Health Tips: ದನದ ಹಾಲು, ಬಾದಾಮಿ ಹಾಲು, ಓಟ್ಸ್ ಹಾಲು: ಯಾವ ಹಾಲು ಬೆಸ್ಟ್?

ಲ್ಯಾಕ್ಟೋಸ್ ಅಸಹಿಷ್ಣುತೆಯ ಪ್ರಮಾಣ ದೇಶದಲ್ಲಿ ಹೆಚ್ಚಾಗಿದೆ. ವಯಸ್ಕರಲ್ಲಿ ಶೇ. 65-70 ಜನ ಇದೇ ಕಾರಣಕ್ಕೆ ಹಾಲು ಬಳಕೆ ಕಡಿಮೆ ಮಾಡಿದ್ದಾರೆ. ಪರಿಣಾಮವಾಗಿ, ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು. ಇಂಥವರು ದನದ ಹಾಲಿಗೆ ಪರ್ಯಾಯವಾಗಿ ಬೇರೆ ಬೇರೆ ಹಾಲನ್ನು ಬಳಕೆ ಮಾಡಬಹುದು.
 

Which milk is better for you cow oats nuts  health food fitness tips

ಮಕ್ಕಳ ಬಾಲ್ಯದೊಂದಿಗೆ ಹಾಲಿಗಿರುವ ನಂಟು ಅಪಾರ. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ಹಾಲಿನೊಂದಿಗೆ ಲವ್-ಹೇಟ್ ಸಂಬಂಧ ಇರುತ್ತದೆ. ಒಂದೋ ಅವರು ಹಾಲು ಕುಡಿಯಲು ಇಷ್ಟಪಡಬಹುದು ಅಥವಾ ದ್ವೇಷಿಸಬಹುದು. ಪ್ರತಿನಿತ್ಯ ಹಾಲು ಕುಡಿಯಬೇಕು ಎನ್ನುವ ಮಾತುಗಳನ್ನು ಕೇಳುತ್ತಲೇ ನಾವೆಲ್ಲರೂ ದೊಡ್ಡವರಾಗಿದ್ದೇವೆ.  ಕೆಲವರು ಈಗಲೂ ಆ ಪದ್ಧತಿ ಇರಿಸಿಕೊಂಡಿರಬಹುದು ಅಥವಾ ಹಾಲು ಕುಡಿಯುವುದನ್ನು ಎಂದೋ ನಿಲ್ಲಿಸಿರಬಹುದು. ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್, ಮಿನರಲ್ ಭರಿತ ಹಾಲನ್ನು ಪರಿಪೂರ್ಣ ಆಹಾರ ಎಂದು ಪರಿಗಣಿಸಲಾಗಿದೆ. ಆದರೆ, ಹಾಲು ಸೇರಿದಂತೆ ಲ್ಯಾಕ್ಟೋಸ್ ಭರಿತ ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇತ್ತೀಚೆಗೆ ಕಡಿಮೆಯಾಗಿರುವುದು ಬಹಳಷ್ಟು ಜನರ ಅನುಭವಕ್ಕೆ ಬಂದಿರುವ ಸಂಗತಿ. ಲ್ಯಾಕ್ಟೋಸ್ ಅಸಹಿಷ್ಣುತೆ ಇಂದು ಹೆಚ್ಚಾಗಿ ಕಂಡುಬರುತ್ತಿದೆ. ಅಜೀರ್ಣ, ಮುಖದ ಮೇಲೆ ಮೊಡವೆ ಉಂಟಾಗುವುದು ಸೇರಿದಂತೆ ಹಲವು ಪರಿಣಾಮಗಳು ಉಂಟಾಗುತ್ತಿವೆ. ಇದಕ್ಕೆ ಆಹಾರಶೈಲಿಯಲ್ಲಿ ಆಗಿರುವ ಬದಲಾವಣೆ ಸೇರಿದಂತೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಆಹಾರಶೈಲಿಯಲ್ಲಿ ಆಗಿರುವ ಬದಲಾವಣೆಯಿಂದಾಗಿ ನಮ್ಮ ಕರುಳಿನ ಸಾಮರ್ಥ್ಯವೂ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ಹಾಲಿನಲ್ಲಿ ಹೆಚ್ಚು ವೆರೈಟಿ ಇರಲಿಲ್ಲ. ದನದ ಹಾಲು, ಎಮ್ಮೆ ಹಾಲು ಇಷ್ಟೇ ಆಗಿದ್ದವು. ಆದರೆ, ಈಗ ಹಾಗಲ್ಲ. ದನ ಮತ್ತು ಎಮ್ಮೆಯ ಹಾಲನ್ನು ಜೀರ್ಣಿಸಿಕೊಳ್ಳುವ ವಯಸ್ಕರು ಮತ್ತು ಮಕ್ಕಳ ಪ್ರಮಾಣ ದಿನೇ ದಿನೆ ಕಡಿಮೆಯಾಗುತ್ತಿದೆ. ಹೀಗಾಗಿ, ಬೇರೆ ಬೇರೆ ರೀತಿಯ ಹಾಲುಗಳು ಬಳಕೆಗೆ ಬಂದಿದ್ದು, ಹಾಲಿನ ಮಾರುಕಟ್ಟೆ ವಿಸ್ತಾರವಾಗಿದೆ.  
ಸೋಯಾ (Soya) ಹಾಲು, ತೆಂಗಿನಕಾಯಿ (Coconut) ಹಾಲು, ಓಟ್ಸ್ (Oats) ಹಾಲು, ಅಕ್ಕಿಯ (Rice) ಹಾಲು, ಬೀಜದ (Nuts) ಹಾಲುಗಳನ್ನು (Milk) ಸೇವಿಸುವ ಪರಿಪಾಠ ಹೆಚ್ಚಾಗಿದೆ. ಇವೆಲ್ಲವೂ ಹಲವು ರೀತಿಯಲ್ಲಿ ಅತ್ಯುತ್ತಮವಾಗಿದ್ದು, ದನದ ಹಾಲಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದೆ. ಆದರೆ, ಎಲ್ಲವೂ ಎಲ್ಲರಿಗೂ ಹೊಂದಾಣಿಕೆಯಾಗುವುದು ಸಾಧ್ಯವಿಲ್ಲ. ದನದ (Cow) ಹಾಲು ಹೇಗೆ ಎಲ್ಲರಿಗೂ ಸರಿಬರುವುದಿಲ್ಲವೋ ಹಾಗೆಯೇ ಇವೂ ಸಹ. ದೇಹದ (Body) ಪ್ರಕೃತಿ ಹಾಗೂ ಸ್ಥಿತಿಯನ್ನು ಅರಿತು ಬಳಕೆ ಮಾಡುವುದು ಅಗತ್ಯ.

ಇನ್ಮುಂದೆ ಹೆಲ್ದೀ ಆಗಲಿದೆ ಆಲೂ ಚಿಪ್ಸ್ , ಇಷ್ಟು ದಿನ ಕೆಟ್ಟದಾಗಿದ್ದು ಇನ್ನು ಹೇಗಪ್ಪಾ ಒಳ್ಳೇಯದಾಗುತ್ತೆ?

ಯಾರಿಗೆ ಯಾವ ಹಾಲು?
•    ನೀವು ಒಂದೊಮ್ಮೆ ತೂಕ ಇಳಿಸಿಕೊಳ್ಳುವ (Weight Loss) ಪ್ರಯತ್ನದಲ್ಲಿದ್ದರೆ, ಬಾದಾಮಿ ಹಾಲು, ಸೋಯಾ ಹಾಲು ಮತ್ತು ಓಟ್ಸ್ ಮಿಲ್ಕ್ ಬಳಕೆ ಮಾಡುವುದು ಸೂಕ್ತ. ಆಹಾರ ತಜ್ಞರ ಪ್ರಕಾರ, ಸಾಮಾನ್ಯ ಹಸುವಿನ ಹಾಲು ಹಾಗೂ ಅವುಗಳ ಉತ್ಪನ್ನಗಳಿಗಿಂತ ಇವು ಉತ್ತಮ. ಬಾದಾಮಿ (Almond) ಹಾಲಿನಲ್ಲಿ ಕ್ಯಾಲರಿ ಕಡಿಮೆ ಇರುತ್ತದೆ. ಅಲ್ಲದೆ, ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ದೊರೆಯುತ್ತದೆ. ಕೊಬ್ಬು (Fat) ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಸ್ವಲ್ಪವೂ ಇರುವುದಿಲ್ಲ. ಪ್ರೊಟೀನ್ (Protein) ಅಂಶ ಅಧಿಕವಾಗಿದ್ದು, ತೂಕ ಇಳಿಸಿಕೊಳ್ಳುವ ಹಂಬಲ ಉಳ್ಳವರಿಗೆ ಅತ್ಯಂತ ಸೂಕ್ತವಾಗಿದೆ. 
•    ಕೆಲವು ರೀತಿಯ ಕ್ಯಾನ್ಸರ್, ಫೈಬ್ರಾಯಿಡ್, ಥೈರಾಯ್ಡ್ ಸಮಸ್ಯೆಗಳನ್ನು (Problems) ಹೊಂದಿರುವವರು ಈಸ್ಟ್ರೋಜೆನ್ ಅಂಶವುಳ್ಳ ಆಹಾರವನ್ನು ನಿಯಂತ್ರಿಸಬೇಕು. ಹೀಗಾಗಿ, ಇವರು ಸೋಯಾ ಹಾಲನ್ನು ಸೇವಿಸಬಾರದು.
•    ನಿಮ್ಮ ದೇಹಕ್ಕೆ ಲ್ಯಾಕ್ಟೋಸ್ (Lactose) ಅಸಹಿಷ್ಣುತೆಯಿದ್ದರೆ ಬಾದಾಮಿ, ಸೋಯಾ, ಓಟ್ ಮಿಲ್ಕ್ ಅನ್ನು ನಿಸ್ಸಂಶಯದಿಂದ ಪರ್ಯಾಯವಾಗಿ ಬಳಸಬಹುದು. ಬೆಳಗ್ಗಿನ ಚಹಾಕ್ಕೆ ಬಳಕೆ ಮಾಡುವುದರಿಂದ ಹಿಡಿದು ಸಿಹಿ ತಿನಿಸುಗಳಿಗೂ ಇವುಗಳನ್ನು ಬಳಸಬಹುದು. 

ವಸ್ತುಗಳನ್ನು ಒಂದು ಕಡೆ ಇಟ್ಟು ಮರೆತು ಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ?

•    ಒಂದೊಮ್ಮೆ ನೀವು ಮಧುಮೇಹಿಯಾಗಿದ್ದರೆ (Diabetic) ಲೋ ಫ್ಯಾಟ್ (Low Fat) ಹಾಲನ್ನು ಬಳಕೆ ಮಾಡಬೇಕು. ಹೃದ್ರೋಗಿಯಾಗಿದ್ದರೂ ಸಹ ಲೋ ಫ್ಯಾಟ್ ಅಥವಾ ಸ್ಕಿಮ್ಡ್ ಹಾಲನ್ನು ಬಳಸಬಹುದು. ಮಧುಮೇಹಿಗಳು ಸೋಯಾ ಅಥವಾ ಬಾದಾಮಿ ಹಾಲನ್ನು ಸಹ ಸುಲಭವಾಗಿ ಬಳಸಬಹುದು.

ದನದ ಹಾಲು ಕೆಟ್ಟದ್ದೇ?
ಹಾಗೇನೂ ಇಲ್ಲ. ದನದ ಹಾಲಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್, ಕೊಬ್ಬು ಸೇರಿದಂತೆ 40 ಬಗೆಯ ಅಗತ್ಯ ಪೌಷ್ಟಿಕಾಂಶಗಳು ಮಿಳಿತವಾಗಿವೆ. ಇದೊಂದು ಪರಿಪೂರ್ಣ (Complete) ಆಹಾರ. ಆದರೆ, ಕೆಲವರಿಗೆ ಈ ಹಾಲು ಆಗಿಬರುವುದಿಲ್ಲ. ಜತೆಗೆ, ಒಂದು ವಯಸ್ಸಿನ ಬಳಿಕ ಹಾಲು ಜೀರ್ಣವಾಗುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಸಮಸ್ಯೆಯಾಗಬಹುದು ಅಷ್ಟೇ. 


 

Latest Videos
Follow Us:
Download App:
  • android
  • ios