ಆಲ್ಕೋಹಾಲು ಯುಕ್ತ ಪಾನೀಯ ಸೇವನೆಯಿಂದ ತೂಕ ಹೆಚ್ಚಾಗುತ್ತಾ?
ಆಲ್ಕೊಹಾಲ್ ಅಂಶವುಳ್ಳ ಹಲವಾರು ಪಾನೀಯಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಈ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದರಲ್ಲಿ ಸಕ್ಕರೆ ಮತ್ತು ಇತರ ಕ್ಯಾಲೊರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ನಿಮ್ಮ ತೂಕ ನಷ್ಟ ಪ್ರಕ್ರಿಯೆಯ ಮೇಲೆ ಇದು ಪರಿಣಾಮ ಬೀರಬಹುದು. ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ನಿಧಾನಗೊಳಿಸುವ ವಿವಿಧ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ನೋಡೋಣ..
ಎಚ್ಚರ! ಈ ಆಲ್ಕೊಹಾಲ್ಯುಕ್ತ ಪಾನೀಯಗಳು (Beverages) ತೂಕ ನಷ್ಟ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ದಿನ ಬೆಳಗಾದರೆ ತಾನು ಹೇಗೆ ತೂಕ ಕಳೆದುಕೊಳ್ಳಲಿ? ಎಂದು ಯೋಚಿಸುತ್ತಾ ತೂಕ ಕಳೆದುಕೊಳ್ಳಲು (Weight Loss) ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿಕೊಳ್ಳುತ್ತಿರುತ್ತೀರಿ. ಆದರೆ, ಇವುಗಳ ನಡುವೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೆ (Mistakes) ನಿಮ್ಮ ಎಲ್ಲಾ ಪ್ರಯತ್ನಗಳನ್ನು ಹಾಳು ಮಾಡಿಬಿಡಬಹುದು ಅಂತಹುಗಳ ಸಾಲಿನಲ್ಲಿ ಆಲ್ಕೋಹಾಲ್ ಸೇವನೆ ಕೂಡ ಒಂದು.
ಆಲ್ಕೋಹಾಲ್‌ಗಳು (Alcohol) ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ನೀವು ಅವುಗಳನ್ನು ತ್ಯಜಿಸುವುದು ಉತ್ತಮ. ಆದಾಗ್ಯೂ, ಒಮ್ಮೊಮ್ಮೆ ಮದ್ಯಪಾನ ಮಾಡುವುದು ಒಂದೇ ಬಾರಿಗೆ ನಿಲ್ಲಿಸಿಬಿಡಲು (Stop) ಸಾಧ್ಯವಾಗದೆ ಹೋಗಬಹುದು. ಆದರೆ, ಅದನ್ನು ನಿಯಮಿತ ಅಭ್ಯಾಸವಾಗಿ (Addiction) ಮಾಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಿ. ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು (Harmful) ಮತ್ತು ಅದು ತುಂಬಾ ಒಳ್ಳೆಯದಲ್ಲ. ಇದಲ್ಲದೆ, ನೀವು ತೂಕ ಇಳಿಸುವ ಪ್ರಯಾಣದಲ್ಲಿದ್ದರೆ, ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ನೀವು ಎಷ್ಟು ಸಾಧ್ಯವೋ ಅಷ್ಟು ಆಲ್ಕೋಹಾಲ್ ಅನ್ನು ತ್ಯಜಿಸುವುದು ಉತ್ತಮ.
ಇದನ್ನೂ ಓದಿ: ಒಂದೇ ವಾರದಲ್ಲಿ ತೂಕ ಇಳಿಸ್ಕೊಳ್ಬೇಕು ಅಂದ್ರೆ ಐಸ್ ಆ್ಯಪಲ್ ತಿನ್ನಿ
ನಿಮ್ಮ ಗಮನಕ್ಕೆ ಬರದೇ ಇರುವ ಹಾಗೆ ನೀವು ಸೇವಿಸುವ ಕೆಲವು ಪಾನೀಯಗಳಲ್ಲಿ (Beverages) ಆಲ್ಕೋಹಾಲ್ ಅಂಶ ತುಂಬಿರಬಹುದು ಅಂತಹ ಪಾನೀಯಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದು ನಿಮ್ಮ ತೂಕ ನಷ್ಟದ ಪ್ರಯಾಣಕ್ಕೆ ಅವಶ್ಯಕ ಅವುಗಳು ಯಾವುವು ಎಂಬ ಪಟ್ಟಿ (List) ಇಲ್ಲಿವೆ ನೋಡಿ..
ಲಾಂಗ್ ಐಲ್ಯಾಂಡ್ ಐಸ್ಡ್ ಟೀ ( Long Island Iced Tea)
ಈ ಪಾನೀಯವು ಹಲವಾರು ಪಾನೀಯಗಳ (Drinks) ಸಂಯೋಜನೆ (Combination) ಮತ್ತು ಇದು ನಿಮ್ಮ ತೂಕ ನಿರ್ವಹಣೆಯ (Management) ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಇದು ಹಲವಾರು ಮದ್ಯಗಳ ಮಿಶ್ರಣವಾಗಿರುವುದರಿಂದ, ಇದು ನಿಮ್ಮನ್ನು ತುಂಬಾ ಸುಲಭವಾಗಿ ಕುಡಿದು ನಿಮ್ಮ ಹಸಿವನ್ನು (Hunger) ಹೆಚ್ಚಿಸುತ್ತದೆ ಮತ್ತು ಇದರ ಸೇವನೆಯ ನಂತರ ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು, ಇದೇ ನಿಮ್ಮ ಕ್ಯಾಲೊರಿಗಳನ್ನು (Calories) ಹೆಚ್ಚಾಗಲು ಪ್ರಮುಖ ಅಂಶವಾಗುತ್ತದೆ.
ಪಿನಾ ಕೋಲಾಡಾಸ್ (Pina Coladas)
ಈ ಆಲ್ಕೊಹಾಲ್ಯುಕ್ತ ಪಾನೀಯವು ನಿಮ್ಮ ತೂಕವನ್ನು ಅಗಾಧವಾಗಿ ಹೆಚ್ಚಿಸಬಹುದು (Gain). ಏಕೆಂದರೆ ಪಿನಾ ಕೋಲಾಡಾಗಳನ್ನು ಸಕ್ಕರೆ ಮಿಶ್ರಣಗಳಿಂದ (Mix) ತಯಾರಿಸಲಾಗುತ್ತದೆ ಮತ್ತು ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಆಲ್ಕೋಹಾಲ್ ಮಾತ್ರವಲ್ಲ, ಈ ಪಾನೀಯದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಗಳು (Sugar) ನಿಮ್ಮ ಸೊಂಟಕ್ಕೆ ಸೇರಿಸುತ್ತವೆ. ಇದು ತೂಕ ಹೆಚ್ಚಿಸಲು ಕಾರಣವಾಗಿ ನಿಮ್ಮ ದೇಹದ ಆಕಾರ (Shape) ಕಳೆದುಕೊಳ್ಳುವಂತೆ ಮಾಡುತ್ತದೆ.
ಇದನ್ನೂ ಓದಿ: ಅಲ್ಕೋಹಾಲ್ ಕುಡಿದ್ರೆ ವಿಪರೀತ ಬೆವರೋದ್ಯಾಕೆ ?
ಮೊಜಿಟೋಸ್ (Mojitos)
ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಇನ್ನೊಂದು ಮೋಜಿಟೊ. ಮೊಜಿಟೊಗಳಲ್ಲಿ ವಿವಿಧ ಸುವಾಸನೆ (Flavour) ಮತ್ತು ವಿಧಗಳಿವೆ. ಆದರೆ, ಅವುಗಳ ನಡುವಿನ ಸಾಮಾನ್ಯತೆ ಅಂದರೆ, ಅವುಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. ಅವುಗಳಲ್ಲಿರುವ ಈ ಸಕ್ಕರೆಯು ಕ್ಯಾಲೊರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ (Slowdown).
ಇದು ಕೇವಲ ವೃತ್ತಿಪರ ವೈದ್ಯಕೀಯ ಸಲಹೆ. ಯಾವುದೇ ಫಿಟ್‌ನೆಸ್ ಪ್ರೋಗ್ರಾಂ (Program) ಅನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು (Changes) ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ. ಪ್ರತ್ಯೇಕ ಡಯಟ್ ಪಾಲನೆ ಮಾಡುವುದು ಉತ್ತಮ.