾರು ₹25,000 ರಿಂದ ₹41,000) ಬೆಲೆ ತೆರಬೇಕಾಗುತ್ತದೆ. ಆದರೆ ರುಚಿ ಮಾತ್ರ ಅದ್ಭುತವಾಗಿದೆಯಂತೆ
Frrrozen Haute Chocolate
ದುಬಾರಿ ಚಾಕಲೇಟ್ ಪಟ್ಟಿಯಲ್ಲಿ 'Frrrozen Haute Chocolate' ಇದೆ, ಇದು 28 ವಿಧದ ಅಪರೂಪದ ಕೋಕೋ, ಗೋಲ್ಡ್ ಲೀಫ್ ಮತ್ತು ವಜ್ರ-ಖಚಿತ ಚಮಚವನ್ನು ಒಳಗೊಂಡಿರುವ ವಿಶಿಷ್ಟವಾದ ಫ್ರೋಜನ್ ಚಾಕೊಲೇಟ್ ಡಿಸರ್ಟ್ ಆಗಿದೆ. ಇದರ ಬೆಲೆ ₹ 8 ಲಕ್ಷದಿಂದ ₹ 20 ಲಕ್ಷಕ್ಕೂ ಹೆಚ್ಚು ಇರುತ್ತದೆ.
Delafee Swarovski Gold Chocolate
Delafee Swarovski Gold Chocolate ನ ವೈಶಿಷ್ಟ್ಯವೆಂದರೆ ಇದು 24-ಕ್ಯಾರೆಟ್ ಗೋಲ್ಡ್ ಲೇಪನವನ್ನು ಹೊಂದಿರುವ ಚಾಕಲೇಟ್. ಜೊತೆಗೆ ಇದು ಸ್ವರೋವ್ಸ್ಕಿ ಹರಳುಗಳಿಂದ ಕೂಡಿದೆ. ಇದಕ್ಕೆ ರಾಯಲ್ ಲುಕ್ ಇದೆ ಮತ್ತು ಬೆಲೆ ಪ್ರತಿ ಬಾಕ್ಸ್‌ಗೆ ₹25,000 ರಿಂದ ₹42,000 ಕ್ಕಿಂತ ಹೆಚ್ಚು ಇರುತ್ತದೆ.
Amedei Porcelana
ದುಬಾರಿ ಚಾಕೊಲೇಟ್‌ಗಳಲ್ಲಿ ಅಮೆಡೈ ಪೋರ್ಸೆಲಾನಾ ಕೂಡ ಒಂದು. ಇದನ್ನು ಬಹಳ ಅಪರೂಪದ ಬಿಳಿ ಕೋಕೋ ಬೀನ್ಸ್‌ನಿಂದ ತಯಾರಿಸಲಾಗುತ್ತದೆ. ಇದು ಅಸಾಧಾರಣ ರುಚಿಯನ್ನು ಹೊಂದಿದೆ. ಇದು ಲಕ್ಸುರಿ ಚಾಕಲೇಟ್ ಕೂಡ ಆಗಿದೆ. ಪ್ರತಿ ಪೌಂಡ್‌ಗೆ ₹16,000 ರಿಂದ ₹25,000 ಕ್ಕಿಂತ ಹೆಚ್ಚು ಮೌಲ್ಯವನ್ನು ಹೊಂದಿರುವ ಚಾಕಲೇಟ್ ಇದು.


