ಅಡುಗೆಮನೆಯ ಸಿಂಕ್ ಮತ್ತು ಡ್ರೈನ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಜಿರಳೆ, ನೊಣ ಮುಂತಾದ ಕೀಟಗಳನ್ನು ತಡೆಗಟ್ಟಲು ಮತ್ತು ಅಡುಗೆಮನೆಯನ್ನು ಆರೋಗ್ಯಕರವಾಗಿಡಲು ಸರಳ ಸಲಹೆಗಳು ಮತ್ತು ತಂತ್ರಗಳನ್ನು ಬಳಸಿ.

ಡುಗೆಮನೆಯು ನಿಮ್ಮ ಮನೆಯ ಹೃದಯಭಾಗ. ನಿಮ್ಮ ಅಡುಗೆ ಕೌಶಲಗಳು ಜೀವಂತವಾಗುವ ಸ್ಥಳ. ಅದರೊಂದಿಗೆ ಇಡೀ ಕುಟುಂಬಕ್ಕೆ ಪೋಷಣೆ ನೀಡುವ ಸ್ಥಳ ಇದು.ಕೊರೋನಾ ಸಾಂಕ್ರಾಮಿಕದ ಬಳಿಕ ರೆಸ್ಟೋರೆಂಟ್‌ಗಳು ಮತ್ತು ಅಡುಗೆಯವರ ಮೇಲೆ ಹೆಚ್ಚು ಅವಲಂಬಿತರಾಗಿದ್ದ ನಮ್ಮ ಜನ ಈಗ ದಿನನಿತ್ಯದ ಆಹಾರ ತಯಾರಿಕೆಯಲ್ಲೂ ಪಳಗಿದ್ದನ್ನು ನೋಡಿದ್ದೇವೆ. ಆದರೆ, ಹೆಚ್ಚಿನವರಿಗೆ ಅಡುಗೆ ಮಾಡೋದು ಸಮಸ್ಯೆಯಲ್ಲ. ಅಡುಗೆ ಮಾಡಿದ ಬಳಿಕ ಪಾತ್ರಗೆಗಳನ್ನು ತೊಳೆಯೋದು ಹಾಗೂ ಸಿಂಕ್‌ಅನ್ನು ಕ್ಲೀನ್‌ ಮಾಡೋದೇ ದೊಡ್ಡ ಸಮಸ್ಯೆ. ಅಡುಗೆಮನೆ, ವಿಶೇಷವಾಗಿ ಸಿಂಕ್ ಮತ್ತು ಡ್ರೈನ್ ಅನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಆಯಾಸಕರವಾಗಿರುತ್ತದೆ, ವಿಶೇಷವಾಗಿ ನೀವು ಅದನ್ನು ಪ್ರತಿದಿನ ಮಾಡಬೇಕಾದ ಕಾರ್ಯ ಎನ್ನುವ ಕಾರಣಕ್ಕೆ ಇನ್ನಷ್ಟು ಆಯಾಸ ತರುತ್ತದೆ.

ಪ್ರತಿದಿನ ಅಡುಗೆಮನೆಯಲ್ಲಿ ಜಿಡ್ಡು, ಕೊಳಕು ಪಾತ್ರಗೆಳು, ಸಾಂಬಾರ್‌ಗಳು, ಎಣ್ಣೆ ಹಾಗೂ ಮಣ್ಣಿನ ಕಲೆಯಿಂದ ಕೂಡಿರುತ್ತದೆ. ಇದನ್ನು ಕಿಚನ್‌ನಲ್ಲಿ ಗಮನಿಸದೇ ಇದ್ದರೆ, ಸಿಂಕ್‌ಗಳಲ್ಲಿ ಜಿರಳೆ, ನೊಣ, ಸೊಳ್ಳೆ ಮತ್ತು ಇತರ ಸೂಕ್ಷ್ಮಜೀವಿಗಳಿಗೆ ಆಶ್ರಯ ತಾಣವಾಗಬಹುದು. ಈ ಜೀವಿಗಳು ಮನೆಯಲ್ಲಿ ದುರ್ವಾಸನೆ ಮತ್ತು ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತವೆ. ಆದ್ದರಿಂದ ನಿಮ್ಮ ಅಡುಗೆಮನೆ ಸಿಂಕ್ ಮತ್ತು ಡ್ರೈನ್‌ಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ಕೆಲವು ಸರಳ ಸಲಹೆಗಳು ಮತ್ತು ತಂತ್ರಗಳನ್ನು ಇಲ್ಲಿವೆ. ಈ ವಸ್ತುಗಳು ನಿಮ್ಮ ಅಡುಗೆಮನೆಯಲ್ಲಿ ಇದ್ದರೆ, ಕಿಚನ್‌ ಸಿಂಕ್‌ ಕ್ಲೀನ್‌ ಆಗಿರುತ್ತದೆ

ನಿಮ್ಮ ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛವಾಗಿಡಲು ಬೇಕಾದ ಸರಳ ವಸ್ತುಗಳು
ಅಡಿಗೆ ಸೋಡಾ (Baking Soda)
ನಿಂಬೆ (Lemon)
ಡಿಶ್‌ವಾಶ್ ಲಿಕ್ವಿಡ್‌ (Dishwash Liquid)
ಬಿಳಿ ವಿನೆಗರ್ (White Vinegar)
ಸ್ಕ್ರಾಬ್ ಅಥವಾ ಸ್ಪಾಂಜ್ (A Scrub or Sponge)
ಒಂದು ಜೋಡಿ ರಬ್ಬರ್ ಕೈಗವಸುಗಳು (A Pair Of Rubber Gloves)
ನಿಮ್ಮ ನೆಚ್ಚಿನ ಆರೊಮ್ಯಾಟಿಕ್ ಎಣ್ಣೆ (ಐಚ್ಛಿಕ)

ಈ ರೀತಿಯಾಗಿ ಪ್ರೆಷರ್ ಕುಕ್ಕರ್ ಬಳಸಿದ್ರೆ ಫಟಾಫಟ್ ತಯಾರಿಸಬಹುದು ಟೇಸ್ಟಿ ಫುಡ್

ಪ್ರತಿಊಟದ ಬಳಿಕ ಪಾತ್ರೆಗಳನ್ನು ಚೆನ್ನಾಗಿ ತೊಳೆದಿಡಿ. ಮನೆಯ ಕಿಚನ್‌ ಸಿಂಕ್‌ ಖಾಲಿಯಾದ ಬಳಿಕ ಅಲ್ಲಿದ್ದ ಅಳಿದುಳಿದ ಆಹಾರ ವಸ್ತುಗಳನ್ನು ಕ್ಲೀನ್‌ ಮಾಡಿ. ಇದು ಅಡುಗೆಮನೆಯ ಡ್ರೈನೇಜ್‌ ಕಟ್ಟಿಕೊಳ್ಳುವುದನ್ನು ತಡೆಯುತ್ತದೆ. ಈಗ ನೀವು ಸಣ್ಣ ಸೋಪು ಮತ್ತು ಬೆಚ್ಚಗಿನ ನೀರನ್ನು ಬಳಸಿ ಇಡೀ ಸಿಂಕ್‌ಅನ್ನು ಒರೆಸಿ. ಅಡುಗೆ ಮಾಡಿದ್ದ ಸ್ಥಳದ ಗೋಡೆಗಳನ್ನೂ ಕ್ಲೀನ್‌ ಮಾಡಿ. ಬೆಚ್ಚಗಿನ ನೀರು ಇರುವ ಕಾರಣ ಗೋಡೆಯ ಮೇಲೆ ಬಿದ್ದಿ ಎಣ್ಣೆಯ ಜಿಡ್ಡುಕೂಡ ಹೋಗುತ್ತದೆ. ಹೀಗೆ ಮಾಡಿದ್ರೂ ಜಿಡ್ಡು ಇರೋದು ಕಂಡಲ್ಲಿ, ಬೇಕಿಂಗ್‌ ಸೋಡಾ ಮಿಶ್ರ ಮಾಡಿ ಸ್ಕ್ರಬ್‌ ಮಾಡಿ. ಸಿಂಕ್‌ನಲ್ಲಿ ಇದೇ ರೀತಿ ಇದ್ದಲ್ಲಿ ವೈಟ್‌ ವಿನೇಗರ್‌ಅನ್ನು ಬಳಸಿ. ಅಡುಗೆ ಸೋಡಾ ಇರುವ ಕಾರಣ ಕಲೆಗಳು ಗುಳ್ಳೆಗಳಾದ ಬದಲಾಗುತ್ತವೆ. ನೀವು ಇನ್ನೂ ಹೆಚ್ಚಿನ ಪ್ರಯತ್ನ ಮಾಡಲು ಬಯಸಿದರೆ, ಬಟ್ಟೆಯ ತುಂಡಿಗೆ ಒಂದು ಹನಿ ನಿಂಬೆ ಎಣ್ಣೆ ಅಥವಾ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ ಸಿಂಕ್ ಮೇಲ್ಮೈ ಮೇಲೆ ಉಜ್ಜಿ. ಈ ವಿಧಾನವು ನಿಮ್ಮ ಅಡುಗೆಮನೆಯಲ್ಲಿ ಸುವಾಸನೆಯನ್ನು ಬಿಡುತ್ತದೆ ಮತ್ತು ದಿನವಿಡೀ ಅದನ್ನು ಸ್ವಚ್ಛವಾಗಿ ಮತ್ತು ಸೋಂಕುರಹಿತವಾಗಿಡಲು ಸಹಾಯ ಮಾಡುತ್ತದೆ. ನಿಮ್ಮ ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸುವಾಗ ರಬ್ಬರ್ ಕೈಗವಸುಗಳನ್ನು ಬಳಸಲು ಜಾಗರೂಕರಾಗಿರಿ, ಇದು ನಿಮ್ಮ ಕೈಗಳನ್ನು ಕೊಳಕಿನಿಂದ ರಕ್ಷಿಸುತ್ತದೆ.

ಮೊಸರು ಹುಳಿ ಬರದಂತೆ ವಾರಗಟ್ಟಲೇ ಸ್ಟೋರ್ ಮಾಡುವ ಸಿಂಪಲ್ ಟ್ರಿಕ್ಸ್