ಮೊಳಕೆ ಕಟ್ಟಿದ ರಾಗಿ ತಿಂದು ಫಿಟ್ ಆಗಿರಿ, ಇದು ಆರೋಗ್ಯದ ಮೇಲೆ ಬೀರೋ ಪರಿಣಾಮವೇನು?
ರಾಗಿ ತನ್ನ ಪೌಷ್ಟಿಕ ಪದಾರ್ಥಗಳಿಂದಾಗಿ ಫಿಟ್ನೆಸ್ ಫ್ರೀಕ್‌ಗಳಲ್ಲಿ ಜನಪ್ರಿಯವಾಗಿದೆ. ನಿಮ್ಮ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ರಾಗಿಯನ್ನು ಫಿಂಗರ್ ಮಿಲ್ಲೆಟ್ (finger millet) ಎಂದೂ ಕರೆಯಲಾಗುತ್ತದೆ, ಇದನ್ನು ಏಷ್ಯಾ ಮತ್ತು ಆಫ್ರಿಕಾದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದೇ ಸಮಯದಲ್ಲಿ, ಇದನ್ನು ಭಾರತ, ಇಥಿಯೋಪಿಯಾ, ಉಗಾಂಡಾ ಮತ್ತು ನೇಪಾಳ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಮುಖ ಆಹಾರ ಬೆಳೆಯಾಗಿ ಬೆಳೆಯಲಾಗುತ್ತದೆ.
ರಾಗಿ ತನ್ನ ಪೌಷ್ಟಿಕ ಪದಾರ್ಥಗಳಿಂದಾಗಿ ಫಿಟ್ನೆಸ್ ಫ್ರೀಕ್‌ಗಳಲ್ಲಿ ಜನಪ್ರಿಯ. ಯಾಕಂದ್ರೆ ಇದು ದೇಹಕ್ಕೆ ಶಕ್ತಿ ನೀಡುತ್ತೆ. ಇದರಲ್ಲಿ ಯಥೇಚ್ಛ ಪ್ರಮಾಣದಲ್ಲಿ ಕ್ಯಾಲ್ಶಿಯಂ ಅಡಗಿದೆ. ಇದರಿಂದ ಮೂಳೆಗಳು ಸದೃಢವಾಗುತ್ತವೆ. ಅಲ್ಲದೇ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಇದು ಉತ್ತಮ ಆಹಾರ.
ರಾಗಿಯಲ್ಲಿ ಹೆಚ್ಚು ನಾರಿನಾಂಶದ (fiber food)ಜೊತೆ ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ಇದರ ಬಳಕೆ ಆರೋಗ್ಯಕ್ಕೆ ತುಂಬಾ ಉತ್ತಮ. ಅಕ್ಕಿ, ಮೆಕ್ಕೆಜೋಳ ಅಥವಾ ಗೋಧಿಗೆ ಹೋಲಿಸಿದರೆ ರಾಗಿಯಲ್ಲಿ ಪಾಲಿಫಿನಾಲ್ ಮತ್ತು ನಾರಿನಂಶ ಹೇರಳವಾಗಿದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ರಾಗಿ ತಿನ್ನುವುದರ ಪ್ರಯೋಜನಗಳು ಹಲವಾರಿದೆ. ಅದರಲ್ಲೂ ಮೊಳಕೆ ಬಂದ ರಾಗಿ (sprouted ragi) ತಿನ್ನೋದ್ರಿಂದ ಹೆಚ್ಚಿನ ಲಾಭ ಪಡೆಯಬಹುದು. ಅವುಗಳ ಬಗ್ಗೆ ತಿಳಿಯೋಣ.
ಮೊಳಕೆಯೊಡೆದ ರಾಗಿ ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆ ಇರುವುದಿಲ್ಲ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ತಮ್ಮ ದೇಹದಲ್ಲಿ ರಕ್ತದ ಕೊರತೆ ಇರುವ ಜನರು ಇದನ್ನು ತಿನ್ನಬೇಕು.
ರಾಗಿಯನ್ನು ತಿನ್ನುವುದರಿಂದ ಮೂಳೆಗಳು (strong bones) ಬಲಗೊಳ್ಳುತ್ತವೆ. ಇದು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಮೂಳೆಗಳು ದುರ್ಬಲವಾಗಿರುವವರು, ಈ ಧಾನ್ಯವನ್ನು ತಮ್ಮ ಆಹಾರದಲ್ಲಿ ಸೇರಿಸಬೇಕು. ಇದರಿಂದ ಸದೃಢ ಮೂಳೆಯನ್ನು ಪಡೆಯಬಹುದು.
ಮೊಳಕೆಯೊಡೆದ ಈ ಧಾನ್ಯದಲ್ಲಿ ಉತ್ತಮ ಪ್ರಮಾಣದ ಫೈಬರ್ ಕಂಡು ಬರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಈ ಫೈಬರ್ ಆಹಾರ ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ರಾಗಿ ಹಲ್ಲುಗಳ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಇದು ಒಸಡುಗಳ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ. ಹಾಲುಣಿಸುವ ಮಹಿಳೆಯರು (breast feeding mom) ಈ ಮೊಳಕೆಯೊಡೆದ ಧಾನ್ಯ ತಿನ್ನಬೇಕು. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಇದು ನಿಮ್ಮ ದೇಹದ ಗ್ಲೂಕೋಸ್ ಮಟ್ಟವನ್ನು ಸಹ ನಿರ್ವಹಿಸುತ್ತದೆ.