ರಂಜಾನ್ ಸ್ಪೆಷಲ್: ಮಟನ್‌-ಚಿಕನ್‌ ಅಲ್ಲ, ವೆಜಿಟೇರಿಯನ್‌ಗಳಿಗೆ ಟೇಸ್ಟಿಯಾದ ಶಮಿ ಕಬಾಬ್!

ಈದ್ ಹಬ್ಬಕ್ಕೆ ವಿಶೇಷವಾಗಿ ಏನಾದರೂ ಮಾಡಲು ಬಯಸಿದರೆ, ವೆಜ್ ಶಾಮಿ ಕಬಾಬ್ ಮಾಡಿ. ಹಸಿ ಬಟಾಣಿ, ಆಲೂಗಡ್ಡೆ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ಈ ಕಬಾಬ್ ರುಚಿಕರವಾಗಿರುತ್ತದೆ.

Ramadan special recipe try this matar shami kabab gow

ಈದ್ ಹಬ್ಬಕ್ಕೆ ನಿಮ್ಮ ಅತಿಥಿಗಳಿಗೆ ಸ್ಪೆಷಲ್ ಆಗಿ ಏನಾದ್ರೂ ಮಾಡಬೇಕು ಅಂದ್ಕೊಂಡಿದ್ರೆ, ನಾನ್ ವೆಜ್ ಬೇಡ ಅಂದ್ರೆ, ವೆಜ್ ಶಾಮಿ ಕಬಾಬ್ ಮಾಡೋದು ಹೇಗೆ ಅಂತ ಹೇಳ್ತೀವಿ. 

ಇನ್ನೇನು ಕೆಲವೇ ದಿನಗಳಲ್ಲಿ ಈದ್ ಹಬ್ಬ  ಬರಲಿದೆ. ಅದರ ತಯಾರಿ ಭರ್ಜರಿಯಾಗಿ ನಡೀತಿದೆ. ಈದ್ ದಿನ ಜನರು ಒಬ್ಬರನ್ನೊಬ್ಬರು ಭೇಟಿಯಾಗಿ ಹಬ್ಬದ ಶುಭಾಶಯ ತಿಳಿಸುತ್ತಾರೆ. ತರಾವರಿ ಅಡುಗೆಗಳನ್ನು ಮಾಡಿ ತಿನ್ನಿಸುತ್ತಾರೆ. ಆದ್ರೆ ಈ ಬಾರಿ ನಿಮ್ಮ ಅತಿಥಿಗಳಿಗೆ ಚಿಕನ್ ಅಥವಾ ಮಟನ್ ಬದಲು ಹೆಲ್ದೀ ಮತ್ತೆ ಟೇಸ್ಟಿ ಆಗಿರೋ ಬಟಾಣಿ ಶಾಮಿ ಕಬಾಬ್ ಮಾಡಿ ಬಡಿಸಿ. ಇದು ರುಚಿಗೆ ಅದ್ಭುತವಾಗಿರುತ್ತೆ. ವೆಜಿಟೇರಿಯನ್ ಮಾತ್ರ ಅಲ್ಲ ನಾನ್ ವೆಜಿಟೇರಿಯನ್  ತಿನ್ನೋರಿಗೂ ಇದು ತುಂಬಾ ಇಷ್ಟ ಆಗುತ್ತೆ. ಹಾಗಾದ್ರೆ ವೆಜ್ ಬಟಾಣಿ ಶಾಮಿ ಕಬಾಬ್ ರೆಸಿಪಿ  ಮಾಡೋದು ಹೇಗೆ ಎಂದು ನೋಟ್‌ ಮಾಡಿಕೊಳ್ಳಿ.

ರಂಜಾನ್ ಸ್ಪೆಷಲ್:ರುಚಿಕರ&ಪೌಷ್ಟಿಕವಾದ ಬನಾನ ಡೇಟ್ಸ್-ನಟ್ಸ್ ಸ್ಮೂಥಿ ತಯಾರಿ ಹೇಗೆ?

ಹಸಿ ಬಟಾಣಿ ಶಾಮಿ ಕಬಾಬ್ ಮಾಡಲು ಬೇಕಾಗುವ ಸಾಮಗ್ರಿಗಳು
(6 ಜನರಿಗೆ)

250 ಗ್ರಾಂ ಬಟಾಣಿ (1 ಬಟ್ಟಲು)
15 ಗ್ರಾಂ ಶುಂಠಿ
5 ಮಿಲಿ ವರ್ಜಿನ್ ಆಲಿವ್ ಆಯಿಲ್
5 ಗ್ರಾಂ ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
100 ಗ್ರಾಂ ಆಲೂಗಡ್ಡೆ (ಅರ್ಧ ಬಟ್ಟಲು)
4-5 ಹಸಿರು ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
1 ಚಮಚ ಶಾ ಜೀರಿಗೆ

ರಂಜಾನ್‌ ಉಪವಾಸದ ಬಳಿಕ ಸೇವಿಸುವ ಮೊಹಬ್ಬತ್ ಕಾ ಶರಬತ್, ಪಾಕವಿಧಾನ ಇಲ್ಲಿದೆ

ಮಾಡುವ ವಿಧಾನ
ಬಟಾಣಿ ಶಾಮಿ ಕಬಾಬ್ ಮಾಡಲು ಮೊದಲಿಗೆ ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ ಬಟಾಣಿ ಹಾಕಿ. ಈಗ ಹಸಿ ಬಟಾಣಿಯನ್ನು ಕೆಲವು ನಿಮಿಷಗಳ ಕಾಲ ಸೋಕ್‌ ಮಾಡಿಡಿ.

- ಈಗ ಒಂದು ಪಾನ್‌ನಲ್ಲಿ  ಆಯಿಲ್ ಹಾಕಿ. ಅದರಲ್ಲಿ ಕಪ್ಪು ಜೀರಿಗೆ ಅಥವಾ ಶಾ ಜೀರಿಗೆ ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

- ಈಗ ಹಸಿ ಬಟಾಣಿ ಹಾಕಿ, ಹಸಿ ಬಟಾಣಿ ಸ್ವಲ್ಪ ಒಣಗುವವರೆಗೆ ಹುರಿಯಿರಿ. ಬಟಾಣಿ ಕಾಳುಗಳನ್ನು ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ನೀವು ಬೇಕಾದ್ರೆ ಬಟಾಣಿ ಜೊತೆಗೆ ನಿಮಗೆ ಇಷ್ಟವಾದ ತರಕಾರಿಗಳಾದ ಕ್ಯಾರೆಟ್, ಕ್ಯಾಪ್ಸಿಕಂ ಅಥವಾ ಸೋಯಾ ಚಂಕ್ಸ್ ಕೂಡ ಹಾಕಬಹುದು.

- ಈಗ ಬಟಾಣಿಯನ್ನು ತರಿತರಿಯಾಗಿ ಮ್ಯಾಶ್ ಮಾಡಿ. ಅದಕ್ಕೆ ಬೇಯಿಸಿದ ಮ್ಯಾಶ್ ಮಾಡಿದ ಆಲೂಗಡ್ಡೆ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿ, ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

- ತಯಾರಾದ ಮಿಶ್ರಣದಿಂದ ಸಣ್ಣ ಸಣ್ಣ ಚಪ್ಪಟೆ ಟಿಕ್ಕಿ ಮಾಡಿ, ಹೊರಗಡೆ ಕ್ರಿಸ್ಪಿಯಾಗುವವರೆಗೆ ಶಾಲೋ ಫ್ರೈ ಮಾಡಿ.

- ಎರಡು ಕಡೆ ಕ್ರಿಸ್ಪಿಯಾಗಿ ಫ್ರೈ ಆದ ನಂತರ ಟಿಕ್ಕಿಯನ್ನು ನಿಮಗೆ ಇಷ್ಟವಾದ ಚಟ್ನಿ, ಸಾಸ್ ಅಥವಾ ಮೊಸರಿನ ಜೊತೆ ಸವಿಯಲು ಕೊಡಿ. ಇದರ ಜೊತೆಗೆ ಈರುಳ್ಳಿ ಮತ್ತು ಮೂಲಂಗಿ ಸಲಾಡ್ ತುಂಬಾ ಚೆನ್ನಾಗಿರುತ್ತದೆ.

ರಂಜಾನ್‌ ಸ್ಪೆಷಲ್: ಸಾನಿಯಾ ಮಿರ್ಜಾ ಡ್ರೆಸ್ ಸ್ಟೈಲ್ ನಿಮಗೂ ಇಷ್ಟವಾಗಬಹುದು

 

Latest Videos
Follow Us:
Download App:
  • android
  • ios