ಜಗತ್ತಿನಲ್ಲಿ 152 ಕೋಟಿ ಮಂದಿ ಚಾಪ್‌ಸ್ಟಿಕ್ ಬಳಸುತ್ತಾರೆ, ಯಾಕೆ ಗೊತ್ತೇ?

ನೀವು ಯಾವತ್ತಾದ್ರೂ ಚಾಪ್‌ಸ್ಟಿಕ್ ಬಳಸಿ ಊಟ ಮಾಡಿದ್ದೀರಾ? ನೋಡಿಯೇ ತಲೆ ತಿರುಗುತ್ತೆ ಅಂತೀರಲ್ಲ? ಪ್ರಪಂಚದಲ್ಲಿ 152 ಕೋಟಿ ಜನ ನಿತ್ಯ ಚಾಪ್‌ಸ್ಟಿಕ್ ಬಳಸ್ತಾರೆ ಅಂದ್ರೆ ಯೋಚ್ನೆ ಮಾಡಿ!

Why 152 crore people use chopsticks here are reasons

ಯಾವತ್ತಾದರೂ ಚಾಪ್‌ಸ್ಟಿಕ್ ಬಳಸಿ ಆಹಾರ ಸೇವಿಸೋದಕ್ಕೆ ಯತ್ನಿಸಿದ್ದೀರಾ? ಬಹುಶಃ ನೀವು ಚೀನಾಕ್ಕೋ ಜಪಾನಿಗೋ ಹೋದರೆ ಅದನ್ನು ಬಳಸುವ ವೈಖರಿಯನ್ನು ನೋಡಿರುತ್ತೀರಿ. ಚೈನೀಸ್ ರೆಸ್ಟುರಾಗಳಲ್ಲಿ ಇವುಗಳನ್ನು ಬಳಸುವುದನ್ನು ಗಮನಿಸಿರಬಹುದು. ಜಪಾನಿ, ಚೀನಿ ಚಲನಚಿತ್ರಗಳಲ್ಲಿ ಇವುಗಳ ಬಳಕೆಯನ್ನು ನೋಡಿರಬಹುದು. ಆದರೆ ಬಳಸಲು ಯತ್ನಿಸಿ ನೋಡಿ! ಒಂದೇ ಕೈಯಲ್ಲಿ ಎರಡು ಕಡ್ಡಿಗಳನ್ನು ಹಿಡಿದು, ಅವುಗಳನ್ನು ನಾಜೂಕಾಗಿ ಬ್ಯಾಲೆನ್ಸ್ ಮಾಡ್ತಾ, ಆಹಾರದ ತುಣುಕುಗಳನ್ನು ಅವುಗಳಿಗೆ ಸಿಕ್ಕಿಸೋದೇ ಒಂದು ಕಲೆ. ಅದನ್ನು ಬೀಳದಂತೆ ಬಾಯಿವರೆಗೆ ತರೋದು ಇನ್ನೊಂದು ಕಲೆ. ಒಟ್ಟಾರೆಯಾಗಿ ಅದೊಂದು ಸರ್ಕಸ್ಸು ಎಂದೇ ಹೇಳಬಹುದು. ಇಷ್ಟೆಲ್ಲಾ ಸರ್ಕಸ್ ಮಾಡಿ ಆಹಾರ ಸೇವಿಸಬೇಕಾ ಎಂದೆಲ್ಲ ನಿಮಗೆ ಕಂಡರೆ ಆಶ್ಚರ್ಯವಿಲ್ಲ. ಆದರೆ ನಂಬಿ, ಹೀಗೆ ಪ್ರತಿದಿನ ಸರ್ಕಸ್ ಮಾಡುತ್ತಲೇ ೧೫೨ ಕೋಟಿ ಮಂದಿ ಪ್ರತಿದಿನ ಆಹಾರ ಸೇವಿಸುತ್ತಾರೆ! ಅವರಿಗೆ ಅದು ಸರ್ಕಸ್ ಅಲ್ಲ, ಪ್ರತಿದಿನದ ರೂಢಿ.

ಚಾಪ್‌ಸ್ಟಿಕ್‌ಗಳನ್ನು ಹೆಚ್ಚಾಗಿ ಬಳಸುವವರು ಚೀನೀಯರು ಮತ್ತು ಜಪಾನೀಯರು. ಎರಡೂ ದೇಶಗಳು ಬಳಸುವ ಚಾಪ್‌ಸ್ಟಿಕ್‌ಗಳಿಗೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಅದು ಹಾಗಿರಲಿ. ಸಿಂಗಾಪುರ, ಫಿಲಿಪ್ಪೀನ್ಸ್, ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ ಮುಂತಾದ ಕಡೆಯೂ ಬಳಸುವುದುಂಟು. ನೇಪಾಳ, ಥಾಯ್ಲೆಂಡ್ ಮುಂತಾದ ಕಡೆ ಕೇವಲ ನ್ಯೂಡಲ್ಸ್ ತಿನ್ನುವುದಕ್ಕೆ ಮಾತ್ರ ಚಾಪ್‌ಸ್ಟಿಕ್ ಬಳಸುತ್ತಾರೆ.

Why 152 crore people use chopsticks here are reasons

ಅದು ಸರಿ, ತಿಂಡಿ ತಿನ್ನುವುದಕ್ಕೆ ಸೂಕ್ತವಾದ ಚಮಚ ಬಿಟ್ಟಿ ಈ ಚೀನೀಯರು ಚಾಪ್‌ಸ್ಟಿಕ್‌ಗಳನ್ನೇ ಆಯ್ದುಕೊಂಡದ್ದು ಯಾಕೆ? ಅದೇನು ಹೆಚ್ಚಿನ ಲಾಭ ಇದೆ ಅದರಲ್ಲಿ?

ಫ್ರಿಡ್ಜ್ ಕ್ಲೀನ್ ಆಗಿಡಲು ಇಲ್ಲಿವೆ ಪಾಲಿಸಲೇಬೇಕಾದ ಕೆಲವು ಸಲಹೆಗಳು! ...

ಇದಕ್ಕೆ ಹಿಸ್ಟಾರಿಯನ್‌ಗಳು ಏನು ಹೇಳುತ್ತಾರೆ ಎಂಬುದನ್ನು ನೋಡಬೇಕು. ಚೀನೀಯರು ಮತ್ತು ಜಪಾನೀಯರು ಆಳವಾದ, ಹೆಚ್ಚು ಗುಂಡಿ ಗುಂಡಿಯಾಗಿರುವ ಪಾತ್ರಗಳನ್ನು ಅಡುಗೆ ಮಾಡಲು ಬಳಸುತ್ತಿದ್ದರು. ಮೀನು, ಮಾಂಸದ ಪದಾರ್ಥಗಳನ್ನು ಮಾಡಲು ಇದು ಅನುಕೂಲಕರವಾಗಿತ್ತು. ಆಗ ಪಾತ್ರೆಯಲ್ಲಿರುವ ಮಾಂಸ ಅಥವಾ ತರಕಾರಿ ಹೋಳುಗಳನ್ನು ಸರಿಯಾಗಿ ಬೆಂದಿದೆಯೇ ಎಂದು ನೋಡಲು ಕಡ್ಡಿಗಳನ್ನು ಬಳಸತೊಡಗಿದರು. ಮೊದಲು ಒಂದು ಕಡ್ಡಿಯಲ್ಲಿ ಚುಚ್ಚಿ ನೋಡುತ್ತಿದ್ದರು. ನಂತರ ಎರಡು ಕಡ್ಡಿಗಳನ್ನು ಬಳಸಿ ಅವುಗಳನ್ನೆ ತೆಗೆದು ನೋಡಲು ಆರಂಭಿಸಿದರು.

ಮಧ್ಯಯುಗದಲ್ಲಿ ಚೀನಾದಲ್ಲಿ ಕನ್‌ಫ್ಯೂಶಿಯಸ್ ಎಂಬ ಸಂತ ಹುಟ್ಟಿದ ಧರ್ಮಬೋಧೆಗಳನ್ನು ಮಾಡಿದ. ಆತ ಹೇಳಿದೆ: ಯಾವುದೇ ಸಭ್ಯ ಮನುಷ್ಯ ಊಟದ ಟೇಬಲ್‌ನ ಮೇಲೆ ಚೂರಿಯನ್ನು ಇಟ್ಟುಕೊಳ್ಳುವುದಿಲ್ಲ. ಚೂರಿ ಹಿಂಸೆಯ ಸಂಕೇತ.

ಅಲ್ಲಿಯವರೆಗೂ ಚೀನೀಯರು ಬೆಂದ ಮಾಂಸವನ್ನು ಕತ್ತರಿಸಲು ಚೂರಿಯನ್ನು ಪ್ಲೇಟ್‌ನಲ್ಲಿ ಬಳಸುತ್ತಿದ್ದರು. ಕನ್‌ಫ್ಯೂಶಿಯಸ್‌ನ ಬೋಧನೆ ಜನಪ್ರಿಯವಾದ ಬಳಿಕ, ಅವರು ಚೂರಿಯನ್ನು ಊಟದ ಟೇಬಲ್‌ನಿಂದ ಆಚೆಗಿಟ್ಟರು. ಆದರೆ ಮಾಂಸವನ್ನು ಹೆಚ್ಚು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ ಬೇಯಿಸತೊಡಗಿದರು. ಈ ಚೂರುಗಳನ್ನು ಹೆಕ್ಕು ಹೆಕ್ಕಿ ತಿನ್ನಬೇಕಲ್ಲ? ಅದಕ್ಕೆ ಚಾಪ್‌ಸ್ಟಿಕ್‌ಗಳು ಬಳಕೆಯಾಗತೊಡಗಿದವು.

ಮಂಗನ ಕೈಯಲ್ಲೂ ರುಚಿಯಾಗಿ ಅಡುಗೆ ಮಾಡಿಸೋ ಇಂಗು ಇಷ್ಟು ಆರೋಗ್ಯಕಾರಿಯೇ? ...

ಇನ್ನೊಂದು ಕಾರಣ- ಊಟದ ಟೇಬಲ್‌ನಲ್ಲಿ ಹೆಚ್ಚು ಹೊತ್ತು ಸಂಸಾರದ ಸಮೇತ ಕಳೆಯುವುದು ಸಾಧ್ಯವಾಗುತ್ತಿತ್ತು. ಚಮಚದ ಬಳಕೆಯನ್ನು ಮಾಡಿದರೆ, ದೊಡ್ಡ ತುತ್ತುಗಳು ಗಂಟಲೊಳಗೆ ಹೋಗುತ್ತಿದ್ದವು ಹಾಗೂ ಊಟ ಬೇಗನೆ ಮುಗಿಯುತ್ತಿತ್ತು. ಆದರೆ ಚಾಪ್‌ಸ್ಟಿಕ್ ಬಳಸಿದಾಗ, ಒಂದು ಸಲಕ್ಕೆ ಒಂದು ಅಥವಾ ಎರಡು ಹೋಳನ್ನು ಮಾತ್ರ ತಿನ್ನಲು ಸಾಧ್ಯ. ಇದರಿಂದ ಊಟಕ್ಕೆ ಹೆಚ್ಚು ಹೊತ್ತು ಬೇಕಾಗುತ್ತಿತ್ತು. ಅಷ್ಟು ಹೊತ್ತು ಸಂಸಾರವಿಡೀ ಊಟದ ಟೇಬಲ್ ಬಳಿ ಇರುತ್ತಿತ್ತು.

ತರಕಾರಿ, ಮಾಂಸದ ಹೋಳುಗಳನ್ನೇನೋ ಸಲೀಸಾಗಿ ಚಾಪ್‌ಸ್ಟಿಕ್‌ನಲ್ಲಿ ಹೆಕ್ಕಿ ತಿಂದುಬಿಡಬಹುದು. ಆದರೆ ಅನ್ನವನ್ನಂತೂ ಈ ಚಾಪ್‌ಸ್ಟಿಕ್‌ನಲ್ಲಿ ತಿನ್ನುವುದು ಬಿಡು, ಯಾರಾದರೂ ತಿನ್ನುವುದನ್ನು ನೋಡುವುದೇ ಒಂದು ಹಿಂಸೆ. ಆದರೆ ಇದರಲ್ಲೂ ಪಳಗಿದವರಿದ್ದಾರೆ. ನಾವು ಕೈಯಲ್ಲಿ ಒಮ್ಮೆ ತಿನ್ನುವಷ್ಟೆ ಅನ್ನವನ್ನು ಇವರು ಚಾಪ್‌ಸ್ಟಿಕ್‌ನಲ್ಲಿ ಹೆಕ್ಕಿಕೊಂಡು ತಿಂದುಬಿಡುತ್ತಾರೆ. ಇದು ಅಭ್ಯಾಸ ಬಲ.

ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'! ...

 

 

Latest Videos
Follow Us:
Download App:
  • android
  • ios