ಬೆಂಗಳೂರಿನ ಈ ಫೇಮಸ್ ಫುಡ್ ಹುಟ್ಟಿದ್ದು Mysore ಅರಮನೆಯಲ್ಲಿ? Recipe ಇಲ್ಲಿದೆ

ಬಿಸಿ ಬಿಸಿಯಾಗಿ ಬಿಸಿಬೇಳೆ ಬಾತ್ ತಿನ್ನೋದು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹೆಚ್ಚು ತರಕಾರಿ ಸೇರಿಸಿರೋ ಬಿಸಿ ಬೇಳೆಬಾತ್‌ಗೆ ಮೇಲೊಂಚೂರು ಘಮಿಘಮಿಸುವ ತುಪ್ಪ ಹಾಕ್ಕೊಂಡು ಸವಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಸದ್ಯ ಎಲ್ಲರ ಅಚ್ಚುಮೆಚ್ಚಿನ ಬಿಸಿಬೇಳೆ ಬಾತ್‌ ಬಗ್ಗೆ ಸುಂದರ ಸಾಂಗ್‌ವೊಂದು ರೆಡಿಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Song about Bisibelebath, Actually where the famous food started Vin

ಬೆಂಗಳೂರಿಗರ ಪಾಲಿಗೆ ದೋಸೆ, ಇಡ್ಲಿ, ಉಪ್ಪಿಟ್ಟಿಗಿಂತ ರೈಸ್‌ಬಾತ್‌ಗಳೇ ಫೇವರಿಟ್‌. ಚಿತ್ರಾನ್ನ, ಪುಳಿಯೋಗರೆ, ವಾಂಗಿಬಾತ್‌, ಪುಲಾವ್, ಬಿಸಿಬೇಳೆಬಾತ್‌ ಎಲ್ಲ ನಮ್ಮ ಸ್ವಂತದ್ದೇ ಅಂತಾರೆ. ಅನ್ನ ಬೇಯಿಸಿಕೊಂಡರೆ ಸಾಕು ಎಲ್ಲವೂ ಫಟಾಫಟ್‌ ಆಗಿ ರೆಡಿಯಾಗುವ ಕಾರಣ ಹೆಚ್ಚಿನವರು ಆಯ್ಕೆಗೂ ಇದುವೇ. ಹೆಚ್ಚಿನ ರೆಸಿಪಿಗೆ ತರಕಾರಿಯೂ ಮುಖ್ಯವಾಗಿ ಬೇಕಾಗುವ ಕಾರಣ ಹೆಲ್ದೀ ಫುಡ್ ಕೂಡಾ ಹೌದು. ಹೀಗೆ ಬಹುತೇಕರು ಇಷ್ಟಪಟ್ಟು ತಿನ್ನುವ ಆಹಾರ ಬಿಸಿಬೇಳೆಬಾತ್‌. ಮಸಾಲೆ, ತರಕಾರಿ, ಅನ್ನವನ್ನು ಸೇರಿಸಿ ಬಿಸಿ ಬಿಸಿಯಾಗಿ ಬಿಸಿಬೇಳೆ ಬಾತ್ ರೆಡಿ ಮಾಡಿದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರೋದೆ. ಹೆಚ್ಚು ತರಕಾರಿ ಸೇರಿಸಿರೋ ಬಿಸಿ ಬೇಳೆಬಾತ್‌ಗೆ ಮೇಲೊಂಚೂರು ಘಮಿಘಮಿಸುವ ತುಪ್ಪ, ಸ್ಪಲ್ಪ ಖಾರ ಬೂಂದಿ ಹಾಕ್ಕೊಂಡು ಸವಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಸದ್ಯ ಎಲ್ಲರ ಅಚ್ಚುಮೆಚ್ಚಿನ ಬಿಸಿಬೇಳೆ ಬಾತ್‌ ಬಗ್ಗೆ ಸುಂದರ ಸಾಂಗ್‌ವೊಂದು ರೆಡಿಯಾಗಿದೆ. 

ರುಚಿರುಚಿಯಾದ ಬಿಸಿಬೇಳೆ ಬಾತ್ ಆರಂಭವಾಗಿದ್ದೆಲ್ಲಿ ?
ಆಹಾರವನ್ನು ಎಲ್ಲೆಡೆ ಪರಿಚಯಿಸೋಕೆ ಸದ್ಯ ಫುಡ್ ಬ್ಲಾಗಿಂಗ್ ಹೆಚ್ಚು ಫೇಮಸ್ ಆಗಿದೆ. ಇದಲ್ಲದೆ ಸ್ಪೆಷಲ್ ಆಗಿ ವೀಡಿಯೋ ಮಾಡಿ ಗಮನ ಸೆಳೆಯುವವರೂ ಇದ್ದಾರೆ. ಹಾಗೆಯೇ ಸದ್ಯ ಬಿಸಿಬೇಳೆ ಬಾತ್‌ ಕುರಿತಾಗಿ ಮಾಡಿರೋ ಸಾಂಗ್‌ವೊಂದು ವೈರಲ್ ಆಗಿದೆ. ಇದರಲ್ಲಿ ಬಿಸಿಬೇಳೆಬಾತ್‌ನ ಇತಿಹಾಸ (History), ಬಿಸಿಬೇಳೆ ಬಾತ್‌ನ ಮಸಾಲೆ ಹಾಗೂ ಬಿಸಿಬೇಳೆ ಬಾತ್‌ ಮಾಡೋಕೆ ಬೇಕಾದ ಪದಾರ್ಥಗಳು, ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಮನೇಲಿ ಉಳಿದಿರೋ ಪದಾರ್ಥ ಬಳಸಿ ಥಟ್ಟಂತ ಅಡುಗೆ ಮಾಡಲು ಹೇಳಿಕೊಟ್ಟ ChatGPT

ಬೆಂಗಳೂರಿಗರ ಈ ಫೇವರಿಟ್ ಫುಡ್ ಹುಟ್ಟಿದ್ದಯ ಮೈಸೂರು ಅರಮನೆಯಲ್ಲಿ ಎಂದು ವೀಡಿಯೋದಲ್ಲಿ ತಿಳಿಸಲಾಗಿದೆ. ನಂತರದ ಕೆಲವು ವರ್ಷಗಳಲ್ಲಿ ಇದು ರಾಜ್ಯಾದ್ಯಂತ ಹೆಚ್ಚು ಬಳಕೆಗೆ ಬಂತು ಎಂದು ಹೇಳಿದ್ದಾರೆ. ನಂತರ ಬಿಸಿಬೇಳೆಬಾತ್‌ ಮಸಾಲೆ ಸಿದ್ಧಪಡಿಸಿಕೊಳ್ಳುವ ರೀತಿಯನ್ನು ಫೋಟೋಗಳೊಂದಿಗೆ ವಿವರಿಸಲಾಗಿದೆ. ಬಳಿಕ ಬಿಸಿ ಬೇಳೆ ಬಾತ್ ತಯಾರಿಸಲು ಬೇಕಾದ ಪದಾರ್ಥಗಳ ಮಾಹಿತಿ ನೀಡಿ, ಮಾಡುವ ವಿಧಾನವನ್ನು ತಿಳಿಸಿಕೊಡುತ್ತಾರೆ. ವೀಡಿಯೋದಲ್ಲಿ ಹಾಡಿನ ಜೊತೆಗೆ ಅಡುಗೆ (Cooking) ಮಾಡಲು ಏನೆಲ್ಲಾ ಬೇಕು ಎಂಬ ವಸ್ತುಗಳ ಫೋಟೋವನ್ನು ನೀಡಿರುವ ಕಾರಣ ವೀಡಿಯೋ ನೋಡಲು ಖುಷಿಯೆನಿಸುತ್ತದೆ. 

ಮೆಟ್ರೊನೊಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು
ಮೆಟ್ರೊನೊಮ್ ಎಂಬ ಯೂಟ್ಯೂಬ್ ಚಾನೆಲ್ ಬಿಸಿಬೇಳೆ ಬಾತ್‌ನ ಈ ವೀಡಿಯೋವನ್ನು ಹಂಚಿಕೊಂಡಿದೆ. ಭಾರತದಲ್ಲಿ ಮತ್ತು ಬಹುಶಃ ಪ್ರಪಂಚದಲ್ಲಿ ಈ ರೀತಿಯ ಮೊದಲ ಮತ್ತು ಏಕೈಕ ಹಾಡು ಬ್ಲಾಗ್ ಆಗಿದೆ. ಇದರಲ್ಲಿ ವೀಡಿಯೊಗಳ ಮೂಲಕ ಪಾಕವಿಧಾನಗಳು, ಪ್ರಯಾಣ, ಕಥೆ ಹೇಳುವಿಕೆ, ಹಾಡುಗಳು ಮತ್ತು ವಾಣಿಜ್ಯ ಬ್ರ್ಯಾಂಡಿಂಗ್‌ನ್ನು ಮಾಡಲಾಗುತ್ತದೆ. ಬಿಸಿಬೇಳೆ ಬಾತ್ ಕುರಿತಾಗಿರುವ ಈ ಸುಂದರ ಹಾಡನ್ನು (Song) ಸಾವನ್ ದತ್ತಾ ಎಂಬವರು ಬರೆದು ಸಂಯೋಜನೆ, ನಿರ್ಮಾಣ ಮತ್ತು ಹಾಡನ್ನು ಹಾಡಿದ್ದಾರೆ. ಸಿ ಬಿ ಅರುಣ್ ಕುಮಾರ್ ಮತ್ತು ಸಾವನ್ ದತ್ತಾ ಅವರು ವೀಡಿಯೊವನ್ನು ಸಿದ್ಧಪಡಿಸಿದ್ದಾರೆ.

ತೆಂಗಿನ ಚಿಪ್ಪಿನಲ್ಲಿ ಟೀ ತಯಾರಿಸಿದ ಮಹಿಳೆ, ವೀಡಿಯೋ ವೈರಲ್‌; ಟೇಸ್ಟ್ ಹೇಗಿರುತ್ತೆ ?

ಬಿಸಿಬೇಳೆ ಬಾತ್ ರೆಸಿಪಿ

ಬೇಕಾದ ಪದಾರ್ಥಗಳು: ಬಿಸಿಬೇಳೆ ಬಾತ್ ಪುಡಿ 3 ಚಮಚ, ಹುಣಸೆ ನೀರು 3 ಚಮಚ, ಬೆಲ್ಲ 1.5 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅನ್ನ 1/2 ಕಪ್, ತೊಗರಿಬೇಳೆ 1/2 ಕಪ್, ಅರಿಶಿನ 1/4 ಚಮಚ, ತುಪ್ಪ 1 ಚಮಚ, ಕ್ಯಾರೆಟ್ 1/2 ಕಪ್, ಬಟಾಣಿ ಸಿಪ್ಪೆ 1/2 ಕಪ್, ಫ್ರೆಂಚ್ ಬೀನ್ಸ್ ಕತ್ತರಿಸಿದ 1/2 ಕಪ್, ಆಲೂಗಡ್ಡೆ 1 ಚೂರುಗಳು, ಟೊಮ್ಯಾಟೊ 1 ಚೂರುಗಳು, ಸಾಸಿವೆ 1 ಟೀಸ್ಪೂನ್, ಒಣ ಕೆಂಪು ಮೆಣಸಿನಕಾಯಿ 2, ಹಿಂಗ್ 1/8 ಟೀಸ್ಪೂನ್ , ಕರಿಬೇವಿನ ಎಲೆಗಳು 1 ಚಿಗುರು, , ಗೋಡಂಬಿ 1 ಟೀಸ್ಪೂನ್

ಬಿಸಿಬೇಳೆ ಬಾತ್ ಪೌಡರ್ ಸಾಮಾಗ್ರಿಗಳು: ಚನಾ ದಾಲ್ 1 ಟೀಸ್ಪೂನ್, ಉದ್ದಿನ ಬೇಳೆ 1 ಟೀಸ್ಪೂನ್, ಒಣ ಕೆಂಪು ಮೆಣಸಿನಕಾಯಿಗಳು - ರುಚಿಗೆ, ಕೊತ್ತಂಬರಿ ಬೀಜಗಳು 1.5 ಟೀಸ್ಪೂನ್, ಮೆಂತ್ಯ ಬೀಜಗಳು 2 ಚಿಟಿಕೆ, ಜೀರಿಗೆ 1 ಟೀಸ್ಪೂನ್, ದಾಲ್ಚಿನ್ನಿ 2 ಇಂಚು, ಲವಂಗ 3, ಲವಂಗ 3 ಚಮಚ , / ಹಿಂಗ್ 1/8 ಟೀಸ್ಪೂನ್, ಅರಿಶಿನ 1/4 ಟೀಸ್ಪೂನ್

ಬಿಸಿ ಬೇಳೆ ಬಾತ್ ಮಾಡುವ ವಿಧಾನ: ಮೊದಲಿಗೆ ಬೇಳೆ ಮತ್ತು ಅಕ್ಕಿ ತೆಗೆದುಕೊಂಡು ಬೇಕಾದಷ್ಟು ನೀರು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ನಂತರ ಈರುಳ್ಳಿ, ಕ್ಯಾರೆಟ್, ಬಟಾಣಿ, ಬೀನ್ಸ್, ಆಲೂಗಡ್ಡೆ, ಟೊಮೆಟೊವನ್ನು ಸಣ್ಣ ಗಾತ್ರದಲ್ಲಿ ಕಟ್‌ ಮಾಡಿ ಎಣ್ಣೆಯನ್ನು ಬಿಸಿ ಮಾಡಿ ಫ್ರೈ ಮಾಡಿ. ತರಕಾರಿಗಳನ್ನು ಡ್ರೈ ಆಗದಂತೆ ನೀರು ಸೇರಿಸಿ ಬೇಯಿಸಿಕೊಳ್ಳಿ. ಇದಕ್ಕೆ ಮಸಾಲೆಯೊಂದಿಗೆ ಬೆರೆಸಿದ ಹುಣಸೆಹಣ್ಣಿನ ನೀರನ್ನು ಸೇರಿಸಿ. ದಾಲ್ ಮತ್ತು ಅಕ್ಕಿ ಸೇರಿಸಿ ಚೆನ್ನಾಗಿ ಬೇಯಲು ಬಿಡಿ. ತುಪ್ಪವನ್ನು ಬಿಸಿ ಮಾಡಿ ಮೆಣಸಿನಕಾಯಿ, ಗೋಡಂಬಿ ಸೇರಿಸಿ. ಹಿಂಗ್ ಮತ್ತು ಸಾಸಿವೆ, ಕರಿಬೇವಿನ ಎಲೆಗಳನ್ನು ಹಾಕಿ ಈ ಒಗ್ಗರಣೆಯನ್ನು ತರಕಾರಿ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ನಿಮ್ಮ ಬಿಸಿ ಬೇಳೆ ಬಾತ್ ನಿಮಗಾಗಿ ಸಿದ್ಧವಾಗಿದೆ.

Latest Videos
Follow Us:
Download App:
  • android
  • ios