ಓರಿಯೋ ಕೇಕ್, ಮಿಲ್ಕ್ ಶೇಕ್ (Milkshake) ಬಗ್ಗೆ ಕೇಳಿರ್ತೀರಾ..ಓರಿಯೋ ಪಕೋಡಾ ಮಾಡಿದ್ರೆ ಹೇಗೆ, ಆಲೂ ಹಾಕಿದ ಗೋಲ್‌ಗಪ್ಪಾ ಟೇಸ್ಟ್ ಮಾಡಿರ್ತೀರಿ, ಚಿಕನ್ (Chicken) ಫಿಲ್ಲಿಂಗ್ಸ್ ಇರೋ ಗೋಲ್‌ಗಪ್ಪಾ (Golgappa) ತಿಂದ್ರೆ ಹೇಗೆ. ವಿಚಿತ್ರ ಅನಿಸೋದು ನಿಜ. ಆದ್ರೆ, ಇದು, 2021ರಲ್ಲಿ ವೈರಲ್ (Viral) ಆದ ವಿಚಿತ್ರ ಫುಡ್ ಟ್ರೆಂಡ್‌ಗಳು

ಆಹಾರ ಪ್ರಿಯರು ಫುಡ್‌ನಲ್ಲಿ ಹೊಸ ಹೊಸ ಎಕ್ಸಪರಿಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಫುಡ್ ಬ್ಲಾಗಿಂಗ್ ಇತ್ತೀಚಿಗೆ ಟ್ರೆಂಡ್ ಆಗುತ್ತಿರುವ ಕಾರಣ ಹೊಸ ಹೊಸ ಊರಿನ, ಹೊಸ ಹೊಸ ಆಹಾರಗಳ ಪರಿಚಯವಾಗುತ್ತದೆ. ಹೀಗಾಗಿ ಫುಡ್‌ನಲ್ಲಿ ಮಾಡುವ ನ್ಯೂ ಎಕ್ಸ್ ಪರಿಮೆಂಟ್‌ಗಳ ಪರಿಚಯವೂ ಆಗುತ್ತದೆ. ಆಹಾರ ಪ್ರಿಯರು ಯಾವ್ಯಾವುದೋ ಫುಡ್ ಅನ್ನು ಇನ್ಯಾವುದರೊಂದಿಗೆ ಸೇರಿಸಿ ಟ್ರಯಲ್ ಮಾಡ್ತಾರೆ. ಇಂಥಹಾ ಫುಡ್ ಫೋಟೋ, ವೀಡಿಯೋಗಳು ಇಂಟರ್ ನೆಟ್‌ನಲ್ಲಿ ವೈರಲ್ ಆಗುತ್ತವೆ. 2021ರಲ್ಲಿ ವೈರಲ್ ಆದ ವಿಚಿತ್ರವೆನಿಸಿದ ಫುಡ್ ಟ್ರೆಂಡ್‌ಗಳು ಇವು.

ಮ್ಯಾಗಿ ಮಿಲ್ಕ್ ಶೇಕ್ (Maggi Milkshake)

ಅಡುಗೆ ಗೊತ್ತಿದ್ಯಾ ಅಂತ ಕೇಳಿದ್ರೆ, ಹ ಮ್ಯಾಗಿ (Maggi) ಮಾಡೋಕೆ ಗೊತ್ತು ಅಂತ ಹೇಳೋರು ಇದ್ದಾರೆ. ಮ್ಯಾಗಿ ಸಾಮಾನ್ಯವಾಗಿ ಎಲ್ಲರಿಗೂ ಪ್ರಿಪೇರ್ ಮಾಡಲು ಗೊತ್ತಿರುವ ಫುಡ್. ಮ್ಯಾಗಿಗೆ ಮೊಟ್ಟೆ, ತರಕಾರಿ ಹೀಗೆ ಯಾವ್ಯಾವುದನ್ನೋ ಹಾಕಿ ಎಕ್ಸಪರಿಮೆಂಟ್ ಮಾಡ್ತಾರೆ. 2021ರಲ್ಲಿ ಮ್ಯಾಗಿಯ ಮೇಲೂ ಒಂದು ವಿಚಿತ್ರ ಪ್ರಯೋಗ ನಡೆದಿದೆ. ಅದುವೇ ಮ್ಯಾಗಿ ಮಿಲ್ಕ್ ಶೇಕ್. ಮಯೂರ್ ಸೇಜ್‌ಪಾಲ್ ಎಂಬವರು ಮ್ಯಾಗಿ ಮಿಲ್ಕ್ ಶೇಕ್ ಮಾಡುವ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

Viral News: ನಾಗಪುರದಲ್ಲಿ ತಯಾರಾಯ್ತು 'ಕರಿ ಇಡ್ಲಿ' ದಂಗಾದ ನೆಟಿಜನ್ಸ್

ಚಾಕೊಲೇಟ್ ಮಸಾಲಾ ಸ್ವೀಟ್ ಕಾರ್ನ್ (​Chocolate Masala Sweet Corn)

2021ರಲ್ಲಿ ಸಿದ್ಧಪಡಿಸಿದ ವಿಲಕ್ಷಣ ಆಹಾರಗಳಲ್ಲಿ ಮತ್ತೊಂದು ಚಾಕೊಲೇಟ್(Chocolate​​​​​) ಮಸಾಲಾ ಸ್ವೀಟ್ ಕಾರ್ನ್. ಜೋಳಕ್ಕೆ ಟಾಪಿಂಗ್ ಕ್ರೀಮ್, ಚಾಕೊಲೇಟ್ ಸಾಸ್ ಮತ್ತು ನಿಂಬೆ ರಸವನ್ನು ಹಾಕಿ ಇದನ್ನು ತಯಾರಿಸಲಾಗುತ್ತದೆ. ಫುಡ್ ಬ್ಲಾಗರ್ ಅನಿಕೇತ್ ಲುಥ್ರಾ ಹಂಚಿಕೊಂಡಿರುವ ಚಾಕೊಲೇಟ್ ಮಸಾಲಾ ಸ್ವೀಟ್ ಕಾರ್ನ್ (Sweet corn) ವೀಡಿಯೋ ಈ ವರ್ಷ ವೈರಲ್ ಆಗಿರುವ ವೀಡಿಯೋಗಳಲ್ಲಿ ಒಂದಾಗಿದೆ. 

ಓರಿಯೋ ಪಕೋಡಾ (Oreo Pakoda)

ಲಾಕ್ ಡೌನ್ ಟೈಮ್‌ನಲ್ಲಿ ಓರಿಯೋ ಕೇಕ್, ಓರಿಯೋ ಮಿಲ್ಕ್ ಶೇಕ್ (Milkshake) ಫುಲ್ ಫೇಮಸ್ ಆಗಿತ್ತು. ಆದ್ರೆ 2021ರಲ್ಲಿ ಜನ್ರು ಬೆಚ್ಚಿ ಬೀಳುವಂತೆ ಮಾಡಿದ್ದು, ಓರಿಯೋದ ಹೊಸ ಎಕ್ಸಪರಿಮೆಂಟ್. ಅಹಮದಾಬಾದ್‌ನ ರೆಸ್ಟೋರೆಂಟ್ ಒಂದರಲ್ಲಿ ಓರಿಯೋ ಪಕೋಡಾವನ್ನು ತಯಾರಿಸಲಾಗಿತ್ತು. ಇನ್ ಸ್ಟಾಗ್ರಾಂ (Instagram)ನಲ್ಲಿ ಫುಡ್ಡೀ ಇನ್ ಕಾರ್ನೆಟ್ ಹಂಚಿಕೊಂಡ ಈ ಓರಿಯೋ ಪಕೋಡಾದ ಫೋಟೋಗಳು ಎಲ್ಲೆಡೆ ವೈರಲ್ (Viral) ಆಗಿತ್ತು.

Empty Calories: ಬಾಯಿಗಷ್ಟೇ ರುಚಿ..ದೇಹಕ್ಕೆ ಹಿಡಿಸದ ಆಹಾರಗಳಿವು..!

ಓಲ್ಡ್ ಮಾಂಕ್ ಗುಲಾಬ್ ಜಾಮೂನ್ (​Old Monk Gulab Jamun)

ಗುಲಾಬ್ ಜಾಮೂನ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ಇದು ಸಾಮಾನ್ಯ ಗುಲಾಬ್ ಜಾಮೂನ್ ಅಲ್ಲ, ಓಲ್ಡ್ ಮಾಂಕ್ ಗುಲಾಬ್ ಜಾಮೂನ್. ಗುಲಾಬ್ ಜಾಮೂನ್‌ಗಳಿಗೆ ಸಿರಿಂಜ್‌ನ ಸಹಾಯದಿಂದ ಓಲ್ಡ್ ಮಾಂಕ್ ಅನ್ನು ಸೇರಿಸಿ ಇದನ್ನು ತಯಾರಿಸಲಾಗಿತ್ತು. 2021ರ ವಿಚಿತ್ರ ಎಕ್ಸ್ ಪರಿಮೆಂಟ್ ನಲ್ಲಿ ಇದೂ ಒಂದು.

ಬಟರ್ ಚಿಕನ್ ಗೋಲ್‌ಗಪ್ಪಾ (​Butter Chicken Golgappa)

ಗೋಲ್‌ಗಪ್ಪಾ ಅಂದ್ರೆ ಹಲವರ ಫೇವರಿಟ್. ಸಿಹಿ, ಹುಳಿ, ಖಾರ ಅಂತ ಹೆಚ್ಚೆಚ್ಚು ಹಾಕಿಸಿಕೊಂಡು ಭಯ್ಯಾ ಔರ್ ಏಕ್ ಪ್ಲೇಟ್ ಅಂತ ಹಾಕಿಸಿಕೊಂಡು ತಿನ್ತಾರೆ. ಅದ್ರೆ ಗೋಲ್‌ಗಪ್ಪಾ ಪ್ರಿಯರೇ ಬೆಚ್ಚಿಬೀಳುವಂತೆ ಈ ವರ್ಷ ರೆಡಿಯಾಗಿದ್ದು, ಬಟರ್ ಚಿಕನ್ ಗೋಲ್ ಗಪ್ಪಾ (Golgappa). ದೇವ್ ಲಿನಾ ಎಂಬವರು ಈ ಡಿಫರೆಂಟ್ ಗೋಲ್‌ಗಪ್ಪಾದ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಾಮೂಲಿ ಗೋಲ್‌ಗಪ್ಪಾದೊಳಗೆ ಆಲೂ ಬದಲು ಚಿಕನ್ ಮತ್ತು ಸೇವ್ ಫಿಲ್ಲಿಂಗ್ಸ್ ಇರುವುದನ್ನು ನೋಡಬಹುದು.

ಚ್ಯವನಪ್ರಾಶನ ತುಂಬಿದ ಕುಕ್ಕೀ (Chyawanprash- Filled Cookie)

2021ರಲ್ಲಿ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಫುಡ್ ಚ್ಯವನಪ್ರಾಶನ ತುಂಬಿದ ಕುಕ್ಕೀ (Cookie). ಬೈಟ್ಸ್ ಆಫ್ ನ್ಯೂಸ್ ಟ್ವಿಟರ್ ಖಾತೆಯಲ್ಲಿ ಇದರ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಈ ವಿಚಿತ್ರ ಕುಕ್ಕೀಯ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. 

ಚಾಕೊಲೇಟ್ ಮ್ಯಾಗಿ(Chocolate Maggi)

ದೆಹಲಿ ಮೂಲದ ಫುಡ್ ಬ್ಲಾಗರ್ ಚಾಹತ್ ಆನಂದ್ ಅವರು ಐಸ್ ಕ್ರೀಂನೊಂದಿಗೆ ಮ್ಯಾಗಿ (Maggi)ಯ ಸಂಯೋಜನೆಯನ್ನು ಮಾಡಿದ್ದಾರೆ. ಮತ್ತು ಅದರ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ಕುದಿಯುವ ನೀರಿಗೆ ಮ್ಯಾಗಿಯನ್ನು ಸೇರಿಸಿ, ಮ್ಯಾಗಿ ಮಸಾಲಾವನ್ನು ಸೇರಿಸುವ ಬದಲು, ಓರಿಯೊವನ್ನು ಪುಡಿಮಾಡಿ ಮತ್ತು ಅದರ ಮೇಲೆ ಚಾಕೊಲೇಟ್ ಐಸ್ ಕ್ರೀಮ್‌ನ್ನು ಹಾಕಲಾಗುತ್ತದೆ.

ಡ್ರೈ ಫ್ರೂಟ್ ಮತ್ತು ಚೀಸ್ ದೋಸೆ (Dry Fruit & Cheese Dosa)

ಡ್ರೈ ಫ್ರೂಟ್ ಮತ್ತು ಚೀಸ್ (Cheese) ದೋಸೆಯ ವೀಡಿಯೊವನ್ನು ಯೂಟ್ಯೂಬರ್ ಹ್ಯಾರಿ ಉಪ್ಪಲ್ ಅವರು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ, ಮೊದಲು ದೋಸೆ ಹಿಟ್ಟನ್ನು ತವಾ ಮೇಲೆ ಹರಡಲಾಗುತ್ತದೆ. ನಂತರ ಅದಕ್ಕೆ ಬೆಣ್ಣೆಯನ್ನು ಸವರಲಾಗುತ್ತದೆ. ಆ ಬಳಿಕ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಎಲೆಕೋಸು ಮತ್ತು ತೆಂಗಿನಕಾಯಿ ಚಟ್ನಿಯನ್ನು ಸೇರಿಸುತ್ತಾರೆ. ಅದಾರ ನಂತರ ಅದಕ್ಕೆ ತುರಿದ ಪನೀರ್, ಗೋಡಂಬಿ, ಒಣದ್ರಾಕ್ಷಿ ಮತ್ತು ಗರಂ ಮಸಾಲವನ್ನು ಸೇರಿಸುತ್ತಾರೆ. ನಂತರ ದೋಸೆಯನ್ನು ಮಡಚಿ, ಕೊತ್ತಂಬರಿ ಸೊಪ್ಪು, ಚೆರ್ರಿಗಳು ಮತ್ತು ತುರಿದ ಚೀಸ್‌ನಿಂದ ಅಲಂಕರಿಸುತ್ತಾರೆ. ಡ್ರೈ ಫ್ರೂಟ್ (Dry Fruit) ಮತ್ತು ಚೀಸ್ ದೋಸೆ ನೋಡಲು ಅಟ್ರ್ಯಾಕ್ಟಿವ್ ಆಗಿರುವಂತೆಯೇ ತುಂಬಾ ಟೇಸ್ಟೀ ಆಗಿದೆ ಎಂದು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ..