ಅಲ್ಕೋಹಾಲ್ ಕುಡಿದ್ರೆ ವಿಪರೀತ ಬೆವರೋದ್ಯಾಕೆ ?

ಅಲ್ಕೋಹಾಲ್‌ ಸೇವಿಸಿದ ತಕ್ಷಣ ಅಮಲು ಬರುವುದು ಸಾಮಾನ್ಯ. ಆದರೆ ಕೆಲವೊಬ್ಬರಿಗೆ ಇದಲ್ಲದೆ ಡ್ರಿಂಕ್ಸ್ ಮಾಡುವುದರಿಂದ ವಿಪರೀತ ಬೆವರಲು ಆರಂಭವಾಗುತ್ತದೆ. ಇದಕ್ಕೇನು ಕಾರಣ ?

Do You Sweat After Drinking Alcohol, Seven Reasons Why It May Happen Vin

ಅಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತಿದ್ರೂ ಡ್ರಿಂಕ್ಸ್ ಮಾಡದವರು ಕಡಿಮೆ. ಆದರೆ ಅಲ್ಕೋಹಾಲ್ ಎಲ್ಲರ ದೇಹಕ್ಕೂ ಒಂದೇ ರೀತಿಯ ಪ್ರತಿಕ್ರಿಯೆ ತೋರುವುದಿಲ್ಲ.ಅಲ್ಕೋಹಾಲ್‌ ಸೇವಿಸಿದ ತಕ್ಷಣ ಅಮಲು ಬರುವುದು ಎಲ್ಲರಲ್ಲಿ ಸಾಮಾನ್ಯ. ಆದರೆ ಇದಲ್ಲದೆ ಕೆಲವರಿಗೆ ವಿಪರೀತ ಸುಸ್ತು, ತಲೆಸುತ್ತುವಿಕೆ, ವಾಂತಿಯಾಗುವುದು ಆಗುತ್ತದೆ. ಮತ್ತೆ ಕೆಲವರಿಗೆ ಅಲ್ಕೋಹಾಲ್ ಸೇವನೆಯ ತಕ್ಷಣ ವಿಪರೀತ ಬೆವರಲು ಶುರುವಾಗುತ್ತದೆ. ಇದಕ್ಕೇನು ಕಾರಣ ?

ಅಲ್ಕೋಹಾಲ್ ಸೇವಿಸಿದ ನಂತರ ಅತಿಯಾಗಿ ಬೆವರಲು ಕಾರಣಗಳು

1. ತ್ವರಿತ ಹೃದಯ ಬಡಿತ: ಮದ್ಯಪಾನ (Alcohol)  ಮಾಡಿದ ಕೂಡಲೇ ದೇಹ (Body) ಅತಿಯಾಗಿ ಬಿಸಿಯಾಗಲು ಆರಂಭವಾಗುತ್ತದೆ. ಇದು ಹೃದಯ ಬಡಿತವನ್ನು ವೇಗಗೊಳಿಸಲು ಕಾರಣವಾಗಬಹುದು. ಮಾತ್ರವಲ್ಲ ಇದು ಬೆವರುವಿಕೆಯ ಸಾಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಡಾ.ಜೈನ್ ಹೇಳುತ್ತಾರೆ, ಮದ್ಯವು ಕೇಂದ್ರ ನರಮಂಡಲ, ರಕ್ತಪರಿಚಲನಾ ವ್ಯವಸ್ಥೆ ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಅಲ್ಕೋಹಾಲ್ ಸೇವನೆ ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗುತ್ತದೆ. ನಿಮ್ಮ ಚರ್ಮ (Skin) ದಲ್ಲಿ ರಕ್ತನಾಳಗಳನ್ನು ವಿಸ್ತರಿಸುತ್ತದೆ. ಹೀಗಾಗಿ ಇದು ಬೆವರುವಿಕೆಯನ್ನು ಪ್ರಚೋದಿಸುತ್ತದೆ.

ಅಲ್ಕೋಹಾಲ್‌ ಸೇವನೆಯಿಂದ ಬೊಜ್ಜು ಬರುತ್ತಾ ? ಹೊಸ ಅಧ್ಯಯನದಲ್ಲೇನಿದೆ

2. ರಕ್ತದೊತ್ತಡದಲ್ಲಿ ಏರುಪೇರುಗಳು: ಅತಿಯಾಗಿ ಕುಡಿಯುವವರು ಮದ್ಯದೊಂದಿಗೆ ಹೊಂದಿರುವ ಸಂಬಂಧವು ಅನಾರೋಗ್ಯಕರವಾಗಿದೆ. ಅಲ್ಕೋಹಾಲ್ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದು ನಿಮ್ಮ ರಕ್ತನಾಳಗಳನ್ನು ಬಿಗಿಗೊಳಿಸಬಹುದು, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಅಲ್ಕೋಹಾಲ್ ಸೇವಿಸಿದ ನಂತರ ಹೆಚ್ಚು ಬೆವರುತ್ತಾನೆ.

3. ಹ್ಯಾಂಗೋವರ್‌: ಮದ್ಯ ಕುಡಿದರೆ ಸಾಮಾನ್ಯವಾಗಿ ತಲೆ ತಿರುಗಲು, ಸುಸ್ತಾದ ಅನುಭವಕ್ಕೆ ಕಾರಣವಾಗುತ್ತೆ. ಈ ಹ್ಯಾಂಗೋವರ್‌ನಿಂದಲೇ ಕೆಲವೊಮ್ಮೆ ವಿಪರೀತ ಬೆವರಲು ಆರಂಭವಾಗುತ್ತದೆ. ಸುಸ್ತಾದ ಕಾರಣ ದೇಹವು ಒತ್ತಡದ ಪ್ರತಿಕ್ರಿಯೆ ತೋರುತ್ತದೆ. ಹೀಗಾಗಿ ದೇಹದಿಂದ ಹೆಚ್ಚು ಬೆವರು ಹೊರ ಸೂಸಲು ಆರಂಭವಾಗುತ್ತದೆ.

4. ದೇಹದ ಉಷ್ಣತೆ: ಮದ್ಯವನ್ನು ಸೇವಿಸಿದ ನಂತರ ದೇಹವು ಅದನ್ನು ಸಂಸ್ಕರಿಸಬೇಕು. ಒಬ್ಬರು ಅದನ್ನು ಎಷ್ಟು ಹೆಚ್ಚು ಸೇವಿಸುತ್ತಾರೋ, ಅದನ್ನು ಹೆಚ್ಚು ಚಯಾಪಚಯಗೊಳಿಸಬೇಕಾಗುತ್ತದೆ. ಆದ್ದರಿಂದ, ದೇಹವು ಅಲ್ಕೋಹಾಲ್‌ನ್ನು ಚಯಾಪಚಯಗೊಳಿಸಿದಾಗ, ಒಬ್ಬರು ಹೆಚ್ಚು ಬೆವರಲು ತೊಡಗುತ್ತಾರೆ. ಚಯಾಪಚಯ ದರದಲ್ಲಿನ ಏರಿಕೆಯು ಹೆಚ್ಚಿದ ದೇಹದ ಉಷ್ಣತೆಯೊಂದಿಗೆ ಸಂಬಂಧಿಸಿದೆ ಎಂದು ಡಾ.ಜೈನ್ ಹೇಳುತ್ತಾರೆ.

ಒಂದು ಪೆಗ್ ಹಾಕಿದ್ರೆ ತಪ್ಪೇನಿಲ್ಲ..! ಅಲ್ಕೋಹಾಲ್ ಆರೋಗ್ಯ ಚೆನ್ನಾಗಿಡುತ್ತೆ ಎನ್ನುತ್ತೆ ಅಧ್ಯಯನ

5. ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ: ಹೈಪೋಥಾಲಮಸ್ (ಮೆದುಳಿನ ಒಂದು ಪ್ರದೇಶ) ನರಮಂಡಲ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕಾರಣವಾಗಿದೆ. ಆಲ್ಕೋಹಾಲ್ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದ ಉಷ್ಣತೆಯನ್ನು ಬದಲಾಯಿಸುತ್ತದೆ ಮತ್ತು ಈ ಕಾರಣದಿಂದಾಗಿ ದೇಹ ಹೆಚ್ಚು ಬೆವರನ್ನು ಹೊರ ಹಾಕಲು ಆರಂಭಿಸುತ್ತದೆ. 

6. ಬಿಸಿ ವಾತಾವರಣ: ನೀವು ಹೊರಾಂಗಣ ಪರಿಸರದಲ್ಲಿ ಅಥವಾ ಸೂರ್ಯನ ಕೆಳಗೆ ನಿಂತಿದ್ದರೆ ಶಾಖದ ಕಾರಣದಿಂದಾಗಿ ನೀವು ಹೆಚ್ಚು ಬೆವರಬಹುದು. ಇದಲ್ಲದೆ, ನೀವು ಕಿಕ್ಕಿರಿದ, ಕಳಪೆ ಗಾಳಿ ಇರುವ ಸ್ಥಳದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರೆ ಅತಿಯಾಗಿ ಬೆವರಲು ಆರಂಭವಾಗಬಹುದು.

7. ಅಲ್ಕೋಹಾಲ್ ಅಸಹಿಷ್ಣುತೆ: ಕೆಲವೊಂದು ಅಲ್ಕೋಹಾಲ್‌ಗಳಲ್ಲಿರುವ ರಾಸಾಯನಿಕ ಅಂಶ ಕೆಲವೊಬ್ಬರಿಗೆ ಆಗಿ ಬರುವುದಿಲ್ಲ. ಹೆಚ್ಚು ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಇದು ಮುಖದಲ್ಲಿ ದದ್ದು, ಕೆಂಪು ಬಣ್ಣಗಳಂತಹಾ ಗುಳ್ಳೆಗೆ ಕಾರಣವಾಗಬಹುದು. ಅಲ್ಕೋಹಾಲ್ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ, ಇದು ನಿಮ್ಮ ದೇಹವು ಬೆವರಿನೊಂದಿಗೆ ನೀರನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ, ಜಾಗರೂಕರಾಗಿರಿ ಮತ್ತು ಸಾಕಷ್ಟು ನೀರು ಕುಡಿಯಲು ಪ್ರಯತ್ನಿಸಿ.

ನಿಯಮಿತವಾಗಿ ಅಲ್ಕೋಹಾಲ್ ಸೇವನೆ ಸುರಕ್ಷಿತವಾಗಿದೆ ?
ಪ್ರತಿದಿನ ಮದ್ಯಪಾನ ಮಾಡುವ ಅಭ್ಯಾಸ (Habit) ಒಳ್ಳೆಯದಲ್ಲ. ಯಾರಾದರೂ ಹೀಗೆ ಮಾಡುತ್ತಿದ್ರೆ, ಅವರು ತಮ್ಮ ವೈದ್ಯರ ಶಿಫಾರಸುಗಳಿಗೆ ಅನುಗುಣವಾಗಿ ಅದನ್ನು ಮಾಡಬೇಕು. ಆದಾಗ್ಯೂ, ಕಾಯಿಲೆ (Disease) ತಡೆಗಟ್ಟುವಿಕೆ ಮತ್ತು ಆರೋಗ್ಯ (Health) ಪ್ರಚಾರದ ಕಚೇರಿಯ 2015-2020 ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಆಲ್ಕೊಹಾಲ್ ಸೇವನೆಯು ಮಹಿಳೆಯರಿಗೆ ದಿನಕ್ಕೆ ಒಂದು ಪಾನೀಯವನ್ನು ಮತ್ತು ಪುರುಷರಿಗೆ ದಿನಕ್ಕೆ ಎರಡು ಪಾನೀಯಗಳನ್ನು ಸೂಚಿಸುತ್ತದೆ.

Latest Videos
Follow Us:
Download App:
  • android
  • ios