Asianet Suvarna News Asianet Suvarna News

ಕಾಫಿ addiction ನಿಮಗಿದ್ಯಾ? ಚಟ ಬಿಟ್ಟು ಬಿಡಿ

ಕಾಫಿ (Coffee) ಇಲ್ಲದೆ ದಿನ ಪ್ರಾರಂಭವಾಗದಿರುವ ಈಗಿನ ಕಾಲದಲ್ಲಿ ಕಾಫಿ ಬಿಟ್ಟು ಬದುಕುವುದೇ(Living) ಕಷ್ಟ ಎನ್ನುವವರು ಇದ್ದಾರೆ. ಈಗಿನ ಕಾಲದಲ್ಲಿ ಕಾಫಿ ಬೇಕೆ ಬೇಕು. ಹಲವು ಸಾಧಕ ಬಾಧಕಗಳ ನಡುವೆ ಕಾಫಿ ಬಗ್ಗೆ ಒಂದು ಸಂಶೋಧನೆ(Research) ನಡೆದಿದೆ. ಈ ವರದಿಯಲ್ಲಿ ಸಕ್ಕರೆ ಇಲ್ಲದೆ ಕಾಫಿ(Sugar less Coffee) ಸೇವನೆಯಿಂದ ಬಹುಬೇಗ ಸಾವಿಗೀಡಾಗುವ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Too much of addiction on coffee could bring ill
Author
Bangalore, First Published Jun 2, 2022, 4:50 PM IST

ಬೇಳಗ್ಗೆ(Morning) ಏಳುವಾಗ ಕೆಲವರಿಗೆ ಬೆಡ್ ಕಾಫಿ(Bed coffee) ಬೇಕೇಬೇಕು. ಒಂದು ದಿನ ಕಾಫಿ ಕುಡಿದಿಲ್ಲ ಎಂದರೆ ಸಾಕು ದಿವಿಡೀ ತಲೆನೋವು(Headache) ಹಾಗೂ ಮೂಡ್ ಅಪ್ಸೆಟ್(Mood apcet) ಆಗುತ್ತೆ. ಯಂಗ್ ಜನರೇಷನ್‌ನ(Young Generation) ಬಹುತೇಕ ಮಂದಿ ಕಾಫಿಗೆ ಅಡಿಕ್ಟ್(Addict) ಆಗಿದ್ದಾರೆ. ಕಾಫಿ ಕುಡಿದರೆ ಅದೇನೊ ಒಂಥರಾ ರಿಲಾಕ್ಸ್(Relax) ಆಗುತ್ತೆ ಜೊತೆಗೆ ಅತಿಯಾದ ಒತ್ತಡದಿಂದ(Stress) ಬ್ಲಾಕ್ ಆಗಿದ್ದ ಮೈಂಡ್ ರೀಫ್ರೆಶ್(Mind refresh) ಆಗಿ ಕೆಲಸ ಮಾಡಲಾರಂಭಿಸುತ್ತೆ. ಹೀಗಿರುವಾಗ ಆರೋಗ್ಯದ ಮೇಲೆ ಅದರ ಪ್ರಭಾವ ಬಹಳಷ್ಟಿದೆ. ಅಷ್ಟೇ ಅಲ್ಲ ಇತ್ತೀಚೆಗೆ ಸಂಶೋಧನೆ ನಡೆದಿದ್ದು, ಕಾಫಿ ಕುಡಿಯುವುದರಿಂದ ಆರಂಭಿಕ ಸಾವಿನ ಪ್ರಮಾಣ ನಿಯಂತ್ರಿಸಬಹುದAತೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಾಮೂಲಿ ಕಾಫಿಗಿಂತ ಬ್ಲಾಕ್ ಕಾಫಿ(Black coffee) ಸೇವಿಸುವವರ ಸಂಖ್ಯೆ ಹೆಚ್ಚು. ಇದರಿಂದ ಆರೋಗ್ಯಕ್ಕೆ ಬಹುತೇಕ ಲಾಭಗಳಿವೆ. ಕೆಲವರು ಕಾಫಿ ಕುಡಿಯುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಕಾರಣ ಇದರಲ್ಲಿನ ಕೆಫಿನ್ ಅಂಶ. ಹಾಗೆ ಇತ್ತೀಚೆಗೆ ಸಂಶೋಧನೆಯೊAದು ಕಾಫಿ ಕುರಿತಾಗಿ ನಡೆದಿದೆ. ಇದರ ಪ್ರಕಾರ ಆರಂಭಿಕ ಸಾವಿನ ಪ್ರಮಾಣವನ್ನು(Early death) ನಿಯಂತ್ರಿಸುವ ಶಕ್ಸತಿ ಕಾಫಿಗಿದೆ ಎಂದು. ಇದನ್ನು ಕೇಳಿದಾಗ ಕಾಫಿ ಸೇವಿಸುವವರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೇನೊ. ಈ ಬಗ್ಗೆ ಮಾಹಿತಿ ಇಲ್ಲಿದೆ

ಯುಕೆಯಲ್ಲಿ(UK) ಪ್ರತೀ ದಿನ 98 ಮಿಲಿಯನ್(Million) ಕಪ್ ಕಾಫಿಯನ್ನು ಸೇವಿಸಲಾಗುತ್ತದೆ. ಜೊತೆಗೆ ಕಾಫಿ ಸೇವನೆಯಿಂದ ದೈಹಿಕ(Physical) ಹಾಗೂ ಮಾನಸಿಕವಾಗಿ(Mentally) ವ್ಯಕ್ತಿ ಚೆನ್ನಾಗಿರುತ್ತಾನೆ ಎಂದು ಬ್ರಿಟಿಷ್ ಕಾಫಿ ಅಸೋಸಿಯೇಷನ್(British Coffee association) ಈ ಹಿಂದೆ ಹೇಳಿತ್ತು. ಆದರೆ ಇದೀಗ ಸಂಶೋಧನೆ ನಡೆಸಿರುವ ಚೀನಾ ದೇಶ, ಸಪ್ಪೆ ಅಥವಾ ಸಕ್ಕರೆ(Sugar) ಇರುವ ಕಾಪಿಯನ್ನು ಪ್ರತೀ ದಿನ ಸೇವಿಸುವುದರಿಂದ ಬಹುಬೇಗ ಸಾವೀಗೀಡಾಗುವವರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದೆ. 

ಯುಕೆಯ ಬಯೋ ಬ್ಯಾಂಕ್‌ನಲ್ಲಿ 5,00,000 ಜನರು ಈ ಸಂಶೋಧನೆಗೆ ಭಾಗಿಯಾಗಿದ್ದು, ಜೀವನ ಶೈಲಿ(Lifestyle), ಜೆನೆಟಿಕ್ಸ್(Genetics), ಆರೋಗ್ಯದ(Health) ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಅವರೆಲ್ಲಾ ಹೆಚ್ಚು ಕಾಫಿ ಸೇವಿಸುವವರಾಗಿದ್ದರು. ಅವರಲ್ಲಿ 1,71,೦೦೦ ಜನರಿಂದ ಈ ರಿಸಲ್ಟ್ ಬಂದಿದೆ. 3,177 ಜನ ಸಾವಿಗೀಡಾಗಿದ್ದಾರೆ. ವಯಸ್ಸು, ಲಿಂಗ, ಶೈಕ್ಷಣಿಕ ಹಂತ, ಧೂಮಪಾನ(Smocking), ದೈಹಿಕ ಚಟುವಟಿಕೆ(Physical activities), ಡಯೆಟ್(diet) ಈ ಎಲ್ಲಾ ಸಾವಿಗೆ ಕಾರಣವಾಗಿದೆ. ಆದರೆ ಯಾರು ಕಾಫಿ ಸೇವಿಸುವುದಿಲ್ಲವೊ ಅವರಿಗಿಂತ ಸಕ್ಕರೆ ಇಲ್ಲದೆ ಕಾಫಿ ಸೇವಿಸುವವರಲ್ಲಿ ಸಾವಿನ ಪ್ರಮಾಣದ ಸಂಖ್ಯೆ ಕಡಿಮೆ ಇದೆ. ಪ್ರತೀ ದಿನ 2.5 ಕಪ್‌ನಿಂದ 4.5 ಕಪ್ ಕಾಫೀ ಕುಡಿಯುವವರಲ್ಲಿ ಶೇ.29ರಷ್ಟು ಜನರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ. 

ಕಾಫಿಯಲ್ಲಿ ಅಡಕವಾಗಿರುವ ಎಸ್ಪ್ರೆಸೊ ಆರೋಗ್ಯಕ್ಕೆ ಒಳ್ಳೆಯದಾ ?

ಕಾಫಿಯಿಂದಾಗುವ ಪ್ರಯೋಜನಗಳು

1. ಪ್ರತೀ ದಿನ ಕಾಫಿ ಕುಡಿಯುವುದರಿಂದ ಹೃದಯ ಸಂಬAಧಿತ(Heart) ಖಾಯಿಲೆಗಳನ್ನು ನಿಯಂತ್ರಸಬಹುದು. ಪಾರ್ಶ್ವವಾಯು(Stroke) ಅಂದರೆ ಸ್ಟೊçÃಕ್ ಪ್ರಮಾಣವನ್ನು ತಡೆಗಟ್ಟಬಹುದು ಎಂದು ರಿಸರ್ಚ್ನಿಂದ ತಿಳಿದಿದೆ. ಮಹಿಳೆಯರು(Woman) ಪ್ರತೀ ದಿನ 4ಕ್ಕಿಂತ ಹೆಚ್ಚಿನ ಕಪ್ ಕಾಫಿ ಸೇವಿಸಿದರೆ ಶೇ.20ರಷ್ಟು ಸ್ಟೊçÃಕ್ ಆಗುವ ಪ್ರಮಾಣ ಕಡಿಮೆಯಾಗುತ್ತದೆ ಎನ್ನಲಾಗಿದೆ. 

2. ಕಾಫಿಯಲ್ಲಿ ವಿಟಮಿನ್ ಬಿ(Vitamin B), ಪೊಟ್ಯಾಶಿಯಂ(Potassium) ಇದ್ದು, ಉರಿಯೂತ, ಕ್ಯಾನ್ಸರ್(Cancer) ನಿಯಂತ್ರಿಸುತ್ತದೆ. 

3. ಬ್ಲಾಕ್(Black) ಅಥವಾ ಬಿಸಿ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಂದು ಕಪ್ ಕಾಫಿಯಲ್ಲಿ ಫ್ಯಾಟ್(Fat), ಕ್ಯಾಲೋರಿ(Calorie), ಕಡಿಮೆ ಪ್ರಮಾಣದ ಸೋಡಿಯಂ(Sodium) ಇದೆ. ಬ್ಲಾಕ್ ಕಾಫಿಯಲ್ಲಿ ಮೈಕ್ರೋ ನ್ಯೂಟ್ರಿಯಂಟ್ಸ್(Micro nutrients), ಪೊಟ್ಯಾಶಿಯಂ(Potassium), ಮೆಗ್ನೀಶಿಯಂ(Magnesium) ಇದೆ.

ದಣಿವಾದಾಗ ಅಪ್ಪಿ ತಪ್ಪಿಯೂ ಕಾಫಿ ಸೇವಿಸಬೇಡಿ

4. ಇನ್‌ಸ್ಟಂಟ್ ಕಾಫೀ ಪೌಡರ್‌ಗಿಂತ(Instant Coffee Powder) ಡಿಕಾಕ್ಷನ್ ಕಾಫಿ(Decoction coffee) ಆರೋಗ್ಯಕ್ಕೆ ಒಳ್ಳೆಯದು. ಕಾಫಿ ನಮ್ಮ ಮೂಡ್ ಕಂಟ್ರೋಲ್(Mood control) ಮಾಡುತ್ತದೆ ಹಾಗೂ ನಿದ್ರಾಹೀನತೆಯನ್ನೂ(Sleepless) ತಡೆಯುತ್ತದೆ.

Follow Us:
Download App:
  • android
  • ios