ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರೈಲಿನಲ್ಲಿ ತಮಗೆ ಹಳಸಿದ ಆಹಾರ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗ ಭಾರತೀಯ ರೈಲ್ವೆ ಇಲಾಖೆಯೂ ಸ್ಪಂದಿಸಿದೆ.

ನವದೆಹಲಿ: ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರೈಲಿನಲ್ಲಿ ತಮಗೆ ಹಳಸಿದ ಆಹಾರ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗ ಭಾರತೀಯ ರೈಲ್ವೆ ಇಲಾಖೆಯೂ ಸ್ಪಂದಿಸಿದೆ. ಹಳಸಿದ ಆಹಾರ ನೀಡಿದ ಬಗ್ಗೆ ದೂರಿದ ವ್ಯಕ್ತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದೆಹಲಿಯಿಂದ ವಾರಾಣಾಸಿಗೆ ಪ್ರಯಾಣ ಮಾಡುತ್ತಿದ್ದಿದ್ದಾಗಿ ಹೇಳಿದ್ದಾರೆ. ಆಕಾಶ್ ಕೇಸರಿ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಈಗ ವೈರಲ್ ಆಗಿದೆ. 

ಟ್ವಿಟ್ಟರ್‌ನಲ್ಲಿ ಎರಡು ವೀಡಿಯೋಗಳನ್ನು ಪೋಸ್ಟ್ ಮಾಡಿರುವ ಅವರು, ಎರಡು ಆಹಾರದ ಟ್ರೇಗಳನ್ನು ವಾಪಸ್‌ ರೈಲ್ವೆ ಪ್ಯಾಂಟ್ರಿಯವರಿಗೆ ಹಿಂದಿರುಗಿಸುವುದನ್ನು ಕಾಣಬಹುದಾಗಿದೆ. ಮತ್ತೊಂದು ವೀಡಿಯೋದಲ್ಲಿ ಅದರಲ್ಲಿರುವ ತರಕಾರಿ ಪಲ್ಯ ಸಂಪೂರ್ಣ ಹಳಸಿದ ವಾಸನೆ ಬರುತ್ತಿದೆ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. 

ಕರಾವಳಿಯ ಮೊದಲ ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ರೈಲು ವೇಳಾಪಟ್ಟಿ, ಟಿಕೆಟ್‌ ದರ ಇಲ್ಲಿದೆ

ಹಾಯ್ ಸರ್ ನಾನು 2246 ವಂದೇ ಭಾರತ್ ರೈಲಿನಲ್ಲಿ ಎನ್‌ಡಿಎಲ್‌ಎಸ್‌ನಿಂದ ಬಿಎಸ್‌ಬಿ ಗೆ ಪ್ರಯಾಣ ಮಾಡುತ್ತಿದ್ದೇನೆ. ಈ ರೈಲಿನಲ್ಲಿ ನೀಡಿದ ಆಹಾರವು ಕೆಟ್ಟ ವಾಸನೆ ಬರುತ್ತಿದ್ದು,ಕಳಪೆ ಗುಣಮಟ್ಟದಾಗಿದೆ. ಹೀಗಾಗಿ ನನಗೆ ನನ್ನ ಹಣವನ್ನು ಹಿಂದಿರುಗಿಸಿ. ಈ ಆಹಾರ ಗುತ್ತಿಗೆ ತೆಗೆದುಕೊಂಡವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬ್ರಾಂಡ್‌ ಅನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕಾಶ್ ಬರೆದುಕೊಂಡಿದ್ದಾರೆ.

ಇವರ ಈ ಟ್ವಿಟ್‌ಗೆ ಪ್ರತಿಕ್ರಿಯಿಸಿದ ರೈಲ್ವೆ ಪ್ರಯಾಣಿಕರಿಗೆ ಸಹಾಯಕ್ಕೆ ಇರುವ ಅಧಿಕೃತ ಖಾತೆ 'ರೈಲ್ವೆ ಸೇವಾ' ಗ್ರಾಹಕರೊಂದಿಗೆ ಪಿಎನ್‌ಆರ್ ನಂಬರ್ ಹಾಗೂ ಮೊಬೈಲ್ ನಂಬರ್ ಪಡೆದು ದೂರು ದಾಖಲಿಸಿಕೊಂಡಿದೆ. ಅಲ್ಲದೇ ಕಂಪ್ಲೇಂಟ್ ನಂಬರ್ ದೂರುದಾರರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಬರುವುದಾಗಿ ಟ್ವಿಟ್ ಮೂಲಕ ಮಾಹಿತಿ ನೀಡಿದೆ.

ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ: ರಾಜ್ಯಕ್ಕೂ 3 ರೈಲುಗಳ ಗಿಫ್ಟ್‌ ನೀಡಿದ ಪ್ರಧಾನಿ

ಇದಾದ ನಂತರ ಐಆರ್‌ಸಿಟಿಸಿ (Indian Railway Catering and Tourism Corporation) ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ಸರ್ ನೀವು ಅನುಭವಿಸಿದ ಈ ಅತೃಪ್ತಿಕರ ಅನುಭವಕ್ಕೆ ಕ್ಷಮೆ ಯಾಚಿಸುತ್ತೇವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಈ ಕಳಪೆ ಸೇವೆ ನೀಡಿದವರಿಗೆ ದಂಡವನ್ನೂ ವಿಧಿಸಲಾಗುವುದು. ಇದಲ್ಲದೆ ಜವಾಬ್ದಾರಿಯುತ ಸೇವಾ ಪೂರೈಕೆದಾರ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಪರವಾನಗಿದಾರರಿಗೆ ಸೂಕ್ತ ಸೂಚನೆ ನೀಡಲಾಗಿದೆ. ಆನ್-ಬೋರ್ಡ್ ಸೇವೆಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

Scroll to load tweet…