ಈ ರೀತಿಯಾಗಿ ಪ್ರೆಷರ್ ಕುಕ್ಕರ್ ಬಳಸಿದ್ರೆ ಫಟಾಫಟ್ ತಯಾರಿಸಬಹುದು ಟೇಸ್ಟಿ ಫುಡ್
ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದವರಿಗೆ, ಪ್ರೆಷರ್ ಕುಕ್ಕರ್ ಬಳಸಿ ಫಟಾಫಟ್ ಅಡುಗೆ ಮಾಡಲು ಸಿಂಪಲ್ ಟಿಪ್ಸ್ ಮತ್ತು ಟ್ರಿಕ್ಸ್. ಸಮಯ ಉಳಿಸಿ, ಊಟ ಬೇಗ ರೆಡಿ ಮಾಡಿ.

ಪ್ರೆಷರ್ ಕುಕ್ಕರ್ ಹ್ಯಾಕ್ಸ್
ಎಲ್ಲಾ ಮನೆಯಲ್ಲೂ ಪ್ರೆಷರ್ ಕುಕ್ಕರ್ ಬಳಸ್ತಾರೆ, ಆದ್ರೆ ಅದರ ಉಪಯೋಗ ಎಷ್ಟಿದೆ ಅಂತ ಗೊತ್ತಿಲ್ಲದವರು ಜಾಸ್ತಿ. ಕುಕ್ಕರ್ ನಲ್ಲಿ ಸ್ವಲ್ಪ ಹೊತ್ತಲ್ಲೇ ಅಡುಗೆ ರೆಡಿ. ಸಿಂಪಲ್ ಟಿಪ್ಸ್ ಇಲ್ಲಿವೆ. ಇವುಗಳಿಂದ ಫಟಾಫಟ್ ಅಡುಗೆ, ಟೈಮ್ ಸೇವ್.
ಪ್ರೆಷರ್ ಕುಕ್ಕರ್ ಹ್ಯಾಕ್ಸ್
ಡೈಲಿ ಅಡುಗೆಗೆ ಕುಕ್ಕರ್ ಟಿಪ್ಸ್ ಎಲ್ಲರಿಗೂ ಉಪಯುಕ್ತ. ಕೆಲಸದ ಸುಸ್ತಲ್ಲಿ ಫಟಾಫಟ್ ಅಡುಗೆಗೆ ಹೆಲ್ಪ್ ಆಗುತ್ತೆ. ಕುಕ್ಕರ್ ನಲ್ಲಿ ಬೇಗ ಅಡುಗೆ ಆಗಬೇಕಂದ್ರೆ ಸಾಕಷ್ಟು ನೀರು ಹಾಕಿ. ಹಾಗಂತ ಕುಕ್ಕರ್ ತುಂಬಾ ತುಂಬಬೇಡಿ. ನಂತರ ಮುಚ್ಚಳ ಚೆನ್ನಾಗಿ ಹಾಕಿ.
ಕೆಲವೊಮ್ಮೆ ಅಡುಗೆಗೆ ಬೇರೆ ಬೇರೆ ಪದಾರ್ಥ ಬೇಯಿಸಬೇಕಾಗುತ್ತೆ. ಒಂದೊಂದಾಗಿ ಬೇಯಿಸಿದ್ರೆ ಟೈಮ್ ವೇಸ್ಟ್. ಉದಾಹರಣೆಗೆ ಕಡಲೆ ಬೇಯಿಸ್ತಿದ್ರೆ, ಕುಕ್ಕರ್ ನಲ್ಲಿ ಕಡಲೆ, ಉಪ್ಪು, ನೀರು ಹಾಕಿ, ಮೇಲೆ ಒಂದು ಪಾತ್ರೆ ಇಟ್ಟು ಆಲೂಗಡ್ಡೆ ಅಥವಾ ಅನ್ನ ಬೇಯಿಸಬಹುದು. ಇದರಿಂದ ಟೈಮ್, ಗ್ಯಾಸ್ ಎರಡೂ ಸೇವ್. ಎರಡು ವಿಷಲ್ ಬಂದ್ಮೇಲೆ ಗ್ಯಾಸ್ ಆಫ್ ಮಾಡಿ, 10 ನಿಮಿಷ ಆವಿಯಲ್ಲಿ ಬೇಯೋಕೆ ಬಿಡಿ.
ಬೇಳೆ ಕಾಳುಗಳನ್ನು ಕನಿಷ್ಠ 30 ನಿಮಿಷಗಳ ಕಾಲ ನೆನಸಿಟ್ಟುಕೊಳ್ಳಬೇಕು. ನಂತರ ಕುಕ್ಕರ್‌ಗೆ ಹಾಕಿ ಎರಡು ವಿಷಲ್ ಕೂಗಿಸಿದ್ರೆ ಬೇಳೆ ಹದವಾಗಿ ಬೇಯುತ್ತದೆ.
ಒಲೆ ಆಫ್ ಮಾಡಿದ ಕೂಡಲೇ ಕುಕ್ಕರ್ ಮುಚ್ಚಳ ಓಪನ್ ಮಾಡಬಾರದು. ಒಲೆ ಆಫ್ ಆದ್ರೂ ಕನಿಷ್ಠ 10 ನಿಮಿಷಗಳ ಕಾಲ ಆವಿಯಲ್ಲಿಯೇ ಆಹಾರ ಬೇಯುತ್ತದೆ. ಇದರಿಂದ ಅಡುಗೆ ರುಚಿ ಹೆಚ್ಚಾಗುತ್ತದೆ.