ನೂರು, ಇನ್ನೂರಲ್ಲ, ಬರೋಬ್ಬರಿ 19 ಲಕ್ಷ ರೂ. ಬೆಲೆ ಬಾಳುವ ಬರ್ಗರ್ ಇದು..!
ಬರ್ಗರ್‌ಗೆ (Burger) ನೀವು ಪಾವತಿಸಲು ಸಿದ್ಧರಿರುವ ಗರಿಷ್ಠ ಬೆಲೆ ಎಷ್ಟು? 100. 200 ಬೇಡ ಹೆಚ್ಚೆಂದ್ರೆ 500 ರೂ. ಆಗಿರ್ಬೋದು ಅಲ್ವಾ ? ಆದ್ರೆ ಇಲ್ಲಿ ಸಿಗೋ ಸ್ಪೆಷಲ್ ಬರ್ಗರ್ ಬೆಲೆ ಅಷ್ಟೇನಲ್ಲ. ಬರೋಬ್ಬರಿ 19 ಲಕ್ಷ ರೂ. ಇಷ್ಟಕ್ಕೂ ಆ ಬರ್ಗರ್ ಸ್ಪೆಷಾಲಿಟಿ (Speciality) ಏನು ತಿಳ್ಕೊಳ್ಳೋಣ.
ಇತ್ತಿಚಿನ ದಿನಗಳಲ್ಲಿ ಪಿಜ್ಜಾ, ಬರ್ಗರ್ (Burger), ಸ್ಯಾಂಡ್‌ವಿಚ್ (Sandwich) ಇಂಥವುಗಳನ್ನೇ ಇಷ್ಟಪಟ್ಟು ತಿನ್ನುವವರು ಹೆಚ್ಚು. ಸ್ಟ್ರೀಟ್ ಸೈಡ್ 100 ರೂ.ಗೆ ದೊರಕುವ ಬರ್ಗರ್ ಬೆಲೆ ಮಾಲ್‌ಗಳಲ್ಲಿ 300 ರೂ. ವರೆಗೂ ತಲುಪುತ್ತದೆ. ಹಲವು ತರಕಾರಿಗಳ ಮಿಶ್ರಣ, ಚೀಸ್ ಸೇರಿಸಿರುವ ಬರ್ಗರ್ ತಿನ್ನಲು ರುಚಿಯಾಗಿರುವ ಕಾರಣ ಹಲವರು ಬೆಲೆ ಹೆಚ್ಚಾದರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆಲೂ ಬರ್ಗರ್, ಎಗ್ ಬರ್ಗರ್, ಚಿಕನ್ ಬರ್ಗರ್ ಹೀಗೆ ಇಷ್ಟವಾದುದನ್ನು ಆಯ್ಕೆ ಮಾಡಿ ತಿನ್ನುತ್ತಾರೆ. ಬರ್ಗರ್‌ಗಳಲ್ಲಿ ಸಾದಾ ಬರ್ಗರ್‌ನಿಂದ ತೊಡಗಿ ಬೆಲೆಬಾಳುವ (Costly) ಬರ್ಗರ್‌ಗಳು ಸಹ ಲಭ್ಯವಿರುತ್ತವೆ.
ನೀವು ಈ ಹಿಂದೆ ಕೊಲಂಬಿಯಾದ ಚಿನ್ನದ ಲೇಪಿತ ಬರ್ಗರ್ ಬಗ್ಗೆ ಕೇಳಿರಬಹುದು. ಇದನ್ನು ವಿಶ್ವದ ಅತ್ಯಂತ ಕಾಸ್ಟ್ಲೀ ಬರ್ಗರ್ ಎಂದು ಪರಿಗಣಿಸಲಾಗಿತ್ತು. ಒಂದು ಬರ್ಗರ್ ಬೆಲೆ ಬರೋಬ್ಬರಿ 4191 ರೂ. ಆಗಿತ್ತು. ಆದರೆ ಇದೇ ಕಾಸ್ಟ್ಲೀ ಬರ್ಗರ್ ಎಂದುಕೊಂಡ ನಮ್ಮ ನಿರ್ಧಾರ ತಪ್ಪಾಗಿದೆ. ಇಲ್ಲೊಂದು ಕಡೆ ಬರೋಬ್ಬರಿ 19 ಲಕ್ಷ ರೂ. ಬೆಲೆಬಾಳುವ ಬರ್ಗರ್ ತಯಾರಾಗಿದೆ.
3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್ ಬರ್ಗರ್ 6 ನಿಮಿಷದಲ್ಲಿ ಸವಿಯಲು ಸಿದ್ಧ!
ಅಟ್ಲಾಂಟಾ ಬ್ರೇವ್ಸ್ ಎಂಬ ಅಮೇರಿಕಾ ಮೂಲದ ಬೇಸ್‌ಬಾಲ್ ತಂಡವು ಹೊಸ ಸೀಮಿತ ಆವೃತ್ತಿಯ ಬರ್ಗರ್ ಅನ್ನು ಬಹಿರಂಗಪಡಿಸಿದೆ, ಇದರ ಬೆಲೆ ಅಂದಾಜು 19 ಲಕ್ಷ ರೂ. ಸೂಪರ್ ದುಬಾರಿ ಬರ್ಗರ್ ಅನ್ನು 'ವಿಶ್ವ ಚಾಂಪಿಯನ್ಸ್ ಬರ್ಗರ್' ಎಂದು ಕರೆಯಲಾಗುತ್ತದೆ. ಸದ್ಯ ಈ ಅತ್ಯಂತ ದುಬಾರಿ ಬರ್ಗರ್ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಕಾಸ್ಟ್ಲೀ ಬರ್ಗರ್ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಫಾಕ್ಸ್ ನ್ಯೂಸ್‌ನ ಸುದ್ದಿ ವರದಿಯ ಪ್ರಕಾರ, ಈ ದುಬಾರಿ ಬರ್ಗರ್ ಅನ್ನು ಅರ್ಧ ಪೌಂಡ್ ಪ್ರಮಾಣದ ವಿಶೇಷ ಮಾಂಸವನ್ನು ಬಳಸಿ ತಯಾರಿಸಲಾಗಿದೆ. ಫ್ರೈಡ್ ಮೊಟ್ಟೆಗಳು, ಟೊಮೆಟೊ, ಚೀಸ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗಿದೆ. ಕ್ಲಬ್ ಸ್ಥಾಪನೆಯಾದ 151 ವರ್ಷಗಳ ಸ್ಮರಣಾರ್ಥವಾಗಿ ಇದನ್ನು ತಯಾರಿಸಲಾಗಿದೆ. ಕಾಸ್ಟ್ಲೀ ಬರ್ಗರ್ ಆಗಿರುವ ಕಾರಣ ಇದನ್ನು ಕೇವಲ ಸೀಮಿತ ಪ್ರಮಾಣದಲ್ಲಿ ತಯಾರಿಸಲಾಗಿದೆ. ವರದಿಗಳ ಪ್ರಕಾರ, ನೀವು ಈ ಸೀಮಿತ ಪ್ರಮಾಣದಲ್ಲಿ ಲಭ್ಯವಾಗುವ ಬರ್ಗರ್‌ನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದಾದರೆ, ಅದರಂತೆಯೇ ಇರುವ ಪ್ರತಿರೂಪದ ಬರ್ಗರ್‌ನ್ನು ಖರೀದಿಸಬಹುದು. ಇದರ ಬೆಲೆ ಮೂಲ ಬರ್ಗರ್‌ಗಿಂತ ತುಂಬಾ ಕಡಿಮೆಯೂ ಆಗಿದೆ. 19 ಲಕ್ಷ ರೂ. ಬೆಲೆಬಾಳುವ ಬರ್ಗರ್‌ನ ಪ್ರತಿರೂಪಕ್ಕೆ 11,000 ವೆಚ್ಚವಾಗುತ್ತದೆ.
ಆರ್ಡರ್ ಕೊಟ್ಟು ಗಂಟೆಗಟ್ಟಲೆ ಕಾಯ್ಬೇಕಿಲ್ಲ..! ಕೆಲವೇ ನಿಮಿಷಗಳಲ್ಲಿ ಬರ್ಗರ್ ತಯಾರಿಸುತ್ತೆ ರೊಬೋಟ್..!
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಬೆಚ್ಚಿಬಿದ್ದಿದ್ದು, ಬರ್ಗರ್‌ನ ಬೆಲೆ ತಿಳಿದು ದಂಗಾಗುತ್ತಿದ್ದಾರೆ. ಬರ್ಗರ್ ನಿಜವಾಗಿಯೂ ಆಕರ್ಷಕವಾಗಿ ಕಾಣುತ್ತದೆ ಎಂದು ಕೆಲವರು ಕಮೆಂಟಿಸಿದ್ದು, ಇನ್ನು ಕೆಲವರು ಇಂಥಹಾ ದುಬಾರಿ ಬರ್ಗರ್ ಅನ್ನು ಯಾರೂ ಖರೀದಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಇಸ್ರೇಲಿ ಫುಡ್‌ಟೆಕ್ ಸಂಸ್ಥೆ ಸ್ಯಾವೋರ್ ಈಟ್ (SavorEat) ಗ್ರಾಹಕರಿಗೆ ವೈಯಕ್ತೀಕರಿಸಿದ ಸಸ್ಯ ಆಧಾರಿತ ಬರ್ಗರ್ (Plant-based Burger) ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ಇದು ಆಹಾರವನ್ನು ಬೇಯಿಸಲು 3D ಮುದ್ರಣ ತಂತ್ರಜ್ಞಾನವನ್ನು ಬಳಸಿದ ಮೊದಲ ಕಂಪನಿಗಳಲ್ಲಿ ಒಂದಾಗಿತ್ತು. ಸಾಮಾನ್ಯವಾಗಿ ಇಂಪಾಸಿಬಲ್ ಫುಡ್ಸ್ ಮತ್ತು ಬಿಯಾಂಡ್ ಮೀಟ್‌ನಂತಹ ಕಂಪನಿಗಳ ಸಸ್ಯಾಹಾರಿ ಬರ್ಗರ್‌ಗಳನ್ನು ಫ್ರೀಜ್ ಮಾಡಲಾಗುತ್ತದೆ ಮತ್ತು ನಂತರ ಗ್ರಿಲ್‌ನಲ್ಲಿ ಬೇಯಿಸಲಾಗುತ್ತಿತ್ತು.