ಕೆಂಪು ಇರುವೆ ಚಟ್ನಿ ಮಾಡಿ ಸವಿದ ಬಿಗ್ ಬಾಸ್ ಕಿಶನ್, ಏನೆಲ್ಲಾ ತಿನ್ತೀರಪ್ಪಾ ಕಾಲೆಳೆದ ನೆಟ್ಟಿಗರು
ಭಾರತದಲ್ಲಿ ಚಿತ್ರ-ವಿಚಿತ್ರ ಆಹಾರಗಳಿವೆ. ಕೆಲವೊಂದು ತುಂಬಾ ಟೇಸ್ಟಿಯಾದರೆ, ಇನ್ನು ಕೆಲವು ಕೆಟ್ಟ ರುಚಿಯನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಕೆಲವು ವಿಚಿತ್ರವಾದ ಆಹಾರಗಳು ಇಲ್ಲಿವೆ. ಅದರಲ್ಲೊಂದು ಇರುವೆ ಚಟ್ನಿ. ಸದ್ಯ ಬಿಗ್ ಬಾಸ್‌ನ ಕಿಶನ್ ಈ ಸ್ಪೆಷಲ್ ಕೆಂಪು ಇರುವೆ ಚಟ್ನಿ ಮಾಡಿ ಸವಿದಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಒಂದೊಂದು ಪ್ರದೇಶದಲ್ಲಿ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ, ವಿಚಿತ್ರವಾಗಿರುತ್ತದೆ. ಕೆಲವೊಬ್ಬರು ವಾವ್ಹ್ ಅಂತ ಬಾಯಿ ಚಪ್ಪರಿಸಿಕೊಂಡು ತಿನ್ನೋ ಆಹಾರ ಇನ್ನು ಕೆಲವರಿಗೆ ಛೀ, ಥೂ ಅನಿಸಬಹುದು. ಅಂಥಾ ಹಲವು ಆಹಾರಗಳು ಪ್ರಪಂಚದಲ್ಲಿವೆ. ಶಾರ್ಕ್ ಕರಿ, ನಾಯಿ ಮಾಂಸ, ಹಂದಿ ಸಲಾಡ್, ಕಪ್ಪೆ ಮಾಂಸವನ್ನು ಸವಿಯುವವರು ಇದ್ದಾರೆ. ಹಾಗೆಯೇ ಭಾರತದ ಕೆಲವೆಡೆ ಇರುವೆ ಚಟ್ನಿ ತುಂಬಾ ಫೇಮಸ್ ಆಗಿದೆ. ಸದ್ಯ ಬಿಗ್ ಬಾಸ್‌ನ ಕಿಶನ್ ಈ ಸ್ಪೆಷಲ್ ಕೆಂಪು ಇರುವೆ ಚಟ್ನಿ ಮಾಡಿ ಸವಿದಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಅವರು ಡ್ಯಾನ್ಸರ್, ಆಕ್ಟರ್, ರೀಲ್ಸ್ ಸ್ಟಾರ್ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ತಮ್ಮೂರು ಮಲೆನಾಡು ಚಿಕ್ಕಮಗಳೂರಿಗೆ ಹೋಗಿರುವ ಕಿಶನ್, ಕೆಂಪು ಇರುವೆ ಚಟ್ನಿ (Red ant chutney) ತಯಾರಿಸಿ ಸವಿದಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ನಾನಾ ರೀತಿಯ ಕಾಮೆಂಟ್‌ಗಳು ಬರ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್-7 ಖ್ಯಾತಿಯ ಕಿಶನ್ ಬಿಳಗಲಿ ಅವರು ಆಗಾಗ ಅಡುಗೆಗೆ (Cooking) ಸಂಬಂಧಪಟ್ಟ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಕೆಂಪು ಇರುವೆ ಚಟ್ನಿ ಮಾಡಿದ್ದಾರೆ. ಅಥವಾ ಈ ಇರುವೆಯನ್ನು ಚಾಗಲಿ ಎಂದು ಸಹ ಕರೆಯುತ್ತಾರೆ. ಈ ಇರುವೆ ಚಟ್ನಿಯನ್ನು ತಯಾರಿಸುವ ರೀತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಛೀ..ಏನೆಲ್ಲಾ ಮಾಡ್ತಾರಪ್ಪಾ, ಪಾಸ್ತಾ ಬೇಯಿಸುವಾಗ ಮೊಣಕಾಲಿನ ಎಲುಬು ಸೇರಿಸಿದ ಮಹಿಳೆ!
ಮರವೇರಿ, ಇರುವೆ ತಂದು ಚಟ್ನಿ ಸಿದ್ಧಪಡಿಸಿದ ಕಿಶನ್
ಮೊದಲಿಗೆ ಕಿಶನ್, ಮರಕ್ಕೆ ಹತ್ತಿ ಚಾಗಲಿ ಇರುವೆಯನ್ನು ಕಲೆಕ್ಟ್ ಮಾಡುತ್ತಾರೆ. ನಂತರ ಇದನ್ನು ಬಾಂಡ್ಲಿಯಲ್ಲಿ ಹಾಕಿ ಹುರಿಯುತ್ತಾರೆ. ಆ ಬಳಿಕ ಪಾತ್ರೆಯೊಂದರಲ್ಲಿ ಹಾಕಿ ಬೇಯಿಸಲು ಒಲೆಯ ಮೇಲಿಡುತ್ತಾರೆ. ನಂತರ ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಹಸಿಮೆಣಸು, ತೆಂಗಿನತುರಿ ಸೇರಿಸಿ ಇರುವೆಯನ್ನು ಹಾಕಿ ಚಟ್ನಿಯನ್ನು ಸಿದ್ಧಪಡಿಸುವುದನ್ನು ನೋಡಬಹುದು. ನಂತರ ಬಿಸಿಬಿಸಿ ಅಕ್ಕಿ ರೊಟ್ಟಿಯ (Rice roti) ಜೊತೆಗೆ ಚಟ್ನಿ ಹಾಕಿಕೊಂಡು ಮೇಲೆ ಎಣ್ಣೆ ಹಾಕಿಕೊಂಡು, ಉಪ್ಪಿನಕಾಯಿ ಬಡಿಸಿಕೊಂಡು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸೂಪರ್ ಎಂದು ಅವರು ಎಕ್ಸ್‌ಪ್ರೆಶನ್ ಕೊಡುವುದನ್ನು ನೋಡಬಹುದು. ವಿಡಿಯೋವನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಆದರೆ ಅದಕ್ಕೂ ಮೊದಲು ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಕಿಶನ್ ಬೆಳಗಲಿ ಅದಕ್ಕೆ ಸ್ಪಷ್ಟ ಶೀರ್ಷಿಕೆಯನ್ನೂ ನೀಡಿದ್ದಾರೆ. ಚಾಗಲಿ ಇರುವೆ, ಮಲೆನಾಡಿನ ವಿಶೇಷ. ಇದರ ಬಗ್ಗೆ ಕಾಮೆಂಟ್ ಮಾಡುವ ಮುನ್ನ ಗೂಗಲ್ ಮಾಡಿ ವಿಷಯ ತಿಳಿದುಕೊಳ್ಳಿ. ನಿಮಗೆ ಇದು ಇಷ್ಟ ಆಗಿಲ್ಲ ಅಂದರೆ ತು, ಚಿ ಎನ್ನಬೇಡಿ. ಈ ಚಟ್ನಿಯಲ್ಲಿ ಜಿಂಕ್, ಕ್ಯಾಲ್ಸಿಯಂ, ಪ್ರೋಟೀನ್ ಇರುತ್ತದೆ, ಇದು ನಮಗೆ ರೋಗ ನಿರೋಧಕ ಶಕ್ತಿ ನೀಡುವುದು. ಅಷ್ಟೇ ಅಲ್ಲದೆ ಕಫ, ನೆಗಡಿ, ಉಸಿರಾಟ ಸಮಸ್ಯೆ ಮುಂತಾದ ರೋಗಗಳಿಗೆ ಉತ್ತಮ ಔಷಧಿ ಎಂದು ಮಾಹಿತಿ ನೀಡಿದ್ದಾರೆ.
Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ
'ಬಲ್ಲವನೆ ಬಲ್ಲ ಚಗಳಿ ಚಟ್ನಿ ರುಚಿಯ' ಎಂದು ನೆಟ್ಟಿಗರ ಕಾಮೆಂಟ್
ಆದರೂ ನೆಟ್ಟಿಗರು ಈ ವಿಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡೋದನ್ನು ಬಿಟ್ಟಿಲ್ಲ. ಒಬ್ಬ ಬಳಕೆದಾರರು, 'ಇದು ಭಾರತ ನಾ ಇಲ್ಲ ಚೀನಾ ನಾ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ಚಿಕನ್, ಮಟನ್, ಹಂದಿ ತಿನ್ನುವವರನ್ನ ನೋಡಿದ್ದೀವಿ. ಇವನ ಯಾರು ಗುರು ಇರುವೆ ತಿನ್ನುತ್ತಾನೆ' ಎಂದಿದ್ದಾರೆ. ಇನ್ನೊಬ್ಬರು, 'ನಿಮ್ಮ ಈ ರೀಲ್ಸ್ ನೋಡಿದ್ರೆ ಅನ್‌ಫಾಲೋ ಮಾಡ್ಬೇಕು ಅನಿಸ್ತಿದೆ' ಎಂದು ತಿಳಿಸಿದ್ದಾರೆ. 'ನಮ್ಮ ದೇಶ ಜನಸಂಖ್ಯೆಯಲ್ಲಿ ಮಾತ್ರ ಚೀನಾ ನಾ ಹಿಂದಿಕ್ಕಿದೆ ಅಂತ ತಿಳಿದಿದ್ದೆ, ಆದ್ರೆ ತಿನ್ನೋದ್ರಲ್ಲಿ ಹಿಂದಿಕ್ಕಿದೆ ಅಂತ ನಿನ್ನಿಂದಾನೆ ಗೊತ್ತಾಗಿದೆ ಗುರು' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಈ ಚಟ್ನಿಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಬಲ್ಲವನೆ ಬಲ್ಲ ಚಗಳಿ ಚಟ್ನಿ ರುಚಿಯ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಮಲೆನಾಡು ಅವರಿಗೆ ಗೊತ್ತು ಚಾಗಲಿ ಇರುವೆ ಚಟ್ನಿ ಗತ್ತು' ಎಂದು ತಿಳಿಸಿದ್ದಾರೆ. 'ಎಲ್ಲೆಲ್ಲಿಂದಾನೋ ಮಳೆಗಾಲಕ್ಕೆ ಬಂದು ಮಲ್ನಾಡ್ is heaven ಅದು ಇದು ಅಂತ ಪೋಸ್ ಕೊಡೊರಿಗೆ ಇಲ್ಲಿನ ನಿಜವಾದ ಆಹಾರ ಪದ್ದತಿ ,ಸಂಸೃತಿ ಬಗ್ಗೆ ಏನ್ ಗೊತ್ತಾಗ್ಬೇಕು ...ಇದೂ ಕೂಡಾ ಮಲೆನಾಡ ಸೊಗಡು ಕಣ್ರೋ ಕಪಿಗಳಾ' ಎಂದು ಕಾಮೆಂಟ್ ಮಾಡಿದ್ದಾರೆ.