ಸಸ್ಯಹಾರಿಗಳೆಂದು ಭಾವಿಸಲಾದ ಹಲವು ಆಹಾರಗಳು ಪ್ರಾಣಿಜನ್ಯ ಪದಾರ್ಥಗಳನ್ನು ಬಳಸಿ ತಯಾರಿಸಲ್ಪಡುತ್ತವೆ. ನಾನ್, ಸಕ್ಕರೆ, ಡೋನಟ್, ಪ್ಯಾಕೆಟ್ ಜ್ಯೂಸ್, ಚೀಸ್, ಜೆಲ್ಲಿ ಮತ್ತು ಕೆಲವು ಬಿಯರ್/ವೈನ್ ಗಳಲ್ಲಿ ಮೊಟ್ಟೆ, ಮೂಳೆ, ಗರಿ, ಮೀನಿನ ಎಣ್ಣೆ, ಪ್ರಾಣಿಗಳ ಹೊಟ್ಟೆಯ ಕಿಣ್ವಗಳು, ಮೂತ್ರಕೋಶದ ಉತ್ಪನ್ನಗಳನ್ನು ಬಳಸಲಾಗುತ್ತದೆ. ಹೊಟೇಲ್ ಗಳಲ್ಲಿ ಪದಾರ್ಥಗಳ ಬಳಕೆಯ ಬಗ್ಗೆ ಎಚ್ಚರವಿರಲಿ.
ಹೊಟೇಲ್ (Hotel) ಗೆ ಹೋದಾಗ ಇಲ್ವೆ ಪ್ಯಾಕಡ್ ಫುಡ್ (Packaged food) ಖರೀದಿ ಮಾಡುವಾಗ ಸಸ್ಯಹಾರಿಗಳು ಅದು ಸಸ್ಯಹಾರವಾ ಅಂದ ಡಬಲ್ ಚೆಕ್ ಮಾಡ್ತಾರೆ. ಸಸ್ಯಹಾರಿ ಹೊಟೇಲ್ ಗೆ ಹೋಗಿ ಅಲ್ಲಿ ತಯಾರಿಸಿದ ಎಲ್ಲ ಆಹಾರ ವೆಜ್ ಎಂದೇ ಭಾವಿಸಿ ತಿಂದು ಬರ್ತಾರೆ. ಆದ್ರೆ ನೀವು ಅಂದ್ಕೊಂಡಂತೆ ವೆಜ್ ಅಂತ ಬರೆದಿರುವ ಎಲ್ಲ ಆಹಾರ ಸಸ್ಯಹಾರವಲ್ಲ. ಅದು ತಯಾರಾದ್ಮೇಲೆ ಸಸ್ಯಹಾರ ಎನ್ನುವ ಪಟ್ಟ ಪಡೆಯುತ್ತದೆ. ಆದ್ರೆ ಅದನ್ನು ತಯಾರಿಸುವಾಗ ಪ್ರಾಣಿ, ಪಕ್ಷಿಗಳ ಅಂಗಾಗಂಗಳ ಬಳಕೆ ಮಾಡಲಾಗುತ್ತೆ. ನೀವು ಸಸ್ಯಹಾರ ಅಂತ ತಿನ್ನುವ ಯಾವೆಲ್ಲ ಆಹಾರ ಪ್ರಾಣಿಗಳ ಜೊತೆ ನಂಟು ಹೊಂದಿದೆ ಎಂಬ ವಿವರ ಇಲ್ಲಿದೆ.
ಈವೆಲ್ಲ ಸಸ್ಯಹಾರಿ ವರ್ಗಕ್ಕೆ ಸೇರಲ್ವಾ? :
ನಾನ್ : ಹೊಟೇಲ್ ಗೆ ಹೋದಾಗ ನಾವು ನಾನ್ ಆರ್ಡರ್ ಮಾಡಿ ತಿಂದು ಬರ್ತೇವೆ. ಆದ್ರೆ ಸಸ್ಯಹಾರಿ (vegetarian) ಹೊಟೇಲ್ ನಲ್ಲಿ ಸಿಗುವ ನಾನ್ ಸಂಪೂರ್ಣ ಸಸ್ಯಹಾರ ಎನ್ನಲು ಸಾಧ್ಯವಿಲ್ಲ. ಯಾಕೆಂದ್ರೆ ಕೆಲ ಹೊಟೇಲ್ ಗಳಲ್ಲಿ ನಾನ್ ತಯಾರಿಸುವ ವೇಳೆ ಮೊಟ್ಟೆ (egg)ಯನ್ನು ಬಳಕೆ ಮಾಡಲಾಗುತ್ತದೆ. ಹಿಟ್ಟನ್ನು ಮೃದು ಮಾಡಲು ಅನೇಕ ಕಡೆ ನಾನ್ ಗೆ ಮೊಟ್ಟೆ ಬೆರೆಸಲಾಗುತ್ತದೆ.
ಸಕ್ಕರೆ : ಇನ್ನು ಪ್ರತಿ ನಿತ್ಯ ಪ್ರತಿ ಮನೆಯಲ್ಲಿ ಬಳಸುವ ಅಗತ್ಯ ಆಹಾರ ಪದಾರ್ಥಗಳಲ್ಲಿ ಒಂದು ಸಕ್ಕರೆ. ಈ ಸಕ್ಕರೆ ಕೂಡ ನಾನ್ ವೆಜ್ ಅಂದ್ರೆ ನೀವು ನಂಬ್ತೀರಾ? ಬಿಳಿ ಸಕ್ಕರೆ ರುಬ್ಬಲು ಕೆಲ ಪದಾರ್ಥಗಳನ್ನು ಬಳಸಲಾಗುತ್ತದೆ. ಅದ್ರಲ್ಲಿ ಬೋನ್ ಚಾರ್ ಕೂಡ ಸೇರಿದೆ. ಬೋನ್ ಚಾರನ್ನು ಬೋನ್ ಬ್ಲಾಕ್ ಅಂತ ಕರೆಯುತ್ತಾರೆ. ಪ್ರಾಣಿಗಳ ಮೂಳೆಗಳನ್ನು ಸುಡುವುದರಿಂದ ಇದನ್ನು ತಯಾರಿಸಲಾಗುತ್ತದೆ.
ಡೋನಟ್ : ಮಕ್ಕಳ ನೆಚ್ಚಿನ ಖಾದ್ಯಗಳಲ್ಲಿ ಡೋನಟ್ ಕೂಡ ಒಂದು. ಡೋನಟ್ ತಯಾರಿಸಲು ಎಲ್-ಸಿಸ್ಟೀನ್ ಸೇರಿಸಲಾಗುತ್ತದೆ. ಇದನ್ನು ಬಾತುಕೋಳಿ ಗರಿಗಳಲ್ಲಿರುವ ಅಮೈನೋ ಆಮ್ಲದಿಂದ ತಯಾರಿಸಲಾಗುತ್ತದೆ.
ಪ್ಯಾಕೆಟ್ ಜ್ಯೂಸ್ : ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಜ್ಯೂಸ್ ಮಾಂಸಹಾರಿಯೂ ಆಗಿರಬಹುದು ಅಂದ್ರೆ ನೀವು ನಂಬ್ತೀರಾ? ಆರೆಂಜ್ ಸೇರಿದಂತೆ ಕೆಲ ಪ್ಯಾಕೆಟ್ ಜ್ಯೂಸ್ಗಳಿಗೆ,ಒಮೆಗಾ-3 ಕೊಬ್ಬಿನಾಮ್ಲವನ್ನು ಸೇರಿಸಲಾಗುತ್ತದೆ. ಒಮೆಗಾ-3 ಕೊಬ್ಬಿನಾಮ್ಲವನ್ನು ಮೀನಿನ ಎಣ್ಣೆಯಿಂದ ತಯಾರಿಸಲಾಗುತ್ತದೆ.
ಚೀಸ್ : ಈಗಿನ ಆಹಾರದಲ್ಲಿ ಚೀಸ್ ಅತಿ ಮುಖ್ಯ ಪಾತ್ರ ವಹಿಸ್ತಿದೆ. ಸಸ್ಯಹಾರ, ಮಾಂಸಹಾರ ಎರಡಕ್ಕೂ ಚೀಸ್ ಬಳಕೆ ಮಾಡಲಾಗುತ್ತೆ. ಆದ್ರೆ ಈ ಚೀಸ್ ತಯಾರಿಸಲು ರೆನೆಟ್ ಬಳಸಲಾಗುತ್ತದೆ. ಈ ರೆನೆಟ್ ಅನ್ನು ಪ್ರಾಣಿಗಳ ಹೊಟ್ಟೆಯಿಂದ ಪಡೆದ ಕಿಣ್ವಗಳಿಂದ ತಯಾರಿಸಲಾಗುತ್ತದೆ.
ಜೆಲ್ಲಿ : ಮಕ್ಕಳ ಫೆವರೆಟ್ ತಿಂಡಿಯಲ್ಲಿ ಜೆಲ್ಲಿ ಕೂಡ ಸೇರಿದೆ. ಒಂದೇ ಬಾರಿ ನಾಲ್ಕೈದು ಜೆಲ್ಲಿಯನ್ನು ಮಕ್ಕಳು ತಿಂದಾರೆ. ದೊಡ್ಡವರೂ ಇದನ್ನು ಇಷ್ಟಪಡೋದಿದೆ. ಜೆಲ್ಲಿ ವೆಜ್ ಅಂದ್ಕೊಂಡಿದ್ರೆ ನಿಮ್ಮ ಊಹೆ ತಪ್ಪಾಗ್ಬಹುದು. ಜೆಲ್ ತಯಾರಿಸಲು ಕೊಲೆಜೆನ್ ಸೇರಿಸಲಾಗುತ್ತದೆ. ಈ ಕೊಲೆಜೆನ್ ಅನ್ನು ಪ್ರಾಣಿಗಳ ಮೂಳೆಗಳಿಂದ ತಯಾರಿಸಲಾಗುತ್ತದೆ.
ಬಿಯರ್ : ಕೆಲ ಬಿಯರ್ ಹಾಗೂ ವೈನ್ ನಲ್ಲಿ ಮೀನಿನ ಮೂತ್ರಕೋಶದಿಂದ ಹೊರತೆಗೆಯಲಾದ ಐಸಿಂಗ್ಲಿಯಾಸ್ ಸೇರಿಸಲಾಗುತ್ತದೆ.
ಹೊಟೇಲ್ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಮೇಲಿನ ಎಲ್ಲ ವಸ್ತುಗಳಲ್ಲಿ ಮಾಂಸಹಾರ ಇದ್ದೇ ಇದೆ ಎಂದಲ್ಲ. ಕೆಲ ಹೊಟೇಲ್ ಈ ಪದಾರ್ಥವಿಲ್ಲದೆ ಆಹಾರ ತಯಾರಿಸಬಹುದು. ಮತ್ತೆ ಕೆಲ ಪದಾರ್ಥಗಳಿಗೆ ಅಗತ್ಯವಾಗಿ ಇದನ್ನು ಸೇರಿಸಿರಲೂಬಹುದು.


