ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ
ಇನ್ನೇನು ಬೇಸಿಗೆ ಶುರುವಾಗ್ತಿದೆ. ಬಾಯಾರಿಕೆ ಹೆಚ್ಚು. ಈ ಟೈಮ್ ನಲ್ಲಿ ದೇಹ ಡೀ ಹೈಟ್ರೇಟ್ ಆಗೋದೂ ಜಾಸ್ತಿ. ಈ ಸ್ಮೂಧಿ ಮತ್ತೂ ಸೂಪ್ ಗಳು ನಿಮ್ಮ ದೇಹವನ್ನು ತಂಪಾಗಿಡಬಲ್ಲವು.
ಫಾರಿನ್ನಲ್ಲಿ ಒಬ್ಬ ಹುಡುಗ ಇದ್ದ. ಅವನಿಗೆ ಸಿಕ್ಕಾಪಟ್ಟೆ ಜ್ಯೂಸ್ ಕುಡಿಯೋ ಆಸೆ. ಚಿಕ್ಕ ವಯಸ್ಸಿಂದಲೂ ಆಸೆಪಟ್ಟು ಜ್ಯೂಸ್ ಕುಡಿಯಲು ಹೋಗುತ್ತಿದ್ದ. ಆದರೆ ಅದನ್ನು ಕುಡಿದ ಕೂಡಲೇ ಅಲರ್ಜಿ ಆಗಿ ವಾರಗಟ್ಟಲೆ ಒದ್ದಾಡುವ ಹಾಗಾಗ್ತಿತ್ತು. ಆದರೆ ಜ್ಯೂಸ್ ಮೇಲಿನ ಆಸೆ ಅವನನ್ನು ಬಿಟ್ಟು ಹೋಗುತ್ತಿರಲಿಲ್ಲ. ಇಂಥಾ ಟೈಮ್ ನಲ್ಲಿ ಆತ ತಾನೇ ಕೂತು ತಯಾರಿಸಿದ್ದು ಸ್ಮೂದಿ ಅನ್ನೋ ಅದ್ಭುತ ಬೇವರೆಜ್. ವಿದೇಶಗಳಲ್ಲೆಲ್ಲ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಅಲರ್ಜಿ ಇತ್ಯಾದಿಗಳಾಗುವ ಸಾಧ್ಯತೆ ಇರಲ್ಲ. ಅದ್ಭುತ ಟೇಸ್ಟ್ ಇರುತ್ತೆ. ಮಾಡೋದು ಬಹಳ ಸುಲಭ. ನಾನು ಹಣ್ಣು ತಿನ್ನಲ್ಲ. ತರಕಾರಿ ತಿನ್ನಲ್ಲ ಅನ್ನುವ ಮಕ್ಕಳಿಗೆ ಮನೆಯಲ್ಲಿ ಸುಲಭವಾಗಿ ಇಂಥದ್ದನ್ನು ಮಾಡಿಕೊಡಬಹುದು.
ಈ ದೇಸಿ ರೆಸಿಪಿ ಟ್ರೈ ಮಾಡಿ, ಸಖತ್ ರುಚಿ, ದೇಹಕ್ಕೂ ಒಳ್ಳೆಯದು
ಸಪೋಟ, ಸ್ಟ್ರಾಬೆರಿ ಸ್ಮೂಧಿ
ಸಪೋಟ ಹಣ್ಣುಗಳ ಸೀಸನ್ ಇನ್ನೇನು ಶುರುವಾಗುತ್ತೆ, ಸ್ಟ್ರಾಬೆರಿ ಅದಾಗಲೇ ಮಾರುಕಟ್ಟೆಗೆ ಬಂದಿದೆ. ಹೀಗೆ ಸೀಸನಲ್ ಹಣ್ಣುಗಳ ಸ್ಮೂಧಿ ಮಾಡ್ಕೊಂಡು ಕುಡಿಯೋದನ್ನು ರೂಢಿಸಿಕೊಳ್ಳಿ. ಹಾಗಂತ ಯಾವ್ಯಾವುದೋ ಹಣ್ಣುಗಳನ್ನು ಒಟ್ಟಿಗೆ ಸೇರಿಸಿ ಸ್ಮೂಧಿ ಮಾಡ್ಬೇಡಿ. ಅವರೆಡರ ಮಿಶ್ರಣ ಬಾಯಿಗೆ ರುಚಿ ಕೊಡುತ್ತಾ ಅನ್ನೋದನ್ನೂ ತಿಳ್ಕೊಳ್ಳೋದು ಬಹಳ ಮುಖ್ಯ. ಈ ರೆಸಿಪಿಯಲ್ಲಿ ಸ್ಟ್ರಾಬೆರಿ ಜೊತೆಗೆ ಬಾಳೆಹಣ್ಣು, ಬಾದಾಮಿಯನ್ನು ಹಾಕುವ ಕಾರಣ ಇದು ಹೆಚ್ಚು ಟೇಸ್ಟಿಯಾಗಿರುತ್ತೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತೆ. ನಿದ್ರಾಹೀನತೆ ಇತ್ಯಾದಿ ಸಮಸ್ಯೆ ಇರುವವರು ಇದನ್ನು ಟ್ರೈ ಮಾಡಬಹುದು. ರಾತ್ರಿ ಊಟದ ಬದಲು ಈ ಸ್ಮೂಧಿ ಮಾಡ್ಕೊಂಡು ಕುಡಿದರೆ ಬೊಜ್ಜು ಬರಲ್ಲ. ಒಂದೇ ತಿಂಗಳಲ್ಲಿ ದೇಹದ ತೂಕ ಇಳಿಯುವ ಜೊತೆಗೆ ಮೈಯಲ್ಲಿ ಆರೋಗ್ಯದ ಕಳೆ ನಳನಳಿಸುತ್ತಿರುತ್ತೆ.
ಸಂದರ್ಭ: ಯಾವ ಹೊತ್ತಿಗೂ ಕುಡಿಯಬಹುದಾಗ ಹೆಲ್ದಿ ಬೇವರೆಜ್
ಸಮಯ : ಹತ್ತು ನಿಮಿಷ
ಏನೇನು ಸಾಮಗ್ರಿಗಳು ಬೇಕು?: ಸ್ಟ್ರಾಬೆರಿ ಹಣ್ಣುಗಳು ಸ್ವಲ್ಪ (ಹುಳಿ ಇದ್ದರೆ ಹೆಚ್ಚು ಹಾಕ್ಬೇಡಿ. ), ಸಪೋಟ ಹಣ್ಣು ಮೂರು, ಬಾದಾಮಿ ನಾಲ್ಕು, ಒಂದು ಬಾಳೆಹಣ್ಣು, ಸ್ವಲ್ಪ ಖರ್ಜೂರ ಪೇಸ್ಟ್.
ಮಾಡುವ ವಿಧಾನ ಹೇಗೆ:
- ಹಣ್ಣುಗಳನ್ನು ನೀಟಾಗಿ ತೊಳೆಯಿರಿ. ಫ್ರೆಶ್ ಹಣ್ಣುಗಳೇ ಸ್ಮೂದಿಗೆ ಬೆಸ್ಟ್. ಸರಿಯಾಗಿ ಹಣ್ಣಾದ ಸ್ಟ್ರಾಬೆರಿ, ಸಪೋಟವನ್ನು ತೊಳೆಯಿರಿ.
- ಹಣ್ಣುಗಳನ್ನು ಕಟ್ ಮಾಡಿ.
- ಈಗ ಸಪೋಟ, ಸ್ಟ್ರಾಬೆರಿ ಹಣ್ಣನ್ನು ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಸೇರಿಸಿ.
- ಒಂದು ರೌಂಡ್ ತಿರುಗಿಸಿದ ಮೇಲೆ ಇದನ್ನು ಹೆಚ್ಚಿದ ಬಾಳೆಹಣ್ಣು ಸೇರಿಸಿ.
- ಖರ್ಜೂರದ ಪೇಸ್ಟ್ ಸ್ವಲ್ಪ ಹಾಕಿ.
- ಬಾದಾಮಿ ಚೂರುಗಳನ್ನು ಸೇರಿಸಿ ಒಂದು ರೌಂಡ್ ತಿರುಗಿಸಿ.
- ಇದನ್ನು ಸೋಸಿ ಕುಡಿದರೆ ಸತ್ವ ಹೋಗುತ್ತೆ. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಆಮೇಲೆ ಕುಡಿಯಬಹುದು.
- ಇದಕ್ಕೆ ಬೇಕಿದ್ದವರು ಸಕ್ಕರೆ ಸೇರಿಸಬಹುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ಜೋನಿ ಬೆಲ್ಲ ಹಾಕಿದ್ರೆ ಸಖತ್ ಟೇಸ್ಟಿಯಾಗಿರುತ್ತೆ.
ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು
ಓಟ್ಸ್ ಮತ್ತು ಪಾಲಾಕ್ ನ ಸ್ಮೂಧಿ
ಏನೇನು ಸಾಮಗ್ರಿ ಬೇಕು? : ಪಾಲಕ್ ಸೊಪ್ಪು - ಒಂದು ಕಟ್ಟು, ಓಟ್ಸ್ - ಒಂದು ಕಪ್, ಬಾಳೆಹಣ್ಣು - ಒಂದು, ಸ್ಟ್ರಾಬೆರಿ- ಎರಡು, ಬಾದಾಮಿ ಬೀಜದ ಹಾಲು - ೧/೨ ಕಪ್, ಚಕ್ಕೆ ಪುಡಿ - ೧/೪ ಚಮಚ.
ಮಾಡುವ ವಿಧಾನ ಹೇಗೆ?
- ಬಾದಾಮಿಯನ್ನು ನೆನೆಸಿ ಅದನ್ನು ರುಬ್ಬಿ ಹಾಲು ತೆಗೆದಿಟ್ಟಿರಿ.
- ಪಾಲಾಕ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿ.
- ಇದನ್ನು ಮಿಕ್ಸಿಗೆ ಹಾಕಿ ಒಂದು ರೌಂಡ್ ರುಬ್ಬಬೇಕು.
- ಬಳಿಕೆ ಇದಕ್ಕೆ ಓಟ್ಸ್ ಹಾಕಿ, ಬಾಳೆ ಹಣ್ಣು, ಸ್ಟ್ರಾಬೆರಿ ಸೇರಿಸಿ.
- ಇದಕ್ಕೆ ಬಾದಾಮಿ ಹಾಲು ಸೇರಿಸಿ.
- ನುಣ್ಣಗೆ ರುಬ್ಬಿಕೊಳ್ಳಿ.
- ಇದಕ್ಕೆ ಚಕ್ಕೆ ಪುಡಿ ಹಾಕಿ ಇನ್ನೊಂದು ರೌಂಡ್ ತಿರುಗಿಸಿ.
- ಸ್ವಲ್ಪ ಹೊತ್ತು ಬಿಟ್ಟು ಆಮೇಲೆ ಕುಡಿಯಿರಿ.
- ಆರೋಗ್ಯಕ್ಕೆ ಇದು ಬಹಳ ಉತ್ತಮ. ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನದ ಬದಲಿಗೆ ಇದನ್ನು ಕುಡಿಯಬಹುದು.
- ಇದು ಜೀರ್ಣಕ್ರಿಯೆಗೆ ಒಳ್ಳೆಯದು, ಕಾನ್‌ಸ್ಟಿಪೇಶನ್‌ನಂಥ ಸಮಸ್ಯೆಯನ್ನೂ ನಿವಾರಿಸುತ್ತದೆ.