ಈ ಸ್ಪೂನನ್ನೂ ತಿಂದು ಬಿಡಬಹುದು, ಅಷ್ಟಕ್ಕೂ ಯಾವುದರಿಂದ ಮಾಡಿದ್ದಿದು?
ಪ್ಲಾಸ್ಟಿಕ್ ಪರಿಸರ ನಾಶಕ್ಕೆ ಕಾರಣವಾಗ್ತಿದೆ. ದಿನ ದಿನಕ್ಕೂ ಪ್ಲಾಸ್ಟಿಕ್ ನಮ್ಮ ಜೀವನ ಹಾಳು ಮಾಡ್ತಿದೆ. ಪ್ಲಾಸ್ಟಿಕ್ ಗೆ ಪರ್ಯಾಯ ಉತ್ಪನ್ನಗಳು ನಮ್ಮಲ್ಲಿವೆ ಅಂದ್ಮೇಲೆ ಅದ್ರ ಬಳಕೆ ಯಾಕೆ ಎಂಬ ಪ್ರಶ್ನೆ ಹಾಕಿಕೊಂಡು ಉದ್ಯಮ ಶುರು ಮಾಡಿದ ಈ ವ್ಯಕ್ತಿ ಈಗ ಯಶಸ್ವಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಸ್ಪೂನ್ ಗಳಿವೆ. ಸ್ಟೀಟ್, ಪ್ಲಾಸ್ಟಿಕ್, ಮರದ ಸ್ಪೂನ್ ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಸ್ಟೀಲ್ ಸ್ಪೂನ್ ಗಳನ್ನು ತೊಳೆದು ಮರುಬಳಕೆ ಮಾಡಬಹುದು. ಆದ್ರೆ ಸ್ಟ್ರೀಟ್ ಫುಡ್ ಸೇರಿದಂತೆ ಹೊಟೇಲ್ ಗಳಲ್ಲಿ ಇದು ಸ್ವಲ್ಪ ಕಠಿಣ. ಹಾಗಾಗಿ ಈಗಿನ ದಿನಗಳಲ್ಲಿ ಯೂಸ್ ಆಂಡ್ ಥ್ರೋ ಸ್ಪೂನ್ ಹೆಚ್ಚು ಬೇಡಿಕೆಯ ಸ್ಪೂನ್ ಆಗಿದೆ. ಜನರು ಇದನ್ನು ಹೆಚ್ಚು ಖರೀದಿ ಮಾಡ್ತಾರೆ, ಬಳಸ್ತಾರೆ. ಮನೆಗಳಲ್ಲೂ ಅನೇಕರು ಇದನ್ನು ಬಳಸುತ್ತಾರೆ. ಆದ್ರೆ ಪ್ಲಾಸ್ಟಿಕ್ ಸ್ಪೂನ್ ಗಳು ಪರಿಸರವನ್ನು ಹಾಳು ಮಾಡ್ತಿವೆ. ಅವುಗಳು ಭೂಮಿಯಲ್ಲಿ ಕರಗೋದಿಲ್ಲ. ಐದು ಸಾವಿರಕ್ಕಿಂತಲೂ ಹೆಚ್ಚು ವರ್ಷ ತೆಗೆದುಕೊಳ್ಳುತ್ತೆ. ಪರಿಸರ ಮಾಲಿನ್ಯ ಇದ್ರಿಂದ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಿಯೊಬ್ಬರು ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.
ನೀವು ಆಹಾರ (Food) ಸೇವಿಸಿದ ನಂತರ ಈ ಸ್ಪೂನ್ (Spoon) ಕೂಡ ತಿನ್ನಬಹುದು. ಯಸ್, ಕೋನ್ ಐಸ್ ಕ್ರೀಂ ಸೇವನೆ ಮಾಡೋವಾಗ ನಾವು ಐಸ್ ಕ್ರೀಂ ಜೊತೆ ಬಿಸ್ಕತ್ ನಿಂದ ತಯಾರಿಸಿದ ಕೋನ್ ಕೂಡ ಸೇವನೆ ಮಾಡ್ತೇವೆ. ಅದೇ ರೀತಿ ಈ ಸ್ಪೂನ್. ಎಲ್ಲ ಆಹಾರ ತಿಂದ ಮೇಲೆ ನೀವು ಸ್ಪೂನನ್ನು ಕಚ್ಚಿ ತಿನ್ನಬಹುದು.
ಭಾರತೀಯ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕನಸಿಗೆ ವೇದಿಕೆ ಕಲ್ಪಿಸಿದ ಈತ ಈಗ ಬಿಲಿಯನೇರ್ ಉದ್ಯಮಿ
ಸೇವನೆ ಮಾಡಬಹುದಾದ ಈ ಸ್ಪೂನನ್ನು ಅಕ್ಕಿ, ಗೋಧಿ, ರಾಗಿ ಮತ್ತು ಓಟ್ಸ್ ನಿಂದ ಸಿದ್ಧಪಡಿಸಲಾಗಿದೆ. ಇದಕ್ಕೆ ಉಪ್ಪು, ನೀರನ್ನು ಸೇರಿಸಲಾಗಿದೆ. ಇದು ಸಂಪೂರ್ಣ ನೈಸರ್ಗಿಕವಾಗಿದ್ದು, ಸಸ್ಯಹಾರಿ. ಇದಕ್ಕೆ ಸಂರಕ್ಷಿತ ಪದಾರ್ಥ ಅಥವಾ ಹೆಚ್ಚುವರಿ ಸಕ್ಕರೆಯನ್ನು ಬಳಸಲಾಗಿಲ್ಲ. ಈ ಸ್ಪೂನನ್ನು ಬರೋಡಾದ ಇಂಜಿನಿಯರ್ ಕ್ರುವಿಲ್ ಪಟೇಲ್ ಆವಿಷ್ಕಾರ ಮಾಡಿದ್ದಾರೆ. ತ್ರಿಶೂಲ್ (Trishul) ಹೆಸರಿನ ಕಂಪನಿ ಮೂಲಕ ಅವರು ಪ್ರಸಿದ್ಧಿ ಪಡೆದಿದ್ದಾರೆ. ಬರೋಡಾದಲ್ಲಿ ಪ್ಲಾಸ್ಟಿಕ್ ಎಷ್ಟು ಪರಿಸರ ಹಾಳು ಮಾಡ್ತಿದೆ ಎಂಬುದನ್ನು ನೋಡಿದ ಕ್ರುವಿಲ್ ಪಟೇಲ್ ಗೆ ತಿನ್ನುವ ಸ್ಪೂನ್ ತಯಾರಿಸುವ ಐಡಿಯಾ ಬಂತು.
ಆರಂಭದಲ್ಲಿ ತಿನ್ನುವ ಸ್ಪೂನ್ ತಯಾರಿಸೋದು ಇವರಿಗೆ ಸುಲಭವಾಗಿರಲಿಲ್ಲ. ಅನೇಕ ಬ್ಯಾಂಕ್ ಇವರಿಗೆ ಸಾಲ ನೀಡಲು ಹಿಂದೇಟು ಹಾಕಿತ್ತು. ಆದ್ರೆ ತ್ರಿಶೂಲ್ ಹಿಂದೇಟು ಹಾಕ್ಲಿಲ್ಲ. ಈಗ ತ್ರಿಶೂಲ್ ಕಂಪನಿ ವಾರ್ಷಿಕ ಟರ್ನ್ ಓವರ್ 4.5 ಕೋಟಿ ತಲುಪಿದೆ. ಅಷ್ಟೇ ಅಲ್ಲ 25 ದೇಶಗಳಿಗೆ ತ್ರಿಶೂಲ ಉತ್ಪನ್ನ ಹೋಗ್ತಿದೆ.
ತ್ರಿಶೂಲ್ ಕಂಪನಿ ಬೇರೆ ಬೇರೆ ಫ್ಲೇವರ್ ನಲ್ಲಿ, ಬೇರೆ ಬೇರೆ ಡಿಸೈನ್ ನ ಸ್ಪೂನ್ ಹಾಗೂ ಫೋರ್ಕ್ ತಯಾರಿಸುತ್ತದೆ. ತೇವಾಂಶವನ್ನು ಹೀರಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಅದಕ್ಕೆ ತಕ್ಕ ತಾಪಮಾನದಲ್ಲಿ ಆಹಾರ ಪದಾರ್ಥವನ್ನು ಬೇಯಿಸಲಾಗುತ್ತದೆ. ನೀವು ಇದ್ರಲ್ಲಿ 45 ನಿಮಿಷಗಳವರೆಗೆ ಆರಾಮವಾಗಿ ತಿನ್ನಬಹುದು. ಅಲ್ಲಿಯವರೆಗೆ ಸ್ಪೂನ್ ಮೃದುವಾಗೋದಿಲ್ಲ.
ಕಂಪನಿ ಇದನ್ನು ಸುಲಭವಾಗಿ ತಯಾರಿಸುತ್ತಿದೆ. ಅಗತ್ಯವಿರುವ ಎಲ್ಲ ಆಹಾರ ಪದಾರ್ಥಗಳನ್ನು ಮಿಕ್ಸ್ ಮಾಡಿ ನಂತ್ರ ಬೇರೆ ಬೇರೆ ಆಕಾರದಲ್ಲಿ ಸ್ಪೂನ್ ತಯಾರಿಸುತ್ತದೆ. ಈ ಕಂಪನಿ ತನ್ನ ಯುನಿಟ್ ನಲ್ಲಿ ಶೇಕಡಾ 50ರಷ್ಟು ಮಹಿಳೆಯರಿಗೆ ಉದ್ಯೋಗ ಕೂಡ ನೀಡ್ತಿದೆ.
ತಮಿಳುನಾಡಿನಲ್ಲಿ ಅಮೆರಿಕದ ಫಸ್ಟ್ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ
ಸ್ಪೂನ್‌ಗಳು ಪ್ರಸ್ತುತ ಸಿಂಪ್ಲಿ ಕ್ಲಾಸಿಕ್, ಬ್ಲ್ಯಾಕ್ ಟ್ರೆಷರ್, ಚೋಕೊ ಲಸ್ಟ್, ಸ್ಪೈಸ್ ಹಂಟರ್ ಮತ್ತು ಕ್ರಂಚಿ ವೆನಿಲ್ಲಾ ಸುವಾಸನೆಗಳಲ್ಲಿ ಸಿಗ್ತಿದೆ. ಕ್ರುವಿಲ್ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಕ್ಯಾಂಟೀನ್ ನಲ್ಲಿ ತಿನ್ನುತ್ತಿದ್ದಂತೆ. ಒಂದು ದಿನ ಪ್ಲಾಸ್ಟಿಕ್ ಸ್ಪೂನ್ ಬಾಯಲ್ಲಿ ಒಡೆದು ಹೋಯ್ತು. ಇದು ಹೊಟ್ಟೆಯ ಒಳಗೆ ಹೋದ್ರೆ ಏನಾಗುತ್ತೆ ಎಂಬುದನ್ನು ಆಲೋಚಿಸಿದ ಕ್ರುವಿಲ್, ತಿನ್ನುವ ಸ್ಪೂನ್ ಯಾಕೆ ತಯಾರಿಸಬಾರದು ಎಂದು ಆಲೋಚನೆ ನಡೆಸಿದ್ರು. ಹೈದ್ರಾಬದ್ ನಿಂದ ಇಂಥ ಸ್ಪೂನ್ ತರಿಸಿ ನೋಡಿದ್ರು. ಆದ್ರೆ ಅದು ಅಷ್ಟು ಟೇಸ್ಟ್ ಇರಲಿಲ್ಲ. ಇದನ್ನು ಟೇಸ್ಟಿ ಮಾಡಿದ್ರೆ ಒಳ್ಳೆಯದು ಎನ್ನುವ ಪ್ಲಾನ್ ನಲ್ಲಿ ಸತತ ಪ್ರಯತ್ನನಡೆಸಿ ಕ್ರುವಿಲ್ ಯಶಸ್ವಿಯಾದ್ರು.