ಅಡುಗೆ ಶೋನಲ್ಲಿ ಭಾಗವಹಿಸೋಕೆ ಬಂದೋಳು ರೆಸ್ಟೋರೆಂಟ್‌ನಿಂದ ಬಿರಿಯಾನಿ ತಂದ್ಲು!
ಇನ್ನು ಮುಂದೆ, ಅಡುಗೆ ಕಾರ್ಯಕ್ರಮಗಳಿಗೆ ಜಾಹೀರಾತು ನೀಡುವಾಗ ಟಿವಿ ಚಾನೆಲ್ ಗಳು ಎತ್ತೆಚ್ಚುಕೊಳ್ಳುವ ಕಾಲ ಬಂದಿದೆ! “ಖುದ್ದಾಗಿ ಅಡುಗೆ ಮಾಡಬೇಕು’ ಎಂದು ಸ್ಲೋಗನ್ ಹಾಕಿಕೊಳ್ಳಬೇಕಿದೆ! ಪಾಕಿಸ್ತಾನದ ಅಡುಗೆ ಶೋದಲ್ಲಿ ನಡೆದಿರುವ ಘಟನೆ ಇದಕ್ಕೆ ಕಾರಣ.
ಕುಕ್ಕಿಂಗ್ ಶೋಗಳು ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋಗಳಾಗಿವೆ. ಹೀಗಾಗಿ, ಪ್ರತಿಯೊಂದು ಎಂಟರ್ಟೇನ್ಮೆಂಟ್ ಚಾನೆಲ್ ಗಳೂ ಕುಕ್ಕಿಂಗ್ ಶೋಗಳನ್ನು ಕಡ್ಡಾಯವಾಗಿ ನಡೆಸುತ್ತವೆ. ಹಾಗೆಯೇ, ವಿಶ್ವದೆಲ್ಲೆಡೆ ಆಹಾರ ವೈವಿಧ್ಯ ಅಪಾರ. ಅದು ಭಾರತವೇ ಆಗಿರಲಿ ಅಥವಾ ಬೇರೆ ಯಾವುದೋ ದೇಶವಾಗಿರಲಿ. ಆಯಾ ಜಾತಿ, ಜನಾಂಗ, ಪ್ರದೇಶಗಳಲ್ಲಿ ಆಹಾರದಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಅವುಗಳನ್ನು ಶೋಧಿಸಿ ಹೊರತೆಗೆಯುವುದು ಸಾಮಾನ್ಯವಾಗಿ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಹೀಗಾಗಿ, ಈ ಶೋಗಳು ಸಾಕಷ್ಟು ವೀಕ್ಷಕ ಫ್ಯಾನ್ ಗಳನ್ನು ಹೊಂದಿರುತ್ತವೆ. ಹೊಸ ಹೊಸ ರೆಸಿಪಿಗಳನ್ನು ಕಲಿತುಕೊಳ್ಳುವುದು ಅನೇಕರ ಪ್ಯಾಷನ್. ಈಗಂತೂ ಮನೆಮನೆಗಳಲ್ಲಿ ಹೊಸ ಹೊಸ ಆಹಾರಗಳನ್ನು ಎಂಜಾಯ್ ಮಾಡುವುದು ಸಾಮಾನ್ಯ. ಇಂತಹ ಶೋಗಳಲ್ಲಿ ಭಾಗವಹಿಸಬೇಕೆಂಬ ಆಸೆಯೂ ಹಲವರಿಗೆ ಸಹಜವಾಗಿರುತ್ತದೆ.
ಅವುಗಳಲ್ಲಿ ಭಾಗಿಯಾಗಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಇಂತಹ ಅಡುಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ವತಃ ತಾವೇ ಅಡುಗೆಗಳನ್ನು ಸಿದ್ಧಪಡಿಸಬೇಕು ಎನ್ನುವ ಬೇಸಿಕ್ ಜ್ಞಾನ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗೂ ಇದರ ಬಗ್ಗೆ ಯಾವ ಟಿವಿ ಚಾನೆಲ್ ಗಳೂ ವಿಶೇಷವಾಗಿ ಹೇಳಲು ಹೋಗುವುದಿಲ್ಲ. ಏಕೆಂದರೆ, ಅಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವವರಿಗೆ ಖುದ್ದಾಗಿ ಅಡುಗೆ ಮಾಡಲು ಬರುತ್ತದೆ ಎನ್ನುವ ನಂಬಿಕೆ ಇರುತ್ತದೆ. ಆದರೆ, ಈ ನಂಬಿಕೆ ಪಾಕಿಸ್ತಾನದಲ್ಲೀಗ ಹುಸಿಯಾಗಿದೆ.
ಅಡುಗೆ (Cooking) ಮಾಡುವ ಕಲೆಯೇ ಗೊತ್ತಿರದೆ ಕುಕ್ಕಿಂಗ್ ಶೋದಲ್ಲಿ ಭಾಗವಹಿಸಲು ಬಂದರೆ ಜಡ್ಜ್ ಗಳ (Judges) ಪರಿಸ್ಥಿತಿ ಹೇಗಿರಬಲ್ಲದು? ಇತ್ತೀಚೆಗೆ ಪಾಕಿಸ್ತಾನದಲ್ಲಿ (Pakistan) ನಡೆದ ಘಟನೆ ಇದಕ್ಕೆ ಉತ್ತರವಾಗಿದೆ. ಅಡುಗೆ ಕಾರ್ಯಕ್ರಮಕ್ಕೆ (Program) ಬಂದು, ಸ್ವತಃ ತಾವೇ ಯಾವುದಾದರೂ ರೆಸಿಪಿ (Recipe) ಮಾಡಿಕೊಂಡು ಬರಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದೆ ಒಬ್ಬಾಕೆ ವರ್ತಿಸಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.
ಪಾಕಿಸ್ತಾನದ “ದ ಕಿಚನ್ ಮಾಸ್ಟರ್’ (The Kichen Master) ಅಲ್ಲಿನ ಜನಪ್ರಿಯ ಅಡುಗೆ ಕಾರ್ಯಕ್ರಮ. ಅದರಲ್ಲಿ ಪಾಲ್ಗೊಳ್ಳಲು ಬಂದಿರುವ ಲೇಡಿಯೊಬ್ಬರು ತೀರ ಸಿಲ್ಲಿಯಾಗಿ ವರ್ತಿಸಿರುವುದು ನೆಟಿಜೆನ್ ಗಳನ್ನು ದಂಗುಬಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಯ್ಕೆದಾರರನ್ನು ಕಂಗಾಲಾಗಿಸಿದೆ. ಪಾಕಿಸ್ತಾನದ ಪತ್ರಕರ್ತೆ ಅಂಬರ್ ಜೈದಿ ಅವರ ಟ್ವಿಟರ್ ಖಾತೆಯಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. "ಪಾಕಿಸ್ತಾನದ ಮಾಸ್ಟರ್ ಶೆಫ್ ಯಾರು ಬೇಕಿದ್ದರೂ ಆಗಬಹುದು' ಎಂಬ ಟ್ವೀಟ್ ಜತೆಗೆ ವಿಡಿಯೋ ಶೇರ್ ಮಾಡಿದ್ದಾರೆ.
ರೆಸ್ಟೋರೆಂಟ್ ನಿಂದ ಅಡುಗೆ ಶೋಗೆ (Cooking Show): ಕುಕ್ಕಿಂಗ್ ಶೋದಲ್ಲಿ ಪಾಲ್ಗೊಳ್ಳಲು ಬಂದಿರುವ ಮಹಿಳೆ (Woman) ಬಿರಿಯಾನಿ (Biriyani) ತಂದಿದ್ದಾಳೆ. “ತಾನು ಇದೇ ರೀತಿ ಅಡುಗೆ ಮಾಡಬಲ್ಲೆ. ನಿಮಗಾಗಿ ಕಷ್ಟಪಟ್ಟು ಬಿರಿಯಾನಿ ತಂದಿದ್ದೇನೆ’ ಎನ್ನುತ್ತಾಳೆ. ಆಯ್ಕೆದಾರರು ಮೊದಲಿಗೆ ಆಕೆಯೇ ಬಿರಿಯಾನಿ ಸಿದ್ಧಪಡಿಸಿರುವುದಾಗಿ ಅಂದುಕೊಳ್ಳುತ್ತಾರೆ. ಆದರೆ, ಸತ್ಯ ತಿಳಿದ ಬಳಿಕ ದಂಗಾಗುತ್ತಾರೆ. ರೆಸ್ಟೋರೆಂಟ್ ಒಂದರಿಂದ ಬಿರಿಯಾನಿ ತಂದಿರುವುದಾಗಿ ಆಕೆ ಹೇಳಿದಾಗ ನಿಜಕ್ಕೂ ತೀರ್ಪುಗಾರರಿಗೆ ಕೋಪ ಬರುತ್ತದೆ.
Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ
ಕಷ್ಟಪಟ್ಟು ತಂದಿದ್ದೇನೆ!: “ಈ ತಿಂಡಿ ಇಟ್ಟುಕೊಂಡು ಜಡ್ಜ್ ಮಾಡುವುದು ಕಷ್ಟ. ನೀವು ಕಾರ್ಯಕ್ರಮದಿಂದ ಹೊರಟು ಹೋಗಿ’ ಎಂದಾಗ ಆಕೆ, “ನನಗೆ ಅಡುಗೆ ಹೇಗೆ ಮಾಡಬೇಕೆಂದು ಗೊತ್ತಿದೆ. ಆದರೆ, ನನಗೆ ಖುದ್ದಾಗಿ ನಾನೇ ಅಡುಗೆ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಯಾರೂ ತಿಳಿಸಿಲ್ಲ’ ಎಂದು ಹೇಳುತ್ತಾರೆ. ಆಗ ತೀರ್ಪುಗಾರರ ಪೈಕಿ ಒಬ್ಬರು “ನಾನು ಎದ್ದು ಹೋಗಲೋ, ನೀವು ಎದ್ದು ಹೋಗುತ್ತೀರೋ?’ ಎಂದು ಕೇಳಿದಾಗ ಆಕೆ, “ನಾನು ಹೋಗಲ್ಲ, ನೀವೊಮ್ಮೆ ಬಿರಿಯಾನಿಯನ್ನು ಟೇಸ್ಟ್ (Taste) ಮಾಡಿ, ಪ್ರಯತ್ನ ಪಟ್ಟು ಇದನ್ನು ತಂದಿದ್ದೇನೆ’ ಎಂದು ಹಠ ಹಿಡಿಯುತ್ತಾಳೆ. ಆಗ ಆಯ್ಕೆದಾರರ ಪೈಕಿ ಒಬ್ಬರು ಕೋಪದಿಂದ ಎದ್ದು ಹೋಗುತ್ತಾರೆ. ಅಡುಗೆ ಕಾರ್ಯಕ್ರಮಕ್ಕೆ ಬಂದು ಖುದ್ದಾಗಿ ಅಡುಗೆ ಮಾಡಿತಂದಿರದ ಈ ಯುವತಿಯ ವರ್ತನೆ (Behaviour) ಇದೀಗ ವೈರಲ್ ಆಗಿದೆ.