ಭಾರತೀಯ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕನಸಿಗೆ ವೇದಿಕೆ ಕಲ್ಪಿಸಿದ ಈತ ಈಗ ಬಿಲಿಯನೇರ್ ಉದ್ಯಮಿ
ಜಪಾನ್ ನಲ್ಲಿನ ಪ್ರತಿಷ್ಟಿತ ಕಂಪನಿಯ ಅಧಿಕ ವೇತನದ ಉದ್ಯೋಗವನ್ನು ತ್ಯಜಿಸಿದ ಈತ ಬೆಂಗಳೂರಿನ ಪುಟ್ಟ ಅಪಾರ್ಟ್ಮೆಂಟ್ ನಲ್ಲಿ ಪ್ರಾರಂಭಿಸಿದ ಆನ್ ಲೈನ್ ಮಾರುಕಟ್ಟೆ ಸಂಸ್ಥೆ ಇಂದು ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಭಾರತೀಯ ಮಹಿಳೆಯರ ಸ್ವಾವಲಂಬನೆಯ ಕನಸಿಗೆ ವೇದಿಕೆ ಕಲ್ಪಿಸಿದೆ.
Business Desk:ಇತರರಿಗಿಂತ ವಿಭಿನ್ನವಾಗಿ ಆಲೋಚಿಸುವ ಸಾಮರ್ಥ್ಯವುಳ್ಳವರು ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ಉದ್ಯಮ ರಂಗದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ ಕೂಡ. ಈ ರೀತಿ ವಿಭಿನ್ನ ಯೋಚನೆ ಮೂಲಕ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಯಶಸ್ಸು ಸಾಧಿಸಿದವರಲ್ಲಿ ಮಿಶೋ ಸಂಸ್ಥಾಪಕರಾದ ವಿದಿತ್ ಹಾಗೂ ಸಂಜೀವ್ ಕೂಡ ಸೇರಿದ್ದಾರೆ. ಮಿಶೋ ಆನ್ ಲೈನ್ ಮಾರುಕಟ್ಟೆಯಾಗಿದ್ದು, ಪೂರೈಕೆದಾರರು, ಮಾರಾಟಗಾರರು ಹಾಗೂ ಗ್ರಾಹಕರ ನಡುವೆ ವ್ಯಾಪಾರಕ್ಕೆ ವೇದಿಕೆ ಕಲ್ಪಿಸುತ್ತದೆ. ಅದರಲ್ಲೂ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಮ್ ಮುಂತಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೇಲೆ ಅವಲಂಬಿತರಾದವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ಸಣ್ಣ ಪಟ್ಟಣಗಳಲ್ಲಿರುವ ಮಹಿಳೆಯರಿಗೆ ಮಿಶೋ ಬದುಕು ಕಟ್ಟಿಕೊಳ್ಳಲು ನೆರವು ನೀಡಿದೆ ಎಂದರೆ ತಪ್ಪಿಲ್ಲ. ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಉತ್ಪನ್ನಗಳು, ಬಟ್ಟೆ, ಕರಕುಶಲ ಸಾಮಗ್ರಿಗಳನ್ನು ಮಾರಾಟ ಮಾಡಲು ಮಿಶೋ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ನೆರವು ನೀಡಿದೆ.
ಮಹಿಳೆಯರ ಸ್ವಾವಲಂಬನೆಯ ಕನಸಿಗೆ ನೀರೆರೆದ ಮಿಶೋ
ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಗೃಹಿಣಿಯರಲ್ಲಿ ಅನೇಕ ಕೌಶಲ್ಯಗಳಿರುತ್ತವೆ. ಕೆಲವರು ರುಚಿಯಾದ ತಿನಿಸುಗಳನ್ನು ತಯಾರಿಸೋದರಲ್ಲಿ ಸಿದ್ಧ ಹಸ್ತರಾದರೆ, ಇನ್ನೂ ಕೆಲವರು ಕಸದಿಂದ ರಸ ಎಂಬಂತೆ ಎಸೆಯುವ ವಸ್ತುಗಳಿಂದ ಗೃಹಾಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವಲ್ಲಿ ನಿಪುಣರಾಗಿರುತ್ತಾರೆ. ಹೀಗೆ ಗೃಹಿಣಿಯರಲ್ಲಿ ಅನೇಕ ಕೌಶಲ್ಯಗಳಿರುತ್ತವೆ. ಆದರೆ, ಅದನ್ನು ತೋರ್ಪಡಿಸಲು ಹಾಗೂ ಅದರಿಂದಲೇ ಆದಾಯ ಗಳಿಸಲು ಸೂಕ್ತ ವೇದಿಕೆ ಸಿಕ್ಕಿರೋದಿಲ್ಲ. ಇಂಥ ಮಹಿಳೆಯರು ಸಿದ್ಧಪಡಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಕೊರತೆ ಎದುರಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದಿತ್ ಆಗೂ ಸಂಜೀವ್ ಮಿಶೋ ಅಪ್ಲಿಕೇಷನ್ ಅನ್ನು ವಿನ್ಯಾಸಗೊಳಿಸಿದ್ದರು. ಈ ಅಪ್ಲಿಕೇಷನ್ ಬಳಕೆ ತುಂಬಾ ಸುಲಭವಾಗಿರುವ ಕಾರಣ ಯಾರೂ ಬೇಕಾದರೂ ಇದನ್ನು ಬಳಸಬಹುದು. ಹೀಗಾಗಿ ಈ ಅಪ್ಲಿಕೇಷನ್ ಅನೇಕ ಮಹಿಳೆಯರಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸ್ವಾತಂತ್ರರಾಗುವ ಮೂಲಕ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವು ನೀಡಿದೆ.
ತಂದೆ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಮಗಳು ಈಗ 63, 000 ಕೋಟಿ ಬೆಲೆಬಾಳೋ ಕಂಪನಿ ಸಿಇಒ
2022ರ ಡಿಸೆಂಬರ್ ನಲ್ಲಿ ಫೆಡಿಲಿಟಿ ಫಂಡ್ಸ್ ಮಿಶೋ ಮೌಲ್ಯವನ್ನು 4.98 ಬಿಲಿಯನ್ ಡಾಲರ್ ಎಂದು ಅಂದಾಜಿಸಿತ್ತು. ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಹೂಡಿಕೆದಾರರು ಮಿಶೋ ಮೌಲ್ಯವನ್ನು 4.29 ಬಿಲಿಯನ್ ಡಾಲರ್ ಎಂದು ಅಂದಾಜಿಸಿದ್ದಾರೆ.
ಮಿಶೋ ಸ್ಥಾಪನೆಗೆ ಉದ್ಯೋಗ ತ್ಯಜಿಸಿದ ಸಂಜೀವ್
ಮಿಶೋ ಸಹಸಂಸ್ಥಾಪಕರಾಗಿರುವ ಸಂಜೀವ್ ಬರ್ನ್ವಾಲ್ ಐಐಟಿಯಿಂದ ಪದವಿ ಪೂರ್ಣಗೊಳಿಸಿದ ಬಳಿಕ ಜಪಾನ್ ನಲ್ಲಿ ಉದ್ಯೋಗದಲ್ಲಿದ್ದರು. ಸೋನಿ ಕೋರ್ ಟೆಕ್ ತಂಡದ ಸದಸ್ಯರಾಗಿದ್ದ ಅವರು, ಅಲ್ಲಿ ಸಾಕಷ್ಟು ಉತ್ತಮ ಅವಕಾಶಗಳನ್ನು ಪಡೆಯುವ ಜೊತೆಗೆ ಜ್ಞಾನ ಕೂಡ ಸಂಪಾದಿಸಿದ್ದರು. ಸೋನಿ ಮಾರುಕಟ್ಟೆ ಬಂಡವಾಳ 10,32,259 ಕೋಟಿ ರೂ. ಇದೆ. ಆದರೂ ತನ್ನ ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಬಯಕೆ ಸಂಜೀವ್ ಅವರಿಗಿತ್ತು.
ಸ್ನೇಹಿತನ ನೆರವಿನಿಂದ ನನಸಾದ ಕನಸು
ಸ್ವಂತ ಉದ್ಯಮ ಸ್ಥಾಪಿಸುವ ಕನಸು ಹೊಂದಿದ್ದ ಸಂಜೀವ್ ಈ ವಿಚಾರವನ್ನು ಸ್ನೇಹಿತ ವಿದಿತ್ ಆತ್ರೇಯ್ ಬಳಿ ಹಂಚಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ವಿದಿತ್ ಬೆಂಗಳೂರು ಮೂಲದ ಇನ್ ಮೊಬಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಬಗ್ಗೆ ಸುಮಾರು ಒಂದು ತಿಂಗಳ ಕಾಲ ಇಬ್ಬರೂ ಚರ್ಚೆ ನಡೆಸಿ, ಆ ಬಳಿಕ ಸ್ವಂತ ಕಂಪನಿ ಸ್ಥಾಪಿಸುವ ನಿರ್ಧಾರ ಕೈಗೊಳ್ಳುತ್ತಾರೆ.
ನಾಲಾಯಕ್ ಅಂದ್ರೂ ತಲೆಕೆಡಿಸಿಕೊಳ್ಳದ ಭಾರತೀಯನೀಗ ಅಮೆರಿಕದ ಯಶಸ್ವಿ ಉದ್ಯಮಿ;ಈತನ ಸಂಪತ್ತು 24,102 ಕೋಟಿ ರೂ.
2ಬಿಎಚ್ ಕೆ ಅಪಾರ್ಟ್ ಮೆಂಟ್ ನಲ್ಲಿ ಮಿಶೋ ಪ್ರಾರಂಭ
2015ರ ಜೂನ್ ನಲ್ಲಿ ಸಂಜೀವ್ ಹಾಗೂ ವಿದಿತ್ ಇಬ್ಬರೂ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರೆ. ಬೆಂಗಳೂರಿನ ಕೋರಮಂಗಲದ ಸಮೀಪದ ಎರಡು ಬೆಡ್ ರೂಮ್ ಪುಟ್ಟ ಅಪಾರ್ಟ್ಮೆಂಟ್ ನಲ್ಲಿ ಮಿಶೋ ಮೊದಲ ಕಚೇರಿ ಪ್ರಾರಂಭವಾಗುತ್ತದೆ. ಈ ಕಂಪನಿಯನ್ನು 2015ರಲ್ಲಿ ಪ್ರಾರಂಭಿಸಲಾಗಿತ್ತು. ಮಿಶೋ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕೂಡ ಗಳಿಸಿತ್ತು. ಪ್ರಸ್ತುತ ಸಂಜೀವ್ ಬನ್ಸಾಲ್ ಅವರ ಸಂಪತ್ತು 2.1 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.