Asianet Suvarna News Asianet Suvarna News

ತಾಪ್ಸಿ ಪನ್ನು ಸಖತ್ತಾಗಿ ಫಿಟ್ನೆಸ್ ಮೈಂಟೇನ್ ಮಾಡೋಕೆ ಇದೇ ಅಕ್ಕಿ ತಿನ್ತಾರಂತೆ

ದಕ್ಷಿಣ ಭಾರತದಲ್ಲಿ(South India) ಅನ್ನಕ್ಕೆ(Rice) ಬಹಳ ಪ್ರಾಮುಖ್ಯತೆ ಕೊಡುತ್ತೀವಿ. ಅಕ್ಕಿಯಲ್ಲಿ ಹಲವು ವಿಧಗಳಿವೆ. ಬಿಳಿ ಅಕ್ಕಿ, ಕೆಂಪಕ್ಕಿ, ಕುಚಲಕ್ಕಿ ಹೀಗೆ. ಹಲವು ವಿಧದ ಅಕ್ಕಿಗಳನ್ನು ಹಲವು ಪ್ರದೇಶದಲ್ಲಿ ತಿನ್ತಾರೆ. ಆದರೆ ನದಿ ತೀರದಲ್ಲಿ ಬೆಳೆಯುವ ಕಾಡು ಅಕ್ಕಿಯ ಬಗ್ಗೆ ನಿಮಗೆ ತಿಳಿದಿದೆಯೇ? ಆರೋಗ್ಯಕ್ಕೆ (Health) ಇದು ಯಾವ ರೀತಿಯಲ್ಲಿ ಉತ್ತಮ ಎಂಬುದರ ಮಾಹಿತಿ ಇಲ್ಲಿದೆ.

Taapsee Pannu shares Her Diet Plan And What Keeps Her Fit
Author
Bangalore, First Published Jun 2, 2022, 6:36 PM IST

ದೈನಂದಿನ ಜೀವನ ಶೈಲಿ (Lifestyle)ಯಲ್ಲಿ ಒಂದು ಹೊತ್ತು ಅನ್ನ ತಿಂದಿಲ್ಲ ಎಂದರೆ ಸಮಾಧಾನವೇ ಇರುವುದಿಲ್ಲ. "ಅನ್ನಂ ಪರಂಬ್ರö್ಮಹ" ಎಂದು ಕರೆಯುವ ಈ ನೆಲದಲ್ಲಿ ಭತ್ತಕ್ಕೆ ಮೊದಲ ಆದ್ಯತೆ. ಅನೇಕ ರೀತಿಯ ಅಕ್ಕಿಗಳನ್ನು ನೋಡಿದ್ದೇವೆ, ಅದನ್ನು ಬಳಸುತ್ತಿದ್ದೇವೆ ಕೂಡ. ಆದರೆ ಈ ಕಾಡು ಅಕ್ಕಿಯಲ್ಲಿರುವ(Wild Rice) ಗುಣಗಳನ್ನು ಕೇಳಿದರೆ ಅದನ್ನು ಒಮ್ಮೆಯಾದರೂ ಬಳಸಬೇಕು ಎಂದೆನಿಸುತ್ತದೆ. ಬಾಲಿವುಡ್ ಸ್ಟಾರ್ ನಟಿ ತಾಪ್ಸಿ ಪನ್ನು(Taapsee Pannu) ಇತ್ತೀಚೆಗೆ ಒಂದು ಸಾಂಪ್ರದಾಯಿಕ(Traditional) ಶೈಲಿಯ ರೆಸಿಪಿಯೊಂದನ್ನು(Recipe) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಂಚಿಕೊಂಡಿದ್ದಾರೆ. ಈ ರೆಸಿಪಿಯಲ್ಲಿ ಅವರು ಕಾಡು ಅಕ್ಕಿಯನ್ನು(Wild Rice) ಬಳಸಿದ್ದು, ಅವರ ಡಯೆಟ್ ಸೀಕ್ರೆಟ್‌ಗೆ(Diet Secret) ಇದೂ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ.

ಬೇಸಿಗೆಯಲ್ಲಿ(Summer) ಈ ಅಕ್ಕಿ ದೇಹಕ್ಕೆ ಬಹಳ ತಂಪು ನೀಡುತ್ತದೆ. ಜೊತೆಗೆ ತೂಕ ಕಡಿಮೆ(Weight Loss), ರಕ್ತದಲ್ಲಿ ಶುಗರ್ ನಿಯಂತ್ರಣ(Blood Sugar Control), ಹೊಟ್ಟೆಬರುವುದು ಹೀಗೆ ಹಲವು ಆರೋಗ್ಯಕಾರಿ(Healthy) ಗುಣಗಳು ಇದರಲ್ಲಿವೆ ಎಂದು ತಿಳಿಸಿದ್ದಾರೆ. ಅಷ್ಟಕ್ಕು ಈ ಕಾಡು ಅಕ್ಕಿ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ ಈ ಅಕ್ಕಿಯ ಬಗ್ಗೆ ತಿಳಿಸುವ ಪ್ರಯತ್ನ ಇಲ್ಲಿದೆ.

ಮಾಲ್‌ಗಳಲ್ಲಿ ದಿನಸಿ ಸಾಮಗ್ರಿಗಳ ಕಂಪಾರ್ಟ್‌ಮೆಂಟ್‌ (Compartment) ಸಾಮಗ್ರಿಗಳನ್ನು ಖರೀದಿಸಲು ಹೋದಾಗ ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಕಾಡು ಅಕ್ಕಿ ಇರುವ ಪ್ಯಾಕೆಟ್ ನೋಡಿರುತ್ತೀರಿ. ಸಾಮಾನ್ಯವಾಗಿ ಸಿಗುವ ಬಿಳಿ, ಕೆಂಪು, ಕುಚಲಕ್ಕಿಗಿಂತ ಭಿನ್ನವಾಗಿದ್ದು, ರೇಟ್ ಅವುಗಳಿಗಿಂತ ಜಾಸ್ತಿ. ಹಾಗಾದರೆ ಈ ಅಕ್ಕಿ ತಿನ್ನುವುದರಿಂದ ಏನು ಲಾಭ? ಮಾಡುವ ಕ್ರಮವೇನು? ಎಂಬುದರ ಮಾಹಿತಿ ಇಲ್ಲಿದೆ.

Weight Loss : ಹೀಗೆ ಹಣ್ಣು ತಿಂದ್ರೆ ತೂಕ ಕಡಿಮೆಯಾಗೋಲ್ಲ, ಹೆಚ್ಚಾಗುತ್ತೆ ಅಷ್ಟೇ!

ವೈಲ್ಡ್ ರೈಸ್
ನೋಡಲು ತೆಳ್ಳಗಿದ್ದು, ಬಾಸುಮತಿ(Basumati) ಅಕ್ಕಿಯಂತೆ ಉದ್ದಗಿರುವ ಈ ಕಾಡು ಅಕ್ಕಿಗೆ ಇಂಗ್ಲಿಷ್‌ನಲ್ಲಿ ವೈಲ್ಡ್ ರೈಸ್(Wild Rice) ಎನ್ನುತ್ತಾರೆ. ಅಡಿಕೆ ಫ್ಲೇವರ್ ಇದ್ದು, ಡಯೆಟ್ ಫ್ರೆಂಡ್ಲಿಯಾಗಿದೆ(Diet Friendly). ಇದರಿಂದ ತಯಾರಿಸಿದ ಪದಾರ್ಥಗಳು ಬಹಳ ರುಚಿ ನೀಡುತ್ತದೆ. ಅರೆ ಜಲವಾಸಿ ಪ್ರದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ.

ಯಾವೆಲ್ಲಾ ನ್ಯೂಟ್ರೀಷನ್ ಇವೆ?
ಒಂದು ಲೋಟ(100 ಗ್ರಾಂ) ಅಕ್ಕಿಯಲ್ಲಿ ನಿಮಗೆ ಕ್ಯಾಲೋರಿ(Calorie), ಪ್ರೋಟೀನ್(Protein), ಫ್ಯಾಟ್(Fat), ಕಾರ್ಬೋಹೈಡ್ರೇಟ್ (Carbohydrate),  ಡಯೆಟ್ ಫೈಬರ್(Diet Fiber) ಎಲ್ಲವೂ ಇದರಲ್ಲಿದೆ. ಸಾಮಾನ್ಯವಾಗಿ ಕೆಂಪು ಅಕ್ಕಿಯಲ್ಲಿ 130 ರಿಂದ 112 ಕ್ಯಾಲೋರಿ(Calorie) ಇದ್ದರೆ, ಕಾಡು ಅಕ್ಕಿಯಲ್ಲಿ 101 ಕ್ಯಾಲೋರಿ ಒಳಗೊಂಡಿದೆ. ಹಾಗಾಗಿ ಇದು ತೂಕ ಕಡಿಮೆ(Weight Loss) ಮಾಡಲು ಕಡಿಮೆ ಕ್ಯಾಲೋರಿ ಹುಡುಕುವವರಿಗೆ ಉಪಕಾರಿಯಾಗಿದೆ. ಇದರೊಂದಿಗೆ ವಿಟಮಿನ್(Vitamin), ಖನಿಜಾಂಶಗಳು(Mineral) ಹೇರಳವಾಗಿದೆ. ಸೋಡಿಯಂ(Sodium), ಜಿಂಕ್(Zinc), ಕಾಪರ್(Copper), ಸೆಲೆನಿಯಂ(Selenium), ಮೆಗ್ನೀಶಿಯಂ(Magnesium), ಫಾಸ್ಪರಸ್, ಪೊಟ್ಯಾಶಿಯಂ(Potassium), ಐರನ್(Iron) ಹೇರಳವಾಗಿದೆ.

13 ಕೆಜಿ ತೂಕ ಇಳಿಸಿಕೊಂಡ ನಟಿ ನಿಧಿ ಸುಬ್ಬಯ್ಯ; ಸೀಕ್ರೆಟ್‌ ಇದಂತೆ

ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ?
1. ಸಾಮಾನ್ಯವಾಗಿ ಸಿಗುವ ಪಾಲಿಶ್(Polish) ಮಾಡಿದ ಅಕ್ಕಿಗಿಂತ ಈ ಕಾಡು ಅಕ್ಕಿ ಬಳಸುವುದು ಬಹಳ ಒಳ್ಳೆಯದು. ಹಾರ್ಟ್ ಅಟ್ಯಾಕ್‌ನಂತಹ(Heart attach) ಹೃದಯ ಸಂಬAಧಿ ಖಾಯಿಲೆ, ರಕ್ತದೊತ್ತಡ, ರಕ್ತದಲ್ಲಿನ ಕೊಬ್ಬು ಹಾಗೂ ಅರ್ಥರೀಸ್(Arteries) ಖಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

2. ಬಿಳಿ ಹಾಗೂ ಕೆಂಪು ಅಕ್ಕಿಯ ಅನ್ನದಲ್ಲಿ ಫೈಬರ್(Fiber) ಪ್ರಮಾಣ ಕಡಿಮೆ. ಆದರೆ ಇದರಲ್ಲಿ 1.8 ಗ್ರಾಂನಷ್ಟು ಫೈಬರ್ ಪ್ರಮಾಣವಿದೆ. ಮಲಬದ್ಧತೆ(Constipation), ತೂಕ ಕಡಿಮೆ, ರಕ್ತದ ಶುಗರ್ ಲೆವೆಲ್ ನಿಯಂತ್ರಣ ಮಾಡುತ್ತದೆ. 

3. ಕಾಡು ಅಕ್ಕಿ ಸೇವನೆಯಿಂದ ಟೈಪ್ 2 ಡಯಾಬಿಟಿಸ್(Type 2 Diabetic) ಅನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ ಡಯಾಬಿಟಿಕ್ ಖಾಯಿಲೆ ಇರುವವರು ಅನ್ನವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. ಕಾರಣ ನಾವು ಬಳಸುವ ಅಕ್ಕಿಯಲ್ಲಿ ಗ್ಲೂಕೋಸ್(Glucose) ಪ್ರಮಾಣ ಹೆಚ್ಚಿದೆ. ಬಿಳಿ ಅಕ್ಕಿಯಲ್ಲಿ 66 ರಷ್ಟು GI ಇರುವುದರಿಂದ ಅನ್ನವನ್ನು ಕಡಿಮೆ ತಿನ್ನುತ್ತಾರೆ. ಆದರೆ ಈ ಅಕ್ಕಿಯಲ್ಲಿ ಕಡಿಮೆ ಗ್ಲೂಕೋಸ್ ಪ್ರಮಾಣ 57ರಷ್ಟಿದ್ದು, ಶುಗರ್ ಇರುವವರಿಗೆ ಸಹಕಾರಿಯಾಗಿದೆ. ಅಂದರೆ ಕೆಂಪು ಅಕ್ಕಿ ಹಾಗೂ ಓಟ್ಸ್ಗೆ(Ots) ಸವiನಾಗಿದೆ.

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

4. ಅತಿಯಾದ ಒತ್ತಡದಿಂದ ಕಾಣಿಸಿಕೊಳ್ಳು ಮೂಳೆ(Bone) ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಈ ಅಕ್ಕಿಯಲ್ಲಿ ಪಾಸ್ಪರಸ್(Phosphorus) ಮತ್ತು ಕ್ಯಾಲ್ಶಿಯಂ(Calcium) ಹೇರಳವಾಗಿದ್ದು, ಮೂಳೆ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ. 

5. ದಿನನಿತ್ಯ ಬಳಸುವ ಒಂದು ಕಪ್ ಬಿಳಿ ಅಕ್ಕಿಯಲ್ಲಿ 2ಗ್ರಾಂನಷ್ಟು ಪ್ರೋಟೀನ್(Protein) ಅಂಶವಿರುತ್ತದೆ. ಅದೇ ಈ ಕಾಡು ಅಕ್ಕಿಯಲ್ಲಿ ಅದರ ಡಬಲ್ ಇರುತ್ತದೆ. ಅಂದರೆ ಒಂದು ಕಪ್ ಅಕ್ಕಿಯಲ್ಲಿ 4ಗ್ರಾಂನಷ್ಟು ಪ್ರೋಟೀನ್ ಸಿಗುತ್ತದೆ. ಜೊತೆಗೆ ದೇಹಕ್ಕೆ ಬೇಕಾದ 9 ಅಮಿನೊ ಆಸಿಡ್(Amino Acid) ಇದರಲ್ಲಿ ಪೂರ್ಣ ಪ್ರಮಾಣದಲ್ಲಿದೆ. ಹಾಗಾಗಿ ಇದು ಡಯೆಟ್ ಫ್ರೆಂಡ್ಲಿ ಫುಡ್ ಎಂದು ಕರೆಯಲಾಗುತ್ತದೆ.  

Follow Us:
Download App:
  • android
  • ios