ಅಮೆರಿಕಾದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಔತಣಕೂಟ, ಮೆನುವಿನಲ್ಲಿ ಏನೇನಿದೆ?
ಅಮೆರಿಕದ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಔತಣಕೂಟ ಹಮ್ಮಿಕೊಂಡಿದ್ದಾರೆ. ಸದ್ಯ ಈ ಮೆನುವಿನಲ್ಲಿ ಯಾವೆಲ್ಲಾ ಆಹಾರಗಳಿವೆ ಎಂಬ ವಿಚಾರ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಾಷಿಂಗ್ಟನ್: ಅಮೆರಿಕ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ವೇತಭವನದಲ್ಲಿ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು, ಜೂನ್ 22ರ ಗುರುವಾರ ಭೋಜನವನ್ನು ಆಯೋಜಿಸಿದ್ದಾರೆ. ನಿಗದಿತ ಭೋಜನಕ್ಕೆ ಮುಂಚಿತವಾಗಿ ಪ್ರಥಮ ಮಹಿಳೆ, ಜಿಲ್ ಬೈಡೆನ್ ಅವರು ಮಾಡಿದ ವ್ಯವಸ್ಥೆಗಳ ವಿವರಗಳನ್ನು ಮಾಧ್ಯಮಗಳಿಗೆ ವಿವರಿಸಿದರು. ರಾಷ್ಟ್ರೀಯ ಪಕ್ಷಿ ನವಿಲಿನಿಂದ ಪ್ರೇರಿತವಾಗಿರುವ ಭೋಜನದ ಥೀಮ್‌ನಿಂದ ಹಿಡಿದು ತ್ರಿವರ್ಣ ಧ್ವಜವನ್ನು ಸೂಚಿಸುವ ಅಲಂಕಾರದವರೆಗೆ, ಭೋಜನವು ಭಾರತೀಯ ಸ್ಪರ್ಶವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮೆನುವಿನಲ್ಲಿ ಏನೇನಿದೆ?
ಪ್ರಧಾನಿ ಮೋದಿ ಸಸ್ಯಾಹಾರಿ (Vegetarian) ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಪರಿಪೂರ್ಣವಾದ ಭೋಜನವನ್ನು (Dinner) ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ಸಸ್ಯಾಧಾರಿತ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಬಾಣಸಿಗ ನೀನಾ ಕರ್ಟಿಸ್ ಭೋಜನವನ್ನು ಸಿದ್ಧಪಡಿಸಿದ್ದಾರೆ ಎಂದು ಜಿಲ್ ಬೈಡೆನ್ ಹೇಳಿದರು. ಪ್ರಧಾನಿ ಮೋದಿಯವರ ಕರೆಯಿಂದ ಸ್ಫೂರ್ತಿ ಪಡೆದ ಕೆಲವು ರಾಗಿ (Millet) ಆಧಾರಿತ ಭಕ್ಷ್ಯಗಳನ್ನು ಮೆನುವಿನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಮ್ಯಾರಿನೇಡ್ ರಾಗಿ, ಸುಟ್ಟ ಕಾರ್ನ್ ಸಲಾಡ್, ಕಲ್ಲಂಗಡಿ, ಅವಕಾಡೊ ಸಾಸ್, ಸ್ಟಫ್ಡ್ ಪೋರ್ಟೊಬೆಲ್ಲೊ ಮಶ್ರೂಮ್, ಕೆನೆ ಕೇಸರಿ-ಇನ್ಫ್ಯೂಸ್ಡ್ ರಿಸೊಟ್ಟೊ, ನಿಂಬೆ-ಡಿಲ್ ಮೊಸರು ಸಾಸ್, ಕ್ರಿಸ್ಪ್ಡ್ ರಾಗಿ ಕೇಕ್‌ಗಳು, ಬೇಸಿಗೆ ಸ್ಕ್ವ್ಯಾಷ್‌ಗಳು ಒಳಗೊಂಡಿವೆ.
ವಿಶ್ವದ ಇತರ ದೇಶಗಳಿಗಿಂತ ಭಾರತ ಭರವಸೆದಾಯಕ: ಎಲಾನ್ ಮಸ್ಕ್
ಮೋದಿಯವರು ಸಂಪೂರ್ಣ ಸಸ್ಯಾಹಾರಿಯಾಗಿರುವುದರಿಂದ ಜಿಲ್ ಬೈಡನ್ ಅವರು ಶ್ವೇತಭವನದ ಶೆಫ್ ನೀನಾ ಕರ್ಟಿಸ್ ಅವರಿಗೆ ವಿಶೇಷ ಸೂಚನೆ ನೀಡಿದ್ದರಂತೆ. ಶೆಫ್ ಸಸ್ಯ ಆಧಾರಿತ ಮೆನು ತಯಾರಿಸುವುದರಲ್ಲಿ ಸಿದ್ದಹಸ್ತರು. ಹೀಗಾಗಿ ಜಿಲ್ ಬೈಡನ್ ಅವರಿಗೇ ಅಡುಗೆ (Cooking) ತಯಾರಿ ಜವಾಬ್ದಾರಿಯನ್ನು ವಹಿಸಿದ್ದರಂತೆ.
ತ್ರಿವರ್ಣ ಅಲಂಕಾರ, ಪ್ರದರ್ಶನಗಳು
ಭೋಜನದ ಸಮಯದಲ್ಲಿ ಅಲಂಕಾರಗಳು ಮತ್ತು ಸಿದ್ಧತೆಗಳ ಕುರಿತು ಜಿಲ್ ಬೈಡೆನ್ ವಿವರಗಳನ್ನು ನೀಡಿದರು. ಡಿನ್ನರ್ ಥೀಮ್ ಭಾರತದ ರಾಷ್ಟ್ರಪಕ್ಷಿ ನವಿಲಿನ ಚಿತ್ರವಾಗಿದೆ. ಇದನ್ನು ತ್ರಿವರ್ಣ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿದೆ. ಪ್ರತಿಯೊಂದು ಟೇಬಲ್ ದೊಡ್ಡ ಮತ್ತು ಚಿಕ್ಕದಾದ ಹೂದಾನಿಗಳಲ್ಲಿ ಹೂವುಗಳ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಮತ್ತು ಹೂವುಗಳ ಬಣ್ಣವು ಭಾರತದ ಧ್ವಜದ ಕೇಸರಿ ಮತ್ತು ಅದು ಪ್ರತಿನಿಧಿಸುತ್ತದೆ. ಭೋಜನದ ನಂತರ, ಗ್ರ್ಯಾಮಿ ಪ್ರಶಸ್ತಿ ವಿಜೇತ ಜೋಶುವಾ ಬೆಲ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾದ ಅಕಾಪೆಲ್ಲಾ ಗುಂಪಿನ ಪೆನ್ ಮಸಾಲಾ ಅವರಿಂದ ಪ್ರದರ್ಶನಗಳು ಇರುತ್ತವೆ.
ಅಮೆರಿಕಾದ ಮೋದಿ ಅರೈವಲ್ ಸೆರಮನಿಯಲ್ಲಿ ಚಿಕ್ಕಮಗಳೂರ ಹಳ್ಳಿ ಹೈದ!
ಜೋ ಬೈಡೆನ್ ಹಮ್ಮಿಕೊಂಡಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲು 3 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಕರ್ನಾಟಕದ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್, ಈ ಆಹ್ವಾನದಿಂದ ನಾನು ಬಹಳ ಉತ್ಸುಕನಾಗಿದ್ದೇನೆ. ಎರಡು ಮಹಾನ್ ದೇಶಗಳ ನಡುವಿನ ಮಹತ್ವದ ಭೇಟಿಯಲ್ಲಿ ಸಾಕ್ಷಿಯಾಗಲು ಹೆಮ್ಮೆಯಾಗುತ್ತಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಜೋ ಬೈಡೆನ್ ಅವರು ಈ ಔತಣಕ್ಕೆ ಸುಮಾರು 800 ಮಂದಿಗಷ್ಟೇ ಆಮಂತ್ರಣ ನೀಡಿದ್ದು ಅವರಲ್ಲಿ ರಿಕ್ಕಿ ಕೂಡ ಒಬ್ಬರು ಎಂಬುದು ವಿಶೇಷ.
ಪ್ರಧಾನಿ ನರೇಂದ್ರ ಮೋದಿ ಬದಲಾವಣೆಯ ಹರಿಕಾರ: ವಿಶ್ಲೇಷಕ ರೇ ಡಾಲಿಯೋ