Asianet Suvarna News Asianet Suvarna News

ಥೂ..ರಸ್ಕ್‌ ಮಾಡೋ ರೀತಿ ನೋಡಿದ್ರೆ ನೀವು ಇನ್ಮುಂದೆ ತಿನ್ನೋ ರಿಸ್ಕೇ ತಗೊಳ್ಳಲ್ಲ ಬಿಡಿ..

ರಸ್ಕ್‌, ಬೆಳಗ್ಗಿನ ಉಪಾಹಾರಕ್ಕೆ, ಸಂಜೆಯ ಟೀ ಜೊತೆ ಬೆಸ್ಟ್ ಸ್ನ್ಯಾಕ್ಸ್. ತಿನ್ನಲು ಗರಿಗರಿಯಾಗಿ ರುಚಿಯಾಗಿರುವ ಕಾರಣ ಎಲ್ಲರೂ ಇದನ್ನು ಇಷ್ಟಪಟ್ಟು ಮೆಲ್ಲುತ್ತಾರೆ. ಆದ್ರೆ ಈ ರಸ್ಕ್‌ ಮಾಡೋದು ಹೇಗೆ ನೀವ್ ನೋಡಿದ್ದೀರಾ. ಒಂದ್ ಸಾರಿ ನೋಡಿದ್ರೆ ಆಮೇಲೆ ತಿನ್ನೋ ರಿಸ್ಕ್ ತಗೊಳ್ಳಲ್ಲ ಬಿಡಿ.

Rusk Making video viral, Netizens says dont eat unhygenic, unless you will be in Risk Vin
Author
First Published Jun 28, 2023, 3:30 PM IST

ಮನೆಯಿಂದ ಹೊರಗಡೆ ಖರೀದಿಸುವ ಯಾವುದೇ ಆಹಾರ ಆಗಿರ್ಲಿ ಅದನ್ನು ಇಂತಿಷ್ಟು ಕ್ಲೀನಾಗಿ ಮಾಡಲಾಗಿದೆ ಎಂದು ನಾವು ನಿರ್ಧಿಷ್ಟವಾಗಿ ಹೇಳುವುದು ಕಷ್ಟ. ಬಹುತೇಕವಾಗಿ ಇಂಥಾ ಆಹಾರವನ್ನು ಹೆಚ್ಚಿನ ಕ್ವಾಂಟಿಟಿಯಲ್ಲಿ ತಯಾರಿಸುವ ಕಾರಣ ಸ್ವಚ್ಛತೆಯತ್ತ ಹೆಚ್ಚು ಗಮನ ಕೊಡುವುದಿಲ್ಲ. ಬಲ್ಕ್‌ ಪ್ರಮಾಣಲ್ಲಿ ತಯಾರಾಗುವ ಕಾರಣ ಆಹಾರ ತಯಾರಿಸುವ ಸ್ಥಳ, ಆಹಾರ ತಯಾರಿಸುವ ರೀತಿ ಸ್ಪಲ್ಪ ಮಟ್ಟಿಗಾದರೂ ಹದಗೆಟ್ಟಿರುತ್ತದೆ. ಈ ರೀತಿ ಫುಡ್ ಮೇಕಿಂಗ್‌ ವೀಡಿಯೋ ಈ ಹಿಂದೆಯೂ ವೈರಲ್‌ ಆಗಿತ್ತು. ಪಾನಿಪುರಿಯ ಪೂರಿ, ಮಂಡಕ್ಕಿ, ಬಟಾಣಿಯನ್ನು ಕೆಟ್ಟದಾಗಿ ತಯಾರಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ನೋಡಿ ಛೀ, ಥೂ ಎಂದು ಕ್ಯಾಕರಿಸಿ ಉಗಿದಿದ್ದರು. ಹಾಗೆಯೇ ಸದ್ಯ ಹಲವರ ಫೇವರಿಟ್ ಸ್ನ್ಯಾಕ್‌ ರಸ್ಕ್‌ ಮಾಡುವ ವಿಡಿಯೋ ವೈರಲ್ ಆಗಿದೆ.

ಬರಿಗೈನಲ್ಲೇ ರಸ್ಕ್ ಮಾಡುವ ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ಮೊದಲಿಗೆ ಕಾರ್ಮಿಕರು ಹಿಟ್ಟಿನ ಹುಡಿಯನ್ನು ತಂದು ಸುರಿಯುತ್ತಾರೆ. ನಂತರ ಒಂದು ಮೆಶಿನ್‌ಗೆ ಬಕೆಟ್‌ನಿಂದ ನೀರು ಸೇರಿಸುತ್ತಾರೆ. ಇದಕ್ಕೆ ಹಿಟ್ಟನ್ನು (Flour) ತಂದು ಹಾಕುತ್ತಾರೆ. ಇದು ಮಿಕ್ಸ್ ಆದ ಕೂಡಲೇ ಎಣ್ಣೆ ತಂದು ಸುರಿಯುತ್ತಾರೆ. ನಂತರ ಈ ಹಿಟ್ಟನ್ನು ತಂದು ಒಂದೆಡೆ ರಾಶಿ ರಾಶಿಯಾಗಿ ಸುರಿದು ಬಿಡುತ್ತಾರೆ. ನಂತರ ಬರಿ ಕೈಯಿಂದಲೇ (Bare hand) ಹೊಡೆದು ಹೊಡೆದು ಈ ಹಿಟ್ಟನ್ನು ನಾದಿಕೊಳ್ಳುತ್ತಾರೆ. ಬಳಿಕ ಆಯತಾಕಾರಕ್ಕೆ ತಂದು ಬೇಯಿಸುವ ಮೆಷಿನ್‌ನೊಳಗೆ ಹಿಟ್ಟನ್ನು ತಂದು ಸುರಿಯುತ್ತಾರೆ. ಇದನ್ನು ಬೇಯಿಸುವ ಮೆಷಿನ್‌ನೊಳಗೆ ತಳ್ಳುತ್ತಾರೆ. ಅದರೊಳಗೆ ಬೆಂದಾದ ಬಳಿಕ ಹೊರಕ್ಕೆ ತೆಗೆದು ಕಟ್ ಮಾಡುತ್ತಾರೆ. 

ಬಾಯಿ ಚಪ್ಪರಿಸಿಕೊಂಡು ಭೇಲ್ ತಿನ್ತೀರಾ? ಮಂಡಕ್ಕಿ ಹೇಗ್ ಮಾಡ್ತಾರೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ!

ಯಪ್ಪಾ..ಸ್ವಲ್ಪನಾದ್ರೂ ಸ್ವಚ್ಛತೆ ಕಾಪಾಡಿ ಎಂದ ನೆಟ್ಟಿಗರು
ಇವಿಷ್ಟೂ ರಸ್ಕ್‌ ಮೇಕಿಂಗ್‌ ಚಟುವಟಿಕೆಯನ್ನು ಕಾರ್ಮಿಕರು ಯಾವುದೇ ಗ್ಲೌಸ್ ಧರಿಸದೆ ಬರಿಗೈಯಲ್ಲೇ ಮಾಡುವುದನ್ನು ನೋಡಬಹುದು. ಹಿಟ್ಟನ್ನು ಕೈಯಲ್ಲೇ ಗುದ್ದಿ ಗುದ್ದಿ ಹದಕ್ಕೆ ತರುತ್ತಾರೆ. ಆ ನಂತರ ಹಿಟ್ಟಿಗೆ ಶೇಪ್ ಮಾಡುವ ಪ್ರಕ್ರಿಯೆಯನ್ನೂ ಕೈಯಲ್ಲೇ ಮಾಡುತ್ತಾರೆ. ನಂತರ ಬರಿಗೈಯಲ್ಲೇ ಮತ್ತೊಂದು ಮೆಷಿನ್‌ಗೆ ಶಿಫ್ಟ್ ಮಾಡುತ್ತಾರೆ. ಒಟ್ನಲ್ಲಿ ಸಂಪೂರ್ಣ ರಸ್ಕ್ ಮಾಡುವ ವಿಧಾನದಲ್ಲಿ ಎಲ್ಲಿಯೂ ಸ್ವಚ್ಛತೆಯನ್ನು (Hygenic) ಕಾಪಾಡದಿರುವುದನ್ನು ನೋಡಬಹುದಾಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ಈ ರಸ್ಕ್ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಇದನ್ನು ನೋಡಿ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು 'ಥೂ, ಹೀಗೆಲ್ಲಾ ಮಾಡಿದ್ರೆ ನಮ್ಮಿಷ್ಟದ ಸ್ನ್ಯಾಕ್ಸ್‌ನ್ನು ತಿನ್ನೋದು ಹೇಗಪ್ಪಾ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು (User) 'ಇದನ್ನು ಮೊದಲು ಮನೆ ಮಂದಿಗೆ ತೋರಿಸಬೇಕು, ನಮ್ಮ ಮನೆಯಲ್ಲಿ ಯಾವಾಗಲೂ ರಸ್ಕ್‌ ಮಾತ್ರ ಇರುತ್ತದೆ' ಎಂದಿದ್ದಾರೆ. ಮತ್ತೊಬ್ಬರು, 'ಇವರು ರಸ್ಕ್‌ ತಯಾರಿಯ (Preparation) ಸಂದರ್ಭ ಕೈಗೆ ಗ್ಲೌಸ್‌ನ್ನಾದರೂ ಧರಿಸಬಹುದಿತ್ತು' ಎಂದಿದ್ದಾರೆ.

ಹಸಿರು ಬಟಾಣಿ ಇಷ್ಟಾನ? ಕಲರ್ ಮಿಕ್ಸ್ ಮಾಡೋ ರೀತಿ ನೋಡಿದ್ರೆ ಇನ್ಯಾವತ್ತೂ ತಿನ್ನಲ್ಲ!

ಮತ್ತೆ ಕೆಲವರು 'ನಿಮ್ಮ ಮನೆಯಲ್ಲಿ ತಾಯಿ ಚಪಾರಿ ಮಾಡುವುದು ಹೀಗೇ ಅಲ್ಲವೇ, ಮತ್ತೆ ಇವರು ಬರಿಗೈಯಲ್ಲಿ ಆಹಾರ ತಯಾರಿಸಿದರೆ ತಪ್ಪೇನು' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಈ ರೀತಿ ನೋಡುತ್ತಾ ಹೋದರೆ ನಾವು ಮನೆಯಿಂದ ಹೊರಗಡೆ ಯಾವ ಆಹಾರವನ್ನೂ ತಿನ್ನಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲಾ ಆಹಾರವನ್ನು ಇದೇ ರೀತಿ ಅಸ್ವಚ್ಛತೆಯಿಂದಲೇ ಮಾಡಲಾಗುತ್ತದೆ' ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Tharangan (@_tharangan)

Follow Us:
Download App:
  • android
  • ios