Asianet Suvarna News Asianet Suvarna News

ಸುಲಭವಾಗಿ ಬಟಾಣಿ ಸಿಪ್ಪೆ ಬಿಡಿಸೋದು ಹೇಗೆ? ಸಿಂಪಲ್ ಟ್ರಿಕ್ ಇಲ್ಲಿದೆ..

ಬಟಾಣಿಗಳನ್ನು ಚಳಿಗಾಲದಲ್ಲಿ ಬಹಳಷ್ಟು ಖಾದ್ಯದಲ್ಲಿ ಬಳಸಲಾಗುತ್ತದೆ. ಆದರೆ ಬಟಾಣಿ ಸಿಪ್ಪೆ ಸುಲಿಯಲು ಸಾಕು ಬೇಕಾಗುತ್ತದೆ. ನೀವು ಒಂದು ಕ್ಷಣದಲ್ಲಿ ಬಹಳಷ್ಟು ಬಟಾಣಿಗಳ ಸಿಪ್ಪೆ ಸುಲಿವ ವಿಧಾನ ಇಲ್ಲಿದೆ.

Recipe for peeling peas is going viral on social media skr
Author
First Published Feb 4, 2024, 5:07 PM IST

ಚಳಿಗಾಲದಲ್ಲಿ ಸಾಕಷ್ಟು ಬಟಾಣಿಗಳು ಮಾರುಕಟ್ಟೆಗೆ ಬರುತ್ತವೆ. ಸಿಹಿ ರುಚಿ ಹೊಂದಿರುವ ಈ ಬಟಾಣಿ ರುಚಿಯಲ್ಲಿ ಅದ್ಭುತವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮವಾಗಿದೆ.  ಉಪ್ಪಿಟ್ಟು, ಪಲಾವ್‌ನಿಂದ ಹಿಡಿದು ಮಸಾಲೆಗಳು, ಪಾನಿಪೂರಿ, ಮಸಾಲೆಪೂರಿವರೆಗೆ ಬಟಾಣಿ ಕೊಡುವ ರುಚಿಗೆ ಸಾಟಿ ಇಲ್ಲ. 

ಬಟಾಣಿಯನ್ನು ಒಣ ಕಾಳುಗಳಾಗಿಯೂ ಬಳಸಲಾಗುತ್ತದೆ. ಆದರೆ, ಹಸಿ ಕಾಳು ಹೆಚ್ಚು ರುಚಿ ಹಾಗೂ ವಿನ್ಯಾಸವೂ ಉತ್ತಮವಾಗಿರುತ್ತದೆ. ಆದರೆ, ಈ ಹಸಿ ಬಟಾಣಿಯ ಸಿಪ್ಪೆ ಸುಲಿಯುವುದು ಮಾತ್ರ ಬಹಳ ಬಿಗಿಯಾದ ಕಾರ್ಯ. ಅದಕ್ಕೆ ಸಾಕಷ್ಟು ಶ್ರಮ, ಸಮಯ ಬೇಕಾಗುತ್ತದೆ. ಈ ಬಟಾಣಿ ಬಿಡಿಸಲು ಯಾವುದೇ ಸುಲಭ ಮಾರ್ಗವಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. 

ಬಟಾಣಿ ಸಿಪ್ಪೆ ತೆಗೆಯಲು ಸುಲಭ ಉಪಾಯ
ಖಂಡಿತಾ ಇದೆ. ಮುಂದಿನ ಬಾರಿ ಬಟಾಣಿ ಬಿಡಿಸುವಾಗ ಈ ರೀತಿ ಸಿಪ್ಪೆ ತೆಗೆಯಲು ಪ್ರಯತ್ನಿಸಿ. ಬಟಾಣಿ ಸಿಪ್ಪೆ ತೆಗೆಯಲು ಸುಲಭವಾದ ವಿಧಾನವನ್ನು Instagram ನಲ್ಲಿ swad_ka_vardan ಹೆಸರಿನ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಬಟಾಣಿಗಳನ್ನು ಹೇಗೆ ಸಿಪ್ಪೆ ಸುಲಿಯಬಹುದು ಎಂಬುದನ್ನು ಇದು ವಿವರಿಸುತ್ತದೆ. ಇದಕ್ಕಾಗಿ ನೀವು ಕೇವಲ 20 ಸೆಕೆಂಡುಗಳ ಕಾಲ ಕುದಿಯುವ ನೀರಿನಲ್ಲಿ ಬಟಾಣಿಗಳನ್ನು ಬಿಡಬೇಕು. ಇದರ ನಂತರ, ಬಟಾಣಿಗಳನ್ನು ಮೇಲಿನಿಂದ ಕತ್ತರಿ ಬಳಸಿ ಕತ್ತರಿಸಿ ಮತ್ತು ಹಿಂದಿನಿಂದ ಬೆರಳಲ್ಲಿ ತಳ್ಳುತ್ತಾ ಹೋದರೆ ಸಾಕು. ಹೀಗೆ ಮಾಡುವುದರಿಂದ ಬಟಾಣಿಗಳು ಸುಲಭವಾಗಿ ಹೊರಬರುತ್ತವೆ ಮತ್ತು ಕೆಲವೇ ನಿಮಿಷಗಳಲ್ಲಿ ನೀವು ಎಲ್ಲಾ ಬಟಾಣಿಗಳ ಸಿಪ್ಪೆ ಬೇರ್ಪಡಿಸಲು ಸಾಧ್ಯವಾಗುತ್ತದೆ. 

ಬಾಬಾ ಬೈದ್ಯನಾಥ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ ರಾಹುಲ್ ಗಾಂಧಿ

ವೈರಲ್ ಆಗುತ್ತಿದೆ..
ಬಟಾಣಿ ಸಿಪ್ಪೆ ತೆಗೆಯುವ ಈ ಸರಳ ಪಾಕವಿಧಾನ Instagram ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಮತ್ತು 52000 ಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಕೆಲವರು ಈ ಉಪಾಯವನ್ನು ಉಪಯುಕ್ತ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಬಟಾಣಿಯನ್ನು ಹೀಗೆ ಕುದಿಸಿದರೆ ಅದರೊಂದಿಗೆ ಇದ್ದಿರಬಹುದಾದ ಹುಳುಗಳು ಸಹ ಕುದಿಯುತ್ತವೆ ಎಂದು ಹೇಳುತ್ತಾರೆ. ಅದೇನೇ ಇರಲಿ, ಈ ರೆಸಿಪಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ನೀವು ಕೂಡಾ ಬೇಗನೆ ಬಟಾಣಿಗಳನ್ನು ಸಿಪ್ಪೆ ಸುಲಿಯಲು ಈ ಟ್ರಿಕ್ ಅನ್ನು ಪ್ರಯತ್ನಿಸಿ ಮತ್ತು ನಿಮಗೆ ಇದು ಸುಲಭವಾಯಿತೇ ಎಂದು ಹಂಚಿಕೊಳ್ಳಿ.

 

Follow Us:
Download App:
  • android
  • ios