ಬೇಕಾಬಿಟ್ಟಿ ಚಿಕನ್ ತಿಂದ್ರೆ ಆರೋಗ್ಯದ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ! ಹುಷಾರು
ಚಿಕನ್ ಅಂದ್ರೆ ಬಾಯಲ್ಲಿ ನೀರೂರಿಸುವ ಜನರು ಮಧ್ಯರಾತ್ರಿ ಚಿಕನ್ ಕೊಟ್ರೂ ತಿಂತಾರೆ. ರುಚಿ ಜೊತೆ ಇಷ್ಟ ಎನ್ನುವ ಕಾರಣಕ್ಕೆ ಅತಿಯಾಗಿ ತಿಂದ್ರೆ ಕಷ್ಟ. ಪ್ರತಿ ದಿನ ಚಿಕನ್ ತಿಂದ್ರೆ ಏನೆಲ್ಲ ಆಗುತ್ತೆ ಗೊತ್ತಾ?
ನಾನ್ ವೆಜ್ ಇಷ್ಟ ಎನ್ನುವವರು ಚಿಕನ್ ತಿನ್ನದೆ ಇರ್ತಾರಾ? ಚಿಕನ್ ಆರೋಗ್ಯಕ್ಕೆ ಒಳ್ಳೆಯದು ಅಂತಾ ಕೆಲವರು ತಿಂದ್ರೆ ಮತ್ತೆ ಕೆಲವರು ನಾಲಿಗೆಗೆ ರುಚಿ ಎಂಬ ಕಾರಣ ಹೇಳಿ ಪ್ರತಿ ದಿನ ಸೇವನೆ ಮಾಡ್ತಾರೆ. ಚಿಕನ್ ಸೇವನೆ ಮಾಡೋದ್ರಿಂದ ಲಾಭವಿದೆ. ಕೋಳಿ ಮಾಂಸ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಚಿಕನ್ ಸ್ತನವು ಲ್ಯೂಸಿನ್‌ನ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇವೆಲ್ಲವುಗಳ ಹೊರತಾಗಿ ಪ್ರತಿ ದಿನ ಚಿಕನ್ ಸೇವನೆ ಮಾಡೋದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ವಾರದ ಎಲ್ಲ ದಿನ ನೀವು ಚಿಕನ್ ತಿನ್ನುತ್ತಿದ್ದರೆ ಈ ಅಭ್ಯಾಸವನ್ನು ಬಿಡೋದು ಉತ್ತಮ. ನಿತ್ಯ ಚಿಕನ್ ಸೇವನೆ ಮಾಡಿದರೆ ಏನೆಲ್ಲ ನಷ್ಟವಿದೆ ಎಂಬುದನ್ನು ನಾವು ಹೇಳ್ತೇವೆ.
ಪ್ರತಿ ದಿನ ಚಿಕನ್ (Chicken) ಸೇವನೆಯಿಂದಾಗುವ ನಷ್ಟ :
ಕಿಡ್ನಿ (Kidney) ಪ್ರಾಬ್ಲಂ : ನಿಮ್ಮ ಆಹಾರ (Food) ದಲ್ಲಿ ನಿತ್ಯ ಚಿಕನ್ ಒಂದಲ್ಲ ಒಂದು ವಿಧದಲ್ಲಿ ದೇಹ ಸೇರುತ್ತಿದ್ದರೆ ಇದ್ರಿಂದ ಕಿಡ್ನಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ಯಾಕೆಂದ್ರೆ ಚಿಕನ್ ನಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕಿಡ್ನಿಯ ಸಮಸ್ಯೆಗೆ ಕಾರಣವಾಗುತ್ತದೆ. ಕೋಳಿಯ ಕೆಲವು ಪ್ರಭೇದಗಳು ಮೂತ್ರದ ಸೋಂಕುಗಳು ಅಥವಾ ಯುಟಿಐಗಳೊಂದಿಗೆ ಸಂಬಂಧ ಹೊಂದಿದೆ. ಇದು ನಿಮ್ಮನ್ನು ಕಾಡ್ಬಾರದು ಅಂದ್ರೆ ತಾಜಾ ಕೋಳಿ ಮಾಂಸ ಮಾತ್ರ ಖರೀದಿಸಿ ಬಳಸಬೇಕು. ಕೋಳಿ ಮಾಂಸವನ್ನು ಸರಿಯಾದ ರೀತಿಯಲ್ಲಿ ಕುಕ್ ಮಾಡೋದು ಬಹಳ ಮುಖ್ಯ. ಅದು ಸರಿಯಾಗಿ ಬೆಂದಿಲ್ಲವೆಂದಾದ್ರೆ ಅದ್ರಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ನಮ್ಮ ದೇಹ ಸೇರುತ್ತದೆ. ಸಾಲ್ಮೊನೆಲ್ಲಾ ಇನ್ಫೆಕ್ಷನ್ , ಕ್ಯಾಂಪಿಲೋಬ್ಯಾಕ್ಟರ್ ದೇಹ ಸೇರುವ ಅಪಾಯವಿರುತ್ತದೆ.
ಕಪ್ಪು ಒಣದ್ರಾಕ್ಷಿ ನೀರು ಸೇವಿಸಿದ್ರೆ ಗರ್ಭಧಾರಣೆ ಸುಲಭ, ಲೈಂಗಿಕ ಆರೋಗ್ಯಕ್ಕೂ ಬೆಸ್ಟ್ ಮದ್ದು!
ಕೊಲೆಸ್ಟ್ರಾಲ್ ಹೆಚ್ಚಳ (Cholestrol) : ಪ್ರತಿ ದಿನ ಚಿಕನ್ ಸೇವನೆ ಮಾಡೋದ್ರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಅನೇಕ ಅಧ್ಯಯನಗಳಿಂದ ಇದು ಸಾಭಿತಾಗಿದೆ. ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ನೀವು ಪ್ರತಿ ದಿನ ಚಿಕನ್ ಸೇವನೆ ಮಾಡ್ತಿದ್ದರೆ ನಿಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವ ಅಪಾಯ ಇದೆ.
ತೂಕದಲ್ಲಿ ಏರಿಕೆ (Weight Gain) : ಕೋಳಿ ಮಾಂಸದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರುತ್ತದೆ. ನೀವು ಪ್ರತಿ ದಿನ ಪ್ರೋಟೀನ್ ಹೆಚ್ಚು ಸೇವನೆ ಮಾಡೋದ್ರಿಂದ ಕೊಬ್ಬು ಹೆಚ್ಚಾಗುತ್ತದೆ. ಅದನ್ನು ಸುಡಲು ದೇಹಕ್ಕೆ ಸಾಧ್ಯವಾಗೋದಿಲ್ಲ. ಇದ್ರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಆಹಾರ ನಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ. ಸಸ್ಯಹಾರಿಗಳಿಗಿಂತ ಮಾಂಸಹಾರಿಗಳು ತೂಕದ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಾರೆ.
ಮೊಳಕೆ ಕಟ್ಟಿದ ರಾಗಿ ತಿಂದು ಫಿಟ್ ಆಗಿರಿ, ಇದು ಆರೋಗ್ಯದ ಮೇಲೆ ಬೀರೋ ಪರಿಣಾಮವೇನು?
ಬಿಪಿ ಸಮಸ್ಯೆ (High Blood Pressure) : ಈಗಾಗಲೇ ನಿಮ್ಮ ಕುಟುಂಬಸ್ಥರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನಿಮಗೆ ಇದು ಬರುವ ಸಾಧ್ಯತೆ ಅತಿ ಹೆಚ್ಚಿರುತ್ತದೆ. ಅಧಿಕ ರಕ್ತದೊತ್ತಡ ನಿಮ್ಮನ್ನು ಕಾಡ್ಬಾರದು ಅಂದರೆ ನೀವು ಆಹಾರದ ಮೇಲೆ ನಿಯಂತ್ರಣವಿಡಬೇಕು. ಸ್ಯಾಚುರೇಟೆಡ್ ಕೊಬ್ಬು ಅಥವಾ ಟ್ರಾನ್ಸ್ ಕೊಬ್ಬು ಬಿಪಿ ಸಮಸ್ಯೆಗೆ ಕಾರಣವಾಗುತ್ತದೆ. ಈ ಕೊಬ್ಬುಗಳು ಕೋಳಿ ಮಾಂಸದಲ್ಲಿದ್ದು, ನೀವು ನಿತ್ಯ ಅದ್ರ ಸೇವನೆ ಮಾಡಿದ್ರೆ ಅಧಿಕ ರಕ್ತದೊತ್ತಡ ನಿಮ್ಮನ್ನು ಕಾಡುತ್ತದೆ.
ಯೂರಿಕ್ ಆಮ್ಲದಲ್ಲಿ ಏರಿಕೆ (Uric Acid Issue): ಪ್ರೋಟೀನ್ ಚಯಾಪಚಯ ಕ್ರಿಯೆಯಲ್ಲಿ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆ ಮಾಡಿದಾಗ ಯೂರಿಕ್ ಆಮ್ಲ ನಿಮ್ಮ ದೇಹದಲ್ಲಿ ಹೆಚ್ಚಾಗುತ್ತದೆ. ಕೋಳಿ ಮಾಂಸದಲ್ಲಿ ಪ್ರೋಟೀನ್ ಹೆಚ್ಚಿದ್ದು, ಪ್ರತಿ ದಿನ ಸೇವನೆ ಮಾಡಿದ್ರೆ ಯೂರಿಕ್ ಆಮ್ಲದ ಸಮಸ್ಯೆಗೆ ಬಲಿಯಾಗ್ಬೇಕಾಗುತ್ತದೆ.