ಮಂಗನ ಕೈಯಲ್ಲೂ ರುಚಿಯಾಗಿ ಅಡುಗೆ ಮಾಡಿಸೋ ಇಂಗು ಇಷ್ಟು ಆರೋಗ್ಯಕಾರಿಯೇ?
ಅಸಫೋಟಿಡಾ ಅಥವಾ ಇಂಗು ಭಾರತೀಯ ಪಾಕ ಪದ್ಧತಿಗಳ ಅವಿಭಾಜ್ಯ ಅಂಗ. ಕಡುವಾದ ಪರಿಮಳದೊಂದಿಗೆ, ದಾಲ್ ಮತ್ತು ಪಲ್ಯಗಳಿಗೆ ಇದು ಹೊಸ ರುಚಿಯನ್ನು ನೀಡುತ್ತದೆ. ಅದಕ್ಕೆ ಹಿರಿಯರು ಹೇಳುವುದು ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂದು. ಆದರೆ, ಮನೆಯಲ್ಲಿ ಬಳಸುವ ಪುಡಿಪುಡಿಯಾದ ಇಂಗು ವಾಸ್ತವವಾಗಿ ಆಡ್ ಫೆರುಲಾ ಎಂಬ ಗಿಡಮೂಲಿಕೆಯ ವಿವಿಧ ಪ್ರಭೇದಗಳಿಂದ ತೆಗೆದ ಒಂದು ಲ್ಯಾಟೆಕ್ಸ್ ಗಮ್ ಎಂಬುದು ತಿಳಿದಿದೆಯೇ?
ಆಯುರ್ವೇದದ ಪ್ರಕಾರ ಇಂಗಿನಲ್ಲಿ ಔಷಧೀಯ ಗುಣಗಳಿವೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳಿವೆ. ಪ್ರತಿದಿನ ಒಂದು ಚಿಟಿಕೆ ಅಸಫೋಟಿಡಾವನ್ನು ಏಕೆ ಸೇವಿಸಬೇಕು ಎಂಬುದು ಇಲ್ಲಿದೆ.
ಜೀರ್ಣಕ್ರಿಯೆಗೆ ಒಳ್ಳೆಯದು.
ಅಜೀರ್ಣದಿಂದ ಹಿಡಿದು ಕಿರಿಕಿರಿಯ ಕರುಳಿನ ಸಿಂಡ್ರೋಮ್‌ವರೆಗೆ, ಜೀರ್ಣಾಂಗದ ಪ್ರತಿಯೊಂದೂ ಸಮಸ್ಯೆಗೂ ಅಸಫೋಟಿಡಾ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಜಠರದಿಂದ ಗಾಳಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ.
ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸುತ್ತದೆ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಅಸಫೋಟಿಡಾ ಉತ್ತಮ ಪರಿಹಾರ ಆಗಬಹುದು. ಇದರಲ್ಲಿ ಕೌಮರಿನ್ ಎಂಬ ಸಂಯುಕ್ತವಿದ್ದು, ಇದು ರಕ್ತದೊತ್ತಡದ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಉರಿಯೂತ ಶಮನಕಾರಿ ಗುಣಗಳು
ಅಸ್ತಮಾ, ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವವರು ಪ್ರತಿದಿನವೂ ಅಸಫೋಟಿಡಾವನ್ನು ಸೇವಿಸಬೇಕು. ಏಕೆಂದರೆ ಉರಿಯೂತ ನಿವಾರಕ ಗುಣವು ಉಸಿರಾಟದ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.
ಬ್ಯಾಕ್ಟೀರಿಯಾ ವಿರೋಧಿ ಗುಣಗಳು
ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಮತ್ತು ಚರ್ಮದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
ತಲೆನೋವು ಕಡಿಮೆ ಮಾಡುತ್ತದೆ
ಚಿಟಿಕೆ ಹೀಂಗನ್ನು ಸ್ವಲ್ಪ ನೀರಿನಲ್ಲಿ ಬಿಸಿ ಮಾಡಿ ದಿನಕ್ಕೆ ಎರಡು ಬಾರಿ ಈ ದ್ರಾವಣವನ್ನು ಕುಡಿದರೆ, ತಲೆನೋವು ನಿವಾರಣೆ ಆಗುವುದು.
ಮುಟ್ಟಿನ ನೋವನ್ನು ನಿವಾರಿಸುತ್ತದೆ
ಇದು ಹೊಟ್ಟೆ ಮತ್ತು ಬೆನ್ನಿನ ಕೆಳಭಾಗದಲ್ಲಿರುವ ಮುಟ್ಟಿನ ನೋವು ಮತ್ತು ಸೆಳೆತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಬ್ಲಡ್ ಥಿನ್ನರ್ ಆಗಿದ್ದು, ರಕ್ತ ಸರಾಗವಾಗಿ ಹರಿಯಲು ನೆರವಾಗುತ್ತದೆ.