Asianet Suvarna News Asianet Suvarna News

3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್‌ ಬರ್ಗರ್‌ 6 ನಿಮಿಷದಲ್ಲಿ ಸವಿಯಲು ಸಿದ್ಧ!

ಇಸ್ರೇಲಿ ಫುಡ್‌ಟೆಕ್ ಸಂಸ್ಥೆ ಸ್ಯಾವೋರ್‌ ಈಟ್ (SavorEat) ಮಂಗಳವಾರ ಗ್ರಾಹಕರಿಗೆ ವೈಯಕ್ತೀಕರಿಸಿದ ಸಸ್ಯ ಆಧಾರಿತ ಬರ್ಗರ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ಆಹಾರವನ್ನು ಬೇಯಿಸಲು 3D ಮುದ್ರಣ ತಂತ್ರಜ್ಞಾನವನ್ನು ಬಳಸಿದ ಮೊದಲ ಕಂಪನಿಗಳಲ್ಲಿ ಒಂದಾಗಿದೆ.

Israel SavorEat launches personalised plant based 3D printed burgers mnj
Author
Bengaluru, First Published Dec 29, 2021, 11:43 AM IST
  • Facebook
  • Twitter
  • Whatsapp

Tech Desk: ಪಿಝ್ಝಾ, ಬರ್ಗರ್ (Pizza-Burger) ಜಂಕ್‌ಫುಡ್ ಪ್ರಿಯರ ಫೇವರಿಟ್. ಫೂಡಿಗಳು ರೆಸ್ಟೋರೆಂಟ್‌ಗಳಿಗೆ ಪಿಝ್ಝಾ, ಬರ್ಗರ್ ಸವಿಯಲು ಹೋದಾಗ ಅವುಗಳನ್ನು  ಕಸ್ಟಮೈಸ್‌ (Customised) ಮಾಡಲು ಸಾಕಷ್ಟು ಆಯ್ಕೆಗಳಿರುತ್ತವೆ. ಜನರು  ಕಸ್ಟಮೈಸ್‌ ಮಾಡಿದ ಮಾದರಿಯಲ್ಲೇ ಶೆಫ್‌ ಜಂಕ್‌ಫುಡ್ ರೆಡಿ ಮಾಡಿಕೊಡುತ್ತಾರೆ. ಆದರೆ ಪ್ರಿಂಟ್‌ ಮಾಡಿ ತಿನ್ನುವ ಬರ್ಗರ್‌ ಬಗ್ಗೆ ಯಾವತ್ತಾದ್ರೂ ಕೇಳಿದ್ದೀರಾ? ಯಸ್‌ ಇಂಥಹದ್ದೊಂದು ಕಸ್ಟಮೈಸಡ್ ಪ್ರಿಂಟೆಡ್‌ ಬರ್ಗರ್‌ ಇಸ್ರೇನಲ್ಲಿ ಸವಿಯಲು ಸಿದ್ಧವಾಗಿದೆ.

ಇಸ್ರೇಲಿ ಫುಡ್‌ಟೆಕ್ ಸಂಸ್ಥೆ ಸ್ಯಾವೋರ್‌ ಈಟ್ (SavorEat) ಮಂಗಳವಾರ ಗ್ರಾಹಕರಿಗೆ ವೈಯಕ್ತೀಕರಿಸಿದ ಸಸ್ಯ ಆಧಾರಿತ ಬರ್ಗರ್ (Plant-based Burger) ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ಆಹಾರವನ್ನು ಬೇಯಿಸಲು 3D ಮುದ್ರಣ ತಂತ್ರಜ್ಞಾನವನ್ನು ಬಳಸಿದ ಮೊದಲ ಕಂಪನಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಇಂಪಾಸಿಬಲ್ ಫುಡ್ಸ್ ಮತ್ತು ಬಿಯಾಂಡ್ ಮೀಟ್‌ನಂತಹ ಕಂಪನಿಗಳ ಸಸ್ಯಾಹಾರಿ ಬರ್ಗರ್‌ಗಳನ್ನು ಫ್ರೀಜ್ ಮಾಡಲಾಗುತ್ತದೆ ಮತ್ತು ನಂತರ ಗ್ರಿಲ್‌ನಲ್ಲಿ ಬೇಯಿಸಲಾಗುತ್ತದೆ.

ಎಷ್ಟು ಕೊಬ್ಬು ಮತ್ತು ಪ್ರೋಟೀನ್ ಬೇಕು ಎಂಬ ಆಯ್ಕೆ ಸುಲಭ!

ಆದರೆ SavorEatನ ತಂತ್ರಜ್ಞಾನದಿಂದ ತೈಲಗಳು ಮತ್ತು ಇತರ ಪದಾರ್ಥಗಳನ್ನು ಹೊಂದಿರುವ ಮೂರು ಕಾರ್ಟ್ರಿಜ್ಗಳೊಂದಿಗೆ  ಅದರಲ್ಲಿರುವ 3D ಪ್ರಿಂಟರ್ ಮೂಲಕ ಬರ್ಗರ್ ತಯಾರಿಸಲಾಗುತ್ತದೆ. ಗ್ರಾಹಕರು ಪ್ರತಿ ಬರ್ಗರ್‌ನಲ್ಲಿ ಎಷ್ಟು ಕೊಬ್ಬು ಮತ್ತು ಪ್ರೋಟೀನ್ ( Fat and Protein) ಬೇಕು ಎಂದು ಆಯ್ಕೆ ಮಾಡಬಹುದು, ಇದು ತಯಾರಾಗಲು ಸುಮಾರು ಆರು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಕಡಲೆ ಮತ್ತು ಬಟಾಣಿ ಪ್ರೋಟೀನ್‌ಗಳ ಸಂಯೋಜನೆ!

"ಇದು ಮಾಂಸಕ್ಕೆ ಪರ್ಯಾಯ ತಿಂಡಿ ಮತ್ತು ಡಿಜಿಟಲ್ ತಯಾರಿಕೆಯ ವೈಶಿಷ್ಟ್ಯಗಳ ಮಿಶ್ರಣವಾಗಿದೆ. ಸಂಸ್ಥೆಯ ಬರ್ಗರ್‌ಗಳನ್ನು ಆಲೂಗಡ್ಡೆ ಮತ್ತು ಕಡಲೆ ಮತ್ತು ಬಟಾಣಿ ಪ್ರೋಟೀನ್‌ಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ.ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಮತ್ತು ಪರಿಸರದ ಕಾಳಜಿ ಬೆನ್ನಲ್ಲೇ ಗ್ರಾಹಕರಲ್ಲಿ ಮಾಂಸದ ಉತ್ಪನ್ನಗಳಿಗೆ ಪರ್ಯಾಯಗಳ (Meat Alternatives)  ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಪರ್ಯಾಯ ಪ್ರೋಟೀನ್ ಸ್ಟಾರ್ಟ್‌ಅಪ್‌ಗಳು 2020 ರಲ್ಲಿ $ 3 ಶತಕೋಟಿಗಿಂತ ಹೆಚ್ಚು ಸಂಗ್ರಹಿಸಿವೆ" ಎಂದು SavorEatನ ಮುಖ್ಯ ಕಾರ್ಯನಿರ್ವಾಹಕ ರಾಚೆಲಿ ವಿಜ್ಮನ್ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 

 

 

ಮಾಂಸದ ಪರ್ಯಾಯಕ್ಕೆ ಹೆಚ್ಚಿದ ಬೇಡಿಕೆ!

SavorEat, ಮುಖ್ಯವಾಗಿ ಇಸ್ರೇಲಿ ಸಂಸ್ಥೆಗಳಿಂದ ಧನಸಹಾಯ ಪಡೆದಿದೆ ಮತ್ತು ಮಂಗಳವಾರ ಟೆಲ್ ಅವಿವ್-ಪಟ್ಟಿಮಾಡಿದ ಷೇರುಗಳಲ್ಲಿ 11% ರಷ್ಟು ಏರಿಕೆ ಕಂಡಿದೆ, ಅದರ ಉತ್ಪನ್ನಗಳನ್ನು ಆರಂಭದಲ್ಲಿ ಸ್ಥಳೀಯವಾಗಿ  ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯು ಇಸ್ರೇಲಿ ಹೈಟೆಕ್ ಕಂಪನಿಗಳಿಗೆ ಸರಬರಾಜು ಮಾಡುವ ಆಹಾರ ಸೇವಾ ಸಂಸ್ಥೆಯಾದ ಯಾರ್‌ಜಿನ್ ಸೆಲಾ ಜೊತೆಗೆ ಸಹಕರಿಸುತ್ತಿದೆ ಮತ್ತು ಯುಎಸ್ ವಿಶ್ವವಿದ್ಯಾನಿಲಯಗಳಿಗೆ ತನ್ನ ಸಸ್ಯಾಹಾರಿ ಬರ್ಗರ್‌ಗಳನ್ನು ಪೂರೈಸಲು ಸೊಡೆಕ್ಸೊ (Sodexo) ಜೊತೆ ಒಪ್ಪಂದ ಮಾಡಿಕೊಂಡಿದೆ.

"ಫ್ಲೆಕ್ಸಿಟೇರಿಯನ್' ಎಂದು ಕರೆಯಲ್ಪಡುವ ಯುಎಸ್ ಜನಸಂಖ್ಯೆಯ ಮೂರನೇ ಒಂದರಷ್ಟು ಜನರು ತಮ್ಮ ಮಾಂಸದ ಸೇವನೆಯನ್ನು ಕಡಿಮೆ ಮಾಡಲು ಮಾಂಸದ ಪರ್ಯಾಯಗಳನ್ನು ಹುಡುಕಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ" ಎಂದು ವಿಜ್ಮನ್ (Vizman) ತಿಳಿಸಿದೆ.  SavorEat ನ ಅಧ್ಯಕ್ಷ ಮತ್ತು ಮುಖ್ಯ ವಿಜ್ಞಾನಿ ಓಡೆಡ್ ಶೋಸೆಯೋವ್, ಸಂಸ್ಥೆಯು US ಮಾರುಕಟ್ಟೆಗಾಗಿ ಹಂದಿಮಾಂಸ ( Pork Breakfast) ಉಪಹಾರಕ್ಕೆ ಪರ್ಯಾಯವಾಗಿ ಸಸ್ಯ ಆಧಾರಿತ ಉಪಹಾರದ ಮೇಲೆ ಸಹ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

1) Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!

2) Lickable TV Srceen: ಇನ್ನು ಮುಂದೆ ಟಿವಿ ನೋಡೋದಷ್ಟೇ ಅಲ್ಲ ಸ್ಕ್ರೀನ್ ಮೇಲೆ ರುಚಿ ಕೂಡ ಆಸ್ವಾದಿಸಬಹುದು!

3) Whatsapp New Feature: ವಾಟ್ಸಾಪ್‌ ಹೊಸ ಫೀಚರ್ಸ್ ಮೂಲಕ ಹತ್ತಿರದ ಹೊಟೇಲ್, ದಿನಸಿ, ಬಟ್ಟೆ ಅಂಗಡಿ ಹುಡುಕಿ!

Follow Us:
Download App:
  • android
  • ios