ಎರಡು ಬಾಟಲ್‌ ಬಿಯರ್ ಬೇಕಿತ್ತು ಸಾರ್.. ಮಧ್ಯರಾತ್ರಿ 100 ಡಯಲ್ ಮಾಡಿ ಕಾಟ ಕೊಟ್ಟ ಭೂಪ !

ಪೊಲೀಸರು (Police) ಎಂದರೆ ಜನರಿಗೆ ಸಮಸ್ಯೆ ಎದುರಾದಾಗ ಪರಿಹರಿಸಲು, ಅಪಾಯ (Danger) ಬಂದಾಗ ಸಹಾಯ ಮಾಡಲು ನೆರವಾಗುತ್ತಾರೆ. ಜನ ಸಾಮಾನ್ಯರ ಸೇವೆಗೆಂದೇ 100 ನಂಬರ್ ಇದ್ದು, ಜನರು ಯಾವುದೇ ಸಂದರ್ಭದಲ್ಲಿ ಈ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯನ್ನು ಹೇಳಬಹುದಾಗಿದೆ. ಆದರೆ ಕೆಲವೊಮ್ಮೆ ಕೆಲವೊಬ್ಬರು ಈ ತುರ್ತು ಸೇವೆ ನಂಬರ್‌ (Emergency number)ನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತೆಲಂಗಾಣದಲ್ಲಿಯೂ ಇಂಥಹದ್ದೇ ಘಟನೆಯೊಂದು ನಡೆದಿದೆ. 

Telangana Cops In Shock As Man Calls 100 To Bring Chilled Beer Vin

ಭಾರತದಲ್ಲಿ ಈ ವರ್ಷ ತಾಪಮಾನ ಹೆಚ್ಚಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶಾದ್ಯಂತ ಹೆಚ್ಚಿನ ತಾಪಮಾನ ದಾಖಲಾಗಿದ್ದು, ಜನರು ದೇಹವನ್ನು (Body) ತಂಪಾಗಿಸಲು ಆಹಾರ (Food) ಮತ್ತು ಪಾನೀಯ (Drink)ಗಳನ್ನು ಸೇವಿಸುತ್ತಿದ್ದಾರೆ. ಕೋಲ್ಡ್‌ ಡ್ರಿಂಕ್ಸ್‌, ಐಸ್‌ಕ್ರೀಂ ಮೊದಲಾದ ತಂಪು ಆಹಾರಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಿರುವಾಗ ಸಿಕ್ಕಾಪಟ್ಟೆ ಸೆಖೆ ಕುಡಿಯೋಕೆ ತಣ್ಣಗೇನಾದ್ರೂ ಬೇಕು ಅಂತ ನೀವು ಪೊಲೀಸರ (Police) ಸಹಾಯ ಕೇಳಿದರೆ ಹೇಗಿರುತ್ತದೆ. ಹೀಗೊಂದು ಘಟನೆಯನ್ನು ಊಹಿಸುವುದು ಕೂಡಾ ಅಸಾಧ್ಯ. ಆದ್ರೆ ತೆಲಂಗಾಣದ (Telangana0 ವ್ಯಕ್ತಿಯೊಬ್ಬ ಹೀಗೆ ಮಾಡಿದ್ದಾನೆ. 

ಇತ್ತೀಚಿನ ಸುದ್ದಿಗಳ ಪ್ರಕಾರ, 22 ವರ್ಷದ ವ್ಯಕ್ತಿಯೊಬ್ಬ ತುರ್ತು ಪೊಲೀಸ್ ಸೇವೆಗಳಿಗೆ ಡಯಲ್ 100ಗೆ ಕರೆ ಮಾಡಿ, ತನಗಾಗಿ ಎರಡು ಬಾಟಲಿಗಳ ಶೀತಲವಾಗಿರುವ ಬಿಯರ್ (Beer) ವ್ಯವಸ್ಥೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾನೆ. ತೆಲಂಗಾಣದ ಹೈದರಾಬಾದ್‌ಗೆ ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಠಾಣೆಯಾಯ್ತು ಮಸಾಜ್ ಸೆಂಟರ್! ಮಹಿಳಾ ಪೇದೆಯಿಂದ ಮೈ ಒತ್ತಿಸಿಕೊಂಡ ಎಎಸ್'ಐ

ಜಾನಿಗಾಲ ಮಧು ಎಂದು ಗುರುತಿಸಲಾದ ವ್ಯಕ್ತಿರಾತ್ರಿ ಗೋಕಾ ಫಸಲಾಬಾದ್‌ನಲ್ಲಿ ಮದುವೆಗೆ ಬಂದಿದ್ದನು. ಶುಕ್ರವಾರ ಬೆಳಿಗ್ಗೆ, ಅವರು 100ಕ್ಕೆ ತುರ್ತು ಸೇವೆಗಳಿಗೆ ಕರೆ ಮಾಡಿದರು ಮತ್ತು ಸ್ಥಳಕ್ಕೆ ತುರ್ತಾಗಿ ಹಾಜರಾಗುವಂತೆ ಹೇಳಿದನು. ವರದಿಗಳ ಪ್ರಕಾರ, ಜನರ ಗುಂಪು ತನ್ನನ್ನು ನಿಂದಿಸುತ್ತಿದೆ ಮತ್ತು ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ವ್ಯಕ್ತ ಪೊಲೀಸರಿಗೆ ಕರೆ ಮಾಡಿದಾಗ ಹೇಳಿದ್ದಾನೆ. ನಂತರ, ತೆಲಂಗಾಣ ಪೊಲೀಸರು ಹೇಳಿದ ಸ್ಥಳಕ್ಕೆ ಧಾವಿಸಿದಾಗ,ವ್ಯಕ್ತಿ ಸಂಪೂರ್ಣವಾಗಿ ಪಾನಮತ್ತನಾಗಿದ್ದ. ಆತ ಜನರು ದಾಳಿ ನಡೆಸುತ್ತಿರುವುದಾಗಿ ಹೇಳಿದ್ದು ಸುಳ್ಳಾಗಿತ್ತು. 

ವೈನ್ ಶಾಪ್‌ಗಳು ಮುಚ್ಚಿದ್ದರಿಂದ ಎರಡು ಬಿಯರ್‌ಗಳನ್ನು ತೆಗೆದುಕೊಂಡುವಂತೆ ವ್ಯಕ್ತಿಪೊಲೀಸರಿಗೆ  ಸೂಚಿಸಿದ್ದಾನೆ. ಪೊಲೀಸರು ನಿರಾಕರಿಸಿ ಕೋಪಗೊಂಡಾಗ, ಕುಡಿದು ಪಾನಮತ್ತನಾಗಿದ್ದ ವ್ಯಕ್ತಿ ಪೊಲೀಸರು ಜನರ ಎಲ್ಲಾ ಅಗತ್ಯಗಳನ್ನು ಪರಿಹರಿಸಬೇಕು ಮತ್ತು ತನಗೆ ಮದ್ಯದ ವ್ಯವಸ್ಥೆ ಮಾಡುವುದು ತನ್ನ ಅಗತ್ಯ ಎಂದು ವಾದಿಸಿದ್ದಾನೆ.

ಮಧು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಸಬ್ ಇನ್ಸ್‌ಪೆಕ್ಟರ್ ರಮೇಶ್ ಕುಮಾರ್ ಅವರು ಮುಂದೆ ಇಂತಹ ಸುಳ್ಳು ಕರೆಗಳನ್ನು ಮಾಡಬೇಡಿ ಎಂದು ವ್ಯಕ್ತಿಯನ್ನು  ಗದರಿಸಿದ್ದಾರೆ. ಡಯಲ್ 100 ತುರ್ತು ಸೇವೆಯಾಗಿದೆ. ಇದನ್ನು ದುರುಪಯೋಗಪಡಿಸಿಕೊಳ್ಳದಂತೆ ನಾವು ವಿನಂತಿಸುತ್ತೇವೆ ಮತ್ತು ನಿಜವಾದ ಅಗತ್ಯವಿದ್ದಾಗ ಮಾತ್ರ ಕರೆ ಮಾಡಿ ಎಂದು ಜನರಿಗೆ ಕಿವಿ ಮಾತು ಹೇಳಿದ್ದಾರೆ.

ಹೆಂಡ್ತಿ ಮಟನ್‌ ಕರಿ ಮಾಡ್ಲಿಲ್ಲ ಸಾರ್‌..100 ಡಯಲ್ ಮಾಡಿ ದೂರು ಕೊಟ್ಟ ಗಂಡ !

ಈ ಹಿಂದೆ ತೆಲಂಗಾಣದ ನವೀನ್ ಎಂದು ಗುರುತಿಸಲಾದ ವ್ಯಕ್ತಿ ಹೆಂಡ್ತಿ ಮಟನ್ ಕರಿ ಮಾಡಿಲ್ಲವೆಂದು ಅವಳೊಂದಿಗೆ ಜಗಳವಾಡಿದ್ದ. ಮಾತ್ರವಲ್ಲ ಮದ್ಯಪಾನ ಮಾಡಿದ್ದ ವ್ಯಕ್ತಿ ಕೋಪಗೊಂಡು ಫೋನ್ ಎತ್ತಿಕೊಂಡು 100 ಗೆ ಡಯಲ್ ಮಾಡಿದ್ದ. ತನ್ನ ಆಯ್ಕೆಯ ಮಟನ್ ಕರಿ ಮಾಡದ ಹೆಂಡತಿಯ ವಿರುದ್ಧ ದೂರು ನೀಡಿದ್ದ. ಆರಂಭದಲ್ಲಿ ಸಂಭಾಷಣೆಯನ್ನು ತಮಾಷೆ ಎಂದು ಪರಿಗಣಿಸಿದ್ದರು. ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ. ನವೀನ್ ಕಂಟ್ರೋಲ್ ರೂಂಗೆ ಪದೇ ಪದೇ ಆರು ಬಾರಿ ಕರೆ ಮಾಡಿ ಇದೇ ವಿಷಯವನ್ನು ಹೇಳಿದ್ದಾನೆ. ನಂತರ ನಿರ್ವಾಹಕರು ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios