ಕೇವಲ ಮಸಾಲೆ‌ ದೋಸೆಗಾಗಿ ಅಣ್ಣಾಮಲೈ ‌ಮಾಡಿದ್ದೇನು ಗೊತ್ತಾ? ಉತ್ತರ ಭಾರತೀಯರಿಗೆ  ಕೊಟ್ಟ ಕಾಟ ಅಷ್ಟಿಷ್ಟಲ್ಲ!

ಕರ್ನಾಟಕದ ಸಿಂಗಂ ಅನ್ನಿಸಿಕೊಂಡಿದ್ದ ಅಣ್ಣಾಮಲೈ ಪೊಲೀಸ್ ಇಲಾಖೆ ತೊರೆದು ರಾಜಕೀಯ ಸೇರಿರೋದು, ತಮಿಳುನಾಡು ಅಧ್ಯಕ್ಷ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಚಾರ ಅಲ್ವೇ ? ಆದರೆ, ಅಣ್ಣಾಮಲೈ ‌ಬಾಲ್ಯ, ವಿದ್ಯಾಭ್ಯಾಸ ಇದಾವುದರ ಬಗ್ಗೆಯೂ ಈವರೆಗೂ ಮಾಹಿತಿಯೇ ಸಿಕ್ಕಿರಲಿಲ್ಲ. ಇತ್ತೀಚೆಗೆ ‌ತಮಿಳಿನ ಕೆಲವು ಚಾನೆಲ್‌ಗಳಿಗೆ ಇಂಟರ್ ವ್ಯೂ ಕೊಡ್ತಿರೋ ಅಣ್ಣಾಮಲೈ, ತಮ್ಮ ಬಗೆಗಿನ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಅಣ್ಣಾಮಲೈ ಉತ್ತರ ಪ್ರದೇಶದ ಲಕ್ನೋ ವಿವಿಯಲ್ಲಿ‌ IIM ಓದಿದ್ದು. ಓದಿನಲ್ಲಿ ಅಣ್ಣಾಮಲೈ ಸಖತ್‌ ಬ್ರಿಲಿಯಂಟ್. ಅಷ್ಟೇ ಚುರುಕು. ಕಾಲೇಜು ದಿನಗಳಲ್ಲೇ ಅಣ್ಣಾಮಲೈ ಅವರಲ್ಲಿ ಲೀಡರ್‌ಶಿಪ್ ಗುಣಗಳಿದ್ದವು. ಸ್ವಲ್ಪಮಟ್ಟಿಗೆ ‌ಫೈರ್‌ಬ್ರಾಂಡ್ ಎಂದೇ ಗುರುತಿಸಿ ಕೊಂಡಿದ್ರು. ಅಣ್ಣಾಮಲೈ ‌ಮನಸ್ಸು ಮಾಡಿದ್ರೆ ಏನ್ ಬೇಕಾದರೂ ‌ಮಾಡ್ತಾರೆ ಅನ್ನೋದಕ್ಕೆ ಈ ಘಟನೆಯೊಂದು ಸಾಕ್ಷಿ.

ಆಕೆಗೆ ನನಗಿಂತ ಒಳ್ಳೆ ಗಂಡ ಸಿಗಬೇಕಿತ್ತು! ಮೊದಲ ಬಾರಿಗೆ ಹೆಂಡ್ತಿ ಬಗ್ಗೆ ಮಾತನಾಡಿದ ಅಣ್ಣಾಮಲೈ

ಲಕ್ನೋ ವಿವಿಯಲ್ಲಿ ಐಐಎಂ ಓದ್ತಿದ್ದ ಅಣ್ಣಾಮಲೈ, ವಿವಿ ಹಾಸ್ಟೆಲ್‌ನಲ್ಲೇ‌ ಉಳಿದುಕೊಂಡಿದ್ರು. ಹಾಸ್ಟೆಲಲ್ಲಿ ಎಂದಿನಂತೆ ನಾರ್ತ್ ಇಂಡಿಯಾ ಹುಡುಗರದ್ದೇ ಹಾವಳಿ. ಅವರು ಹೇಳಿದ್ದೇ ಅಡುಗೆ, ಮಾಡಿಸಿದ್ದೇ ತಿಂಡಿ. ಪಕ್ಕಾ ಸೌತ್‌ ಇಂಡಿಯಾ ಅನ್ನ ಸಾರು ತಿಂದು ಬೆಳೆದಿದ್ದ‌ ಅಣ್ಣಾಮಲೈಗೆ ಉತ್ತರ ಭಾರತೀಯರ ಊಟ ನಾಲಿಗೆ ಹಿಡಿಸಲಿಲ್ಲ. ಶುರುವಾಯ್ತು ನೋಡಿ ಅಣ್ಣಾಮಲೈ ‌ಗಲಾಟೆ. ಹಾಸ್ಟೆಲ್‌ನಲ್ಲಿ ‌ದಕ್ಷಿಣ ಭಾರತದ ತೆಲುಗು, ‌ತಮಿಳು, ಮಲಯಾಳಂ ಹುಡುಗರಿದ್ದಾರೆ. ಅವರಿಗೆ ರುಚಿಸುವಂಥ‌ ಸೌತ್ ಇಂಡಿಯಾ ‌ಊಟ (South Indian Meal) ಅಥವಾ ತಿಂಡಿ (Breakfast) ಮಾಡಿ ಅಂತ ‌ಪಟ್ಟು ಹಿಡಿದು ಬಿಟ್ರು. ಅದರಲ್ಲೂ ಬೆಳಗಿನ ತಿಂಡಿಗೆ ಮಸಾಲೆ ದೋಸೆ ಬೇಕೇ ಬೇಕು ಅಂತ ಅಣ್ಣಾಮಲೈ ಪ್ರತಿಭಟನೆಗಿಳಿದು ಬಿಟ್ರು. ಇದು ಯಾವ‌ ಮಟ್ಟಕ್ಕೆ ಹೋಯ್ತು ಅಂದ್ರೆ, ಹಾಸ್ಟೆಲ್‌ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ‌ (South India) ವಿದ್ಯಾರ್ಥಿಗಳು ಡಿವೈಡ್ ಆಗಿ‌ಬಿಟ್ರು. ದಕ್ಷಿಣದ ಹುಡುಗರ‌ ಗುಂಪು, ಉತ್ತರದ ‌ಹುಡುಗರ ಗುಂಪಿನ ನಡುವೆ ದೊಡ್ಡ ಸಂಘರ್ಷವೇ ಏರ್ಪಟ್ಟಿತು.

ಅಣ್ಣಾಮಲೈ ಮಸಾಲೆ ದೋಸೆಗಾಗಿ ಆರಂಭಿಸಿದ ಹೋರಾಟ ವಿವಿ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿತು. ಅಣ್ಣಾಮಲೈ ಯಾವ ರೀತಿ ಪಟ್ಟು ಹಿಡಿದಿದ್ರು ಅಂದ್ರೆ, ಆಡಳಿತ ಮಂಡಳಿ ಅಣ್ಣಾಮಲೈ ಹೋರಾಟಕ್ಕೆ ಮಣಿದು ಕ್ಯಾಂಟಿನ್ ಸೆಕ್ರೆಟರಿಯಾಗಿ ತಮಿಳು ವಿದ್ಯಾರ್ಥಿಯನ್ನೇ ಆಯ್ಕೆ ಮಾಡಿತು. ಆ ಬಳಿಕ ಹಾಸ್ಟೆಲ್ ಕ್ಯಾಂಟಿನ್‌ನಲ್ಲಿ ಮಸಾಲೆ ದೋಸೆ, ದಕ್ಷಿಣದ ಊಟವೂ ಸಿಗತೊಡಗಿತು. ಹೀಗೆ ತಮ್ಮ ಕಾಲೇಜು ದಿನಗಳ ತಮ್ಮ ಹೋರಾಟ ಬಿಚ್ಚಿಟ್ಟಿದ್ದಾರೆ ಅಣ್ಣಾಮಲೈ. 

ಅಣ್ಣಾಮಲೈಗೆ ಸಿಕ್ಕಿದೆ ಅಮಿತ ಬಲ: 6 ತಿಂಗಳಲ್ಲಿ ಬದಲಾಗುತ್ತಾ ದ್ರಾವಿಡ ರಾಜ್ಯದ ರಾಜಕೀಯ!?

ಊಟಕ್ಕಾಗಿ‌ ಇಷ್ಟೆಲ್ಲ ಹೋರಾಟ ಮಾಡಿದ ಅಣ್ಣಾಮಲೈ ಫೇವರಿಟ್ ಊಟ ಅನ್ನ, ಕಡಲೆಕಾಯಿ ಚಟ್ನಿಯಂತೆ. ಊಟಕ್ಕೆ ಸಾಂಬಾರ್‌, ಪಲ್ಯವೂ ಬೇಕು. ಆದ್ರೆ‌ ಕಡ್ಲೆಕಾಯಿ ಚಟ್ನಿ ಇಲ್ಲದೇ ಅಣ್ಣಾಮಲೈ ಊಟವನ್ನೇ ಮಾಡೋದಿಲ್ಲವಂತೆ. ತಮ್ಮದೇ ತೋಟದಲ್ಲಿ ಬೆಳೆದ ಕಡಲೆಕಾಯಿಯಿಂದ ಅಮ್ಮ ಮಾಡುವ ಚಟ್ನಿ ತಮ್ಮ ಫೇವರಿಟ್ ಎನ್ನುವ ಅಣ್ಣಾಮಲೈ, ಇಂದಿಗೂ ಚಟ್ನಿ ಇಲ್ಲದೇ ಊಟ ಮಾಡೋದೇ ಇಲ್ಲವಂತೆ!