ಮಾವಿನ ಹಣ್ಣುಗಳಲ್ಲಿ ಅಲ್ಫಾನ್ಸೊ ಪ್ರಮುಖವಾದುದು. ಆದರೆ ಇದು ಭಾರತೀಯ ತಳಿಯಲ್ಲ. ಹಾಗಿದ್ರೆ ಇದ್ರ ಮೂಲ ಯಾವುದು?
ಇನ್ನೇನು ಮಾವಿನ ಹಣ್ಣಿನ ಸೀಸನ್ ಆರಂಭವಾಯ್ತು. ಮಾರುಕಟ್ಟೆಯಲ್ಲಿ ಹಣ್ಣಿನ ರಾಜ ಮಾವು ಬರುವ ಸಮಯವಾಯ್ತು. ಹಲವು ಪೋಷಕಾಂಶಗಳ ಜೊತೆ ಬಾಯಿಗೆ ರುಚಿ ನೀಡುವ ಮಾವಿನ ಹಣ್ಣು ಎಂದರೆ ಬಹುತೇಕರಿಗೆ ಬಹಳ ಇಷ್ಟ. ಆದರೆ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಮಾವಿನ ಹಣ್ಣುಗಳಲ್ಲಿ ಅಲ್ಫಾನ್ಸೋ ಮಾವಿನ ಹಣ್ಣು ಪ್ರಮುಖವಾದುದು. ಭಾರತೀಯರನೇಕರು ಇಷ್ಟ ಪಡುವ ಈ ಹಣ್ಣು ವಿದೇಶಿ ತಳಿ ಎಂಬುದು ನಿಮಗೆ ಗೊತ್ತಾ?
ಪ್ರತಿ ವರ್ಷ ಬೇಸಿಗೆ ಸೆಖೆಯ ಕಿರಿಕಿರಿ ಜೊತೆ ಖುಷಿ ನೀಡುವ ಒಂದು ವಿಚಾರ ಎಂದರೆ ಅದು ಮಾವಿನ ಹಣ್ಣು. ಹಣ್ಣುಗಳ ರಾಜ ಎಂದು ಪ್ರಸಿದ್ಧವಾಗಿರುವ ಮಾವು ಬೇಸಿಗೆಯ ಋತುವಿಗೆ ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. 'ಆಮ್ರಾ', 'ಆಮ್' ಅಥವಾ 'ಮಂಗಾ' ಎಂದೂ ಭಾರತದ ವಿವಿಧ ಭಾಷೆಗಳಲ್ಲಿ ಕರೆಯಲ್ಪಡುವ ಮಾವುಗಳು ಭಾರತಕ್ಕೆ ಹೊಸದಲ್ಲ, 4000 ವರ್ಷಗಳಿಗೂ ಹಿಂದಿನಿಂದಲೂ ಈ ಹಣ್ಣು ಭಾರತದಲ್ಲಿ ಬೆಳೆಯುತ್ತಿದೆ. ಇಂದು ಜಗತ್ತಿನಲ್ಲಿ 400 ಕ್ಕೂ ಹೆಚ್ಚು ಪ್ರಭೇದಗಳ ಮಾವಿನ ಹಣ್ಣು ಲಭ್ಯವಿದ್ದು, ಅತ್ಯಂತ ರುಚಿಕರವಾದ ಮಾವಿನ ಹಣ್ಣುಗಳಲ್ಲಿ ಅಲ್ಪಾನ್ಸೋ ಮಾವಿನ ಹಣ್ಣು ಕೂಡ ಒಂದಾಗಿದೆ. ಆದರೆ ಇದು ವಿದೇಶಿ ತಳಿ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಪೋರ್ಚುಗೀಸರ ರಾಜನಿಂದಾಗಿ ಬಂತು ಅಲ್ಪಾನ್ಸೊ ಹೆಸರು
ಈ ಅಲ್ಫಾನ್ಸೊ ಮಾವಿನ ಹಣ್ಣು ಹೆಸರೇ ಹೇಳುವಂತೆ ರಾಜನನ್ನು ಪ್ರತಿನಿಧಿಸುತ್ತದೆ. ಈ ಮಾವಿಗೆ ಅಲ್ಪಾನ್ಸೊ ಡಿ ಅಲ್ಬುಕರ್ಕ್ ರಾಜನಿಂದಾಗಿ ಈ ಹೆಸರು ಬಂದಿದೆ. ಏಕೆಂದರೆ ಈ ಮಾವಿನ ಹಣ್ಣು ಮೂಲತಃ ಪೋರ್ಚುಗಲ್‌ನದ್ದು, 15ನೇ ಶತಮಾನದಲ್ಲಿ ಭಾರತ ದೇಶವನ್ನು ಕೊಳ್ಳೆ ಹೊಡೆಯಲು ಬಂದ ಪೋರ್ಚುಗಿಸರು ಬಿಟ್ಟು ಹೋದ ಒಂದೇ ಒಂದು ಒಳ್ಳೆಯ ಕೊಡುಗೆ ಇದು. ಪೋರ್ಚುಗೀಸರ ರಾಜ ಅಲ್ಪಾನ್ಸೋ ಡಿ ಅಲ್ಬುಕರ್ಕ್‌ನಿಂದಾಗಿ ಈ ಮಾವಿಗೆ ಅಲ್ಪೋನ್ಸೋ ಎಂಬ ಹೆಸರು ಬಂದಿದೆ. 'ಕಂಕ್ವೆರರ್ ಆಫ್ ಗೋವಾ'(Conqueror of Goa) ಗೋವಾದ ವಿಜಯಶಾಲಿ ಎಂದು ಬಿರುದು ಪಡೆದಿದ್ದ ಈತ.
Mangoes On EMI: ರಸಭರಿತ ಮಾವಿನ ಹಣ್ಣು ಈಗ್ಲೇ ತಿನ್ನಿ, ಆಮೇಲೆ ಪಾವತಿಸಿ!
ಅಲ್ಪಾನ್ಸೋದ ಪ್ರಮುಖ ಬೆಳೆಗಾರನಾಗಿರುವ ಗೋವಾ ರಾಜ್ಯ
ಭಾರತದಲ್ಲಿ ವಸಾಹತುಗಳನ್ನು ಸ್ಥಾಪಿಸಿದ ನಂತರ, 'ದಿ ಕೊಲಂಬಿಯನ್ ಫುಡ್ ಎಕ್ಸ್‌ಚೇಂಜ್' ಅನ್ನು ನಿರ್ವಹಿಸಿದರು, ಇದು ಹೊಸ ಬಗೆಯ ಹಣ್ಣುಗಳನ್ನು ಮಾತ್ರವಲ್ಲದೆ ತರಕಾರಿಗಳನ್ನು ಸಹ ಭಾರತಕ್ಕೆ ಪರಿಚಯಿಸಿತು. ಪ್ರಪಂಚದಾದ್ಯಂತ ರಫ್ತು ಮಾಡುವಾಗ, ಅಲ್ಲಿನ ಮಾವಿನ ಹೊಸ ರೂಪಾಂತರವು ವಿನಿಮಯದ ಭಾಗವಾಗಿ ಭಾರತಕ್ಕೆ ಬಂತು. ಪೋರ್ಚುಗೀಸರ ರಾಜ ಅಲ್ಬುಕರ್ಕ್ ಸುಲಭವಾಗಿ ಸವಿಯಬಹುದಾದ ಮತ್ತು ಬಡಿಸಬಹುದಾದ ಗಟ್ಟಿಯಾದ ಮತ್ತು ಸಿಹಿಯಾದ ಮಾವಿನ ಹಣ್ಣುಗಳನ್ನು ಬಯಸಿದ್ದನಂತೆ, ಆದ್ದರಿಂದ ಆತ ಒಳ್ಳೆಯ ತಿರುಳಿರುವ ಮಾವಿನ ಹಣ್ಣಿಗಾಗಿ ಇಲ್ಲಿ ಅದರ ಬೀಜಗಳನ್ನು ಬಿತ್ತಿದ್ದರು. ಅಲ್ಲದೇ ಗೋವಾದಲ್ಲಿ ಮಾವಿನ ಗಿಡಗಳ ಮೇಲೆ ಕಸಿ ಮಾಡಲು ಪ್ರಾರಂಭಿಸಿದರು ಮತ್ತು ಇದರಿಂದ 'ಅಲ್ಫೋನ್ಸೊ' ಮಾವು ಹುಟ್ಟಿಕೊಂಡಿತು. ಹೀಗಾಗಿಯೇ ಗೋವಾ ರಾಜ್ಯವು ಈ ರಸಭರಿತ ಹಣ್ಣಿನ ಪ್ರಮುಖ ಬೆಳೆಗಾರನಾಗಿದೆ.
