Man eats 40 chickens in 40 consecutive days: ನಿರ್ಧಿಷ್ಟ ಸಮಯದೊಳಗೆ ಬೃಹತ್ ಪ್ರಮಾಣದ ಆಹಾರವನ್ನು ತಿನ್ನುವ ಫುಡ್ ಚಾಲೆಂಜ್‌ಗಳ ಬಗ್ಗೆ ನೀವು ಕೇಳಿರಬಹುದು. ಹಾಗೆಯೇ ಅಮೇರಿಕಾದಲ್ಲೊಬ್ಬ ವ್ಯಕ್ತಿ 40 ದಿನಗಳಲ್ಲಿ 40 ಕೋಳಿಗಳನ್ನು ತಿನ್ನುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಡೀಟೈಲ್ಸ್ ಇಲ್ಲಿದೆ.

ಇಂಟರ್‌ನೆಟ್ ಬಂದ ಮೇಲೆ ಮನುಷ್ಯ ಮಾಡೋ ದಿನನಿತ್ಯದ ಆಸಕ್ತಿದಾಯಕ ಚಟುವಟಿಕೆಗಳು ವೈರಲ್ ಆಗುತ್ತಿವೆ. ಹೀಗೆ ವೈರಲ್ ಆಗಲೆಂದೇ ವೀಡಿಯೋ ಮಾಡುವವರು ಇದ್ದಾರೆ. ರೀಲ್ಸ್‌, ವೀಡಿಯೋಗಳನ್ನು ಮಾಡಿ ಅಂತರ್ಜಾದಲ್ಲಿ ಪೋಸ್ಟ್ ಮಾಡಿಬಿಡುತ್ತಾರೆ. ಚಿತ್ರ-ವಿಚಿತ್ರವಾಗಿರೋ ಇಂಥಾ ವೀಡಿಯೋಗಳು ಸಾಕಷ್ಟು ಲೈಕ್ಸ್‌, ಕಮೆಂಟ್ ಗಳಿಸಿ ಜನಪ್ರಿಯತೆ ತಂದುಕೊಡುತ್ತವೆ. ಅಂಥಹದ್ದರಲ್ಲೇ ಒಂದು ಫುಡ್ ಚಾಲೆಂಜ್‌. ನಿರ್ಧಿಷ್ಟ ಸಮಯದಲ್ಲಿ ಇಂತಿಷ್ಟು ಆಹಾರವನ್ನು ತಿಂದು ಸವಾಲನ್ನು ಗೆದ್ದು ಬಿಡುವುದು. ಇಂಥಾ ಅಸಾಮಾನ್ಯ ಚಟುವಟಿಕೆ ಮಾಡೋದ್ರಿಂದ ವೀಡಿಯೋ ವೈರಲ್ ಆಗಿ ವ್ಯಕ್ತಿ ಫೇಮಸ್ ಆಗುತ್ತಾನೆ. ಇಂಟರ್‌ನೆಟ್‌ನಲ್ಲಿ ಇಂಥಾ ಹಲವಾರು ವೀಡಿಯೋಗಳು ಆಗಾಗ ಹರಿದಾಡುತ್ತಿರುತ್ತವೆ. ಸದ್ಯ ವೈರಲ್ ಆಗಿರೋದು ಅಮೇರಿಕಾದಲ್ಲೊಬ್ಬ ವ್ಯಕ್ತಿ 40 ದಿನಗಳಲ್ಲಿ 40 ಕೋಳಿ ತಿಂದಿರೋ ವಿಚಾರ. 

ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ. ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾದ ವ್ಯಕ್ತಿಯೊಬ್ಬರು ಪ್ರತಿದಿನ ಒಂದು ಕೋಳಿ (Chicken) ತಿನ್ನುವ 40 ದಿನಗಳ ಕಾಲ ಚಿಕನ್ ತಿನ್ನುವ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾನೆ. 31 ವರ್ಷ ವಯಸ್ಸಿನ ಸರ್ವರ್, ಅಲೆಕ್ಸಾಂಡರ್ ಟೊಮಿನ್ಸ್ಕಿ, ಸತತವಾಗಿ 40 ದಿನಗಳವರೆಗೆ ಪ್ರತಿದಿನ ಸಂಪೂರ್ಣ ರೋಟಿಸ್ಸೆರಿ ಚಿಕನ್ ತಿನ್ನುವ ಗುರಿಯನ್ನು ದಾಖಲಿಸಲು ಪ್ರಾರಂಭಿಸಿದನು. ಮತ್ತು ತನ್ನ ನಿರಂತರ ಪ್ರಯತ್ನದಿಂದ ಗುರಿಯನ್ನು ಪೂರೈಸಿದನು. ಈ ಫುಡ್ ಚಾಲೆಂಜ್ ಮಾಡುವಾಗ ಸ್ಪಲ್ಪ ಮಟ್ಟಿಗೆ ತೊಂದರೆಯಾಗಿತ್ತು. ಆದರೆ ಜನರಿಗೆ ಮನರಂಜನೆ (Entertainment) ನೀಡುವ ಉದ್ದೇಶದಿಂದ ತಾನಿದನ್ನು ಮಾಡಿರುವುದಾಗಿ ಅಲೆಕ್ಸಾಂಡರ್ ಟೊಮಿನ್ಸ್ಕಿ ತಿಳಿಸಿದ್ದಾನೆ.

Food Challenge: 3 ಕೆಜಿಯ ಸಮೋಸಾವನ್ನು 5 ನಿಮಿಷದಲ್ಲಿ ಸ್ವಾಹಾ ಮಾಡಿದ ಬ್ಲಾಗರ್

ಟೊಮಿನ್ಸ್ಕಿ ವಿವಿಧ ಸ್ಥಳಗಳಲ್ಲಿ ಕೋಳಿ ತಿನ್ನುವ ಬಗ್ಗೆ ಮಾಡಿರೋ ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾನೆ. ಪೋಸ್ಟ್‌ಗಳು ತುಂಬಾ ಸರಳವಾಗಿದ್ದವು, ಅವರು ಇಡೀ ಕೋಳಿಯನ್ನು ಹಿಡಿದುಕೊಂಡು ಸವಾಲಿನ (Challenge) ದಿನವನ್ನು ಉಲ್ಲೇಖಿಸುವುದನ್ನು ನೋಡಬಹುದು.

Scroll to load tweet…

ಅಲೆಕ್ಸಾಂಡರ್ ಟೊಮಿನ್ಸ್ಕಿ ಅಧಿಕೃತ ಹ್ಯಾಂಡಲ್ ಪ್ರಕಾರ, ಆತ ನವೆಂಬರ್ 6ರಂದು 40 ದಿನಗಳ ಫುಡ್‌ ಚಾಲೆಂಜ್‌ನ್ನು ಪೂರ್ಣಗೊಳಿಸಿದನು. ಅದನ್ನು ಪೂರ್ಣಗೊಳಿಸುವ ಮೊದಲು, ಅವರು ಡೆಲವೇರ್ ನದಿಯ ಪಿಯರ್‌ನಲ್ಲಿ ಅವರ ಅಂತಿಮ ಕೋಳಿ ಊಟವನ್ನು (Dinner) ವೀಕ್ಷಿಸಲು ಸಾರ್ವಜನಿಕರನ್ನು ಸ್ವಾಗತಿಸುವ ಪೋಸ್ಟರ್‌ಗಳನ್ನು ನಗರದಾದ್ಯಂತ ಪೋಸ್ಟ್ ಮಾಡಿದ್ದನು. ಟೊಮಿನ್ಸ್ಕಿ ಅವರು ಕೊನೆಯ ದಿನದಂದು ಅಂತಿಮ ಕೋಳಿ ತಿನ್ನುವುದನ್ನು ವೀಕ್ಷಿಸಲು ಸುಮಾರು 500 ಜನರು ಬಂದರು ಎಂದು ಭಾವಿಸಿದರು. ಈಗ, ಅವರನ್ನು 'ಫಿಲಡೆಲ್ಫಿಯಾ ಚಿಕನ್ ಮ್ಯಾನ್' ಎಂದೂ ಕರೆಯಲಾಗುತ್ತದೆ.

30 ನಿಮಿಷದಲ್ಲಿ 21 ಪ್ಲೇಟ್ ಕುಲ್ಚಾ ತಿಂದು ಬುಲೆಟ್ ಬೈಕ್ ಗೆದ್ದೇ ಬಿಟ್ಟ !

ವಿಚಿತ್ರವೆಂದರೆ ಟೊಮಿನ್ಸ್ಕಿ ಒಂದು ದಿನದಲ್ಲಿ ಚಿಕನ್ ಬಿಟ್ಟು ಮತ್ತೇನನ್ನೂ ತಿನ್ನುತ್ತಿರಲ್ಲಿಲ್ಲ. ಹೀಗಾಗಿ ಫುಡ್ ಚಾಲೆಂಜ್ ಸ್ವೀಕರಿಸಿರುವ 40 ದಿನದಲ್ಲಿ ಆತ ಸುಮಾರು 16 ಪೌಂಡ್‌ಗಳನ್ನು ಕಳೆದುಕೊಂಡಿರುವುದು ತಿಳಿದುಬಂದಿದೆ. ಈ ಥರ ಜನರು ಫುಡ್ ಚಾಲೆಂಜ್ ಮಾಡಿರೋದು ಇದು ಮೊದಲ ಬಾರಿಯಲ್ಲ. ಈ ಹಿಂದೆ