Healthy Eating Tips: ವೀಕೆಂಡ್‌ಗಳಲ್ಲಿ ಬೇಕಾಬಿಟ್ಟಿ ತಿನ್ನೋದಕ್ಕೆ ಬ್ರೇಕ್ ಹಾಕೋದು ಹೇಗೆ..?
ವೀಕೆಂಡ್ (Weekend) ಬಂತು ಅಂದ್ರೆ ವೆರೈಟಿ ವೆರೈಟಿ ಫುಡ್ (Food)ಗಳನ್ನು ಟೇಸ್ಟ್ ಮಾಡುವ ಅವಕಾಶ. ಪಿಜ್ಜಾ, ಬರ್ಗರ್, ಕುಶ್ಕಾ, ಬಿರಿಯಾನಿ (Biriyani), ಕಬಾಬ್ ಅಂತ ಬ್ಯಾಟಿಂಗ್ ಮೇಲೆ ಬ್ಯಾಟಿಂಗ್..ತಿನ್ನೋದು ಓವರ್ ಆಯ್ತು, ಡಯಟ್ ಎಲ್ಲಾ ಹಾಳಾಯ್ತು ಅನಿಸಿದ್ರೂ ಯಾವ್ದೂ ಬಿಡೋಕಾಗದ ಪರಿಸ್ಥಿತಿ. ವೀಕೆಂಡ್‌ನ ಈ ಅನ್ ಹೆಲ್ತೀ ಫುಡ್ ಸ್ಟೈಲ್ ಚೇಂಜ್ ಮಾಡ್ಕೊಳ್ಳೋದು ಹೇಗೆ..?
ದಿನಾಲೂ ಆಫೀಸು, ಮನೆ ಅಂತ ಬಿಝಿ ಲೈಫ್ ತಪ್ಪಿದ್ದಲ್ಲ. ಬೆಳಗ್ಗೆ ಎರಡು ಬಿಸಿ ಬಿಸಿ ಸ್ಪೂನ್ ಉಪ್ಪಿಟ್ಟು ಬಾಯಿಗಿಟ್ರೆ ಬ್ರೇಕ್ ಫಾಸ್ಟ್ ಮುಗೀತು. ಮಧ್ಯಾಹ್ನ ತಣ್ಣಗಿನ ಅನ್ನಕ್ಕೆ ಸಾಂಬಾರು, ಮೊಸರು ಎಲ್ಲಾ ಮಿಕ್ಸ್ ಮಾಡ್ಕೊಂಡು ತಿನ್ನೋದು. ರಾತ್ರಿ ಕೆಲಸದ ಸುಸ್ತು, ಟೆನ್ಶನ್ ಅಂತ ತಿನ್ನೋಕು ಮೂಡ್ ಇರಲ್ಲ. ಇನ್ನೂ ಪಿಜಿಯಲ್ಲಿರೋರಿಗೆ ದಿನಾ ಅದೇ ಫುಡ್ ತಿನ್ಬೇಕಲ್ಲ ಅನ್ನೋ ಬೇಜಾರು. ಹೀಗಾಗಿಯೇ ವೀಕೆಂಡ್ ಬಂದ್ರೆ ಸಾಕು ಎಲ್ರೂ ಬಕಾಸುರರಾಗಿ ಬಿಡ್ತಾರೆ. ನಾನಾ ನೀನಾ ಅಂತ ತಿನ್ನೋ ಕಾಂಪಿಟೇಶನ್‌ಗೆ ಇಳ್ದು ಬಿಡ್ತಾರೆ. ಹೀಗಾಗಿಯೇ ಶನಿವಾರ, ಭಾನುವಾರ ಬಂತು ಅಂದ್ರೆ ರಸ್ತೆಬದಿಯಲ್ಲಿರುವ ಫುಡ್ ಸ್ಟಾಲ್‌ಗಳು, ಮಾಲ್‌ಗಳಲ್ಲಿರುವ ಫುಡ್ ಕೋರ್ಟ್‌ಗಳು ಭರ್ತಿಯಾಗಿ ಬಿಡ್ತವೆ.
ಸಾಲ್ದು ಅಂತ ಮದುವೆ, ಬರ್ತ್‌ಡೇ ಪಾರ್ಟಿ, ಫಂಕ್ಷನ್ಸ್ ಎಲ್ಲಾ ವೀಕೆಂಡ್‌ನಲ್ಲೇ ಇರ್ತವೆ. ಹೀಗಾಗಿ ವೀಕೆಂಡ್‌ನಲ್ಲಿ ಸಿಕ್ಕಾಪಟ್ಟೆ ತಿನ್ನೋ ತಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಮಾಡ್ತಾರೆ. ಅಧ್ಯಯನವೊಂದರ ಪ್ರಕಾರ ವೀಕೆಂಡ್‌ನಲ್ಲಿ ಅತಿಯಾಗಿ ತಿನ್ನುವುದರಿಂದಲೇ ಶೇಕಡಾ 80ರಷ್ಟು ಜನರಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಹೀಗೆ ಒಂದೇ ಸಾರಿ ಅತಿಯಾಗಿ ತಿನ್ನುವುದು ತಪ್ಪು. ಇದರಿಂದ ಹಲವು ಆರೋಗ್ಯ (Health) ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅನ್ನೋದು ಹಲವರಿಗೆ ಗೊತ್ತಿದೆ. ಹೀಗಿದ್ರೂ ಏನು ಮಾಡೋಕಾಗ್ತಿಲ್ಲ. ನೀವು ಇಂಥವರಾ..? ವೀಕೆಂಡ್ (Weekend)ನಲ್ಲಿ ಬೇಕಾಬಿಟ್ಟಿ ತಿಂದು,,ಯಾಕಪ್ಪಾ ತಿಂದೆ..ಬೇಡ ಆಗಿತ್ತಪ್ಪಾ ಎಂದು ಅಂದುಕೊಳ್ಳುವವರಾ..ಹಾಗಿದ್ರೆ ವೀಕೆಂಡ್‌ನಲ್ಲಿ ಹೆಲ್ತೀ ಫುಡ್ ಈಟಿಂಗ್ ಹೇಗೆ ತಿಳಿದುಕೊಳ್ಳಿ.
Health Tips: ಮೆದುಳು ಶಾರ್ಪ್ ಆಗಿರಬೇಕಾ ? ಈ ಆಹಾರ ಮಿಸ್ ಮಾಡ್ಕೊಬೇಡಿ
ಎಂದಿಗೂ ಹಸಿವಿನಿಂದ ಪಾರ್ಟಿಗೆ ಹೋಗಬೇಡಿ
ನೀವು ರಜಾದಿನದಲ್ಲಿ ಪಾರ್ಟಿ (Party)ಗೆ ಹೋಗುವ ಮೊದಲು, ಮನೆಯಲ್ಲೇ ಹಣ್ಣು ಅಥವಾ ಆರೋಗ್ಯಕರ ತಿಂಡಿಯನ್ನು ಸೇವಿಸಿ. ಪಾರ್ಟಿಗೆ ಹೋದ ಕೂಡಲೇ ಫುಡ್ (Food) ಟೇಬಲ್‌ಗೆ ಹೋಗಿ ತಿನ್ನುತ್ತಾ ಕೂರಬೇಡಿ. ಬದಲಾಗಿ ಹಸಿವಾದರೆ ಮಾತ್ರ ಹೋಗಿ ಬೇಕಾದಷ್ಟು ಮಾತ್ರ ಆಹಾರ ತೆಗೆದುಕೊಂಡು ತಿನ್ನಿ. ಈ ರೀತಿಯ ಕಾರ್ಯಕ್ರಮಗಳಿಗೆ ಹೋದಾಗ ವೆರೈಟಿ ತಿನಿಸುಗಳನ್ನು ನೋಡಿ ಹೆಚ್ಚು ತಿನ್ನುವುದು ಬಿಟ್ಟು ಕಡಿಮೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆಹಾರವನ್ನು ಕಡೆಗಣಿಸಿ, ಜನರೊಂದಿಗೆ ಹೆಚ್ಚು ಬೆರೆಯಿರಿ
ಪಾರ್ಟಿಗೆ ಹೋದಾಗ ಫುಡ್ ಟೇಬಲ್ ಬಳಿಯೇ ಸುಳಿದಾಡಬೇಡಿ. ಇದು ಅಗತ್ಯವಿಲ್ಲದಿದ್ದರೂ ನೀವು ಹೆಚ್ಚೆಚ್ಚು ತಿನ್ನುವಂತೆ ಮಾಡುತ್ತದೆ. ಹೀಗಾಗಿ ಪಾರ್ಟಿ, ಫಂಕ್ಷನ್‌ಗಳಿಗೆ ಹೋದಾಗ ಆಹಾರವನ್ನು ಬಿಟ್ಟು ಜನರೊಂದಿಗೆ ಹೆಚ್ಚು ಬೆರೆಯಿರಿ. ಲಾಸ್ಟ್‌ಗೆ ಊಟ ಮಾಡುವುದು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ರಾಶಿ ರಾಶಿಯಾಗಿ ಫುಡ್ ನಿಮಗೆ ಕಾಣದ ಕಾರಣ ಅಗತ್ಯವಿದ್ದಷ್ಟೇ ತಿನ್ನಲು ಸಾಧ್ಯವಾಗುತ್ತದೆ. ಕಾರ್ಯಕ್ರಮಕ್ಕೆ ಹೋಗಿ ತುಂಬಾ ಹೊತ್ತು ಕುಳಿತುಕೊಂಡೇ ಇರುವುದು ಬಿಟ್ಟು ನಿಂತುಕೊಂಡು ಜನರಲ್ಲಿ ಮಾತನಾಡಿ. ಇದು ಕ್ಯಾಲರಿಯನ್ನು ಸಹ ಬರ್ನ್ ಮಾಡುತ್ತದೆ.
Food Trend 2021: ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, 2021ರ ವಿಚಿತ್ರ ಆಹಾರಗಳಿವು
ತಿನ್ನಲು ಸಾಧ್ಯವಾಗದಿದ್ದಾಗ ನಿರಾಕರಿಸಿ
ಹಲವು ಬಾರಿ ನಾವು ಫುಡ್ ತಿನ್ನುವಾಗ ನಮಗಾಗಿ ತಿನ್ನುವುದಿಲ್ಲ. ಫ್ರೆಂಡ್ಸ್ (Friends) ಒತ್ತಾಯ ಮಾಡಿದಾಗ, ಸ್ಪಲ್ಪ ಟೇಸ್ಟ್ ಮಾಡು ಎಂದಾಗ ಅವರ ಬಲವಂತಕ್ಕೆ ತಿಂದು ಬಿಡುತ್ತೇವೆ. ಹೀಗೆ ಮಾಡುವುದರಿಂದಲೇ ತಿನ್ನುವ ಕ್ವಾಂಟಿಟಿ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿಯೇ ಯಾರಾದರೂ ಫುಡ್ ಆಫರ್ ಮಾಡಿದಾಗ ನಯವಾಗಿ ನಿರಾಕರಿಸಿ. ಅಥವಾ ಅದನ್ನೇ ಪಾರ್ಸೆಲ್ ತೆಗೆದುಕೊಂಡು ಬಂದು ಆಹಾರವಿಲ್ಲದವರಿಗೆ ನೀಡಿ.
ಹಣ್ಣು, ತರಕಾರಿಯನ್ನು ಹೆಚ್ಚು ಸೇವಿಸಿ
ರಜಾದಿನಗಳಲ್ಲಿ ಹೆಚ್ಚು ಹಣ್ಣುಗಳು(Fruits) ಮತ್ತು ತರಕಾರಿ (Vegetables)ಗಳನ್ನು ತಿನ್ನುವುದರ ಮೇಲೆ ಗಮನಹರಿಸಿ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ನಿಮ್ಮ ಕ್ಯಾಲೋರಿ ಸಂಖ್ಯೆಯನ್ನು ಮೀರದಂತೆ ನಿಮ್ಮ ಹೊಟ್ಟೆಯನ್ನು ತುಂಬಲು ಸಹಾಯ ಮಾಡುವ ಉತ್ತಮ ಮಾರ್ಗವಾಗಿದೆ. ವೀಕೆಂಡ್‌ಗಳಲ್ಲಿ ಟಿವಿ ನೋಡುತ್ತಾ ಚಿಪ್ಸ್, ಮಿಕ್ಷರ್ ಮೊದಲಾದ ಸ್ನ್ಯಾಕ್ಸ್‌ಗಳನ್ನು ತಿನ್ನುವುದು ಖುಷಿಯೆನಿಸಬಹುದು. ಆದರೆ ಇವುಗಳಲ್ಲಿರುವ ಗ್ರಾಂಗೆ ಹೋಲಿಸಿದರೆ, ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಕ್ಕಿಂತ ಹೆಚ್ಚಾಗಿ, ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಫೈಬರ್ ಸಾಂಪ್ರದಾಯಿಕ ಲಘು ಆಹಾರಗಳಿಗಿಂತ ವೇಗವಾಗಿ ಹೊಟ್ಟೆ ತುಂಬುವಂತೆ ಮಾಡುತ್ತದೆ.
ರಜಾದಿನದಲ್ಲಿ ಹೆಚ್ಚು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ
ದೇಹದ ತೂಕವನ್ನು ಕಾಪಾಡಿಕೊಳ್ಳಲು ಅಥವಾ ಕಳೆದುಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಿಯಮಿತವಾಗಿ ಏರೋಬಿಕ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು, ರಜಾದಿನದಲ್ಲಿ ಹೆಚ್ಚು ವ್ಯಾಯಾಮ (Exercise)ದಲ್ಲಿ ತೊಡಗಿಸಿಕೊಳ್ಳಿ. ನೀವು ದಿನಕ್ಕೆ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ವೀಕೆಂಡ್ ಗಳಲ್ಲಿ ಅದನ್ನು 35 ಅಥವಾ 40 ನಿಮಿಷಗಳಿಗೆ ಹೆಚ್ಚಿಸಿ.