ಹಲಸಿನ ಸೀಸನ್‌ ಶುರುವಾಯ್ತು, Jackfruitನಿಂದ ಆರೋಗ್ಯಕ್ಕೇನು ಲಾಭ ತಿಳ್ಕೊಳ್ಳಿ

ಇನ್ನೇನು ಹಲಸಿನ ಸೀಸನ್ ಶುರುವಾಗೇ ಬಿಡ್ತು. ರುಚಿರುಚಿಯಾದ ತಿನಿಸುಗಳನ್ನು ಮಾಡಿ ತಿನ್ಬೋದು. ಆದ್ರೆ ಹಲಸಿನ ಹಣ್ಣು (Jackfruit) ನಂಗಿಷ್ಟಾನೇ ಇಲ್ಲಪ್ಪ ಅಂತ ಮುಖ ಸಿಂಡರಿಸ್ತೀರಾ ? ಹಾಗಿದ್ರೆ ನೀವ್ ತಿಳ್ಕೊಳ್‌ಬೇಕಾದ ವಿಷ್ಯ ಇಲ್ಲಿದೆ. ಹಲಸು ತಿನ್ನೋದ್ರಿಂದ ಆರೋಗ್ಯ (Health)ಕ್ಕೆ ಅದೆಷ್ಟು ಪ್ರಯೋಜನವಿದೆ ನೋಡಿ.

Reasons Why The Seasonal Jackfruit Is Super Healthy Vin

ಹಣ್ಣುಗಳಲ್ಲೇ ಬೃಹತ್ ಆಗಿರುವ ಹಲಸಿನ ಹಣ್ಣಿನ (Jackfruit) ಸೀಸನ್ ಇನ್ನೇನು ಶುರುವಾಗೇ ಬಿಡ್ತು. ಹಲಸನ್ನು ಕೇವಲ ಹಣ್ಣಾಗಿ ಮಾತ್ರವಲ್ಲ ಕಾಯಿಯಿದ್ದಾಗ ತರಕಾರಿಯಾಗಿಯೂ, ಹಣ್ಣಾದ ಬಳಿಕ ಒಣಗಿಸಿಯೂ ಆಹಾರದಲ್ಲಿ ಬಳಸಿಕೊಳ್ಳುತ್ತಾರೆ. ಭಾರತದ ಪ್ರತಿಯೊಂದು ಪ್ರದೇಶವು ಹಲಸಿನಹಣ್ಣಿನಿಂದ ಮಾಡಿದ ವಿಶಿಷ್ಟ ಪಾಕವಿಧಾನವನ್ನು ಹೊಂದಿದೆ ಎಂಬುದನ್ನು ನಿರಾಕರಿಸುವಂತಿಲ್ಲ. ರುಚಿಕರವಾದ ಹಲಸಿನ ಪಲ್ಯಗಳಿಂದ ಹಿಡಿದು ಹಲಸಿನ ಚಿಪ್ಸ್, ಪಾಯಸ, ಹಲಸಿನ ರೋಲ್‌, ಬಿರಿಯಾನಿಗಳುನ್ನು ಸಹ ತಯಾರಿಸಲಾಗುತ್ತದೆ. ಹಲಸು ಬಾಯಿಗೆಷ್ಟು ರುಚಿಯೋ ಆರೋಗ್ಯ (Health)ಕ್ಕೂ ಅಷ್ಟೇ ಹೆಲ್ಪ್‌ಫುಲ್‌

ಹಲಸಿನಹಣ್ಣಿನ ಆರೋಗ್ಯ ಪ್ರಯೋಜನಗಳು

ಮಧುಮೇಹಿಗಳಿಗೆ ಅತ್ಯುತ್ತಮವಾಗಿದೆ
ಮಧುಮೇಹ (Diabetes)ದಿಂದ ಬಳಲುತ್ತಿರುವವರು ಹಲಸಿನ ಹಣ್ಣನ್ನು ತಿನ್ನುವುದು ಒಳ್ಳೆಯದು. ಹಲಸಿನಲ್ಲಿರುವ ಫೈಬರ್‌ನ ಪ್ರಮಾಣ ದೇಹದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಬಿಡುಗಡೆಯನ್ನು ನಿಧಾನಗೊಳಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಋತುವಿನ ಬದಲಾವಣೆಯೊಂದಿಗೆ ಕಾಯಿಲೆಗಳು ಸಹ ಹೆಚ್ಚಾಗುತ್ತವೆ, ಹೀಗಾಗಿ ಹಲಸು ಬೆಳೆಯಲು ಆರಂಭವಾಗುವ ಸಮಯದಲ್ಲಿ ತಿನ್ನುವುದರಿಂದ ಕಾಲೋಚಿತ ಸೋಂಕುಗಳು ಮತ್ತು ಕಾಯಿಲೆಗಳು ದೂರವಾಗುತ್ತವೆ. ಹಲಸಿನ ಹಣ್ಣಿನಲ್ಲಿ ಆಹಾರದ ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ರಂಜಕದಂತಹ ಪೋಷಕಾಂಶಗಳು ದಟ್ಟವಾಗಿವೆ. ಇದು ನೈಸರ್ಗಿಕವಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

South Indian Special Food: ಇಡ್ಲಿ ಅಲ್ಲ, ಕೊಟ್ಟೆ ಕಡುಬು ತಿಂದ್ರೆ ಆರೋಗ್ಯಕ್ಕೆ ಬೆಸ್ಟ್

ತೂಕ ನಷ್ಟಕ್ಕೆ ಒಳ್ಳೆಯದು
ಕಡಿಮೆ ಕ್ಯಾಲೋರಿಗಳು ಮತ್ತು ಆಹಾರದ ಫೈಬರ್‌ಗಳಿಂದ ತುಂಬಿರುವ ಹಲಸು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಲಸನ್ನು ತಿಂದ ಹಲವು ಗಂಟೆಗಳ ಹೊಟ್ಟೆ ತುಂಬಿದ ಅನುಭವವಾಗುವ ಕಾರಣ ಇದು ಆಗಾಗ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಹಲಸು ದೇಹದಲ್ಲಿ ಮೆಟಾಬಾಲಿಕ್ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಪರಿಣಾಮಕಾರಿ ತೂಕ (Weight) ನಿರ್ವಹಣೆಗೆ ಸಹಾಯ ಮಾಡುತ್ತದೆ.

ಮೂಳೆ ಆರೋಗ್ಯ ಸುಧಾರಿಸುತ್ತದೆ
ಆರೋಗ್ಯ ತಜ್ಞರ ಪ್ರಕಾರ ಹಲಸು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಮೂಳೆ (Bone)ಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಹಲಸು ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಬಲಪಡಿಸಲು ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಕಾರಣವಾಗುತ್ತದೆ.

ನಿದ್ರೆಯನ್ನು ಸುಧಾರಿಸುತ್ತದೆ
ಇದು ಹಲವರಿಗೆ ತಿಳಿದಿಲ್ಲದ ವಿಷಯ. ಹಲಸಿನ ಹಣ್ಣಿನ ಸೇವನೆ ನಿದ್ರಾಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಹಲಸು, ಮೆಗ್ನೀಸಿಯಮ್‌ನಂತಹ ಅಗತ್ಯವಾದ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ನರಗಳನ್ನು ವಿಶ್ರಾಂತಿ ಮಾಡಲು ಮತ್ತು ನಿದ್ರೆ (Sleep)ಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಲಸಿನ ಹಣ್ಣನ್ನು ಸೇರಿಸುವುದು ಅನಿಯಮಿತ ನಿದ್ರೆಯ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸುತ್ತದೆ.

ಹಲಸಿನಕಾಯಿ ಹಿಟ್ಟಿನಲ್ಲಿದೆ ಆರೋಗ್ಯದ ಗುಟ್ಟು..! ಇದು ಗೋಧಿ ಹಿಟ್ಟಿಗಿಂತಲೂ ಬೆಸ್ಟ್

ಹಾಗಿದ್ರೆ ಆಹಾರ (Food)ದಲ್ಲಿ ಹಲಸನ್ನು ಸೇರಿಸಿಕೊಳ್ಳುವುದು ಹೇಗೆ ? ಹಲಸಿನಿಂದ ಮಾಡಬಹುದಾದ ರುಚಿಕರವಾದ ಕೆಲವೊಂದು ಖಾದ್ಯಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಹಲಸು ಬಿರಿಯಾನಿ
ಈ ತ್ವರಿತ ಜಾಕ್‌ಫ್ರೂಟ್ ಬಿರಿಯಾನಿ (Jackfruit Biriyani) ತಯಾರಿಸುವುದು ತುಂಬಾ ಸುಲಭ. ಮೊದಲಿಗೆ ಹಲಸಿನ ಹಣ್ಣಿನ ತುಂಡುಗಳನ್ನು ಮೊಸರು, ಉಪ್ಪು ಮತ್ತು ಮಸಾಲೆಗಳೊಂದಿಗೆ ಮಿಕ್ಸ್ ಮಾಡಿ ಸ್ಪಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪ ಹಾಕಿಕೊಂಡು ಇದಕ್ಕೆ ಮಸಾಲೆಗಳನ್ನು ಸೇರಿಸಿ ಬಾಡಿಸಿಕೊಳ್ಳಿ. ಇದಕ್ಕೇ ಈರುಳ್ಳಿ, ಹಸಿಮೆಣಸು ಸೇರಿಸಿ ಫ್ರೈ ಮಾಡಿ ಮಸಾಲೆ ಸೇರಿಸಿದ ಹಲಸಿನತುಂಡನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ತೊಳೆದ ಅಕ್ಕಿ, ನೀರನ್ನು ಸೇರಿಸಿ, ಅಗತ್ಯವಿದ್ದಷ್ಟು ಉಪ್ಪು ಸೇರಿಸಿ ಮತ್ತು ಪಾತ್ರೆಯನ್ನು ಮುಚ್ಚಿ. ೧೦ ನಿಮಿಷದ ನಂತರ ಬಿರಿಯಾನಿ ಸವಿಯಲು ಸಿದ್ದವಾಗಿದೆ.

ಹಲಸಿನ ರೋಲ್
ಈ ಸರಳ ಪಾಕವಿಧಾನವನ್ನು ಮಾಡಲು, ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ, ಬೇಯಿಸಿದ ಹಲಸಿನ ತುಂಡುಗಳು ಮತ್ತು ಮಸಾಲೆ ಸೇರಿಸಿ, ಮಸಾಲೆಗಳನ್ನು ಚೆನ್ನಾಗಿ ಬೇಯಿಸಿ ಟೋಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಕೆಚಪ್, ತುರಿದ ಚೀಸ್ ಸೇರಿಸಿ ಮತ್ತು ಸ್ಟಫಿಂಗ್ ಅನ್ನು ತುಂಬಿಸಿ. ಚಪಾತಿ ಅಥವಾ ಮೈದಾ ರೋಟಿ ತೆಗೆದುಕೊಂಡು ಚೀಸ್ ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಸ್ಟಫಿಂಗ್ ಸೇರಿಸಿ ಗ್ರಿಲ್ ಮಾಡಿ.

ಹಲಸಿನಕಾಯಿ ಫ್ರೈ
ಹಲಸಿನಕಾಯಿಯನ್ನು ಸಣ್ಣಗೆ ಸೀಳಿಕೊಂಡು ನೀರಿನಲ್ಲಿ ಬೇಯಿಸಿ. ನೀರು ಸೋಸಿ ತೆಗೆದ ಬಳಿಕ ಇದಕ್ಕೆ ಉಪ್ಪು,ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಅಕ್ಕಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಕರಿಯಿರಿ.

ಹಲಸಿನ ಕಬಾಬ್
ಈ ತ್ವರಿತ ಪಾಕವಿಧಾನವನ್ನು ಮಾಡಲು, 1 ಕಪ್ ಬೇಯಿಸಿದ ಹಲಸಿನ ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು 1 ಕಪ್ ಬೇಯಿಸಿದ ಕಡಲೆ, ಕೊತ್ತಂಬರಿ, ಹಸಿರು ಮೆಣಸಿನಕಾಯಿಗಳು, ಕೆಂಪು ಮೆಣಸಿನ ಪುಡಿ, ಉಪ್ಪು, ಜೀರಿಗೆ ಪುಡಿ ಮತ್ತು ನಿಂಬೆ ರಸದೊಂದಿಗೆ ರುಬ್ಬಿಕೊಳ್ಳಿ. ನಯವಾದ ಮಿಶ್ರಣವನ್ನು ಮಾಡಿ. ಈ ಮಿಶ್ರಣವನ್ನು ಕಾರ್ನ್‌ಫ್ಲೋರ್ ಸೇರಿಸಿ ಫ್ರೈ ಮಾಡಿ ಸವಿಯಿರಿ.

Latest Videos
Follow Us:
Download App:
  • android
  • ios