Asianet Suvarna News Asianet Suvarna News

ಭಾರತದ ಕೆಟ್ಟ ಆಹಾರ ಪದಾರ್ಥ ಪಟ್ಟಿಯಲ್ಲಿ ಉಪ್ಪಿಟ್ಟು; ಇದೊಂದೇ ಕರೆಕ್ಟಾಗಿರೋದು ಅಂತಿದಾರೆ ನೆಟಿಜನ್ಸ್

ಟೇಸ್ಟ್ ಅಟ್ಲಾಸ್ ಭಾರತದ 10 ಅತ್ಯುತ್ತಮ ಮತ್ತು 10 ಅತಿ ಕೆಟ್ಟ ರೇಟಿಂಗ್ ಹೊಂದಿದ ಆಹಾರ ಪದಾರ್ಥಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯ ಬಗ್ಗೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಉಪ್ಪಿಟ್ಟಿನ ವಿಷಯದಲ್ಲಿ ಮಾತ್ರ ರೇಟಿಂಗ್ ಸರಿಯಾಗಿದೆ ಅಂತಿದಾರೆ!

TasteAtlas releases list of top 10 best and worst Indian dishes skr
Author
First Published Jul 3, 2024, 6:29 PM IST

ಆನ್‌ಲೈನ್ ಆಹಾರ ಮಾರ್ಗದರ್ಶಿ ಟೇಸ್ಟ್‌ಅಟ್ಲಾಸ್ ಇತ್ತೀಚೆಗೆ ಟಾಪ್ 10 ಅತ್ಯುತ್ತಮ ಮತ್ತು ಕೆಟ್ಟ-ಶ್ರೇಣಿಯ ಭಾರತೀಯ ಭಕ್ಷ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಗೆ ಭಾರತೀಯರು ತಕರಾರು ತೆಗೆದಿದ್ದಾರೆ.
ಮೊದಲು ರುಚಿಕರವಾದ ಭಾಗವನ್ನು ಪರಿಶೀಲಿಸೋಣ. ಟೇಸ್ಟ್ ಅಟ್ಲಾಸ್ ರಿಫ್ರೆಶ್ ಮಾವಿನ ಲಸ್ಸಿಯನ್ನು ಭಾರತೀಯ ಪಾಕಪದ್ಧತಿಯ ರಾಜ ಎಂದು ಕಿರೀಟವನ್ನು ನೀಡಿದೆ. ನಂತರ ಸಾಂತ್ವನ ನೀಡುವ ಚಾಯ್ ಮಸಾಲಾ ಮತ್ತು ಎಂದೆಂದಿಗೂ ಜನಪ್ರಿಯ ಬಟರ್ ಗಾರ್ಲಿಕ್ ನಾನ್ ಇರಿಸಿದೆ. ಅಮೃತಸರಿ ಕುಲ್ಚಾ, ಬಟರ್ ಚಿಕನ್, ಹೈದರಾಬಾದಿ ಬಿರಿಯಾನಿ, ಶಾಹಿ ಪನೀರ್, ಚೋಲೆ ಭಟೂರ್, ತಂದೂರಿ ಚಿಕನ್ ಮತ್ತು ಕೊರ್ಮಾದಂತಹ ಇತರ ಮೆಚ್ಚಿನವುಗಳು ಟಾಪ್ 10 ರಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.

ಇನ್ನು ಕೆಟ್ಟ ಭಕ್ಷ್ಯಗಳ ಪಟ್ಟಿಯಲ್ಲಿ ಜಲ್ ಜೀರಾ ಟಾಪ್‌ನಲ್ಲಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇಂಥದೊಂದು ರಿಫ್ರೆಶಿಂಗ್ ಪಾನೀಯವನ್ನು ಕೆಟ್ಟದೆಂದಿದ್ದು ಭಾರತೀಯರಿಗೆ ಹಿಡಿಸಿಲ್ಲ. ಆಲೂ ಬೈಂಗನ್ (ಆಲೂಗಡ್ಡೆ ಮತ್ತು ಬಿಳಿಬದನೆ ಕರಿ) ಮತ್ತು ಉಪ್ಮಾ (ಉಪ್ಪಿಟ್ಟು)ಕಡಿಮೆ ರೇಟಿಂಗ್‌ ಪಡೆದಿರುವುದು ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ ನೆಟಿಜನ್ಸ್. ಹೆಚ್ಚಿನ ಭಾರತೀಯರು ದ್ವೇಷಿಸುತ್ತಲೇ ಸವಿಯುವ ತಿಂಡಿ ಉಪ್ಪಿಟ್ಟು ಎಂಬುದರಲ್ಲಿ ಎರಡು ಮಾತಿಲ್ಲ. 

ಮಗು ಎತ್ತರ ಆಗ್ಲಿ ಅಂತ ಔಷಧಿ ಕೊಡ್ತಿದೀರಾ? ಇದೆಷ್ಟು ಅಪಾಯಕಾರಿ ಗೊತ್ತಾ?
 

ಥಾಂಡೈ, ಅಚಪನ್, ಮಲ್ಪುವಾ, ಮಿರ್ಚಿ ಕಾ ಸಲನ್ ಈ ಕೆಟ್ಟ ರೇಟಿಂಗ್ ಪಡೆದ ಇತರ ಭಕ್ಷ್ಯಗಳು. ಆದರೆ, ಈ ಪಟ್ಟಿಗಳು ಭಾರತೀಯರಿಗೆ ಹಿಡಿಸಿದಂತಿಲ್ಲ. 'ಯಾರು ಇದನ್ನು ರೇಟ್ ಮಾಡಿದ್ದಾರೆ? ಪಾಶ್ಚಿಮಾತ್ಯರು ಎಂದು ನಾನು ಊಹಿಸುತ್ತೇನೆ' ಎಂದೊಬ್ಬರು ಹೇಳಿದ್ದಾರೆ. ಮತ್ತೆ ಹಲವರು ಮ್ಯಾಂಗೋ ಲಸ್ಸಿಗಿಂತ ರುಚಿಕರ ಭಾರತೀಯ ಆಹಾರವಿಲ್ಲ ಎಂದರೆ ಭಾರತೀಯ ಆಹಾರಗಳಿಗೆ ಅವಮಾನ ಮಾಡಿದಂತೆ. ಒಂದಕ್ಕಿಂತ ಒಂದು ರುಚಿಕಟ್ಟಾದ ಆಹಾರಗಳು ಭಾರತೀಯ ಭಕ್ಷ್ಯಗಳಲ್ಲಿವೆ. ಈ ಟೇಸ್ಟ್ ಅಟ್ಲಾಸ್‌ನಲ್ಲಿ ಟೇಸ್ಟ್ ಬಡ್ ಇಲ್ಲದಿರುವವರೇ ಇರುವುದೇ ಎಂದೊಬ್ಬರು ಪ್ರಶ್ನಿಸಿದ್ದಾರೆ. 


 

ರುಚಿ ವ್ಯಕ್ತಿನಿಷ್ಠವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಇಷ್ಟ ಪಡುವುದನ್ನು ಮತ್ತೊಬ್ಬರು ದೂರವಿಡಬಹುದು. ಈ ಪಟ್ಟಿಗಳು TasteAtlas ವೆಬ್‌ಸೈಟ್‌ನಲ್ಲಿ ಬಳಕೆದಾರರ ರೇಟಿಂಗ್‌ಗಳನ್ನು ಆಧರಿಸಿರಬಹುದು ಮತ್ತು ಭಾರತದಲ್ಲಿನ ಒಟ್ಟಾರೆ ಅಭಿಪ್ರಾಯವನ್ನು ಪ್ರತಿಬಿಂಬಿಸದಿರಬಹುದು.
 

Latest Videos
Follow Us:
Download App:
  • android
  • ios