'ಈ ಮಕ್ಕಳಿಗೆ ಮಾಡಿ ಕೊಟ್ಟೂ ಕೊಟ್ಟೂ ಸಾಕಾಯ್ತು. ಅವರು ಏನು ಮಾಡಿಕೊಟ್ಟರೂ ತಿನ್ನೋದಿಲ್ಲ' ಅನ್ನೋದು ಈ ಕಾಲದ ಅಪ್ಪ ಅಮ್ಮನ ಗೋಳು. ಆದರೆ ಮಕ್ಕಳು ಚೇಂಜ್ ಕೇಳ್ತಾರೆ. ಪಿಜ್ಜಾನೂ ಒಂದು ಟೈಮ್ ಗೆ ಅವರಿಗೆ ಬೋರ್ ಬಂದು ಹೋಗುತ್ತೆ. ಆದರೆ ಬೇರೆ ಆಪ್ಶನ್ ಇಲ್ಲದೇ ಮತ್ತೆ ಜಂಕ್ ಫುಡ್ ಮೊರೆ ಹೋಗ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ ಬಿಡಿ. ಎಕ್ಸಾಂ ಟೈಮ್ ನಲ್ಲಂತೂ ಇಂಥಾ ಆಹಾರ ಕೊಡೋದರಿಂದ ಮಕ್ಕಳು ಚುರುಕಾಗಿ ಪರೀಕ್ಷೆ ಬರೆಯೋದು ಸಾಧ್ಯ ಆಗದಿರಬಹುದು. ಬದಲಿಗೆ ಮನೆಯಲ್ಲೇ ಒಂದಿಷ್ಟು ಅಡುಗೆ ರೆಡಿ ಮಾಡಿ ಕೊಡಿ. ಈ ಟೇಸ್ಟ್ ಮಕ್ಕಳಿಗೆ ಸಖತ್ ಇಷ್ಟ ಆಗುತ್ತೆ.

ವೆಜ್ ಪರಾಠ ಮಧ್ಯಾಹ್ನದ ಊಟಕ್ಕೆ ಬೆಸ್ಟ್ ರೆಸಿಪಿ. ಮಕ್ಕಳು ಅನ್ನ ತಿನ್ನದೇ ಇದ್ರೂ ಪರಾಠ ತಿಂದ್ರೂ ಸಾಕು. ಒಂದೆರಡು ಪರಾಠಗಳು ಮಕ್ಕಳ ಹೊಟ್ಟೆ ತುಂಬಿಸೋದಕ್ಕೆ ಸಾಕು. ಇದನ್ನು ಲಂಚ್ ಬಾಕ್ಸ್ ಗೂ ಹಾಕಬಹುದು. ಮಾಡೋದಕ್ಕೆ ಹೆಚ್ಚು ಕಷ್ಟಪಡಬೇಕಿಲ್ಲ. ನಾನು ತರಕಾರಿ ತಿನ್ನಲ್ಲ ಅಂತ ಹಠ ಹಿಡಿಯೋ ಮಗು ಕೂಡ ಈ ಪಟಾಠವನ್ನು ಚಪ್ಪರಿಸಿಕೊಂಡು ತಿನ್ನದಿದ್ದರೆ ಕೇಳಿ. ಇದಕ್ಕೆ ಪನೀರ್ಅನ್ನೂ ಸೇರಿಸಿದ್ರೆ ಪರಾಠ ಸಖತ್ತಾಗಿರುತ್ತೆ. ಟೇಸ್ಟ್ ಯಮ್ಮೀ ಅನ್ನೋ ಹಾಗಿರುತ್ತೆ. ಮಕ್ಕಳ ನೆವದಲ್ಲಿ ಮನೆಮಂದಿಯೂ ತಿನ್ನಬಹುದು.

 

ಸಂದರ್ಭ : ಮಧ್ಯಾಹ್ನದ ಊಟಕ್ಕೆ

ಅವಧಿ: ಬೇಯಿಸೋ ಸಮಯ ಬಿಟ್ಟರೆ ಗರಿಷ್ಠ ಹದಿನೈದು ನಿಮಿಷ

 

ಏನು ಸಾಮಗ್ರಿ ಬೇಕು?: ಗೋಧಿ ಹಿಟ್ಟು, ಎಣ್ಣೆ, ನೀರು, ಉಪ್ಪು, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಪನೀರ್ ಅಥವಾ ಚೀಸ್, ಕಾಲಿ ಫ್ಲವರ್, ಬಟಾಣಿ, ಜಿಂಜರ್ ಪೇಸ್ಟ್, ಹಸಿ ಮೆಣಸು, ಜೀರಿಗೆ ಪೌಡರ್, ಅಮ್ಚೂರ್, ಧನಿಯಾ ಪುಡಿ, ಇಂಗು, ಕೊತ್ತಂಬರಿ ಸೊಪ್ಪು.

 

ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್

 

ಮಾಡುವ ವಿಧಾನ ಹೇಗೆ?

- ತರಕಾರಿಗಳನ್ನು ಮೀಡಿಯಂ ಸೈಸ್ ಗೆ ಹೆಚ್ಚಿ ಬೇಯಿಸಿಟ್ಟುಕೊಳ್ಳಿ. ಚೆನ್ನಾಗಿ ಬೇಯಬೇಕು. ಉಪ್ಪು ಹಾಕಿ ಬೇಯಿಸೋದು ಮರೀಬೇಡಿ.

- ತರಕಾರಿ ಬೇಯುತ್ತಿರುವ ಸಮಯದಲ್ಲಿ ಗೋಧಿ ಹಿಟ್ಟಿಗೆ ಎಣ್ಣೆ, ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

- ಇದರ ಮೇಲ್ಭಾಗ ಎಣ್ಣೆ ಸವರಿ ಸ್ವಲ್ಪ ಹೊತ್ತು ಹಾಗೇ ಬಿಟ್ಟಿರಿ.

- ಬೇಯಿಸಿದ ತರಕಾರಿಯನ್ನು ಸೋಸಿ ನೀರು ತೆಗೆದು ಒಂದು ಬೌಲ್ಗೆ ಹಾಕಿ.

- ಪಾನ್ ಗೆ ಎಣ್ಣೆ ಹಾಕಿ, ಬಿಸಿ ಮಾಡಿ.

- ನಂತರ ಜಿಂಜರ್ ಪೇಸ್ಟ್, ಹಸಿಮೆಣಸು, ಜೀರಿಗೆ ಪೌಡರ್, ಅಮ್ಚೂರ್ ಪೌಡರ್, ಧನಿಯಾ, ಇಂಗು ಹಾಕಿ.

- ಈ ಮಿಶ್ರಣಕ್ಕೆ ತುರಿದ ಪನೀರ್ ಅಥವಾ ಚೀಸ್ ಹಾಕಿ.

- ಇದಕ್ಕೆ ತರಕಾರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

- ಮೇಲಿಂದ ಸ್ವಲ್ಪ ಉಪ್ಪು ಹಾಕಿ.

- ಇದನ್ನ ಇನ್ನೊಂದು ಪಾತ್ರೆಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಎಲ್ಲ ತರಕಾರಿಯೂ ಹಿಟ್ಟಿನ ಹಾಗೆ ಆಗಬೇಕು,

- ಈಗ ಎಣ್ಣೆ ಹಾಕಿಟ್ಟ ಚಪಾತಿ ಹಿಟ್ಟನ್ನು ಮತ್ತೊಮ್ಮೆ ನಾದಿ.

- ಇದನ್ನು ಪೂರಿಗಿಂತ ಚಿಕ್ಕ ಗಾತ್ರಕ್ಕೆ ಲಟ್ಟಿಸಿ.

- ತರಕಾರಿ ಹಿಟ್ಟನ್ನು ಉಂಡೆ ಮಾಡಿ ಈ ಕಣಕಕ್ಕೆ ಹಾಕಿ.

- ಹಿಟ್ಟಿನಿಂದ ಉಂಡೆಯನ್ನು ಸಂಪೂರ್ಣ ಕವರ್ ಮಾಡಿ,

- ನಂತರ ಲಟ್ಟಿಸಿ,

- ಸ್ಟೌ ಮೇಲೆ ಕಾವಲಿ ಇಟ್ಟು ಬಿಸಿಯಾಗಲು ಬಿಡಿ.

- ಲಟ್ಟಿಸಿರುವ ಪರಾಠವನ್ನು ಹಾಕಿ ಚೆನ್ನಾಗಿ ಬೇಯಿಸಿ.

- ಈಗ ಬಿಸಿ ಬಿಸಿಯಾದ ರುಚಿ ರುಚಿ ಪರಾಠ ರೆಡಿ.

 

ನಾಳೆ ಬೆಳಗ್ಗಿನ ತಿಂಡಿಗೆ ಉತ್ತಪ್ಪ ಟ್ರೈ ಮಾಡಿ

 

ಇದನ್ನು ಮೊಸರಿನ ರಾಯತದ ಜೊತೆಗೆ ತಿನ್ನಬಹುದು. ಬರೀ ಗಟ್ಟಿ ಮೊಸರಿನ ಜೊತೆಗೆ ತಿಂದರೂ ಸಖತ್ ರುಚಿಯಾಗಿರುತ್ತೆ. ಟೊಮ್ಯಾಟೋ ಸಾಸ್ ನೆಚ್ಚಿಕೊಂಡೂ ತಿನ್ನಬಹುದು.

- ಪಾಲಾಕ್ ನಂಥಾ ಸೊಪ್ಪಿನಿಂದ ಈ ಪರಾಠ ತಯಾರಿಸಬಹುದು.

- ಚಪಾತಿ ಹಿಟ್ಟನ್ನು ಕಣಕದ ಹಾಗೆ ಮಾಡದೇ ಹಿಟ್ಟಿಗೇ ತರಕಾರಿ ಮಿಶ್ರಣ ಹಾಕಿ ಒಟ್ಟಿಗೇ ನಾದಿ ಪರಾಠ ಮಾಡುವವರೂ ಇದ್ದಾರೆ. ಆದರೆ ಇದು ಸ್ವಲ್ಪ ನಾಜೂಕಿನ ಕೆಲಸ. ಲಟ್ಟಿಸುವಾಗ, ಬೇಯಿಸುವಾಗ ತರಕಾರಿ ಹಿಟ್ಟಿನಿಂದ ಬೇರ್ಪಡುವ ಸಾಧ್ಯತೆ ಇದೆ.