ಮೊಸರು ಹುಳಿ ಬರದಂತೆ ವಾರಗಟ್ಟಲೇ ಸ್ಟೋರ್ ಮಾಡುವ ಸಿಂಪಲ್ ಟ್ರಿಕ್ಸ್
ಕೆಲವೊಮ್ಮೆ ದೋಸೆ ಹಿಟ್ಟು ಮತ್ತು ಮೊಸರು ಬೇಗ ಹುಳಿ ಆಗ್ತಿದ್ಯಾ? ವಾರಗಟ್ಟಲೆ ಹುಳಿಯದಂತೆ ಇಡೋ ಟಿಪ್ಸ್ ಇಲ್ಲಿವೆ.

ಬೇಸಿಗೆಯಲ್ಲಿ ಮೊಸರು ನಮ್ಮ ದೇಹಕ್ಕೆ ಒಳ್ಳೆಯ ಗೆಳೆಯ. ಅದನ್ನು ಹೆಚ್ಚು ದಿನ ಕೆಡದಂತೆ ಇಡಲು ಸುಲಭ ಟಿಪ್ಸ್ ಇದೆ. ಮೊಸರನ್ನು ಹೆಪ್ಪು ಹಾಕಿಟ್ಟ 2 ದಿನಗಳಲ್ಲಿ ಹುಳಿ ಆಗುತ್ತದೆ. ಮೊಸರು ಗಟ್ಟಿಯಾಗಿ ಹುಳಿ ಇಲ್ಲದೆ ಇದ್ರೆ ಒಂದು ಮಡಕೆ ಅನ್ನ ತಿನ್ನಬಹುದು ಅಂತಾರೆ ದುಡಿಯುವವರು.
ಇಲ್ಲಿ ಹೇಳಿರುವ ವಿಧಾನದಲ್ಲಿ ಹಾಲಿಗೆ ಹೆಪ್ಪು ಹಾಕಲು ಮೊದಲು ಒಂದು ಬಟ್ಟಲಿನಲ್ಲಿ ಒಂದು ಚಮಚ ಮೊಸರು ಹಾಕಬೇಕು. ಅದಕ್ಕೆ ಒಂದು ಲೋಟ ಸ್ವಲ್ಪ ಬಿಸಿ ಹಾಲು ಹಾಕಿ ಟೀ ಮಾಡುವ ಹಾಗೆ ಕಲಸಬೇಕು. ನಂತರ ಮನೆಯಲ್ಲಿರುವ ಪಿಂಗಾಣಿ ಜಾಡಿ ಅಥವಾ ಮಣ್ಣಿನ ಮಡಕೆಯಲ್ಲಿ ಹಾಕಿ ಮುಚ್ಚಳ ಮುಚ್ಚಿಡಿ. ಹೀಗೆ ಮಾಡಿದ್ರೆ ಮೊಸರು ಗಟ್ಟಿಯಾಗಿ, ದೀರ್ಘಕಾಲ ಹುಳಿಯದೆ, ಅಂಗಡಿಯಲ್ಲಿ ಸಿಗುವ ಮೊಸರಿನಂತೆ ರುಚಿಯಾಗಿರುತ್ತದೆ.
ಹಾಲು ಕಾಯಿಸಿಟ್ಟ ಅದೇ ಪಾತ್ರೆಯಲ್ಲಿ ಮೊಸರಿಗೆ ಹೆಪ್ಪು ಹಾಕುವ ತಪ್ಪನ್ನು ಮಾಡಬೇಡಿ. ಹಾಲು ಕಾಯಿಸಿದ ನಂತರ ಅದನ್ನು ಬೇರೆ ಪಾತ್ರೆಗೆ ಹಾಕಿ ಆಮೇಲೆ ಹೆಪ್ಪು ಹಾಕಬೇಕು. ಈ ಟಿಪ್ಸ್ ಬೇಸಿಗೆಯಲ್ಲಿ ಹಿಟ್ಟು ಮತ್ತು ಮೊಸರು ಬೇಗ ಹುಳಿಯದಂತೆ ಇಡಲು ಸಹಾಯ ಮಾಡುತ್ತದೆ.
ನೀವು ಮಾರುಕಟ್ಟೆಯಿಂದ ಮೊಸರು ತಂದ್ರೆ ಅದನ್ನು ಪಾಕೆಟ್‌ನಲ್ಲಿಯೇ ಇರಿಸಬೇಡಿ. ಮೊಸರನ್ನು ಪಾತ್ರೆಯೊಂದನ್ನು ಹಾಕಿಕೊಳ್ಳಬೇಕು. ನಂತರ ಇದಕ್ಕೆ ಒಂದೆರಡು ತುಂಡು ಹಸಿ ಕೊಬ್ಬರಿಯನ್ನು ಸೇರಿದ್ರೆ ವಾರವಾದ್ರೂ ಮೊಸರು ಹುಳಿಯಾಗಲ್ಲ.
ಮನೆಯಲ್ಲಿ ಮಾಡಿದ ದೋಸೆ ಹಿಟ್ಟು, ಮೊಸರು ಹುಳಿ ಆಗುತ್ತೆ ಅಂತ ಬಹಳಷ್ಟು ಜನರು ಗೋಳಾಡ್ತಾರೆ. ಹೆಚ್ಚಿನ ಶಾಖದಿಂದಾಗಿ ಬೇಗ ಹುಳಿ ಆಗಿ ರುಚಿ ಕೆಡುತ್ತದೆ. ಹೀಗೆ ವ್ಯರ್ಥ ಆಗದಂತೆ ಅಕ್ಕಿ ಹಿಟ್ಟು ಮತ್ತು ಮೊಸರನ್ನು ಹೇಗೆ ದೀರ್ಘಕಾಲ ಬಳಸಬಹುದು ಅನ್ನೋದನ್ನ ಇಲ್ಲಿ ನೋಡೋಣ.
ಇಡ್ಲಿ ಹಿಟ್ಟು ದೀರ್ಘಕಾಲ ಹುಳಿಯದಂತೆ ಇರಬೇಕು ಅಂದ್ರೆ ಹಿಟ್ಟು ಅರೆದಾಗಲೇ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಇಡ್ಲಿ ಅಥವಾ ದೋಸೆಗೆ ಹಿಟ್ಟು ಅರೆದಾಗ ಮೊದಲು ಒಂದು ಪಾತ್ರೆಯಲ್ಲಿ ತೆಗೆದು ಫ್ರಿಡ್ಜ್‌ನಲ್ಲಿ ಇಡಬೇಕು. ಒಟ್ಟಿಗೆ ಉಪ್ಪು ಹಾಕಬಾರದು. ಬೇಕಾದಷ್ಟು ಹಿಟ್ಟನ್ನು ತೆಗೆದುಕೊಂಡಾಗ ಮಾತ್ರ ಉಪ್ಪು ಹಾಕಬೇಕು.
ಬಿಸಿಲಿನಲ್ಲಿ ಒಟ್ಟಿಗೆ ಉಪ್ಪು ಹಾಕಿದ್ರೆ ಹಿಟ್ಟು ಬೇಗ ಹುಳಿ ಆಗುತ್ತೆ. ಇದು ನಮಗೂ ಗೊತ್ತು ಅಂತೀರಾ? ಅಷ್ಟೇ ಅಲ್ಲ, ಫ್ರಿಡ್ಜ್‌ನಲ್ಲಿ ಇಡುವ ಹಿಟ್ಟಿನಲ್ಲಿ ವೀಳ್ಯದೆಲೆಯನ್ನು ಕಾಂಡ ತೆಗೆಯದೆ ಹಾಕಿ. ಹಾಗೆ ಮಾಡಿದ್ರೆ ಹಿಟ್ಟು ಬೇಗ ಹುಳಿ ಆಗಲ್ಲ. ಅದರಲ್ಲೂ ವೀಳ್ಯದೆಲೆಯ ಕಾಂಡ ಹಿಟ್ಟಿನೊಳಗೆ ಒತ್ತಿ ಇರಿಸಬೇಕು.
ವೀಳ್ಯದೆಲೆ ಮಾತ್ರವಲ್ಲ, ಹಿಟ್ಟು ಹುಳಿಯದಂತೆ ಇಡಲು ಅಜ್ವೈನ್ ಎಲೆ (ದೊಡ್ಡಪತ್ರೆ) ಸಹಾಯ ಮಾಡುತ್ತದೆ. ಅಜ್ವೈನ್ ಔಷಧೀಯ ಗುಣಗಳಿವೆ ಅಂತ ನಿಮಗೆ ಗೊತ್ತಿರಬಹುದು. ದೊಡ್ಡಪತ್ರೆ ಗಿಡದಿಂದ 4 ಅಥವಾ 5 ಎಲೆಗಳನ್ನು ತೆಗೆದು ಹಿಟ್ಟಿನಲ್ಲಿ ಹಾಕಿ. ಇದರಲ್ಲಿರುವ ಕಾರ ಹಿಟ್ಟು ಹುಳಿಯಾಗದಂತೆ ತಡೆಯುತ್ತದೆ. ದೊಡ್ಡಪತ್ರೆಯ ವಾಸನೆ ಹಿಟ್ಟಿನಲ್ಲಿ ಬರಲ್ಲ ಡೋಂಟ್ ವರಿ.