ಆಲೂಗಡ್ಡೆ ತಿನ್ನುವುದರಿಂದ Weight loss ಆಗುತ್ತಾ?

ಹೆಚ್ಚಿನ ಜನರಿಗೆ ದೇಹದ ತೂಕ ಕಡಿಮೆ ಮಾಡಿಕೊಂಡು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇರುತ್ತದೆ. ಇದಕ್ಕಾಗಿ ಹಲವಾರು ರೀತಿಯ ಸರ್ಕಸ್ಗಳನ್ನು ಮಾಡುತ್ತಾಲೇ ಇರುತ್ತಾರೆ. ಆದರೆ,  ಆಲೂಗಡ್ಡೆ ಇಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಹಲವರಿಗೆ ತಿಳಿದಿಲ್ಲ.

Weight loss by consuming potato how this vegetable good for health

ಆಲೂಗಡ್ಡೆಯಿಂದ (Potato) ಹಲವಾರು ರೀತಿಯ ಅಡುಗೆ ಪದಾರ್ಥವನ್ನು ತಯಾರಿಸಬಹುದು. ಉದಾಹರಣೆಗೆ (Example) ಫ್ರೆಂಚ್ ಫ್ರೈಸ್, ಆಲೂ ಬೋಂಡಾ, ಆಲೂ ಪರೋಟ,  ಆಲೂ ಚಿಪ್ಸ್ ನಾನಾ ಬಗೆಯ ತಿನಿಸುಗಳನ್ನು ತಯಾರಿಸಬಹುದು. ಆಲೂಗಡ್ಡೆಯ ಸಾಂಬಾರು ಕೂಡ ಮಾಡಬಹುದು ಯಾವುದೇ ಹೆಚ್ಚಿನ ಮಸಾಲ ಪದಾರ್ಥಗಳನ್ನು ಬಳಸದೆ ರುಚಿಯನ್ನು ಹೆಚ್ಚಿಸುವುದಕ್ಕೆ ಆಲೂಗಡ್ಡೆ ಸಹಾಯಕವಾಗಿದೆ. ಆಲೂಗಡ್ಡೆಯನ್ನು ಹೆಚ್ಚು ದಿನಗಳ ಕಾಲ ಶೇಖರಿಸಿಡಬಹುದು (Storing). ಇದು ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಜೊತೆಗೆ ನಿಮ್ಮ ದೇಹವು ಉಷ್ಣಾಂಶದಿಂದ ಕೂಡಿರುವಂತೆ ಆಲೂಗಡ್ಡೆ ನೋಡಿಕೊಳ್ಳುತ್ತದೆ. ಈ ಎಲ್ಲಾ ಕಾರಣಗಳಿಂದ ಆಲೂಗಡ್ಡೆಯನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ.

 ಆದರೆ, ಕೆಲವರು ಹೇಳುವ ಪ್ರಕಾರ  ಆಲೂಗಡ್ಡೆ ಸೇವನೆಯಿಂದ ದೇಹದಲ್ಲಿ  ಕೊಬ್ಬಿನಂಶ ಹೆಚ್ಚುತ್ತದೆ. ಹಾಗಾಗಿ ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಆಲೂಗಡ್ಡೆಯಿಂದ ದೂರ ಇರುವಂತೆ ಸೂಚಿಸುತ್ತಾರೆ. ಆದರೆ, ಆಲೂಗಡ್ಡೆಯಲ್ಲಿರುವ ಪೌಷ್ಟಿಕತೆಯಿಂದಾಗಿ ದೇಹದ ತೂಕ ಕಡಿಮೆ (Weight loss) ಮಾಡಿಕೊಳ್ಳಬಹುದು ಎಂದು ಕೆಲವು ನ್ಯೂಟ್ರಿಷಿಯನ್ ಹೇಳುತ್ತಾರೆ. ನೀವು ಆಲೂಗಡ್ಡೆಯನ್ನು ಎಷ್ಟು ಬೇಯಿಸುತ್ತಿದ್ದೀರಾ (Boil) ಎಂಬ ಆಧಾರದ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಸರಿಯಾದ ರೀತಿಯಲ್ಲಿ ಆಲೂಗಡ್ಡೆಯ ಸೇವನೆಯಿಂದ ದೇಹದ ತೂಕ ಇಳಿಸಬಹುದು.

 ಆಲೂಗಡ್ಡೆಯು ನೀವು ಅತಿಯಾಗಿ (Overeating) ತಿನ್ನುವುದನ್ನು ತಡೆಯುತ್ತದೆ.
ಆಲೂಗಡ್ಡೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ತುಂಬಿರುತ್ತದೆ. ದೇಹಕ್ಕೆ ಅಗತ್ಯವಿರುವ  ಪೋಷಕಾಂಶಗಳು (Nutrients) ಒಂದೇ ಕಡೆಯಲ್ಲಿ ದೊರೆಯುತ್ತಿರುವಾಗ ಬೇರೆ ಆಹಾರವನ್ನು ಹೆಚ್ಚು ಸೇವಿಸುವ ಅಗತ್ಯವಿರುವುದಿಲ್ಲ. ತಜ್ಞರು ಹೇಳುವ ಪ್ರಕಾರ ನೀವು ತಿನ್ನುವ ಆಹಾರದಲ್ಲಿ ತೃಪ್ತಿ ದೊರೆತಾಗ ಹೆಚ್ಚಿನ ಆಹಾರವನ್ನು ತೆಗೆದು ಕೊಳ್ಳಬೇಕಾಗಿರುವುದಿಲ್ಲ. ಇದಕ್ಕಾಗಿ ನಿಮಗೆ ಆಲೂಗಡ್ಡೆ ಸಹಾಯ ಮಾಡುತ್ತದೆ. ಆಲೂಗಡ್ಡೆ ಆಹಾರದ ರುಚಿಯನ್ನು (Taste) ಹೆಚ್ಚಿಸುವುದರ ಜೊತೆಗೆ ಪೋಷ್ಟಿಕಾಂಶ ಕೂಡ ನೀಡುತ್ತದೆ.

Childrens Food: ಮಕ್ಕಳ ಆಹಾರಕ್ಕೆ ಬೇಕಾಬಿಟ್ಟಿ ಸಾಸ್ ಸೇರಿಸ್ಬೇಡಿ, ಆರೋಗ್ಯಕ್ಕೇ ಅಪಾಯ

 ಆಲೂಗಡ್ಡೆಯ ಸೇವನೆಯಿಂದ ಮೆಟಬಾಲಿಸಂ (Metabolism) ಹೆಚ್ಚುತ್ತದೆ.
ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಯಾವಾಗ ಉತ್ತಮವಾಗಿರುತ್ತದೆಯೋ ಆಗ, ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಕಡಿಮೆ ಇರುತ್ತದೆ. ದೇಹದ ಮೆಟಬೋಲಿಸಂ ಹೆಚ್ಚಿಸುವುದಕ್ಕೆ ಆಲೂಗಡ್ಡೆ ಉತ್ತಮ ಆಹಾರ. ಆಲೂಗಡ್ಡೆಯ ಸೇವನೆಯಿಂದಾಗಿ ದೇಹದಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಚಯಾಪಚಯ  ಕ್ರಿಯೆ ಉತ್ತಮವಾಗುತ್ತದೆ.

 ಆಲೂಗಡ್ಡೆಯಿಂದ ತೂಕ ಇಳಿಸುವ ಮಾರ್ಗ
ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ (Potassium) ಅಂಶ ಹೆಚ್ಚಾಗಿರುತ್ತದೆ. ಆಲೂಗಡ್ಡೆಯ ಈ ಗುಣದಿಂದಾಗಿ ದೇಹದ ತೂಕವನ್ನು ಇಳಿಸುವುದಕ್ಕೆ ಸಹಾಯಕವಾಗಿದೆ. ಇದರ ಜೊತೆಗೆ, ಆಲೂಗಡ್ಡೆಯಲ್ಲಿ ಕೊಬ್ಬಿನಂಶವನ್ನು ಕಡಿಮೆ ಮಾಡುವ ಗುಣವಿದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತದೆ.

 ಇನ್ನೂ ಕೆಲವು ಡಯಟಿಷಿಯನ್ ಹೇಳುವ ಪ್ರಕಾರ ಯಾವುದೇ ಆಹಾರ ಪದಾರ್ಥವು ದೇಹದ ತೂಕವನ್ನು ಹೆಚ್ಚಿಸುವುದೂ ಇಲ್ಲ, ಕಡಿಮೆ ಮಾಡುವುದೂ ಇಲ್ಲ, ಬದಲಿಗೆ ಆಹಾರ ಪದಾರ್ಥವನ್ನು ನಾವು ಯಾವ ರೀತಿಯಲ್ಲಿ ಸೇವನೆ ಮಾಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ.

Health Tips: ಹೆಚ್ಚು ತಿಂದರೆ ಊಟ ಸರಿ ಜೀರ್ಣ ಆಗೋಲ್ವಾ? ಹೀಗ್ಮಾಡಿ

ಆಲೂಗಡ್ಡೆ ಸೇವನೆ ಮಾಡುವ ಸರಿಯಾದ ವಿಧಾನ
ಫ್ರೆಂಚ್ ಫ್ರೈ, ಆಲೂ ಚಿಪ್ಸ್ ನಂತಹ ಪದಾರ್ಥಗಳನ್ನು ಆಲೂಗಡ್ಡೆಯನ್ನು ತುಂಬಾ ಬೇಯಿಸಿ ತಯಾರಿಸುವುದರಿಂದ ದೇಹದ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ. ಆದರೆ, ಇವುಗಳ ಬದಲಿಗೆ ಆಲೂಗಡ್ಡೆಯನ್ನು ಗಾಳಿಯಲ್ಲಿ ಹುರಿಯುವುದು, ಬೇಯಿಸುವುದು ಈ ರೀತಿಯ ಟೆಕ್ನಿಕ್ ಗಳನ್ನು ಉಪಯೋಗಿಸಿ ಆಹಾರ ತಯಾರಿಸಿದರೆ ಇದರ ಕೊಬ್ಬಿನ ಅಂಶ ಕಡಿಮೆ ಇರುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ.

ನೀವು ಪ್ರತಿ ಬಾರಿಯೂ ಅನಾರೋಗ್ಯಕರ ಆಹಾರ ಶೈಲಿಯನ್ನು ಹೊಂದಿದ್ದು ಆರೋಗ್ಯವನ್ನು ಬಯಸಿದರೆ ಅದು ಸಾಧ್ಯವಾಗುವುದಿಲ್ಲ ಉದಾಹರಣೆಗೆ ಫ್ರೆಂಚ್ ಫ್ರೈಸ್ ಸೇವನೆ ಮಾಡುವ ಬದಲಾಗಿ ಕಡಿಮೆ ಎಣ್ಣೆ ಬಳಸಿ ತಯಾರಿಸಿದ ಆಲೂಗಡ್ಡೆಯ ತಿನಿಸನ್ನು ಮಾಡಬಹುದು. ಅದು ಹೆಚ್ಚು ಆರೋಗ್ಯಕರವಾಗಿರುತ್ತದೆ.

Latest Videos
Follow Us:
Download App:
  • android
  • ios