ನೀವು ಕುಡಿಯುವ ಕಾಫಿಯಲ್ಲಿ ಶೇಕಡಾ ಜಿರಲೆ ಅಂಶ ಇರುವುದು ನಿಮಗೆ ಗೊತ್ತಾ? ಶೇಕಡಾ 10ರಷ್ಟು ಅನುಮತಿಯೂ ಇದಕ್ಕಿದೆ. ಏನಿದು ವಿಷ್ಯ? ಇಲ್ಲಿದೆ ಡಿಟೇಲ್ಸ್​... 

ಕಾಫಿ ಕುಡಿಯದೇ ಹಲವರ ದಿನ ಆರಂಭವೇ ಆಗುವುದಿಲ್ಲ. ಒಮ್ಮೆ ಕಾಫಿಗೆ ಎಡಿಕ್ಟ್​ ಆಗಿಬಿಟ್ಟರೆ ಅದೊಂದು ರೀತಿಯಲ್ಲಿ ನಶೆ ಇದ್ದಂತೆ. ದಿನವೂ ಬೇಕೇ ಬೇಕು. ಇಲ್ಲದಿದ್ದರೆ ಇಡೀ ದಿನ ಏನೋ ಕಸಿವಿಸಿ, ತಳಮಳ, ಕೆಲಸ ಮಾಡಲು ಮೂಡೇ ಇರುವುದಿಲ್ಲ. ಒಂದು ಕಪ್​ ಕಾಫಿ ಕುಡಿದರೆ ಅಹ್ಲಾದ, ಉಲ್ಲಾಸ ಎಲ್ಲವೂ ಬರುತ್ತದೆ. ಆದರೆ ಇಂಥ ಕಾಫಿ ಪ್ರಿಯರಿಗೆ ಇದೀಗ ಶಾಕ್​ ಆಗಿರೋ ವಿಷಯವೊಂದು ಹೊರಬಂದಿದೆ. ಕಾಫಿ ಕುಡಿದವರೂ ವ್ಯಾಕ್​ ಎನ್ನುವಂತಾಗಿದೆ. ಅದು ಕಾಫಿ ಪುಡಿಯಲ್ಲಿ ಜಿರಲೆ ಅಥವಾ ಇತರ ಕ್ರಿಮಿ ಕೀಟಕ್ಕೆ ಅನುಮತಿ ಇರುವ ವಿಷಯ.

ಹಾಗೆಂದು ಇದು ಇಂದು ನಿನ್ನೆಯ ಸುದ್ದಿಯಲ್ಲ. ಕಾಫಿ ಶುರುವಾದ ಆರಂಭದಿಂದಲೂ ಶೇಕಡಾ 10ರಷ್ಟು ಕ್ರಿಮಿ ಕೀಟ ಅದರಲ್ಲಿಯೂ ಹೆಚ್ಚಾಗಿ ಜಿರಳೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಅಮೆರಿಕದ ಪ್ರತಿಷ್ಠಿತ ವಿದೇಶಿ ಕಂಪೆನಿಗಳು ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ತೊಡಗಿರುವ ವಿದೇಶಿ ನೇರ ಹೂಡಿಕೆ (FDI) ಅಧಿಕೃತವಾಗಿ ಇದಕ್ಕೆ ಅನುಮತಿ ನೀಡಿದೆ. ಇದರ ಅರ್ಥ, ಹುಟ್ಟಿನಿಂದ ನೀವು ಇಲ್ಲಿಯವರೆಗೆ ಎಷ್ಟು ಕಾಫಿ ಕುಡಿದಿದ್ದಿರೋ ಅವುಗಳಲ್ಲಿ ಜಿರಳೆ ಅಂಶವೂ ಇದ್ದಿರಬಹುದು!

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಕಾಫಿ ತಯಾರಿಸುವಾಗ ಜಿರಳೆಗಳು ಕಾಫಿ ಬೀಜಗಳ ಜೊತೆಯಲ್ಲಿ ಸೇರಿಕೊಳ್ಳುವುದು ಸಾಮಾನ್ಯ. ಕಾಫಿ ಬೆಳೆಯುವಾಗ ಮತ್ತು ಸಂಸ್ಕರಿಸುವಾಗ ಜಿರಳೆಗಳು ಕಾಫಿ ಬೀಜಗಳನ್ನು ಮುತ್ತಿಕೊಳ್ಳಬಹುದು. ಇಲ್ಲವೇ, ಕಾಫಿ ಬೀಜಗಳನ್ನು ಸಂಗ್ರಹಿಸಿಡುವಾಗ ಜಿರಳೆಗಳು ಪ್ರವೇಶಿಸಬಹುದು. ಪೂರ್ವ-ಗ್ರೌಂಡ್ ಕಾಫಿಯಲ್ಲಿ ಅಂದರೆ ಕಾಫಿ ಬೀಜಗಳನ್ನು ಪುಡಿ ಮಾಡುವ ಪೂರ್ವದಲ್ಲಿ ಇವುಗಳ ಸಾಧ್ಯತೆ ಹೆಚ್ಚು. ಏಕೆಂದರೆ ಪುಡಿಮಾಡಿದ ಕಾಫಿಯಲ್ಲಿ ಜಿರಳೆಗಳು ಸುಲಭವಾಗಿ ಸೇರಿಕೊಳ್ಳಬಹುದು. ಆದ್ದರಿಂದಲೇ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ, ಶೇಕಡಾ 10ರಷ್ಟು ಅನುಮತಿ ನೀಡಲಾಗಿದೆ.

ಅಷ್ಟಕ್ಕೂ ಇದು ಕಾಫಿಯದ್ದು ಒಂದೇ ವಿಷಯವಲ್ಲ ಬಿಡಿ. ನಾವು ದಿನನಿತ್ಯ ತರುವ ಬೇಳೆ-ಕಾಳು, ಅಕ್ಕಿ, ಮೆಣಸು ಸೇರಿದಂತೆ ಎಲ್ಲವುಗಳಲ್ಲಿಯೂ ಹೇಗೆ ಬರುತ್ತದೆ ಎನ್ನುವುದು ತಿಳಿದರೆ ಅವುಗಳನ್ನು ತಿನ್ನುವುದೆ ಬಿಡಬೇಕಷ್ಟೆ. ಚಹದ ಪುಡಿಯ ತಯಾರಿಕೆಯಲ್ಲಿಯೂ ಇದೇ ರೀತಿ ಆಗುತ್ತಿರುವ ವಿಡಿಯೋಗಳೂ ಸಾಕಷ್ಟು ವೈರಲ್​ ಆಗಿರುವುದು ಉಂಟು. ಆದರೆ ಕಾಫಿಯಲ್ಲಿ ಮಾತ್ರ ಎಫ್​ಡಿಐ ಶೇಕಡಾ 10ರಷ್ಟು ಅನುಮತಿ ನೀಡಿರುವ ಬಗ್ಗೆ ವಿಡಿಯೋದಲ್ಲಿ ಆಹಾರ ತಜ್ಞರು ವಿವರಣೆ ನೀಡಿದ್ದಾರೆ ನೋಡಿ.

View post on Instagram