ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!

ಬಿರಿಯಾನಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತೆ. ಬಿಸಿ ಬಿಸಿ ಬಿರಿಯಾನಿ ಬಾಯಿ ಚಪ್ಪರಿಸಿಕೊಂಡು ತಿನ್ನೋಕೆ ಹಾಯಾಗಿರುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆ ಬಿರಿಯಾನಿ ತಿನ್ಬೇಕು ಅನ್ನೋ ಲಗುಬಗೆಯಲ್ಲಿ ಮುಂಬೈನಲ್ಲಿದ್ದುಕೊಂಡು ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ್ದಾಳೆ. ಇಷ್ಟಕ್ಕೂ ಅಲ್ಲಾಗಿದ್ದೇನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

Drunk Mumbai Girl Accidentally Ordered Biryani From Bengaluru Vin

ಬಿರಿಯಾನಿ, ಭಾರತೀಯರ ನೆಚ್ಚಿನ ಆಹಾರವಾಗಿದೆ. ವೀಕೆಂಡ್, ಬರ್ತ್‌ಡೇ, ಫ್ರೆಂಡ್ಸ್ ಔಟಿಂಗ್, ಗೆಟ್‌ಟುಗೆದರ್ ಹೀಗೆ ಹೆಚ್ಚಿನ ಎಲ್ಲಾ ಸಂದರ್ಭದಲ್ಲೂ ಎಲ್ಲರಿಗೂ ತಕ್ಷಣಕ್ಕೆ ನೆನಪಾಗೋದು ಬಿರಿಯಾನಿ. ಅದು ವೆಜ್ ಬಿರಿಯಾನಿಯಾದರೂ ಸರಿ, ನಾನ್‌ವೆಜ್‌ ಬಿರಿಯಾನಿಯಾದರೂ ಸರಿ. ಪನೀರ್, ಮಶ್ರೂಮ್ ಬಿರಿಯಾನಿಯ ರುಚಿಯೇ ಅದ್ಭುತವಾಗಿದ್ರೆ, ಎಗ್‌, ಚಿಕನ್‌, ಮಟನ್ ಬಿರಿಯಾನಿ ತಿಂದಷ್ಟೂ ತಿನ್ತಾ ಇರ್ಬೇಕು ಅನ್ಸುತ್ತೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ ಬಿರಿಯಾನಿ ಭಾರತೀಯರ ಅಗ್ರ ಆಯ್ಕೆಯಾಗಿದೆ. 2023ರಲ್ಲಿ ಮತ್ತು ಅದರ ಹಿಂದಿನ ವರ್ಷದಲ್ಲಿ ಬಿರಿಯಾನಿಯು ಅತಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿದೆ ಎಂದು ಇತ್ತೀಚಿನ ಝೊಮಾಟೊ, ಸ್ವಿಗ್ಗಿ ವರದಿಯು ಬಹಿರಂಗಪಡಿಸಿದೆ. ಪ್ರತಿ ನಿಮಿಷಕ್ಕೆ ಸರಾಸರಿ 137 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಡೆಲಿವರಿ ಆಪ್ ತಿಳಿಸಿದೆ. ಬಿರಿಯಾನಿ ಅಂದ್ರೆ ಜನರಿಗೆ ಅಷ್ಟರಮಟ್ಟಿಗೆ ಪ್ರಿಯವಾಗಿದೆ.

ಮುಂಬೈನಲ್ಲಿದ್ದುಕೊಂಡು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ
ಹಾಗೆಯೇ ಇಲ್ಲೊಬ್ಬ ಯುವತಿ ಬಿರಿಯಾನಿ ತಿನ್ಬೇಕು ಅನ್ನೋ ಲಗುಬಗೆಯಲ್ಲಿ ಮುಂಬೈನಲ್ಲಿದ್ದುಕೊಂಡು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ್ದಾಳೆ.  ಮುಂಬೈನ ಯುವತಿಯೊಬ್ಬಳು ಆಹಾರ (Food)ವನ್ನು ಆರ್ಡರ್ ಮಾಡಲು ತನ್ನ ಫೋನ್ ಅನ್ನು ತೆಗೆದುಕೊಂಡಾಗ,  ತಕ್ಷಣ ಬಿರಿಯಾನಿಯನ್ನು ಆರಿಸುತ್ತಾಳೆ. ಆದರೆ ಅದಾಗ್ಲೇ ಮದ್ಯವನ್ನು ಸೇವಿಸಿದ್ದ ಆಕೆ ತಪ್ಪಿ ಬೇರೆ ರಾಜ್ಯದಿಂದ ಬಿರಿಯಾನಿ ಆರ್ಡರ್ ಕೊಟ್ಟಿದ್ದಾಳೆ.  'ಬೆಂಗಳೂರಿನಿಂದ ನಾನು 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆ' ಎಂದು ಮಹಿಳೆ ಆಕೆಯ ಹ್ಯಾಂಡಲ್ @subiiiನಲ್ಲಿ ಆರ್ಡರ್ ಪುಟದ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಝೊಮೇಟೋ ಕೂಡಾ ಪ್ರತಿಕ್ರಿಯಿಸಿದೆ. 'ಸುಬಿ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನೀವು ಸಂತೋಷದ ಹ್ಯಾಂಗೊವರ್ ಹೊಂದಿರುತ್ತೀರಿ. ಅನುಭವದ ಬಗ್ಗೆ ನಮಗೆ ತಿಳಿಸಿ' ಎಂದು ಹೇಳಿಕೊಂಡಿದೆ.

ಅಬ್ಬಬ್ಬಾ..ನ್ಯೂ ಇಯರ್‌ಗೆ ಸ್ವಿಗ್ಗಿಗೆ ಬಂದ ಬಿರಿಯಾಗಿ ಆರ್ಡರ್ ಎಷ್ಟ್‌ ಗೊತ್ತಾ ?

ಬೆಂಗಳೂರಿನ ರೆಸ್ಟೋರೆಂಟ್ ಆಯ್ಕೆಯನ್ನು ಮೆಚ್ಚಿದ ನೆಟ್ಟಿಗರು
ಬೆಂಗಳೂರಿನ ಮೇಘನಾಸ್‌ ಫುಡ್‌ನಿಂದ ಬಿರಿಯಾನಿ ಆರ್ಡರ್ ಮಾಡಲಾಗಿದೆ. @subiii ಅವರ ರೆಸ್ಟೋರೆಂಟ್ ಆಯ್ಕೆಯನ್ನು ಹಲವರು ಹೊಗಳಿದರು; ಒಬ್ಬ ವ್ಯಕ್ತಿ, 'ಮೇಘನಾ ಫುಡ್ಸ್ ಅತ್ಯುತ್ತಮವಾಗಿದೆ' ಎಂದು ಹೇಳಿದರು. ಮತ್ತೊಬ್ಬರು 'ನಿಜವಾಗಿಯೂ ಮೇಘನಾಸ್‌ ಬಿರಿಯಾನಿಯನ್ನು ತಿನ್ನುವುದಾದರೆ ತಪ್ಪಾಗಿ ಆರ್ಡರ್ ಕೊಟ್ಟಿರುವ ಈ ನಿರ್ಧಾರ (Decision)ವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ' ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ 'ಹೀಗೆ ಮಾಡಿರುವುದರಿಂದ ಯಾವುದೇ ತೊಂದರೆಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಈ ಅದ್ಭುತವಾದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ' ಎಂದಿದ್ದಾರೆ. ಹಲವಾರು ಲೈಕ್ಸ್‌, ಶೇರ್‌ಗಳು ಲಭಿಸಿದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಆಗಿದೆ.

ಇಷ್ಟೇ ಅಲ್ಲದೆ ಯುವತಿಯ ಪೋಸ್ಟ್ ಅತ್ಯುತ್ತಮ ಬಿರಿಯಾನಿ ಯಾವ ನಗರದಲ್ಲಿ ಸಿಗುತ್ತದೆ ಎಂಬ ಚರ್ಚೆಯನ್ನು ಹುಟ್ಟುಹಾಕಿತು. ಕೋಲ್ಕತ್ತಾ ಮತ್ತು ಹೈದರಾಬಾದ್‌ಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ರಾಜ್ಯಗಳಾದ್ಯಂತ ಆರ್ಡರ್ ಅನ್ನು ಹೇಗೆ ಇರಿಸಲಾಗಿದೆ ಎಂಬುದರ ಕುರಿತು ಗೊಂದಲಕ್ಕೊಳಗಾದವರಿಗೆ, Zomato 'ಇಂಟರ್‌ಸಿಟಿ ಲೆಜೆಂಡ್ಸ್' ಸೇವೆಯನ್ನು ನೀಡುತ್ತದೆ. ಅದು ಗ್ರಾಹಕರಿಗೆ ಪ್ರಮುಖ ಭಾರತೀಯ ನಗರಗಳಲ್ಲಿನ ಕೆಲವು ರೆಸ್ಟೋರೆಂಟ್‌ಗಳಿಂದ ಆಯ್ದ ವಿಶೇಷತೆಗಳನ್ನು ಆರ್ಡರ್ ಮಾಡಲು ಅನುಮತಿಸುತ್ತದೆ. ಈ ಆರ್ಡರ್‌ಗಳು ಡೆಲಿವರಿ ಆಗಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ.

ನಾನ್‌ವೆಜ್‌ ಪ್ರಿಯರಾ ? ಬೆಂಗಳೂರಲ್ಲಿ ಬೆಸ್ಟ್ ದೊನ್ನೆ ಬಿರಿಯಾನಿ ಇಲ್ಲೆಲ್ಲಾ ಸಿಗುತ್ತೆ ನೋಡಿ

Zomato ಲೆಜೆಂಡ್ಸ್‌ನ ಹೊಸ ಕೊಡುಗೆ
'Zomato ಲೆಜೆಂಡ್ಸ್ ಎಂಬುದು Zomatoನ ಹೊಸ ಕೊಡುಗೆಯಾಗಿದ್ದು,ಇದು ಖಾದ್ಯದ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುವ ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನ (Technology)ವನ್ನು ಬಳಸಿಕೊಂಡು ನಗರಗಳಾದ್ಯಂತ ಹೆಸರಾಂತ ರೆಸ್ಟೋರೆಂಟ್‌ಗಳಿಂದ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ' ಎಂದು ಕಂಪನಿಯು ಸೇವೆಯನ್ನು ಘೋಷಿಸಿದಾಗ ಹೇಳಿಕೊಂಡಿದೆ.

Latest Videos
Follow Us:
Download App:
  • android
  • ios