ದಣಿವಾದಾಗ ತಪ್ಪಿಯೂ ಈ ಆಹಾರ ಸೇವಿಸಬೇಡಿ....
ನಾವು ಹೆಚ್ಚಾಗಿ ತುಂಬಾ ದಣಿದಾಗ ಅದನ್ನು ನೀಗಿಸಲು ಏನೇನೋ ಆಹಾರ ಸೇವಿಸುತ್ತೇವೆ. ಅದರಲ್ಲಿ ಹೆಚ್ಚಾಗಿ ನಾರಿನಂಶ ಕಡಿಮೆ (low fiber) ಇರುವ ಆಹಾರಗಳು, ಹೆಚ್ಚಿನ ಸಕ್ಕರೆ ಹೊಂದಿರೋ ಆಹಾರಗಳು, ಸಾಕಷ್ಟು ಸಮತೋಲಿತವಲ್ಲದ, ಅಥವಾ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸೋದ್ರಿಂದ, ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಹಾಗಿದ್ರೆ ಅಂತಹ ಯಾವ ಆಹಾರಗಳನ್ನು ಸೇವಿಸಬಾರದು ಅನ್ನೋದನ್ನು ನೋಡೋಣ…
ಕಾಫಿ
ತುಂಬಾ ಟಯರ್ಡ್ ಆಗಿರುವಾಗ ಕೆಲವರು ಕಾಫಿ ಕುಡಿಯುತ್ತಾರೆ. ಕಾಫಿ ಜನರನ್ನು ಅಲರ್ಟ್ ಆಗಿಸುತ್ತೆ,ದಿನವಿಡೀ ಆಕ್ಟೀವ್ ಆಗಿರಲು ಸಹಾಯ ಮಾಡುತ್ತೆ ಎಂದು ನೀವು ಅಂದುಕೊಂಡಿದ್ದೀರಿ. ಆದರೆ ಇದು ಸರಿಯಲ್ಲ. ಕಾಫಿಯು ಸ್ವಲ್ಪ ಸಮಯದವರೆಗೆ ನಿಮ್ಮನ್ನ ಆಕ್ಟಿವ್ ಆಗಿರಿಸುತ್ತೆ, ಆದರೆ ನಂತರ ಆಯಾಸವನ್ನುಂಟು ಮಾಡುತ್ತೆ. ನೀವು ತುಂಬಾ ಟಯರ್ಡ್ ಆಗಿದ್ರೆ ಆವಾಗ ಕಾಫಿ ಕುಡಿಬೇಡಿ. ಸಕ್ಕರೆ ಅಥವಾ ಹಾಲು ಇಲ್ಲದ ಒಂದು ಕಪ್ ಚಹಾ, ಒಂದು ಲೋಟ ತಾಜಾ ಜ್ಯೂಸ್ (fresh juice) ಅಥವಾ ನಿಂಬೆ ಜ್ಯೂಸ್ ಸೇವಿಸಿ.
ಚೀಸ್ :
ಸಂಸ್ಕರಿತ ಚೀಸ್ ನಲ್ಲಿ (cheese) ಸ್ಯಾಚುರೇಟೆಡ್ ಕೊಬ್ಬು, ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತೆ. ಎಲ್ಲಾ ರೀತಿಯ ಚೀಸ್ ಶಕ್ತಿ ನೀಡುತ್ತೆ ಎಂದು ಅನಿಸಿದರೂ, ಅದರಿಂದ ಆಗುವ ಪರಿಣಾಮಗಳೇ ಹೆಚ್ಚಾಗಿರುತ್ತೆ. ಚೀಸ್ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತೆ, ಯಾಕೆಂದ್ರೆ ಇದಕ್ಕೆ ಸಾಕಷ್ಟು ಶಕ್ತಿಯ ಅಗತ್ಯವಿದೆ, ಆದ್ದರಿಂದ ಆಯಾಸವಾದಾಗ ಚೀಸ್ ಸೇವನೆ ಬೇಡ.
ಬಿಳಿ ಸಕ್ಕರೆ
ಬಿಳಿ ಸಕ್ಕರೆಗಳಿಂದ (white sugar) ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಸಕ್ಕರೆಯನ್ನು ನೀವು ಹೆಚ್ಚು ಹೆಚ್ಚು ಸೇವಿಸೋದ್ರಿಂದ ನಿಮಗೆ ಖುಷಿಯಾಗಬಹುದು ನಿಜಾ, ಆದರೆ ದಣಿದ ನಂತರ ತಕ್ಷಣ ಐಸ್ ಕ್ರೀಮ್ ಗಳು, ಪೇಸ್ಟ್ರಿಗಳು ಅಥವಾ ಡೋನಟ್ ಗಳನ್ನು ತಪ್ಪಿಸಿ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತೆ.
ರೆಡ್ ಮೀಟ್
ಸಂಜೆ ರೆಡ್ ಮೀಟ್ (red meat) ತಿನ್ನೋದು ಒಳ್ಳೆಯದಲ್ಲ ಅನ್ನೋದು ತಿಳಿದಿದೆ ತಾನೆ? ಯಾಕಂದ್ರೆ ರೆಡ್ ಮೀಟ್ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ಬೇಕು. ಸಂಜೆಯ ಬಳಿಕ ತಿಂದರೆ ಬೇಗನೆ ಜೀರ್ಣವಾಗೋದಿಲ್ಲ. ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ವಿಶೇಷವಾಗಿ ನೀವು ಈಗಾಗಲೇ ದಣಿದಿರುವಾಗ ಇದು ಮತ್ತಷ್ಟು ದಣಿಯುವಂತೆ ಮಾಡುತ್ತೆ.
ಗ್ಲುಟೆನ್ ಆಹಾರಗಳು
ಗ್ಲುಟೆನ್ ಹೊಂದಿರುವ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಕಷ್ಟವಾಗಿರುತ್ತವೆ. ಗ್ಲುಟೆನ್ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಕಷ್ಟ ಮತ್ತು ಇದಕ್ಕೆ ಹೆಚ್ಚಿನ ಮಟ್ಟದ ಹೊಟ್ಟೆಯ ಆಮ್ಲಗಳ ಅಗತ್ಯವಿದೆ. ಈ ಆಹಾರಗಳನ್ನು ಸೇವಿಸಿದರೂ ಅದು ಬೇಹನೆ ಜೀರ್ಣಗೊಳ್ಳುವುದಿಲ್ಲ, ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತೆ.
ಸೋಡಾಗಳು
ನಾವು ಸೇವಿಸುವ ಸೋಡಾಗಳು (soda) ಹೆಚ್ಚಿನ ಪ್ರಮಾಣದ ಸಕ್ಕರೆ ಅಥವಾ ಅಸ್ಪಾರ್ಟೇಮ್ ಅನ್ನು ಹೊಂದಿರುತ್ತವೆ. ಈ ಎರಡು ಉತ್ಪನ್ನಗಳು ಬೇಗನೆ ಆಯಾಸವಾಗುವಂತೆ ಮಾಡುತ್ತೆ. ಕಾಫಿಯಂತೆಯೇ, ಇವು ಸಹ ಸ್ವಲ್ಪ ಸಮಯ ಎನರ್ಜಿ ನೀಡಿ, ಮತ್ತೆ ದಣಿಯುವಂತೆ ಮಾಡುತ್ತೆ, ಆದುದರಿಂದ ಇದನ್ನು ಅವಾಯ್ಡ್ ಮಾಡಿ.
ರೆಡಿ ಟು ಈಟ್ ಫೂಡ್
ರೆಡಿ ಟು ಈಟ್ ಊಟವು (ready to eat food) ನಮ್ಮ ಆರೋಗ್ಯ, ನಮ್ಮ ದೇಹ ಮತ್ತು ನಮ್ಮ ಶಕ್ತಿಯ ಮಟ್ಟಗಳಿಗೆ ಒಳ್ಳೆಯದಲ್ಲ. ಅವು ಜೀರ್ಣಿಸಿಕೊಳ್ಳಲು ಕಷ್ಟ. ಇದರಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿದ್ದು, ಆರೋಗ್ಯಕ್ಕೆ ತೊಂದರೆ ನೀಡುತ್ತೆ. ಆದುದರಿಂಅ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಫ್ರೆಶ್ ಊಟವನ್ನು ಮಾಡಿ.
ಬ್ಯಾಡ್ ಫ್ಯಾಟ್
ನೀವು ದಣಿದಿದ್ದಾಗ, ಸಂಸ್ಕರಿಸಿದ ಎಣ್ಣೆಯಲ್ಲಿ ಬೇಯಿಸಿದ ಆಹಾರಗಳನ್ನು (oily foods) ತಿನ್ನಬಾರದು, ಹೆಚ್ಚಿನ ತಾಪಮಾನದಲ್ಲಿ ಎಣ್ಣೆ ಅಥವಾ ತುಪ್ಪ ಆಧಾರಿತ ಅಡುಗೆಯನ್ನು ಹುರಿಯಬಾರದು. ಇದರಿಂದ ಆಹಾರಗಳು ಬೇಗನೆ ಜೀರ್ಣವಾಗೋದಿಲ್ಲ. ಆದುದರಿಂದ ನಿಮ್ಮ ಹೊಟ್ಟೆಗೆ ಸುಲಭವಾದ ಮತ್ತು ತ್ವರಿತ ಶಕ್ತಿ ನೀಡುವ ತಾಜಾ ಬೇಯಿಸಿದ ಆಹಾರಗಳಿಗೆ ಆದ್ಯತೆ ನೀಡಿ.
ಆಲ್ಕೋಹಾಲ್
ಆಲ್ಕೋಹಾಲ್ (alcohol) ಎಲ್ಲಾ ರೀತಿಯಲ್ಲೂ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಡ್ರಿಂಕ್ಸ್ ಆಗಿದೆ. ಮತ್ತು ವಿಶೇಷವಾಗಿ ಅದನ್ನು ಸಂಜೆ ಸೇವಿಸಿದಾಗ ಹೆಚ್ಚು ಪರಿಣಾಮ ಬೀರುತ್ತೆ, ಏಕೆಂದರೆ ಇದು ನಿದ್ರೆ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಇದಲ್ಲದೆ, ಆಲ್ಕೋಹಾಲ್ ಸೇವನೆಯು ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತೆ, ಇದು ನಮ್ಮ ದೇಹವನ್ನು ಇನ್ನಷ್ಟು ಆಯಾಸಗೊಳಿಸುತ್ತದೆ.
ಏಕದಳ ಧಾನ್ಯಗಳ ಆಹಾರಗಳು
ನಿಮಗೆ ದಣಿವಾದಾಗ ವೈಟ್ ಬ್ರೆಡ್ (white bread) ಮತ್ತು ಇತರ ಏಕದಳ ಧಾನ್ಯಗಳ ಆಧಾರಿತ ಆಹಾರಗಳನ್ನು ತಪ್ಪಿಸಬೇಕು. ಯಾಕೆಂದರೆ ಇದು ಜೀರ್ಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೆ ಮತ್ತು ಸಾಕಷ್ಟು ಶಕ್ತಿ ಕೂಡ ಬೇಕಾಗುತ್ತೆ. ಆದ್ದರಿಂದ ನೀವು ಆಯಾಸವಾದಾಗ ಅಕ್ಕಿ, ಪಾಸ್ತಾ ಅಥವಾ ರವೆ ಸೇವನೆ ಅವಾಯ್ಡ್ ಮಾಡಿ.