30 ನಿಮಿಷದಲ್ಲಿ 21 ಪ್ಲೇಟ್ ಕುಲ್ಚಾ ತಿಂದು ಬುಲೆಟ್ ಬೈಕ್ ಗೆದ್ದೇ ಬಿಟ್ಟ !

ಆಹಾರ ಸೇವಿಸಿ ಬಹುಮಾನಗಳನ್ನು ಗೆಲ್ಲುವ ಹಲವು ಫುಡ್ ಚಾಲೆಂಜ್‌ಗಳು ಆಗಾಗ ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಬ್ಬ ಬರೋಬ್ಬರಿ 21 ಪ್ಲೇಟ್ ಕುಲ್ಚಾವನ್ನು ಮೂವತ್ತೇ ನಿಮಿಷದಲ್ಲಿ ತಿಂದು ಬುಲೆಟ್ ಬೈಕ್ ಗೆದ್ದಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Man Eats 21 Plates Of Chole Kulche In 30 Minutes Vin

ನಿರ್ದಿಷ್ಟ ಸಮಯದೊಳಗೆ ಬೃಹತ್ ಪ್ರಮಾಣದ ಆಹಾರವನ್ನು ಸೇವಿಸಿದರೆ ಬಳಿಕ ಎಲ್ಲವನ್ನೂ ಉಚಿತವಾಗಿ ಪಡೆಯುವ ಹಲವು ಫುಡ್ ಚಾಲೆಂಚ್‌ ಬಗ್ಗೆ ಕೇಳಿರಬಹುದು. ದೆಹಲಿಯ ಹಲವಾರು ಸ್ಥಳಗಳಲ್ಲಿ ಇಂಥಾ ಆಹಾರ ಚಾಲೆಂಜ್‌ಗಳು ನಡೆಯುತ್ತವೆ. ಸ್ಪರ್ಧೆಯಲ್ಲಿ ಫ್ರೀ ಮೀಲ್ಸ್ ಅಥವಾ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ. ಅದೇ ರೀತಿ ರಜನೀಶ್ ಗ್ಯಾನಿ ಎಂಬ ವ್ಯಕ್ತಿ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು 'ಆರ್ ಯು ಹಂಗ್ರಿ' ಯಲ್ಲಿ ತಾನು ಚಾಲೆಂಜ್‌ನಲ್ಲಿ ಭಾಗವಹಿಸುವ ವೀಡಿಯೋ ಶೇರ್ ಮಾಡಿದ್ದಾನೆ. ಅಲ್ಲಿ ಅವನು ಈ ಎಲ್ಲಾ ಸವಾಲುಗಳನ್ನು ಸ್ವೀಕರಿಸುತ್ತಾನೆ ಮತ್ತು ಜನರು ಕುಲ್ಚಾ ತಿನ್ನಬಹುದು ಮತ್ತು ಹಣವನ್ನು ಗೆಲ್ಲಬಹುದು ಎಂದು ತೋರಿಸುತ್ತಾನೆ. 

ಫುಡ್‌ ಚಾಲೆಂಜ್ ಗೆದ್ರೆ ಬುಲೆಟ್ ಬೈಕ್ ಬಹುಮಾನ
ಆಹಾರ ಬ್ಲಾಗರ್ (Food Blogger) ದೆಹಲಿಯ ಚೋಲೆ ಕುಲ್ಚಾ ರೆಸ್ಟೋರೆಂಟ್‌ನಲ್ಲಿ ಆಹಾರದ ಸವಾಲನ್ನು ಸ್ವೀಕರಿಸುತ್ತಾನೆ. ಅಲ್ಲಿ ಅವರು ತಮ್ಮ ಜನಪ್ರಿಯ ಆಹಾರದ ಸವಾಲನ್ನು ಗೆದ್ದಿದ್ದಕ್ಕಾಗಿ ಬಹುಮಾನದ (Prize) ಹಣವನ್ನು ನೀಡುತ್ತಾರೆ. ಈ ಫುಡ್ ಚಾಲೆಂಜ್‌ ಪ್ರಕಾರ ಒಬ್ಬ ವ್ಯಕ್ತಿಯು ಅರ್ಧ ಗಂಟೆಯೊಳಗೆ 21 ಪ್ಲೇಟ್ ಮಟರ್ ಕುಲ್ಚೆಯನ್ನು ತಿನ್ನಬೇಕು. ನೀವು ಸವಾಲನ್ನು ಪೂರ್ಣಗೊಳಿಸಿದರೆ, ರೆಸ್ಟೋರೆಂಟ್ ನಿಮಗೆ ರೂ 50,000 ನಗದು ನೀಡುತ್ತದೆ, ಆದರೆ ನೀವು ಗೆಲ್ಲಲು ವಿಫಲವಾದರೆ, ನೀವು ರೂ 2,100 ಬಿಲ್ ಪಾವತಿಸಬೇಕಾಗುತ್ತದೆ. 

ಅಪ್ಪನಿಗೆ ದೋಸೆ ಸರ್ವ್‌ ಮಾಡಿದ ಮಗು, ದೋಸೆ ಮಗುಚಿ ಹಾಕಿದ ರೀತಿಗೆ ನೆಟ್ಟಿಗರು ಫಿದಾ

ಈಗ, ಅವರು ಹೊಸ ಸವಾಲನ್ನು (Challenge) ಮುಂದಿಟ್ಟಿದ್ದಾರೆ, ಅಲ್ಲಿ ನೀವು ನಗದು ಬದಲಿಗೆ ಹೊಚ್ಚ ಹೊಸ ಬುಲೆಟ್ ಬೈಕ್ ಅನ್ನು ಗೆಲ್ಲಬಹುದು, ಇದು ಸುಮಾರು 1.48 ಲಕ್ಷ ರೂ. ಬೆಲೆಬಾಳುವದ್ದಾಗಿದೆ. ಫುಡ್ ಬ್ಲಾಗರ್ ಎರಡು ದಿನಗಳ ಕಾಲ ಊಟ ಮಾಡದೆ ಮತ್ತೆ ತಮ್ಮ ಹೊಸ ಸವಾಲನ್ನು ಪ್ರಯತ್ನಿಸಲು ಅದೇ ಸ್ಥಳಕ್ಕೆ ಹೋದರು. ಅವರು ಸವಾಲನ್ನು ಸ್ವೀಕರಿಸುವುದನ್ನು ಮತ್ತು ಚೋಲೆ ಕುಲ್ಚಾಗಳನ್ನು ಅವಸರದಲ್ಲಿ ತಿನ್ನುವುದನ್ನು ವೀಡಿಯೋದಲ್ಲಿ ನೋಡಬಹುದು. ರಜನೀಶ್ ಗ್ಯಾನಿ ಕುಲ್ಚಾ ತಿನ್ನೋ ಫೋಟೋ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ಸಖತ್‌ ವೈರಲ್ ಆಗಿದೆ. 12 ಮಿಲಿಯನ್‌ಗೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.

30 ನಿಮಿಷದಲ್ಲಿ 21 ಪ್ಲೇಟ್ ಕುಲ್ಚಾ ತಿಂದ !
ವೀಡಿಯೋದಲ್ಲಿ ರಜನೀಶ್‌ 6-7 ಗ್ಲಾಸ್ ಲಸ್ಸಿಯ ಜೊತೆಗೆ ಕುಲ್ಚಾವನ್ನು ಸವಿಯುವುದನ್ನು ನಾವು ನೋಡಬಹುದು. ಅನೇಕ ಬಾರಿ ಅವರು ತಿನ್ನಲು ಸಾಧ್ಯವಾಗದೆ ಸೋಲನ್ನು ಸಮೀಪಿಸುವುದನ್ನು ವೀಡಿಯೋದಲ್ಲಿ ನಾವು ಗಮನಿಸಬಹುದು. ಆದರೆ ಕೊನೆಯಲ್ಲಿ, ಅವರು ಎಲ್ಲಾ 21 ಪ್ಲೇಟ್‌ ಕುಲ್ಚಾಗಳನ್ನು ತಿನ್ನುವಲ್ಲಿ ಯಶಸ್ವಿಯಾದರು. ತಿಂದಾದ ಬಳಿಕ ರಜನೀಶ್‌ ಆಹಾರವನ್ನು ಜೀರ್ಣಿಸಿಕೊಳ್ಳಲು ವ್ಯಾಯಾಮ (Exercise) ಮಾಡುವುದನ್ನು ಸಹ ನೋಡಬಹುದು. ಆ ಬಳಿಕ ಹೊಟೇಲ್‌ ಮಾಲೀಕ ವ್ಯಕ್ತಿಯನ್ನು ಬುಲೆಟ್ ಶೋರೂಂಗೆ ಕರೆದುಕೊಂಡು ಹೋಗಿ ಬೈಕ್ ಕೊಡಿಸುವುದನ್ನು ಸಹ ವೀಡಿಯೋದಲ್ಲಿ ನೋಡಬಹುದು. 

ಗೋಬಿಯಲ್ಲಿ ಚಿಕನ್ ಪೀಸ್: ಸ್ವಿಗ್ವಿ ವಿರುದ್ಧ ಆಕ್ರೋಶ ಹೊರ ಹಾಕಿದ ಸಂಗೀತಗಾರ

ಬುಲೆಟ್ ಬೈಕ್‌ಗಳನ್ನು ಎಲ್ಲರಿಗೂ ವಿತರಿಸಲು ಸಾಧ್ಯವಾಗದ್ದಕ್ಕೆ ಬ್ಲಾಗರ್ ಬೇಸರ ವ್ಯಕ್ತಪಡಿಸುತ್ತಾನೆ. ಆದ್ದರಿಂದ, ಅವನು ಬೈಕ್‌ನ ಕೀಗಳನ್ನು ಮಾಲೀಕರಿಗೆ ಹಿಂತಿರುಗಿಸುತ್ತಾನೆ ಮತ್ತು ಅವನ ಚಂದಾದಾರರಲ್ಲಿ ಒಬ್ಬರು ಬಂದು ಈ ಸವಾಲನ್ನು ಗೆದ್ದರೆ, ಅವರು ಬೈಕನ್ನು ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಇದು ಮಾಲೀಕರಿಗೆ ತುಂಬಾ ಸಂತೋಷವನ್ನುಂಟುಮಾಡುತ್ತದೆ, ಅವರು ಬ್ಲಾಗರ್‌ಗೆ ಧನ್ಯವಾದ ಹೇಳುತ್ತಾರೆ. ವೀಡಿಯೊದಲ್ಲಿ ಕಂಡುಬರುವ ಚೋಲೆ ಕುಲ್ಚಾ ಸ್ಥಳವನ್ನು ಹರಿ ಓಂ ಕೆ ಎಸ್ಪಿಎಲ್ ಚೋಲೆ ಕುಲ್ಚೆ ಎಂದು ಕರೆಯಲಾಗುತ್ತದೆ ಮತ್ತು ಇದು ದೆಹಲಿಯ ಮಯೂರ್ ವಿಹಾರ್ ಹಂತ-1 ಪ್ರದೇಶದಲ್ಲಿದೆ. ಆಹಾರ ಪ್ರಿಯರು ಈ ಫುಡ್ ಚಾಲೆಂಜ್‌ ಸ್ವೀಕರಿಸಿ ಬುಲೆಟ್ ಬೈಕ್ ಗೆಲ್ಲಬಹುದು. 

Latest Videos
Follow Us:
Download App:
  • android
  • ios