Icecream Panipuri ಟೇಸ್ಟ್ ಮಾಡಿದ್ದೀರಾ ಯಾವತ್ತಾದರೂ? ಇಲ್ಲಿ ಸಿಗುತ್ತೆ ನೋಡಿ!

ಪಾನೀಪುರಿಯಲ್ಲಿ ಹಲವಾರು ಬಗೆಯ ವೆರೈಟಿ ನೀವು ಸವಿದಿರಲಿಕ್ಕೆ ಸಾಕು. ಈಗ ಪಾನೀಪುರಿ ಐಸ್​ಕ್ರೀಂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏನಿದೆ ಇದರಲ್ಲಿ?
 

Viral video of man making Icecream Panipuri divides internet

ನವದೆಹಲಿ: ಇಂದಿನ ದಿನಗಳಲ್ಲಿ ಆಹಾರಗಳ ವೆರೈಟಿಗೆ (Variety) ಲೆಕ್ಕವೇ ಇಲ್ಲ. ಅದರಲ್ಲಿಯೂ ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ದೇಶ ವಿದೇಶಗಳ ಯಾವುದೋ ಮೂಲೆಗಳ ಆಹಾರಗಳನ್ನು ನಾವು ಕುಳಿತಲ್ಲಿಯೇ ನೋಡಬಹುದಾಗಿದೆ. ಇದು ಒಂದು ಮಾತಾದರೆ, ಆಹಾರ ಪ್ರಿಯರು ಹೊಸ ಹೊಸ ಬಗೆಯ ಆಹಾರಗಳನ್ನು ತಯಾರಿಸುವಲ್ಲಿ ತಲ್ಲೀನರಾಗುತ್ತಾರೆ. ಹಿಂದೆಲ್ಲಾ ಏನೇ ಪ್ರಯೋಗ ಮಾಡಿದರೂ ಅದು ಅಬ್ಬಬ್ಬಾ ಎಂದರೆ ಅವರ ಕುಟುಂಬ ವರ್ಗಕ್ಕಷ್ಟೇ ನೋಡಲು ಸಿಗುತ್ತಿತ್ತು. ಆದರೆ ಈಗ ಹಾಗಲ್ಲವಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಜನರು ಆ ಹೊಸ ಬಗೆಯ ಆಹಾರದ ಪ್ರಯೋಗವನ್ನು ನೋಡಬಹುದು. ಅದಕ್ಕಾಗಿಯೇ ಆಹಾರ ಪ್ರಿಯರು ಹೊಸ ಹೊಸ ಪ್ರಯೋಗ ಮಾಡುವಲ್ಲಿ ಸದಾ ನಿರತರಾಗಿರುತ್ತಾರೆ.

ಆಹಾರಗಳ ವಿಷಯಕ್ಕೆ ಬಂದಾಗ ವಿಲಕ್ಷಣ ಎನ್ನುವಂಥ ಆಹಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡಿರುತ್ತೇವೆ. ಕೆಲವೊಂದನ್ನು ನೋಡಿ ಥೂ ಎನ್ನುತ್ತಿದ್ದರೆ ಇನ್ನು ಕೆಲವು ಆಹಾರಗಳನ್ನು ನೋಡಿದರೆನೇ ಬಾಯಲ್ಲಿ ನೀರು ಬರುತ್ತದೆ. ಹಾಗೆಂದು ಅವುಗಳನ್ನು ಟ್ರೈ (Try) ಮಾಡಲು ಹೋದರೆ ಮಾತ್ರ ಫಜೀತಿಯೇ. ಯಾರು ಯಾವ ಪ್ರಯೋಗ ಮಾಡಬೇಕು, ಅವರು ಮಾಡಿದರೇನೇ ಚೆನ್ನ. ಅಂಥದ್ದೇ ಒಂದು ವಿಚಿತ್ರ ಎನ್ನುವ ಆಹಾರವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದು ಕೇಳುವಿರಾ? ಪಾನೀಪುರಿ ಐಸ್​ಕ್ರೀಂ (Ice cream Panipuri)

ಮೊಟ್ಟೆಗಿಂತ ಧರ್ಮ ಮುಖ್ಯ; 25 ಲಕ್ಷ ಯಾವ ಲೆಕ್ಕ ಎಂದು ಮಾಸ್ಟರ್ ಶೆಫ್‌ನಿಂದ ಹೊರ ನಡೆದ ಅರುಣಾ!

ನಿಜ. ನೀವು ಕೇಳ್ತಿರೋದು ನಿಜ. ಇದು ಬರೀ ಪಾನೀಪುರಿಯೂ ಅಲ್ಲ, ಐಸ್​ಕ್ರೀಮೂ ಅಲ್ಲ. ಬದಲಿಗೆ ಪಾನೀಪುರಿ ಐಸ್​ಕ್ರೀಂ. ಪಾನೀಪುರಿಯ ಹೆಸರು ಕೇಳಿದರೆ ಬಹಳ ಮಂದಿಯ ಬಾಯಲ್ಲಿ ಕುಳಿತಲ್ಲಿಯೇ ನೀರು ಬರುವುದು ಕಾಮನ್​. ಅದೇ ರೀತಿ ಐಸ್​ಕ್ರೀಂ ಹೆಸರು ಕೇಳಿದರೂ ಕೂಡ. ಇದೀಗ ಡಬಲ್​ ಸವಿಯನ್ನು ಒಂದರಲ್ಲಿಯೇ ಸವಿಯುವ ಹಾಗಿದ್ದರೆ? ಛೇ ಛೇ ಎಲ್ಲಾದರೂ ಉಂಟಾ? ಎರಡರ ಕಾಂಬೀನೇಷನ್​ (Combination) ಅನ್ನು ಕಲ್ಪನೆ  ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದು ನಿಮಗೆ ಅನ್ನಿಸಿರಬೇಕಲ್ಲವೆ? ಹಾಗಿದ್ದರೆ ಈ ವಿಡಿಯೋ ಒಮ್ಮೆ ನೋಡಿಬಿಡಿ. ನಿಮಗೆ ಏನೆನ್ನಿಸುತ್ತದೆ ಎಂದು ಹೇಳಿ. 

ಹಿಂದೆಲ್ಲಾ  ಕೆಲವರು ಮ್ಯಾಗಿ ಶೇಕ್‌, (Maggi shake) ರಸಗುಲ್ಲಾ ಚಾಟ್‌... ಹೀಗೆ ಏನೇನೋ ಸರ್ಕಸ್​ ಮಾಡಿದ್ದರು. ಅದನ್ನು ನೋಡಿದವರೂ ಇದು ಚೆನ್ನಾಗಿದ್ದಿರಲಿಕ್ಕಿಲ್ಲ ಎಂದಿದ್ದರು. ಆದರೆ ಈ ಭಕ್ಷ್ಯಗಳನ್ನು ಸವಿದ ಮೇಲೆ ಇದರ ಪರವಾಗಿ ಕಮೆಂಟ್​ ಹಾಕಿದವರೂ ಇದ್ದಾರೆ. ಆದರೆರ ಸದ್ಯ ಪಾನೀಪುರಿ ಐಸ್​ಕ್ರೀಂ ಯಾಕೋ ನೆಟ್ಟಿಗರಿಗೆ ಅಷ್ಟು ಇಷ್ಟವಾದಂತೆ ಕಾಣುತ್ತಿಲ್ಲ. ಈ ವೀಡಿಯೊವನ್ನು ಆಹಾರ ಬ್ಲಾಗರ್ @mi_nashikkar_ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.  ಸುಮಾರು ಎರಡು ಲಕ್ಷ ಮಂದಿ ಇದನ್ನು ನೋಡಿದ್ದಾರೆ. ಆದರೆ ಹೆಚ್ಚಿನವರು ಇದನ್ನು ಇಷ್ಟಪಟ್ಟಂತೆ ಕಾಣುತ್ತಿಲ್ಲ. ಈ ವಿಡಿಯೋದಲ್ಲಿ  ವ್ಯಕ್ತಿಯೊಬ್ಬರು ಐಸ್ ಕ್ರೀಂನೊಂದಿಗೆ ಪಾನಿಪುರಿಯನ್ನು ತುಂಬುತ್ತಿರುವುದನ್ನು ನೋಡಬಹುದು. ಇದನ್ನು ಹೇಳುವುದಕ್ಕಿಂತ ವಿಡಿಯೋ ನೋಡಿದರೇನೇ ಮಜಾ ಇರುತ್ತದೆ.

Areca nut Health Benefits: ಅರೆಕಾ ಟೀ ಕುಡಿದ್ರೆ ಡಯಾಬಿಟಿಸ್‌ ಬಗ್ಗೆ ಭಯ ಬೇಕಿಲ್ಲ

ಆದರೆ ಮೊದಲೇ ಹೇಳಿದ ಹಾಗೆ ಹಲವು ನೆಟ್ಟಿಗರು ಇದನ್ನು ನೋಡಿ ಗಾಬರಿಗೊಂಡಂತೆ ಕಾಣುತ್ತಿದೆ. ಕೆಲವರು ಮಾತ್ರ ಇದು ರುಚಿಯಾಗಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ.ಆದರೆ ಯಾವುದನ್ನೂ ಬರೀ ನೋಡಿದರೆ ಇಷ್ಟ ಆಗಲಿಕ್ಕೆ ಇಲ್ಲ ಅಲ್ಲವೆ|? ಮೊದಲಿಗೆ ಪಾನೀಪುರಿಯ ಜೊತೆ ಮೊಸರು ಹಾಕಿ ದಹೀಪುರಿ (Dahipuri) ಮಾಡುವ ವಿಷಯ ಬಂದಾಗಲೂ ಛೇ ಇದೇನು ಟೇಸ್ಟ್​ ಇರುತ್ತೆ ಎಂದವರೇ ಹೆಚ್ಚಂತೆ.  ಆದರೆ ಇದೀಗ ಪಾನೂಪುರಿ ಸ್ಟಾಲ್​ಗಳಿಗೆ ಹೋಗಿ ದಹೀಪುರಿಯನ್ನು ಕೇಳಿಕೊಂಡು ತಿನ್ನುವವರು ಎಷ್ಟು ಮಂದಿ ಇಲ್ಲ ಹೇಳಿ? ಅದಕ್ಕಾಗಿಯೂ ಪಾನೀಪುರಿ ಐಸ್​ಕ್ರೀಂ ಅನ್ನೂ ಟ್ರೈ ಮಾಡಿ ರುಚಿ ನೋಡಿ ಆಮೇಲೆ ಮುಂದಿನದ್ದನ್ನು ಮಾತನಾಡಿ ಎನ್ನುತ್ತಿದ್ದಾರೆ ಈ ಪಾನೀಪುರಿ ತಯಾರಕರು. ದೆಹಲಿಗೆ ಹೋದರೆ ಇದನ್ನು ಟ್ರೈ ಮಾಡಬಹುದು. ಇಲ್ಲದಿದ್ದರೆ ವಿಡಿಯೋ ನೋಡಿ ಮನಸ್ಸಿನಲ್ಲಿಯೇ ಇದನ್ನು ಆಸ್ವಾದಿಸಬಹುದು. ಇದು ಟೇಸ್ಟಿಯಾಗಿದ್ದರೆ ಎಲ್ಲೆಡೆ ಪಾನೀಪುರಿ ತಯಾಕರೂ ಇದನ್ನು ನೀಡಬಲ್ಲುರು ಎನ್ನುವುದು ಸುಳ್ಳು ಅಲ್ಲ ಅಲ್ಲವೆ?
 

Latest Videos
Follow Us:
Download App:
  • android
  • ios