ಛೀ..ಇದೆಂಥಾ ಅಸಹ್ಯ..ಉಗುಳಿ ಆಹಾರ ತಯಾರಿಸ್ತಾಳೆ ಮಹಿಳೆ, ವೀಡಿಯೋ ವೈರಲ್
ಹೋಮ್ ಫುಡ್ ಈಸ್ ಬೆಸ್ಟ್ ಅಂತ ಎಲ್ರೂ ಹೇಳ್ತಾರೆ. ಹೀಗಿದ್ದೂ ಆಗಾಗ ಮನೆಯಿಂದ ಹೊರಗಡೆ ಆಹಾರ ತಿನ್ನೋರ ಸಂಖ್ಯೆ ಕಡಿಮೆಯೇನಿಲ್ಲ. ಆದ್ರೆ ಈ ವೀಡಿಯೋ ನೋಡಿದ್ಮೇಲೆ ನೀವು ಮನೆಯಲ್ಲಿ ತಿನ್ನೋ ಅಭ್ಯಾಸವಿದ್ರೂ ಬಿಟ್ ಬಿಡೋದು ಖಂಡಿತ..ಅಷ್ಟು ಅಸಹ್ಯವಾಗಿದೆ ನೋಡಿ..
ಮನೆಯಿಂದ ಹೊರಗಡೆ ಆಹಾರ ತಿನ್ನೋವಾಗ ಹೆಚ್ಚಿನವರಿಗೆ ಎದುರಾಗುವ ಸಮಸ್ಯೆಯಂದ್ರೆ ಆಹಾರ ತಯಾರಿಸೋ ರೀತಿ ಎಷ್ಟು ಕ್ಲೀನಾಗಿರುತ್ತೆ ಎಂಬುದು. ಕೆಲವೆಡೆ ಆಹಾರ ತಯಾರಿಸೋ ಸ್ಥಳ, ಆಹಾರ ತಯಾರಿಸೋ ರೀತಿ ತುಂಬಾ ಕೆಟ್ಟದಾಗಿರುತ್ತೆ. ಹೀಗಾಗಿ ಬಹುತೇಕರು ಮನೆಯಿಂದ ಹೊರಗಡೆ ಫುಡ್ ತಿನ್ನೋದನ್ನು ಅವಾಯ್ಡ್ ಮಾಡುತ್ತಾರೆ. ಯಾಕೆಂದರೆ ಇಂಥಾ ಸ್ಥಳದಲ್ಲಿ ಆಹಾರ ತಿನ್ನೋದ್ರಿಂದ ಕಾಯಿಲೆಗಳು ಹರಡಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಆಹಾರ ತಯಾರಿಸೋ ರೀತಿಯನ್ನು ನೋಡಿದ್ರೆ ನಿಮ್ಗೆ ವಾಕರಿಕೆ ಬರೋದು ಖಂಡಿತ. ಯಾಕೆಂದ್ರೆ ಇಲ್ಲಿ ಮಹಿಳೆ ಅಷ್ಟು ಕೆಟ್ಟದಾಗಿ ಆಹಾರ ತಯಾರಿಸುತ್ತಾಳೆ.
ಸ್ಟ್ರೀಟ್ ಫುಡ್ ಮಾರಾಟ ಮಾಡುವ ಕೆಲವೆಡೆ ಗಲೀಜಾದ ಆಹಾರ (Food) ತಯಾರಿಕೆಯ ಸ್ಥಳ, ಪಾತ್ರೆಗಳು, ಸರ್ವಿಂಗ್ ಪ್ಲೇಟ್‌ಗಳು ನೋಡಲು ಸಿಗುತ್ತದೆ. ಇವನ್ನೆಲ್ಲಾ ನೋಡಿದ್ರೇನೆ ತಿನ್ಬೇಕು ಅನಿಸೋದಿಲ್ಲ. ಇನ್ನು ಕೆಲವರು ಕೈಗೆ ಗ್ಲೌಸ್ ಹಾಕದೆ ಹಿಟ್ಟು ಕಲಸುವುದು, ಗಲೀಜು ಬಟ್ಟೆಯಲ್ಲಿ ಕೈ ಒರೆಸಿಕೊಳ್ಳುವುದು, ಆಗಾಗ ಕೈ ಬಾಯಿ ಮುಟ್ಟುವುದನ್ನು ನಾವು ನೋಡಿರಬಹುದು. ಇಂಥಾ ಸ್ಥಳವನ್ನು ನೋಡಿದರೇನೆ ಅಸಹ್ಯವೆನಿಸುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆಯ (Woman) ಆಹಾರ ತಯಾರಿಕೆಯ ರೀತಿ ಇದೆಲ್ಲದರಕ್ಕಿಂತಲೂ ವಿಪರೀತ ಕೆಟ್ಟದಾಗಿದೆ.
ಫುಡ್ ಪಾಯ್ಸನ್ ಯಾಕಾಗುತ್ತೆ ? ತಕ್ಷಣವೇ ಕಡಿಮೆಯಾಗಲು ಏನು ಮಾಡ್ಬೋದು ?
ಬಾಯಿಯಿಂದ ಉಗುಳಿ ಉಗುಳಿ ಆಹಾರ ತಯಾರಿಸುವ ಮಹಿಳೆ
ಈಕೆಯ ವೀಡಿಯೋ ನೋಡಿದ್ರೆ ನೀವು ಮತ್ತೆ ಯಾವತ್ತೂ ಇಂಥಾ ಜಾಗಗಳಲ್ಲಿ ತಿನ್ನೋ ಧೈರ್ಯ ಮಾಡೋದಿಲ್ಲ. ಇಷ್ಟಕ್ಕೂ ಆಕೆ ಆಹಾರ ತಯಾರಿಸ್ತಿರೋವಾಗ ಏನು ಮಾಡ್ತಿದ್ದಾಳೆ ಗೊತ್ತಾ ? ಬಾಯಿಯಿಂದ ಉಗುಳಿ ಉಗುಳಿ (Spitting) ಆಹಾರ ತಯಾರಿಸ್ತಾಳೆ. ಸದ್ಯ ಇಂಟರ್‌ನೆಟ್‌ನಲ್ಲಿ ಈ ವೀಡಿಯೋ ಫುಲ್ ವೈರಲ್ ಆಗ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೊದಲ್ಲಿ ಮಹಿಳೆಯೊಬ್ಬರು ಪಾನೀಯವನ್ನು ತಯಾರಿಸುತ್ತಿರುವುದನ್ನು ನೋಡಬಹುದು. ಇದನ್ನು ತಯಾರಿಸುವ ಸಂದರ್ಭ ಮಹಿಳೆ ಪಾನೀಯದೊಂದಿಗೆ ಪಾತ್ರೆಯಲ್ಲಿ ಉಗುಳುತ್ತಾಳೆ. ನಂತರ ಆಹಾರವನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾಳೆ. ನಂತರ ಆಹಾರವನ್ನು ಟೇಸ್ಟ್ ಮಾಡಿ ನೋಡುತ್ತಾಳೆ. ನೋಡುವಾಗಲೇ ವಾಕರಿಕೆ ಬರುವಂತಿರುವ ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್ ವೈರಲ್ ಆಗಿದೆ. ನೆಟ್ಟಿಗರು ಈಕೆಯ ಅಸಹ್ಯಕರ ವರ್ತನೆಯ ಬಗ್ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಮಿಕ್ಸ್‌ಫುಡ್_ಹಂಟರ್ ಮೂಲಕ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋ ಹೆಚ್ಚಿನ ಕಾಮೆಂಟ್‌ಗಳನ್ನು ಗಳಿಸಿದೆ. ಮಹಿಳೆಯ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು 'ಈಕೆ ಖಂಡಿತವಾಗಿಯೂ ಹೊಸ ಸಾಂಕ್ರಾಮಿಕ ರೋಗವನ್ನು ಸೃಷ್ಟಿಸುತ್ತಾಳೆ' ಎಂದು ಕಾಮೆಂಟಿಸಿದ್ದಾರೆ. ಇನ್ನೊಬ್ಬರು 'ಇಂಥದ್ದನ್ನೆಲ್ಲಾ ಮಾಡುತ್ತಾರೆಂದು ಭಯಪಟ್ಟೇ ನಾನು ಮನೆಯಿಂದ ಹೊರಗಡೆ ಏನನ್ನೂ ತಿನ್ನುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು 'ಯಾಕೆ ತಿನ್ನುವ ಆಹಾರವನ್ನು ಇಷ್ಟು ಅಸಹ್ಯವಾಗಿ ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ
ತರಕಾರಿಗಳಲ್ಲಿ ಹುಳ, ಕೀಟ ಹುಡುಕಿ ಸಾಕಾಗಿದೆಯೇ? ಈ ಸೂಪರ್ ಟ್ರಿಕ್ಸ್ ಟ್ರೈ ಮಾಡಿ
ಈ ಮಧ್ಯೆ ಕೆಲವು ಬಳಕೆದಾರರು ಮಹಿಳೆ ಚಿಚಾ ಎಂಬ ಪಾನೀಯವನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದರು. ಪೆರು, ಈಕ್ವೆಡಾರ್ ಮತ್ತು ಬ್ರೆಜಿಲ್‌ನಂತಹ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಈ ಕಾರ್ನ್ ಬಿಯರ್ ಜನಪ್ರಿಯವಾಗಿದೆ. ಒಬ್ಬ ಬಳಕೆದಾರರು 'ಇದನ್ನು ಚಿಚಾ ಎಂದು ಕರೆಯಲಾಗುತ್ತದೆ, ಇದು ಈಕ್ವೆಡಾರ್‌ನ ಅಮೆಜೋನಿಯನ್ ಪ್ರದೇಶದಿಂದ ಸಾಂಪ್ರದಾಯಿಕ ಹುದುಗಿಸಿದ ಪಾನೀಯವಾಗಿದೆ. ತಯಾರಿಸುವ ರೀತಿ ಕೆಟ್ಟದಾಗಿದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು 'ದಕ್ಷಿಣ ಅಮೆರಿಕಾದಲ್ಲಿ ಆಲ್ಕೊಹಾಲ್‌ಯುಕ್ತ ಚಿಚಾವನ್ನು ತಯಾರಿಸುತ್ತಿದ್ದಾರೆ ಮತ್ತು ಉಗುಳು ಹುದುಗುವಿಕೆ ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.ಅದೇನೆ ಇರ್ಲಿ, ತಿನ್ನೋ ಆಹಾರವನ್ನು ಮಹಿಳೆ ಹೀಗೆ ಉಗುಳಿ ತಯಾರಿಸ್ತಿರೋದು ವಿಚಿತ್ರವೇ ಸರಿ.