ಸಿಹಿ-ಹುಳಿ ಅಂತ ಪೈನಾಪಲ್ ಬೇಕಾಬಿಟ್ಟಿ ತಿನ್ಬೇಡಿ, ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದರೆಡಲ್ಲ
ಅನಾನಸ್ ರುಚಿಯೇ ಅಂಥಹದ್ದು, ಒಮ್ಮೆ ಇಷ್ಟವಾದ್ರೆ ತಿಂತಾನೆ ಇರ್ಬೇಕು ಅನ್ನಿಸುತ್ತೆ. ಇಷ್ಟ ಅಂತ ಈ ಹಣ್ಣನ್ನು ಮಿತಿಮೀರಿ ತಿಂದ್ರೆ ಕಷ್ಟವಾಗುತ್ತೆ. ಅನಾನಸ್ ಸೇವನೆಯಿಂದ ಅನುಕೂಲದ ಜೊತೆ ಅನಾನುಕೂಲವೂ ಇದೆ.
ಹುಳಿ – ಸಿಹಿ ಟೇಸ್ಟ್ ಹೊಂದಿರುವ ಅನಾನಸ್ ನ ಒಂದು ಹೋಳು ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತೆ. ಅದಕ್ಕೆ ಸ್ವಲ್ಪ ಉಪ್ಪು – ಖಾರ ಹಾಕಿಕೊಂಡು ತಿನ್ನುತ್ತಿದ್ರೆ ಹೋಳು ಖಾಲಿಯಾಗಿದ್ದೇ ತಿಳಿಯೋದಿಲ್ಲ. ಅನಾನಸನ್ನು ಜನರು ನಾನಾ ವಿಧಗಳಲ್ಲಿ ಸೇವನೆ ಮಾಡ್ತಾರೆ. ಅದನ್ನು ಸಲಾಡ್ ರೀತಿಯಲ್ಲಿ ಕೆಲವರು ತಿಂದ್ರೆ ಮತ್ತೆ ಕೆಲವರು ಜ್ಯೂಸ್ ಸೇವನೆ ಮಾಡಲು ಇಷ್ಟಪಡ್ತಾರೆ. ಮತ್ತೆ ಕೆಲವರು ಅನಾನಸ್ ಜ್ಯಾಮ್ ಇಷ್ಪಪಡ್ತಾರೆ. ಅನಾನಸ್ ಕಾಯಿರಸ (ಗೊಜ್ಜು), ಪಾಯಸ, ಹಲ್ವಾ ಸೇರಿದಂತೆ ನಾನಾ ರೀತಿಯ ತಿಂಡಿಗಳನ್ನು ತಯಾರಿಸಬಹುದು. ಅದನ್ನು ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಲ ರೋಗವನ್ನು ಹೊಡೆದೋಡಿಸುವ ಶಕ್ತಿ ಅದಕ್ಕಿದೆ.
ಅನಾನಸ್ (Pineapple) ನಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್, ಫೈಬರ್, ಕಬ್ಬಿಣದಂತಹ ಎಲ್ಲಾ ರೀತಿಯ ಪೋಷಕಾಂಶ ಇದೆ. ಎಲ್ಲ ಹಣ್ಣುಗಳು ಆರೋಗ್ಯ (Health) ಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಹಾನಿಕಾರಕ. ಪ್ರತಿಯೊಬ್ಬ ವ್ಯಕ್ತಿ ಎಲ್ಲ ಹಣ್ಣುಗಳನ್ನು ಮಿತಿಯಲ್ಲಿ ತಿನ್ನಬೇಕು. ಅನಾನಸ್ ಹಣ್ಣನ್ನು ಕೂಡ ಹೆಚ್ಚು ಸೇವನೆ ಮಾಡೋದು ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ನಾವಿಂದು ಅನಾನಸ್ ಅತಿಯಾಗಿ ತಿನ್ನೋದ್ರಿಂದ ಆಗುವ ನಷ್ಟವೇನು ಎಂಬುದನ್ನು ಹೇಳ್ತೇವೆ.
ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಪತ್ತೆ!
ಹೆಚ್ಚು ಅನಾನಸ್ ತಿನ್ನುವ ಅನಾನುಕೂಲಗಳು :
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ : ಅನಾನಸ್ ಸಿಹಿ ಮತ್ತು ಹುಳಿ ಹಣ್ಣು. ನೈಸರ್ಗಿಕ ಸಕ್ಕರೆ ಇದರಲ್ಲಿ ಕಂಡುಬರುತ್ತದೆ. ಇದು ಗ್ಲೂಕೋಸ್ ಮತ್ತು ಸುಕ್ರೋಸ್ ಹೊಂದಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಮಧುಮೇಹಿಗಳು ಇದನ್ನು ಅತಿಯಾಗಿ ತಿನ್ನಬಾರದು.
ಅಸಿಡಿಟಿ ಸಮಸ್ಯೆ (Acidity) : ಅಸಿಡಿಟಿ ಸಮಸ್ಯೆ ಇರುವವರು ಮಿತವಾಗಿ ಅನಾನಸ್ ಸೇವನೆ ಮಾಡಿ. ಇದು ಆಮ್ಲೀಯ ಹಣ್ಣಾಗಿದೆ. ನೀವು ಅದನ್ನು ಹೆಚ್ಚಾಗಿ ತಿಂದ್ರೆ ಅಸಿಡಿಟಿ ಕಾಡುವ ಸಾಧ್ಯತೆ ಇದೆ. ಹೊಟ್ಟೆಯ ಕಿರಿಕಿರಿಯನ್ನು ಇದು ಹೆಚ್ಚು ಮಾಡುವ ಸಂಭವ ಇದೆ.
ಅತಿಸಾರ – ಅಜೀರ್ಣ (Indigestion) : ಅನಾನಸ್ ನಲ್ಲಿ ಫೈಬರ್ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ಅತಿಸಾರ, ಅಜೀರ್ಣ ಮತ್ತು ವಾಂತಿಯಂತಹ ಸಮಸ್ಯೆ ಕಾಡುತ್ತದೆ.
ರಕ್ತಸ್ರಾವ (Bleeding) : ಬ್ರೋಮೆಲಿನ್ ಎಂಬ ಕಿಣ್ವ ಅನಾನಸ್‌ನಲ್ಲಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಹಲ್ಲಿನ ಸಮಸ್ಯೆ : ಅನಾನಸ್ ಆಮ್ಲೀಯ ಹಣ್ಣು. ಇದನ್ನು ಅತಿಯಾಗಿ ಸೇವಿಸುವುದರಿಂದ ವಸಡು ಮತ್ತು ಹಲ್ಲಿಗೆ ಹಾನಿಯಾಗುತ್ತದೆ.
ಅಲರ್ಜಿ (Allergy) : ಅನಾನಸ್ ಸೇವನೆ ಮಾಡುವುದರಿಂದ ಕೆಲವರಿಗೆ ಅಲರ್ಜಿಯಾಗುತ್ತದೆ. ಗಂಟಲಿನಲ್ಲಿ ತುರಿಕೆ, ತುಟಿಗಳ ಊತ ಸೇರಿದಂತೆ ಕೆಲ ಅಲರ್ಜಿ ಸಮಸ್ಯೆ ಕಾಡುವುದಿದೆ.
ಅನಾನಸ್ ಹಣ್ಣಿನ ಲಾಭ :
ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ : ಅನಾನಸ್ ಹಣ್ಣಿನಲ್ಲಿ ಬ್ರೋಮೆಲಿನ್ ಎಂಬ ಕಿಣ್ವವಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಕಿಣ್ವವಾಗಿದೆ. ಅದು ಸೋಂಕಿನ ವಿರುದ್ಧ ಹೋರಾಡುತ್ತದೆ. ಶೀತ ಮತ್ತು ಕೆಮ್ಮಿಗೆ ಇದು ಪರಿಹಾರ ನೀಡುತ್ತದೆ.
ಬಲಗೊಳ್ಳುವ ಮೂಳೆ : ಅನಾನಸ್ ಹಣ್ಣನ್ನು ನಿಯಮಿತವಾಗಿ ತಿನ್ನುವುದ್ರಿಂದ ಮೂಳೆ ಬಲಗೊಳ್ಳುತ್ತದೆ. ಅದ್ರಲ್ಲಿರುವ ಮ್ಯಾಂಗನೀಸ್ ಮೂಳೆಗಳನ್ನು ಸದೃಢಗೊಳಿಸುತ್ತದೆ.
ದಾವಣಗೆರೆ ಗರಿಗರಿ ಚುರುಮುರಿ ಹೇಗೆ ಮಾಡೋದು? ಸೀತಾರಾಮ ಪ್ರಿಯಾ ಅಮ್ಮ ಮಾಡಿದ್ರು ಟೇಸ್ಟಿ ಟೇಸ್ಟಿ ರೆಸಿಪಿ
ಕ್ಯಾನ್ಸರ್ ಗೆ ಮದ್ದು : ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಮೇಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಕಣ್ಣುಗಳಿಗೆ ಒಳ್ಳೆಯದು : ಅನಾನಸ್ ಕಣ್ಣಿಗೆ ಒಳ್ಳೆಯದು. ಇದು ವಿಟಮಿನ್ ಸಿ ಮತ್ತು ಉತ್ತಮ ದೃಷ್ಟಿಗೆ ಸಹಾಯ ಮಾಡುವ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.