ಮನೇಲಿ ಉಳಿದಿರೋ ಪದಾರ್ಥ ಬಳಸಿ ಥಟ್ಟಂತ ಅಡುಗೆ ಮಾಡಲು ಹೇಳಿಕೊಟ್ಟ ChatGPT
ಕೃತಕ ಬುದ್ಧಿಮತ್ತೆ, ಚಾಟ್‌ಜಿಪಿಟಿ ಜನರ ಮಧ್ಯೆ ಹೆಚ್ಚು ಜನಪ್ರಿಯವಾಗುತ್ತಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಚಾಟ್ ಜಿಪಿಟಿ ಬಳಸಿಕೊಂಡು ಮನೆಯಲ್ಲಿ ಉಳಿದಿರುವ ಪದಾರ್ಥಗಳಿಂದ ಸ್ಪೆಷಲ್ ಆಹಾರವೊಂದನ್ನು ಸಿದ್ಧಪಡಿಸಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಾರಂಭವಾದ ಕೆಲವೇ ವಾರಗಳಲ್ಲಿ ಕೃತಕ ಬುದ್ಧಿಮತ್ತೆ, ಚಾಟ್‌ಜಿಪಿಟಿ ಜನರ ಮಧ್ಯೆ ಹೆಚ್ಚು ಜನಪ್ರಿಯವಾಗುತ್ತಿದೆ. ಚಾಟ್‌ಬಾಟ್‌ನ್ನು ಸಮಸ್ಯೆಗೆ ಉತ್ತರ, ಪಠ್ಯಗಳು ಮತ್ತು ಚಿತ್ರಗಳನ್ನು ರಚಿಸಲು ವಿನ್ಯಾಸಗೊಳಿಸಲಾಗಿದೆ, ಇದು ಜನರೇಟಿವ್ AI ಎಂದು ಕರೆಯಲ್ಪಡುವ ಹೊಸ ಯುಗವನ್ನು ಪ್ರಾರಂಭಿಸುತ್ತದೆ. ಹಲವಾರು ಜನರು AI ಸಾಮರ್ಥ್ಯಗಳನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ಈ ಮೂಲಕ ತಯಾರಿಸಲಾದ ಫೋಟೋ, ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಚಾಟ್ ಜಿಪಿಟಿ ಬಳಸಿಕೊಂಡು ಸ್ಪೆಷಲ್ ಆಹಾರವೊಂದನ್ನು ಸಿದ್ಧಪಡಿಸಿದ್ದಾನೆ.
ChatGPT ಸಹಾಯದಿಂದ ಅಡುಗೆ ಮಾಡಿದ ವ್ಯಕ್ತಿ
ಭಾರತೀಯರು ಮನೆಯಲ್ಲಿ ಉಳಿದ ಆಹಾರದಿಂದ (Food) ಇನ್ನೊಂದು ಹೊಸ ರೆಸಿಪಿಯನ್ನು ತಯಾರಿಸುವುದರಲ್ಲಿ ಎಕ್ಸ್‌ಪರ್ಟ್. ಉಳಿದ ಆಲೂ ಸಬ್ಜಿಯನ್ನು ಬಳಸಿಕೊಂಡು ರುಚಿಕರವಾದ ಸ್ಯಾಂಡ್‌ವಿಚ್‌ನಿಂದ ಹಿಡಿದು ಕೆಲವು ಉಳಿದ ತರಕಾರಿ (Vegetables)ಗಳೊಂದಿಗೆ ಸ್ಟೀಮ್ಡ್ ರೈಸ್ ಅನ್ನು ಬೆರೆಸಿ ಫ್ರೈಡ್ ರೈಸ್ ತಯಾರಿಸುವವರೆಗೆ ಹಲವು ರೆಸಿಪಿಗಳು ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಗೃಹಿಣಿಯರು ಹೀಗೆ ಉಳಿದ ಆಹಾರದಿಂದ ಬೇರೇನು ತಯಾರಿಸಬಹುದು ಎಂಬುದನ್ನು ತಿಳಿದಿರುತ್ತಾರೆ. ಆದರೆ ಬ್ಯಾಚುಲರ್ಸ್‌ಗೆ ಇವೆಲ್ಲಾ ತಿಳಿದಿರುವ ಸಾಧ್ಯತೆ ಕಡಿಮೆ. ಹೀಗಿರುವಾಗ ಒಬ್ಬ ವ್ಯಕ್ತಿಯು ವೈರಲ್ ಚಾಟ್‌ಬಾಟ್ - ChatGPT ಯಿಂದ ಸ್ವಲ್ಪ ಸಹಾಯವನ್ನು ತೆಗೆದುಕೊಂಡು ಮನೆಯಲ್ಲಿ ಉಳಿದ ಪದಾರ್ಥಗಳಿಂದ ಹೊಸ ಆಹಾರವನ್ನು ತಯಾರಿಸಿದ್ದಾನೆ.
Chat GPT corner: ಚಾಟ್ಸ್ ಸ್ಟಾಲ್ ಫೋಟೋ ಆನಂದ್ ಮಹೀಂದ್ರಾ ಶೇರ್ ಮಾಡಿದ್ಯಾಕೆ ?
ಚಾಟ್‌ಬಾಟ್ ಮಾರ್ಗದರ್ಶನದಂತೆ ಹೊಸ ರೆಸಿಪಿ
ವ್ಯಕ್ತಿ AI ಚಾಲಿತ ಚಾಟ್‌ಬಾಟ್‌ಗೆ ಕೆಲವು ಉಳಿದ ಪದಾರ್ಥಗಳನ್ನು ಬಳಸಿಕೊಂಡು ಯಾವ ಪಾಕವಿಧಾನವನ್ನು ಮಾಡಬಹುದು ಎಂದು ಕೇಳಿದನು. ನಂತರ ಹಂತ-ಹಂತವಾಗಿ ಮಾರ್ಗದರ್ಶನವನ್ನು ಪಡೆದನು. @Onlyshubhamjoshi ಅವರು ವೈರಲ್ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. 'ಆಲೂಗಡ್ಡೆ, ಟೊಮೆಟೊ, ಈರುಳ್ಳಿ, ಮಸಾಲೆಗಳು, ಬ್ರೆಡ್, ಚೀಸ್, ಉಪ್ಪು, ಮೆಣಸು ಮತ್ತು ಹಾಲಿನೊಂದಿಗೆ ನಾನು ಏನು ಮಾಡಬಹುದು' ಎಂದು ವ್ಯಕ್ತಿ ChatGPT ಬಳಿ ಕೇಳುತ್ತಾನೆ. ಚಾಟ್‌ಬಾಟ್ ತಕ್ಷಣವೇ ಉತ್ತರವನ್ನು ನೀಡುತ್ತದೆ. ಚೀಸೀ ಆಲೂಗಡ್ಡೆ ಮತ್ತು ತರಕಾರಿ ಬೇಕ್ ಅಥವಾ "ಆಲೂಗಡ್ಡೆ ಮತ್ತು ತರಕಾರಿ ಗ್ರ್ಯಾಟಿನ್ ಮಾಡುವಂತೆ ಸೂಚಿಸುತ್ತದೆ. ಅಷ್ಟೇ ಅಲ್ಲ, ಚಾಟ್‌ಜಿಪಿಟಿ ಖಾದ್ಯವನ್ನು ತಯಾರಿಸಲು ಹಂತ-ಹಂತದ ಮಾರ್ಗದರ್ಶಿಯನ್ನು ಸಹ ಒದಗಿಸಿದೆ. ವೀಡಿಯೊದ ಕೊನೆಯಲ್ಲಿ, ವ್ಯಕ್ತಿಯು ಚಾಟ್‌ಬಾಟ್‌ನ ಸೂಚನೆಗಳನ್ನು ಬಳಸಿಕೊಂಡು ಮಾಡಿದ ಚೀಸೀ ಭಕ್ಷ್ಯದ ರುಚಿ (Taste) ನೋಡುತ್ತಾನೆ.
ಈ ವೀಡಿಯೊವನ್ನು ಜನವರಿ 21ರಂದು ಹಂಚಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಇದನ್ನು 5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು 259,000 ಕ್ಕೂ ಹೆಚ್ಚು ಬಾರಿ ಇಷ್ಟಪಟ್ಟಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ತಂತ್ರಜ್ಞಾನದ (Technology) ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದೆಂಥಾ ವಿಚಿತ್ರ (Weird) ಎಂದು ನೆಗೆಟಿವ್ ಆಗಿ ಕಾಮೆಂಟಿಸಿದ್ದಾರೆ.
ಪರೋಟಾ ತಿಂದು ಫುಡ್ ಅಲರ್ಜಿ, ಕೇರಳದ ವಿದ್ಯಾರ್ಥಿನಿ ಸಾವು
ಒಬ್ಬ ಬಳಕೆದಾರರು, 'ಇದನ್ನು ರೋಬೋಟ್‌ಗೆ ನೀಡಿದರೆ ಅದು ಸೂಚನೆಗಳ ಪ್ರಕಾರ ಮಾಡುತ್ತದೆ. ಮಾನವರು ಈಗ ಹೆಚ್ಚು ನವೀನರಾಗಿರಬೇಕು ಮತ್ತು AI ಗೆ ಸಾಬೀತುಪಡಿಸಬೇಕು' ಎಂದಿದ್ದಾರೆ. ಇನ್ನೊಬ್ಬರು, ಇದನ್ನು ಮಾಡಲು ಚಾಟ್‌ಜಿಪಿಟಿ ಬೇಕಿಲ್ಲ, ಸಾಮಾನ್ಯ ಜ್ಞಾನವಿದ್ದರೆ ಸಾಕು ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬರು ಇದೇ ಪ್ರಶ್ನೆಯನ್ನು ನೀವು ಚಾಟ್‌ಜಿಪಿಟಿಯನ್ನು ಕೇಳುವ ಬದಲು ಅಜ್ಜಿಯನ್ನು ಕೇಳಿದರೆ ಸಾಕಿತ್ತು ಎಂದಿದ್ದಾರೆ.